<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ವೆನೆಜುವೆಲಾ ಭೂಕಂಪದ ಆಘಾತ : ಮೃತರ ಸಂಖ್ಯೆ 235 ಕ್ಕೆ, 4,300 ಕ್ಕೂ ಹೆಚ್ಚು ಮಂದಿ ಗಾಯ : ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ

ವೆನೆಜುವೆಲಾ ಭೂಕಂಪದ ಆಘಾತ : ಮೃತರ ಸಂಖ್ಯೆ 235 ಕ್ಕೆ, 4,300 ಕ್ಕೂ ಹೆಚ್ಚು ಮಂದಿ ಗಾಯ : ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ
Summary: At least 235 people have been killed and over 43 injured in the powerful earthquake that struck Venezuela on Thursday. Rescue and relief operations are continuing.

belagavi news :

ಕ್ಯಾರಕಾಸ್,ವೆನೆಜುವೆಲಾ : ವೆನೆಜುಲಾದಲ್ಲಿ ಸಂಭವಿಸಿದ ಭೀಕರ ಭೂಕಂಪದ ಬಳಿಕ ಸಾವಿನ ಸಂಖ್ಯೆ ಕನಿಷ್ಠ 235 ಕ್ಕೆ ಏರಿಕೆಯಾಗಿದೆ.

ಸುಮಾರು 4300 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಎರಡು ನೂರಕ್ಕೂ ಹೆಚ್ಚು ಜನರು ಇನ್ನು ಅವಶೇಷಗಳಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ವೆನೆಜುವೆಲಾದ ಕಡಿಮೆ ಐತಿ ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರು ತಿಳಿಸಿದ್ದಾರೆ ಎಂದು ಎಪಿ ವರದಿ ಮಾಡಿದೆ.

ರಕ್ಷಣಾ ತಂಡಗಳು ನಿರಂತರವಾಗಿ ಶೋಧ ಮತ್ತು ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದು,ಅವಶೇಷವಾಡಿ ಸಿಲುಕಿರುವವರನ್ನು ಸುರಕ್ಷಿತವಾಗಿ ಹೊರ ತೆಗೆದುಕೊಳ್ಳುವ ಪ್ರಯತ್ನಗಳು ಮುಂದುವರೆದಿವೆ.ಗಾಯಾಳುಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದೇ ವೇಳೆ, ರಾಷ್ಟ್ರೀಯ ವಿಪತ್ತಿನ ಹಿನ್ನೆಲೆಯಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೋಡ್ರಿಗಸ, ಸಂಕಷ್ಟದ ಸಮಯದಲ್ಲಿ ನೆರವಿನ ಹಸ್ತ ಚಾಚಿದ ವಿಶ್ವದ ರಾಷ್ಟ್ರಗಳು ಹಾಗೂ ನಾಯಕರಿಗೆ ಕೃತಜ್ಞತೆ ಸಲ್ಲಿಸಿದರು. ವಿಶೇಷವಾಗಿ,ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರು ವ್ಯಕ್ತಪಡಿಸಿದ ಸಂತಾಪ ಮತ್ತು ನೆರವಿನ ಭರವಸೆಗೆ ಧನ್ಯವಾದ ಅರ್ಪಿಸಿದರು.

ಭೂಕಂಪದ ತೀವ್ರತೆಯಿಂದ ಹಲವಾರು ಕಟ್ಟಡಗಳು ಕುಸಿದಿದ್ದು, ಹಾನಿಯ ಸಂಪೂರ್ಣ ಪ್ರಮಾಣ ಇನ್ನಷ್ಟೇ ತಿಳಿಯಬೇಕಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಹಾಗೂ ಆತಂಕ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಬರದಿಂದ ಮುಂದುವರೆದಿದೆ.

ಕ್ಯಾರಕಾಸ್ : ವೆನೆಜುವೆಲಾದಲ್ಲಿ ಸಂಭವಿಸಿದ ಭೀಕರ ಭೂಕಂಪದ ಹಿನ್ನೆಲೆಯಲ್ಲಿ ವಿಶ್ವದ ಹಲವು ರಾಷ್ಟ್ರಗಳು ನೆರವಿನ ಹಸ್ತ ಚಾಚಿದ್ದು, ಹಂಗಾಮಿ ಅಧ್ಯಕ್ಷೇ ಡೆಲ್ಲಿ ರೊಡ್ರಿಗಸ್ ನೆರವು ಘೋಷಿಸಿದ ಎಲ್ಲ ರಾಷ್ಟ್ರಗಳ ನಾಯಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, "ನಮ್ಮ ಜನರ ನೆರವಿಗೆ ಧಾವಿಸಿದ ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಸಂಕಷ್ಟದ ಸಮಯದಲ್ಲಿ ವೆನೆಜುವೆಲಾ ಜನರಿಗೆ ಮಾನವೀಯ ನೆರವು ನೀಡಲು ಕೆನಡಾ ಸರ್ಕಾರ ಸಿದ್ಧವಿರುವುದನ್ನು ನಾವು ಅತ್ಯಂತ ಪ್ರಶಂಶಿಸುತ್ತೇವೆ" ಎಂದು ತಿಳಿಸಿದ್ದಾರೆ.

ಇದರ ಜೊತೆಗೆ, ಪ್ಯಾಲೆಸ್ಟೈನ್ ಅಧ್ಯಕ್ಷ ಮಹಮೂದ್ ಅಬ್ಬಾಸ್, ಕೋಸ್ಟರಿಕಾ ಅಧ್ಯಕ್ಷ ಲಾರಾ ಫೆರ್ನಾಂಡಿಸ್ ಹಾಗೂ ಸ್ಪೇನ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರು ವ್ಯಕ್ತಪಡಿಸಿದ ಬೆಂಬಲಮತ್ತು ಸಂತಾಪಕ್ಕೂ ರೊಡ್ರಿಗಸ್ ಧನ್ಯವಾದ ಅರ್ಪಿಸಿದ್ದಾರೆ.

ಇನ್ನೊಂದೆಡೆ, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಅವರು, "ಇಂದು ಬೆಳಗ್ಗೆ ಮೆನೇಜುವೆಲಾದ ಹಂಗಾಮಿ ಅಧ್ಯಕ್ಷೇ ಡೆಲ್ಸಿ ರೋಡ್ರಿಗಸ್ ಅವರೊಂದಿಗೆ ಮಾತನಾಡುವ ಅವಕಾಶ ದೊರೆಯಿತು. ಭೂಕಂಪದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ನೆರವಿಗಾಗಿ ಅಮೆರಿಕಾದ ವರ್ಜಿನಿಯಾದ ಫೇರ್ ಫ್ಯಾಕ್ಸ್ ಕೌಂಟಿ ಹಾಗೂ ಲಾಸ್ ಏಂಜಲೀಸ್‌ನಿಂದ ವಿಶೇಷ ಶೋಧ ಮತ್ತು ರಕ್ಷಣಾ ತಂಡಗಳನ್ನು ಕಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಭೂಕಂಪದ ಪರಿಣಾಮ ಅಲ್ಲಿನ ವಿಮಾನ ನಿಲ್ದಾಣವು ತೀವ್ರ ಹಾನಿಗೊಳಗಾಗಿದ್ದು,ಲಾ ಗೈರಾದಿಂದ ರಾಜಧಾನಿ ಕ್ಯಾರಕಾಸ್ವರೆಗಿನ ಹಲವು ನಗರಗಳಲ್ಲಿ ವ್ಯಾಪಕ ಹಾನಿಯಾಗಿದೆ. ಗುರುವಾರದ ಬೆಳಗ್ಗೆ ಕನಿಷ್ಠ 235 ಮಂದಿ ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ ಎಂದು ಅಲ್ ಜಜೀರಾ ವರದಿ ಮಾಡಿದೆ.ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಇನ್ನು ಮುಂದುವರೆದಿದ್ದು, ಅವಶೇಷಗಳ ಅಡಿ ಸಿಲುಕಿರುವವರಿಗೆ ಶೋಧ ಕಾರ್ಯ ಬರದಿಂದ ಸಾಗುತ್ತಿದೆ.

Also Read:

ಶಾರುಖ್ ಖಾನ್ ಗೆ ಮಂಗಳೂರಿನಲ್ಲಿ ಅದ್ದೂರಿ ಸ್ವಾಗತ : ತುಳು ಮಾತು,ಬಾಲ್ಯದ ಫೋಟೋ ಪ್ರದರ್ಶಿಸಿ ಬಾವುಕರಾದ ನಟ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online