<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ಹರಕೆ ಈಡೇರಿದ ಸಂತಸ: ಮಗು ಜನಿಸಿದ್ದಕ್ಕೆ ನೆಲಭೋಜನ ಮಾಡಿದ ವಸಿಷ್ಠ ಸಿಂಹ- ಹರಿಪ್ರಿಯಾ

ಹರಕೆ ಈಡೇರಿದ ಸಂತಸ: ಮಗು ಜನಿಸಿದ್ದಕ್ಕೆ ನೆಲಭೋಜನ ಮಾಡಿದ ವಸಿಷ್ಠ ಸಿಂಹ- ಹರಿಪ್ರಿಯಾ
Summary: Popular Kannada film couple Vasishtha Simha and Haripriya have made a special vow on the birth of a child. Photos of the couple eating nela bhojana at a temple and showing devotion are going viral on social media.

belagavi news :

ಕನ್ನಡ ಚಿತ್ರರಂಗದ ಜನಪ್ರಿಯ ದಂಪತಿ ಹರಿಪ್ರಿಯಾ ಮತ್ತು ವಶಿಷ್ಠ ಸಿಂಹ ಅವರು ಮಗು ಜನಿಸಿದರೆ ನೆಲಭೋಜನ ಮಾಡುವುದಾಗಿ ಹರಕೆ ಕಟ್ಟಿಕೊಂಡಿದ್ದರು. ಅವರ ಹರಕೆ ಫಲಿಸಿ ದಂಪತಿಗೆ ಗಂಡು ಮಗು ಜನಿಸಿದು ಇದೀಗ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ಹರಕೆಯನ್ನು ತೀರಿಸಿದ್ದಾರೆ.

ಮಗುನೊಂದಿಗೆ ದೇವಾಲಯಕ್ಕೆ ಆಗಮಿಸಿದ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅವರು ಶ್ರೀ ಕೃಷ್ಣನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮುಖ್ಯ ಪ್ರಾಣನ ಸನ್ನಿಧಿಯಲ್ಲಿ ನೆಲ ಭೋಜನ ಪ್ರಸಾದ ಸ್ವೀಕರಿಸಿ ತಮ್ಮ ಭಕ್ತಿಯನ್ನು ವ್ಯಕ್ತಪಡಿಸಿದರು. ಈ ವಿಶೇಷ ಕ್ಷಣದ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ದಂಪತಿಗೆ ಶುಭಾಶಯಗಳು ತಿಳಿಸುತ್ತಿದ್ದಾರೆ.

ಮಗುವಿನ ಜನನ ಸಂತಸದಲ್ಲಿ ಹರಕೆ ತೀರಿಸಿದ ಈ ದಂಪತಿಯ ಸರಳತೆ ಹಾಗೂ ಭಕ್ತಿಗೆ ನೆಟ್ಟಿಗರು ಹೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹರಿಪ್ರಿಯಾ - ವಸಿಷ್ಠ ಸಿಂಹ ಕುಟುಂಬದ ಈ ಅಪರೂಪದ ಕ್ಷಣ ಇದೀಗ ಅಭಿಮಾನಿಗಳ ಗಮನ ತಿಳಿದಿದೆ.

Sponsored

ಕನ್ನಡ ಚಿತ್ರರಂಗದ ಜನಪ್ರಿಯ ಸ್ಟಾರ್ ದಂಪತಿ ಹರಿಪ್ರಿಯಾ ಮತ್ತು ವಶಿಷ್ಠ ಸಿಂಹ ಅವರು ತಮ್ಮ ಹರಕೆಯನ್ನು ತೀರಿಸುವ ಸಲುವಾಗಿ ಉಡುಪಿ ಮಠಕ್ಕೆ ಭೇಟಿ ನೀಡಿದ್ದು, ಜನಸಾಮಾನ್ಯರೊಂದಿಗೆ ಕುಳಿತು ನೆಲಭೋಜನ ಪ್ರಸಾದ ಸ್ವೀಕರಿಸಿದ್ದಾರೆ. ಯಾವುದೇ ವಿಶೇಷ ವ್ಯವಸ್ಥೆ ಇಲ್ಲದೆ ಭಕ್ತರ ಜೊತೆ ಸರಲವಾಗಿ ಕುಳಿತು ಊಟ ಮಾಡಿದ ದಂಪತಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮಗುನೊಂದಿಗೆ ಶ್ರೀ ಕೃಷ್ಣನ ದರ್ಶನ ಪಡೆದ ಬಳಿಕ ದಂಪತಿ ಪರ್ಯಾಯ ಶೀರೂರು ಶ್ರೀ ವೇದವರ್ಧನ ಯತಿಗಳ ಆಶೀರ್ವಾದವನ್ನು ಪಡೆದರು. ಕುಟುಂಬದೊಂದಿಗೆ ದೇವರ ಸನ್ನಿಧಿಯಲ್ಲಿ ಕಳೆದ ಈ ವಿಶೇಷ ಕ್ಷಣಗಳ ಅಭಿಮಾನಿಗಳ ಗಮನ ಸೆಳೆಯುತ್ತಿವೆ.

ಈ ಕುರಿತು ಮಾತನಾಡಿದ ಹರಿಪ್ರಿಯಾ, " ಬಹಳ ಗ್ಯಾಪ್ ಬಳಿಕ ನಾವು ಉಡುಪಿ ಮಠಕ್ಕೆ ಬಂದು ಶ್ರೀ ಕೃಷ್ಣನ ದರ್ಶನ ಮಾಡಿದೆವು. ಮಗು ಜನಿಸಿದ ಬಳಿಕ ಕುಟುಂಬ ಸಮೇತರಾಗಿ ದೇವರ ಆಶೀರ್ವಾದ ಪಡೆಯುವುದು ತುಂಬಾ ಸಂತೋಷದ ವಿಚಾರ. ನಮ್ಮ ಹರಕೆ ತೀರಿಸುವುದಕ್ಕೂ ಖುಷಿಯಾಗಿದೆ" ಎಂದು ಹೇಳಿದ್ದಾರೆ.

ಸ್ಟಾರ್ ದಂಪತಿಯ ಈ ಸರಳತೆ, ಭಕ್ತಿ ಮತ್ತು ಸಂಪ್ರದಾಯದ ಮೇಲಿನ ನಂಬಿಕೆ ಅಭಿಮಾನಿಗಳ ಮೆಚ್ಚುಗೆ ಪಾತ್ರವಾಗಿದ್ದು ಅವರ ಭೇಟಿ ಕುರಿತ ಫೋಟೋಗಳು ಹಾಗೂ ವಿಡಿಯೋಗಳು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

Sponsored

ಮಗು ಜನಿಸಿದ ಬಳಿಕ ಹರಕೆಯನ್ನು ತೀರಿಸಲು ಉಡುಪಿ ಮಠಕ್ಕೆ ಭೇಟಿ ನೀಡಿದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ವಸಿಷ್ಠ ಸಿಂಹ, " ಒಂದುವರೆ ವರ್ಷದ ಹಿಂದೆ ಇಲ್ಲಿಗೆ ಬಂದು ನಾವು ನೆಲ ಭೋಜನದ ಹರಕೆ ಮಾಡಿಕೊಂಡಿದ್ದೆವು. ದೇವರ ಅನುಗ್ರಹ ನಮಗೆ ದೊರೆತಿದೆ ಎಂಬುದು ನಮ್ಮ ನಂಬಿಕೆ. ಎಲ್ಲಾ ಪದ್ಧತಿಗಳು ಒಂದು ಗಟ್ಟಿಯಾದ ಹಿನ್ನೆಲೆಯಲ್ಲಿ ಹುಟ್ಟಿರುತ್ತವೆ. ಅದನ್ನು ನಾವು ಪಾಲಿಸಿದ್ದೇವೆ" ಎಂದು ತಿಳಿಸಿದ್ದಾರೆ.

ಮಗು ಜನಿಸಿದ ಖುಷಿಯಲ್ಲಿ ಹರಕೆಯನ್ನು ತೀರಿಸಿದ ದಂಪತಿ, ಶ್ರೀ ಕೃಷ್ಣನ ದರ್ಶನ ಪಡೆದು ಮುಖ್ಯಪ್ರಾಣನ ಸನ್ನಿಧಿಯಲ್ಲಿ ನೆಲಭೋಜನ ಪ್ರಸಾದ ಸ್ವೀಕರಿಸಿದರು. ಜನ ಸಾಮಾನ್ಯರೊಂದಿಗೆ ಕುರಿತು ನೆರ ಭೋಜನ ಮಾಡಿದವರು ಸರಳತೆ ಮತ್ತು ಭಕ್ತಿ ಎಲ್ಲರ ಗಮನ ಸೆಳೆಯಿತು.

ಉಡುಪಿ ಮಠದಲ್ಲಿ ಕುಟುಂಬ ಸಮೇತರಾಗಿ ದೇವರ ಆಶೀರ್ವಾದ ಪಡೆದ ಸ್ಟಾರ್ ದಂಪತಿಯ ಫೋಟೋಗಳು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಶಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ಈ ಭಕ್ತಿ ಪೂರ್ವಕ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಕುಟುಂಬಕ್ಕೆ ಶುಭ ಹಾರೈಕೆಗಳನ್ನು ಸಲ್ಲಿಸುತ್ತಿದ್ದಾರೆ ಸಲ್ಲಿಸುತ್ತಿದ್ದಾರೆ.

Also Read:

Sponsored

ಸಿಎಂ ಡಿಕೆ ಶಿವಕುಮಾರ್ ಜೊತೆ ಎಷ್ಟು ಮಂದಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ?

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online