<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಶಾಂತಿ ಮಾತುಕತೆ ನಡುವೆ ಅಮೆರಿಕ - ಇರಾನ್ ಸಂಘರ್ಷ ಮತ್ತೆ ತೀವ್ರ

ಶಾಂತಿ ಮಾತುಕತೆ ನಡುವೆ ಅಮೆರಿಕ - ಇರಾನ್ ಸಂಘರ್ಷ ಮತ್ತೆ ತೀವ್ರ
Summary: The US has attacked Iranian missile sites and naval vessels amid ongoing ceasefire talks. Tensions in the Middle East have escalated, raising global concerns.

belagavi news :

ವಾಷಿಂಗ್ಟನ್ ಡಿಸಿ (ಯುಎಸ್): ಹಾರ್ಮುಜ್ ಜಲಸಂಧಿ ಸಮೀಪದಲ್ಲಿರುವ ಇರಾನ್ ನ ಕ್ಷಿಪಣಿ ಉಡಾವಣಾ ವ್ಯವಸ್ಥೆಗಳು ಹಾಗೂ ದೋಣಿಗಳನ್ನು ಗುರಿಯಾಗಿಸಿ ಅಮೆರಿಕ ಸೇನೆ ಸೋಮವಾರ ದಾಳಿ ನಡೆದಿದೆ. ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನತೆ ಮುಂದುವರೆದಿರುವ ಸಂದರ್ಭದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಇರಾನ್ ಸೇನೆಯಿಂದ ಉಂಟಾಗುವ ಬೆದರಿಕೆಯಿಂದ ಅಮೆರಿಕಾದ ಸೈನಿಕರನ್ನು ರಕ್ಷಿಸುವ ಉದ್ದೇಶದಿಂದ ದಕ್ಷಿಣ ಇರಾನ್ ಪ್ರದೇಶದಲ್ಲಿ 'ಸ್ವರಕ್ಷಣಾ ದಾಳಿ'ಗಳನ್ನು ನಡೆಸಲಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡಲ್ ವಕ್ತಾರ ತಿಮೋತಿ ಹಾಕಿ ತಿಳಿಸಿದ್ದಾರೆ.

ಕದನ ವಿರಾಮ ಮಾತುಕತೆಗಳು ನಡೆಯುತ್ತಿರುವ ನಡುವೆಯೂ ಅಮೆರಿಕ ತನ್ನ ಸೇನಾಪಡೆಗಳ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಮುಂದುವರಿಸುತ್ತಿದೆ ಎಂದವರು ಹೇಳಿದ್ದಾರೆ.

Sponsored

ಅಮೆರಿಕದ ದಾಳಿಯ ಗುರಿಗಳಲ್ಲಿ ಇರಾನ್ ನ ಕ್ಷಿಪಣಿ ಉಡಾವಣಾ ತಾಣಗಳು ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ಸ್ಪೋಟಕಗಳನ್ನು (ಮೈನ್ಸ್ ) ಅಳವಡಿಸಲು ಪ್ರಯತ್ನಿಸುತ್ತಿದೆ ದೋಣಿಗಳು ಸೇರುವೆ ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಭದ್ರತಾ ಪರಿಸ್ಥಿತಿ ಮತ್ತಷ್ಟು ಸೂಕ್ಷ್ಮಗೊಂಡಿದೆ.

ಇರಾನ ಪುಷ್ಟಿಕರಿಸಿದ ಯುರೇನಿಯಂ ಅನ್ನು ಅಮೇರಿಕದತ್ತ ತಿರುಗಿಸಿ ನಾಶಪಡಿಸುವ ಅಥವಾ ಗೊತ್ತಾದ ಸ್ಥಳದಲ್ಲಿ ಅದನ್ನು ವಿಲೇವಾರಿ ಮಾಡುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದೆ.

ಅಮೆರಿಕ ಮತ್ತು ಇರಾನ್ ಸೇನಾ ಪಡೆಗಳ ನಡುವೆ ಈ ಹಿಂದೆ ಕೂಡ ಕದನ ವಿರಾಮದ ಅವಧಿಯಲ್ಲಿ ಪರಸ್ಪರ ಗುಂಡಿನ ಚಕಮಕಿ ನಡೆದಿದ್ದು ಮೇ ಆರಂಭದಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಅಮೆರಿಕದ ಯುದ್ಧ ನೌಕೆಗಳನ್ನು ಗುರಿಯಾಗಿಸಿ ಇರಾನ್ ಕುಮಾರ್ ಕ್ಷಿಪಣಿ, ಡ್ರೋನ್ ಹಾಗೂ ಸಣ್ಣ ದೋಣಿಗಳ ಮೂಲಕ ದಾಳಿ ನಡೆಸಿದ್ದಾಗಿ ಅಮೆರಿಕ ಆರೋಪಿಸಿತ್ತು ಇದರ ಬೆನ್ನಲ್ಲೇ ಇರಾನ್ ನ ಸೇನಾ ಸೌಲಭ್ಯಗಳ ಮೇಲೆ ಅಮೆರಿಕ ವಾಯುದಾಳಿ ನಡೆಸಿತ್ತು.

ಪ್ರಾದೇಶಿಕ ಸಂಘರ್ಷವನ್ನು ತಗ್ಗಿಸುವ ಉದ್ದೇಶದಿಂದ ಅಮೆರಿಕ ನೇತೃತ್ವದಲ್ಲಿ ಮುಂದಿರಿಸಲಾದ ಕದನ ವಿರಾಮ ಪ್ರಸ್ತಾಪದ ಭಾಗವಾಗಿ, ಇರಾನ್ ತನ್ನ ಹೆಚ್ಚಾಗಿ ಸಮೃದ್ಧಿಕರಿಸಿದ ಯುರೇನಿಯಂ ಸಂಗ್ರಹವನ್ನು ತ್ಯಜಿಸಲು ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

Sponsored

ಇನ್ನೊಂದೆಡೆ, ಹಲವು ಪ್ರಮುಖ ವಿಷಯಗಳಲ್ಲಿ ಉಭಯ ರಾಷ್ಟ್ರಗಳು ಒಮ್ಮತಕ್ಕೆ ಬಂದಿದ್ದರು, ಅಮೆರಿಕ ಪದೇ ಪದೇ ತನ್ನ ನಿಲುವು ಬದಲಿಸುತ್ತಿರುವುದು ಮಾತುಕತೆಗಳನ್ನು ಸಂಕೀರ್ಣಗೊಳಿಸಿದೆ ಎಂದು ಇರಾನ್ ಆರೋಪಿಸಿದೆ. ಈ ಬೆಳವಣಿಗೆಗಳು ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನೂ ಮತ್ತಷ್ಟು ಹೆಚ್ಚಿಸಿವೆ.

ಇತ್ತೀಚೆಗೆ ಮಾತನಾಡಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಾಘೈ, ಅಮೆರಿಕದೊಂದಿಗೆ ನಡೆಯುತ್ತಿರುವ ಪ್ರಸ್ತುತ ಮಾತುಕತೆಗಳು ಸಂಘರ್ಷ ಅಂತ್ಯಗೊಳಿಸುವುದರತ್ತ ಮಾತ್ರ ಕೇಂದ್ರೀಕರಿಸುವುದಾಗಿ ತಿಳಿಸಿದ್ದಾರೆ. ಈ ಹಂತದಲ್ಲಿ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಯಾವುದೇ ಚರ್ಚೆಗಳು ನಡೆಯುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.

ಇದೇ ವೇಳೆ, ಇರಾನ್ ನೊಂದಿಗೆ ಮಾಡಿಕೊಳ್ಳುವ ಯಾವುದೇ ಒಪ್ಪಂದಕ್ಕೆ ಅಮೆರಿಕ ದೀರ್ಘ ಕಾಲಬದ್ಧವಾಗಿರುತ್ತದೆ ಎಂಬುದಕ್ಕೆ ಯಾವುದೇ ಖಾತರಿ ಇಲ್ಲ ಎಂದು ಬಾಘೈ ಅನುಮಾನ ವ್ಯಕ್ತಪಡಿಸಿದ್ದರು. ಈ ಹೇಳಿಕೆಗಳು ಉಭಯ ದೇಶಗಳ ನಡುವಿನ ಅವಿಶ್ವಾಸವನ್ನು ಮತ್ತಷ್ಟು ಬಹಿರಂಗಪಡಿಸಿದರೆ ಕದನ ವಿರಾಮ ಮಾತುಕತೆಗಳ ಭವಿಷ್ಯದ ಮೇಲು ಪ್ರಶ್ನೆ ಗಳನ್ನು ಇಬ್ಬಿಸಿವೆ.

Also Read:

Sponsored

ರಾಜ್ಯಸಭೆಗೆ ದೇವೇಗೌಡರ ಪುನರ್ ಆಯ್ಕೆ ಬಗ್ಗೆ ಭಿನ್ನ ಮಾತುಗಳು: ಎಚ್ಡಿಕೆ ಕೊಟ್ಟ ಸ್ಪಷ್ಟನೆ ಏನು?

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online