<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಇರಾನ್ ಗೆ ಅಮೆರಿಕಾದ ಶಾಕ್! ವೈಮಾನಿಕ ದಾಳಿಯಲ್ಲಿ ಏಳು ಮಂದಿ ಸಾವು

ಇರಾನ್ ಗೆ ಅಮೆರಿಕಾದ ಶಾಕ್! ವೈಮಾನಿಕ ದಾಳಿಯಲ್ಲಿ ಏಳು ಮಂದಿ ಸಾವು
Summary: Iran airstrike: At least seven people have been killed in an airstrike carried out by the US, AP reported, citing Iranian state media. The attack is said to have targeted key Iranian infrastructure, and tensions in the Middle East have further increased after the incident.

belagavi news:

ಇರಾನ್ ವಿರುದ್ಧ ಅಮೆರಿಕದ ವೈಮಾನಿಕ ದಾಳಿ ಮತ್ತಷ್ಟು ತೀವ್ರಗೊಂಡಿದ್ದು, ದಕ್ಷಿಣ ಇರಾನ್ ನಲ್ಲಿರುವ ಪ್ರಮುಖ ಸೇತುವೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ. ಅಮೆರಿಕ ನಡೆಸಿದ ಈ ವೈಮಾನಿಕ ದಾಳಿಯಲ್ಲಿ ಕನಿಷ್ಠ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಇರಾನ್ ನ ಸರ್ಕಾರಿ ಮಾಧ್ಯಮವನ್ನು ಉಲ್ಲೇಖಿಸಿ ಎಪಿ ವರದಿ ಮಾಡಿದೆ.

ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಕೂಡ ಪ್ರತೀಕಾರದ ಕ್ರಮಗಳಿಗೆ ಮುಂದಾಗಿದೆ ಎನ್ನಲಾಗಿದ್ದು, ಬಹ್ರೇನ್ ಮತ್ತು ಕುವೈತ್ ಕಡೆಗೆ ದಾಳಿಗಳನ್ನು ನಡೆಸಿದೆ ಎಂದು ವರದಿಯಾಗಿದೆ. ಈ ದಾಳಿಗಳನ್ನು ಕತಾರ್ ನ ರಕ್ಷಣಾ ವ್ಯವಸ್ಥೆ ತಡೆಹಿಡಿದಿದೆ ಎನ್ನಲಾಗಿದೆ.

ಈ ಬೆಳವಣಿಗೆಗಳ ನಡುವೆ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಮತ್ತಷ್ಟು ತೀವ್ರ : ದಾಳಿ-ಪ್ರತಿ ದಾಳಿಗಳ ಸರಣಿ ಮುಂದುವರಿಕೆ.

14 ಅಂಶಗಳ ಒಪ್ಪಂದ ವಿಫಲವಾದ ಬಳಿಕ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದ್ದು, ಎರಡು ದೇಶಗಳ ನಡುವೆ ದಾಳಿ-ಪ್ರತಿ ದಾಳಿಗಳು ಮುಂದುವರೆದಿವೆ. ಇರಾನ್ ನ ಸರ್ಕಾರಿ ಮಾಧ್ಯಮ ಸಂಸ್ಥೆ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್ ಕಾಸ್ಟಿಂಗ್ ಪ್ರಕಾರ, ಹಾರ್ಮೋಜ್ ಗನ್ ಪ್ರಾಂತ್ಯದ ಹಲವು ಪ್ರದೇಶಗಳು ಅಮೆರಿಕಾದ ವೈಮಾನಿಕ ದಾಳಿಯಿಂದ ಹಾನಿಗೊಳಗಾಗಿವೆ

ಇದು ಇರಾನ್ ವಿರುದ್ಧ ಅಮೆರಿಕ ನಡೆಸುತ್ತಿರುವ ಕಾರ್ಯಾಚರಣೆಯ ಆರನೇ ದಿನವಾಗಿದೆ ಎಂದು ವರದಿಯಾಗಿದೆ. ದಕ್ಷಿಣ ಇರಾನ್ ನ ಕೊಹೌರೆಸ್ತಾನ್ ಗ್ರಾಮ ಹಾಗೂ ಬಂದರ್ ಅಮೀರ್ ಕೌಂಟಿಯ ಶೋರ್ ನದಿಯ ಸಮೀಪದಲ್ಲಿರುವ ಎರಡು ಸೇತುವೆಗಳು ವೈಮಾನಿಕ ದಾಳಿಯಲ್ಲಿ ಹಾನಿಗೊಳಗಾಗಿವೆ ಎಂದು ಇರಾನ್ ಮಾಧ್ಯಮಗಳು ತಿಳಿಸಿವೆ.

ಇದೇ ವೇಳೆ ಬಂದರ್ ಅಬ್ಬಾಸ್ ನ ಟಪ್ಪೆ ಅಲ್ಲಾಹ ಅಕ್ಬರ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಐಆರ್‌ಐಬಿ ವರದಿ ಮಾಡಿದೆ. ಸಂಘರ್ಷ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿಯ ಮೇಲೆ ಜಾಗತಿಕ ಮಟ್ಟದಲ್ಲಿ ನಿಗಾ ಇಡಲಾಗಿದೆ.

ಇರಾನ್ ನಲ್ಲಿ ಅಮೆರಿಕಾದ ದಾಳಿಯ ಪರಿಣಾಮ : ಗಾಯಾಳುಗಳ ಸಂಖ್ಯೆ ಹೆಚ್ಚಳ

ಇರಾನ್ ನ ಸರ್ಕಾರಿ ಮಾಧ್ಯಮ ಐಆರ್‌ಐಬಿ ವರದಿ ಪ್ರಕಾರ, ಹಾರ್ಮೋಜ್ ಗನ್ ಪ್ರಾಂತ್ಯದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಗಾಯಗೊಂಡವರ ಪೈಕಿ 7 ಮಂದಿ ಸ್ಪೋಟದಿಂದ ಉಂಟಾದ ಗಾಯಗಳಿಗೆ ಒಳಗಾಗಿದ್ದು, ಮತ್ತೊಬ್ಬರಿಗೆ ಮೂಳೆಮುರಿತವಾಗಿದೆ ಎಂದು ಹಾರ್ಮೋನ್ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ವಿಭಾಗ ತಿಳಿಸಿದೆ.

ಈ ದಾಳಿಯಲ್ಲಿ ಓರ್ವ ಇರಾನ್ ನಾಗರಿಕ ಮೃತಪಟ್ಟಿರುವುದಕ್ಕೆ ತೀವ್ರ ವಿಷಾದ ವ್ಯಕ್ತಪಡಿಸಿರುವ ವಿಶ್ವವಿದ್ಯಾಲಯ, ಮೃತಪಟ್ಟ ವ್ಯಕ್ತಿಯನ್ನು ದೇಶದ ಹುತಾತ್ಮ ಎಂದು ಉಲ್ಲೇಖಿಸಿದೆ ಎಂದು ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

ಇದೆ ವೇಳೆ ಬಂದರ್ ಅಬ್ಬಾಸ್ ರೈಲ್ವೆ ಜಂಕ್ಷನ್ ನಿಲ್ದಾಣವನ್ನು ಗುರಿಯಾಗಿಸಿಕೊಂಡು ನಡೆದ ಮತ್ತೊಂದು ದಾಳಿಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಐಆರ್‌ಐಬಿ ತಿಳಿಸಿದೆ. ಬಂದರ್ ಅಬ್ಬಾಸ್ ನಿಂದ ಸುಮಾರು 10 ಕಿ.ಮೀ ಪಶ್ಚಿಮದಲ್ಲಿರುವ ಈ ರೈಲ್ವೆ ನಿಲ್ದಾಣವು ಶಾಹಿದ್ ರಾಜೀ ಬಂದರು ಹಾಗೂ ಬಂದರ್ ಅಬ್ಬಾಸ್ ರೈಲ್ವೆ ಜಾಲಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಪ್ರಯಾಣಿಕ ಮತ್ತು ಸರಕು ರೈಲು ಮಾರ್ಗಗಳ ಕೇಂದ್ರವಾಗಿದೆ.

ಇರಾನ್ ಪ್ರಮುಖ ಮೂಲ ಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳಿಂದಾಗಿ ಪ್ರದೇಶದ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದ್ದು, ಸಂಘರ್ಷದ ಮುಂದಿನ ಬೆಳವಣಿಗೆಗಳ ಮೇಲೆ ಜಾಗತಿಕ ಗಮನ ನೆಟ್ಟಿದೆ.

ಇರಾನ್ ಸೇತುವೆಗಳ ಮೇಲೆ ದಾಳಿ: ಸಾರಿಗೆ ಸಂಪರ್ಕಗಳಿಗೆ ಹಾನಿ

ಇರಾನ್ ನ ಹಾರ್ಮೋಜ್ ಗನ್ ಪ್ರಾಂತ್ಯದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಕೊಹೊರೆಸ್ತಾನ್ ಸೇತುವೆಯ ಜೊತೆಗೆ, ಪ್ರಾಂತ್ಯದ ಪ್ರಮುಖ ಸಾರಿಗೆ ಸಂಪರ್ಕಗಳಲ್ಲಿ ಒಂದೊಂದು ಪರಿಗಣಿಸಲಾಗಿರುವ ಗಿರುವೆ ಸೇತುವೆ ಕೂಡ ಹಾನಿಗೊಳಗಾಗಿದೆ ಎಂದು ಇರಾನ್ನ ಸರಕಾರಿ ಮಾಧ್ಯಮ ಐಆರ್‌ಐಬಿ ವರದಿ ಮಾಡಿದೆ.

ಖಮೀರ್ ಕೌಂಟಿಯಲ್ಲಿ ಸೇತುವೆಗಳನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ. ದಾಳಿಯಿಂದ ಪ್ರಮುಖ ಮೂಲ ಸೌಕರ್ಯಗಳಿಗೆ ಹಾನಿಯಾಗಿರುವುದು ವರದಿಯಾಗಿದೆ.

ಇದೆ ವೇಳೆ, ಅಮೆರಿಕಾದ ಸೆಂಟ್ರಲ್ ಕಮಾಂಡ್ ಪ್ರಕಾರ, ಈ ಕಾರ್ಯಾಚರಣೆಯ ಉದ್ದೇಶ ಇರಾನ್ನ ಮಿಲಿಟರಿ ಸಾಮರ್ಥ್ಯಗಳನ್ನು ಸಾಕಷ್ಟು ದುರ್ಬಲಗೊಳಿಸುವುದಾಗಿದೆ. ಹಾರ್ಮುಜ್ ಜಲಸಂದಿ ಮೂಲಕ ಸಾಗುವ ವಾಣಿಜ್ಯ ಹಡಗುಗಳಿಗೆ ಇರಾನ್ ಬೆದರಿಕೆ ಒಡ್ಡುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಾಷಿಂಗ್ಟನ್ ಹೇಳಿದೆ.

ಇರಾನ್ ಮತ್ತು ಅಮೆರಿಕ ನಡುವಿನ ಸಂಪರ್ಕ ತೀವ್ರ ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯದ ಭದ್ರತಾ ಪರಿಸ್ಥಿತಿಯ ಮೇಲೆ ಜಾಗತಿಕ ಮಟ್ಟದಲ್ಲಿ ತೀವ್ರ ನಿಗಾ ಇಡಲಾಗಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online