<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಮಳೆಗಾಲಕ್ಕೂ ಮುನ್ನವೇ 'ವಂದೇಭಾರತ್' ರೈಲು ಸಂಚಾರ ಆರಂಭ: ಸಚಿವ ಅಶ್ವಿನಿ ವೈಷ್ಣವ್

ಮಳೆಗಾಲಕ್ಕೂ ಮುನ್ನವೇ 'ವಂದೇಭಾರತ್' ರೈಲು ಸಂಚಾರ ಆರಂಭ: ಸಚಿವ ಅಶ್ವಿನಿ ವೈಷ್ಣವ್
Summary: Union Railway Minister Ashwini Vaishnav has said that the 'Vande Bharat' train service on the Bengaluru-Mangalore-Madgaon route will begin before the onset of the monsoon season.

BELAGAVI NEWS:

ಕರಾವಳಿ ಭಾಗದ ಜನರಿಗೆ ದೊಡ್ಡ ಸಿಹಿ ಸುದ್ದಿ ಬಂದಿದೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಮಹತ್ವದ ಘೋಷಣೆ ಮಾಡಿದ್ದು ಶೀಘ್ರದಲ್ಲೇ ಬೆಂಗಳೂರು -ಮಂಗಳೂರು - ಮಡ್ಗಾಂವ್ ಮಾರ್ಗದಲ್ಲಿ 'ವಂದೇ ಭಾರತ್ 'ಎಸ್ಪ್ರೆಸ್ ರೈಲು ಸಂಚಾರ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ) ಕರಾವಳಿ ಕರ್ನಾಟಕ ಮತ್ತು ಗೋವಾವನ್ನು ವೇಗವಾಗಿ ಸಂಪರ್ಕಿಸುವ ಮಹತ್ವಾಕಾಂಕ್ಷಿ ಯೋಜನೆಯಾಗಿ ಪರಿಗಣಿಸಲ್ಪಟ್ಟಿರುವ ಬೆಂಗಳೂರು- ಮಂಗಳೂರು- ಮಡ್ಗಾಂವ್ ' ವಂದೇ ಭಾರತ್ 'ರೈಲು ಸೇವೆ ಶೀಘ್ರದಲ್ಲಿ ವಾಸ್ತವ ರೂಪ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ನೀಡುವ ಇತ್ತೀಚಿನ ಹೇಳಿಕೆ ಈ ಭಾಗದ ಜನರಿಗೆ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿದೆ. ಅವರ ಪ್ರಕಾರ ಮುಂದಿನ ಕೆಲವು ತಿಂಗಳೊಳಗೆ ಬೆಂಗಳೂರು -ಮಂಗಳೂರು -ಮಡ್ಗಾಂವ್ ಮಾರ್ಗದಲ್ಲಿ ವೇಗದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸೇವೆ ಆರಂಭಿಸುವ ಯೋಜನೆ ಹೊಂದಲಾಗಿದೆ.

Sponsored

ಈ ಯೋಜನೆ ಜಾರಿಗೆ ಬಂದರೆ ಕರ್ನಾಟಕ ಹಾಗೂ ಗೋವಾ ನಡುವಿನ ಪ್ರಯಾಣ ಸಮಯವು ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಬೆಂಗಳೂರು ಮಂಗಳೂರು ನಡುವಿನ ಸಂಪರ್ಕ ವೇಗವಾಗುವುದರಿಂದ ವ್ಯಾಪಾರ, ಪ್ರವಾಸೋದ್ಯಮ ಹಾಗೂ ದೈನಂದಿನ ಪ್ರಯಾಣಿಕರಿಗೆ ದೊಡ್ಡ ಅನುಕೂಲವಾಗಲಿದೆ. ಅದೇ ರೀತಿ ಮಡ್ಗಾಂವ್ ಮೂಲಕ ಗೋವಾ ಸಂಪರ್ಕವು ಇನ್ನಷ್ಟು ಸುಗಮವಾಗಲಿದೆ. ಸಚಿವರು ಹೇಳಿರುವಂತೆ ಈ ಹೊಸ ವಂದೇ ಭಾರತ್ ಸೇವೆ ಆಧುನಿಕ ಸೌಲಭ್ಯಗಳೊಂದಿಗೆ ವೇಗದ ಹಾಗೂ ಆರಾಮದಾಯಕ ಪ್ರಯಾಣವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಹಾಸನ್- ಮಂಗಳೂರು ಮಾರ್ಗದ ವಿದ್ಯುಧಿಕರಣ ಕಾಮಗಾರಿಯ ಅಂತಿಮ ಪರಿಶೀಲನೆ ನಡೆಯಬೇಕೆಂದು ಅದರ ನಂತರವೇ ಸೇವೆ ಆರಂಭವಾಗಲಿದೆ ಎಂದು ಅವರು ತಿಳಿಸಿದರು.

ಈ ರೈಲು ಯೋಜನೆ ಕರಾವಳಿ ಹಾಗೂ ಮಳೆನಾಡು ಭಾಗಗಳ ನಡುವಿನ ಸಂಚಾರ ವ್ಯವಸ್ಥೆಗೆ ಹೊಸ ಚೈತನ್ಯ ನೀಡುವ ನಿರೀಕ್ಷೆ ಇದೆ. ಈಗಾಗಲೇ ಪ್ರಮುಖ ಮಾರ್ಗಗಳಲ್ಲಿ ವಿದ್ಯುತ್ ಕರಣ ಪೂರ್ಣಗೊಂಡಿದ್ದು ಪ್ರಯೋಗಾತ್ಮಕ ಸಂಚಾರ ಕಾರ್ಯಗಳು ಮುಂದುವರಿದಿವೆ. ಇದರಿಂದ ಯೋಜನೆ ಜಾರಿಗೆ ತರುವ ಪ್ರಕ್ರಿಯೆ ಅಂತಿಮ ಅಂತ ತಲುಪಿರುವುದು ಸ್ಪಷ್ಟವಾಗುತ್ತದೆ.

ಪ್ರಯಾಣ ಸುಲಭ ಮತ್ತು ಸಮಯ ಉಳಿತಾಯ: ಪ್ರಸ್ತುತ ಬೆಂಗಳೂರು - ಮಂಗಳೂರು ನಡುವಿನ ರಸ್ತೆ ಪ್ರಯಾಣವು ಮಳೆನಾಡು ಪ್ರದೇಶದ ಕಟ್ಟಿನ ಭೂ ಪ್ರದೇಶದ ಮೂಲಕ ಸಾಗುದರಿಂದ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದರೆ ವಂದೇಭಾರತ ರೈಲು ಸೇವೆ ಆರಂಭವಾದರೆ ಈ ಪ್ರಯಾಣದ ಅವಧಿ ಗಮನಾರ್ಹ ವಾಗಿ ಕಡಿಮೆಯಾಗುವ ನಿರೀಕ್ಷೆ ಇದೆ.

Sponsored

ಇದರಿಂದ ಉದ್ಯೋಗ, ಶಿಕ್ಷಣ ಹಾಗೂ ವ್ಯಾಪಾರ ಸಂಬಂಧಿತ ಪ್ರಯಾಣಿಕರಿಗೆ ದೊಡ್ಡ ಅನುಕೂಲ ದೊರೆಯಲಿವೆ. ಕಡಿಮೆ ಸಮಯದಲ್ಲಿ ಸುರಕ್ಷಿತ ಮತ್ತು ವೇಗವಾಗಿ ಪ್ರಯಾಣ ಸಾಧ್ಯವಾಗುವುದರಿಂದ ದೈನಂದಿನ ಸಂಚಾರವು ಸುಗಮವಾಗುತ್ತದೆ. ಇದಲ್ಲದೆ ಈ ರೈಲು ಸೇವೆಯನ್ನು ಗೋವಾದ ಮಡ್ಗಾಂವ್ ವರೆಗೆ ವಿಸ್ತರಿಸಿದರೆ ಕರಾವಳಿ ಭಾಗದ ಪ್ರವಾಸೋದ್ಯಮಕ್ಕೂ ಹೊಸ ಉತ್ತೇಜನ ಸಿಗಲಿದೆ. ಪ್ರವಾಸಿಗರಿಗೆ ಬೆಂಗಳೂರು ಗೋವಾ ನಡುವಿನ ಪ್ರಯಾಣ ಇನ್ನಷ್ಟು ಸುಲಭವಾಗುವುದರಿಂದ ಈ ಮಾರ್ಗದ ಮಹತ್ವ ಹೆಚ್ಚಲಿದೆ.

ಪಶ್ಚಿಮ ಘಟ್ಟ ಹಾಗೂ ಕೊಂಕಣ ಕರಾವಳಿಯ ಮನಮೋಹಕ ನೈಸರ್ಗಿಕ ಸೌಂದರ್ಯದ ನಡುವೆ ಈ ರೈಲು ಸಂಚರಿಸುವುದರಿಂದ ಪ್ರಯಾಣಿಕರಿಗೆ ಹೊಸ ಅನುಭವ ದೊರೆಯಲಿದೆ ಎಂದು ನಿರೀಕ್ಷೆ ವ್ಯಕ್ತವಾಗಿದೆ.

ಮಳೆಯ ಮುನ್ನವೇ ಚಾಲನೆ ಸಾದ್ಯತೆ: ರೈಲ್ವೆ ಇಲಾಖೆಯ ಮೂಲಗಳ ಪ್ರಕಾರ ಬಹುಕಾಲದಿಂದ ನಿರೀಕ್ಷೆಯಲ್ಲಿದ್ದ ಈ ಸೇವೆಯನ್ನು ಮಳೆಗಾಲ ಆರಂಭಕ್ಕೂ ಮುನ್ನವೇ ಸಾರ್ವಜನಿಕರಿಗೆ ಪರಿಚಯಿಸುವ ಸಾಧ್ಯತೆ ಇದೆ ಸುರಕ್ಷತಾ ಮಾನ್ಯತೆ ಹಾಗೂ ತಾಂತ್ರಿಕ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಅಧಿಕೃತ ಚಾಲನೆ ನೀಡಲಾಗುವುದು.

ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ: ಈ 'ವಂದೇಭಾರತ್' ರೈಲು ಯೋಜನೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ, ದಕ್ಷಿಣ ಭಾರತ ಪ್ರಮುಖ ನಗರಗಳನ್ನು ಸಂಪರ್ಕಿಸುವ ವಿಶಾಲ ಸಂಚಾರ ಯೋಜನೆಯ ಭಾಗವಾಗಿದೆ. ಬೆಂಗಳೂರು - ಮಂಗಳೂರು ಹಾಗೂ ಗೋವಾ ನಡುವಿನ ವ್ಯಾಪಾರಿಕ ಹಾಗೂ ಸಂಸ್ಕೃತಿಕ ಸಂಪರ್ಕವನ್ನು ಬಲಪಡಿಸುವಲ್ಲಿ ಈ ರೈಲು ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆ ಸಹಾಯಕವಾಗಲಿದೆ.

Sponsored

ವ್ಯಾಪಾರಿಕವಾಗಿ ನೋಡಿದರೆ ಕಡಿಮೆ ಸಮಯದಲ್ಲಿ ಸರಕು ಮತ್ತು ಜನರ ಚಲನೆ ಸುಲಭವಾಗಿದರಿಂದ ವ್ಯಾಪಾರ ವಿಸ್ತರನಿಗೆ ಹೊಸ ಅವಕಾಶಗಳು ಸೃಷ್ಟಿ ಆಗುತ್ತವೆ.

ಒಟ್ಟಾರೆ, ಬೆಂಗಳೂರು- ಮಂಗಳೂರು- ಮಡ್ಗಾಂವ್ 'ವಂದೇಭಾರತ್' ರೈಲು ಸೇವೆ ಆರಂಭವಾಗುವುದು ಕರಾವಳಿ ಕರ್ನಾಟಕದ ಅಭಿವೃದ್ಧಿಗೆ ಹೊಸ ದಿಕ್ಕು ನೀಡುವ ನಿರೀಕ್ಷೆ ಮೂಡಿಸಿದೆ. ಈ ಮಾರ್ಗವು ವೇಗದ ಹಾಗು ಸುಗಮ ಸಂಪರ್ಕವನ್ನು ಒದಗಿಸುವ ಮೂಲಕ ಪ್ರದೇಶದ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲಿದೆ.

ಉದ್ಯಮ, ಪ್ರವಾಸೋದ್ಯಮ ಹಾಗೂ ಉದ್ಯೋಗವಕಾಶಗಳ ಬೆಳವಣಿಗೆ ಇದು ಪ್ರಮುಖ ಚಾಲಕವಾಗಬಹುದು ಎಂಬ ವಿಶ್ವಾಸ ವ್ಯಕ್ತವಾಗಿದೆ. ವಿಶೇಷವಾಗಿ ಕರಾವಳಿ ಭಾಗಕ್ಕೆ ಪ್ರವಾಸಿಗರ ಆಗಮನ ಹೆಚ್ಚುವ ಸಾಧತೆಯಿದ್ದು ಸ್ಥಳೀಯ ಆರ್ಥಿಕತೆಗೆ ನೇರ ಲಾಭವಾಗಲಿದೆ.ಬಹುಕಾಲದ ಈ ಬೇಡಿಕೆ ಶೀಘ್ರದಲ್ಲೇ ಈಡಿರುವ ನಿರೀಕ್ಷೆಯು ಜನರಲ್ಲಿ ಹೆಚ್ಚಿದ್ದು ಈ ಯೋಜನೆ ಕಾರ್ಯರೂಪಕ್ಕೆ ಬಂದರೆ ದಕ್ಷಿಣ ಕನ್ನಡ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಮಹತ್ವದ ಉತ್ತೇಜನ ಸಿಗಲಿದೆ.

Also Read:

Sponsored

ಉಗ್ರರ ಕುರಿತ ಪುಸ್ತಕ ಬಿಡುಗಡೆಗೆ ವಿರೋಧ: ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online