belagavi news:
ಇತ್ತೀಚಿಗೆ ತಮಿಳುನಾಡು ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ತಮಿಳುನಾಡು ನಟ ವಿಜಯ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಈ ಹಿನ್ನೆಲೆಯಲ್ಲೇ ವಿಜಯ ಹಾಗೂ ಅವರ ಮಾಜಿ ಪತ್ನಿ ಸಂಗೀತ ಅವರ ಪುತ್ರಿ Divya Sasha ಬಗ್ಗೆ ಸಾರ್ವಜನಿಕರಲ್ಲಿ ಕುತೂಹಲ ಹೆಚ್ಚಾಗಿದೆ. ದಿವ್ಯಾ ಸಾಶಾ ಅವರ ಶಿಕ್ಷಣ ಮತ್ತು ವೈಯಕ್ತಿಕ ಜೀವನದ ಕುರಿತು ಹೆಚ್ಚಿನ ಮಾಹಿತಿಯನ್ನು ಜನರು ಹುಡುಕುತ್ತಿದ್ದು, ಅವರು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಗಮನ ಸೆಳೆಯುತ್ತಿದ್ದಾರೆ.
ಸುಮಾರು ಮೂರು ದಶಕಗಳಿಂದ ತಮಿಳು ಚಿತ್ರರಂಗದಲ್ಲಿ ಸಕ್ರಿಯ ರಾಗಿರುವ ವಿಜಯ್ ಅವರು ಆಕ್ಷನ್, ಡ್ಯಾನ್ಸ್ ಮತ್ತು ಅಭಿನಯದ ಮೂಲಕ ದಕ್ಷಿಣ ಭಾರತದಲ್ಲಿ ಭಾರಿ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ತಮ್ಮರುತಿ ಜೀವನದಲ್ಲಿ ಹಲವಾರು ಬ್ಲಾಕ್ ಭಾಸ್ಕರ್ ಸಿನಿಮಾಗಳನ್ನು ನೀಡಿರುವ ಅವರು ಇತ್ತೀಚಿಗೆ ತಮಿಳುನಾಡು ರಾಜಕೀಯದಲ್ಲೂ ಮಹತ್ವದ ಯಶಸ್ಸು ಸಾಧಿಸಿದ್ದಾರೆ ಎಂದು ಚರ್ಚೆಗಳು ನಡೆಯುತ್ತಿವೆ.
ಈ ಬೆಳವಣಿಗೆಯ ನಡುವೆಯೇ ವಿಜಯ್ ಹಾಗೂ ಸಂಗೀತ ದಂಪತಿಯ ಪುತ್ರಿ Divya Sasha ಅವರ ಬಗ್ಗೆ ಸಾರ್ವಜನಿಕರಲ್ಲಿ ಕುತ್ತಲ ಹೆಚ್ಚಾಗಿದ್ದು ಅವರ ಜೀವನ ಮತ್ತು ಹಿನ್ನೆಲೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಜನರು ಹುಡುಕುತ್ತಿದ್ದಾರೆ.
ವಿಜಯ್ ವರ ಪುತ್ರಿ Divya Sasha ಶೈಕ್ಷಣಿಕ ಹಿನ್ನೆಲೆ:
2005ರಲ್ಲಿ ಜನಿಸಿದ ದಿವ್ಯಾ ಬಾಲ್ಯದಿಂದಲೇ ಶಿಸ್ತು ಮತ್ತು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಬೆಳೆದವರು. ಅವರು ಚೆನ್ನೈ ನ ಪ್ರತಿಷ್ಠಿತ ಅಮೆರಿಕನ್ ಇಂಟರ್ನ್ಯಾಷನಲ್ ಸ್ಕೂಲ್ (AISC) ನಲ್ಲಿ ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ.
ಕೇವಲ ವಿದ್ಯಾಭ್ಯಾಸದಲ್ಲಷ್ಟೇ ಅಲ್ಲ ಕ್ರೀಡಾ ಕ್ಷೇತ್ರದಲ್ಲಿಯೂ ಅವರು ಗಮನ ಸೆಳೆದಿದ್ದಾರೆ. ಉತ್ತಮ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರುವ ವಿದ್ಯಾ, ತಮ್ಮ ಶಾಲಾ ತಂಡವನ್ನು ಪ್ರತಿನಿಧಿಸಿ ಹಲವು ಪಂದ್ಯಗಳಲ್ಲಿ ಜಯಗಳಿಸಿದ್ದಾರೆ.
ಬೆಳ್ಳಿಪರದೆಗೆ ಪದಾರ್ಪಣೆ :
ವಿಜಯ್ ಅವರ ಪುತ್ರಿ Divya Sasha ಅನೇಕ ಸ್ಟಾರ್ ಕಿಡ್ ಗಳಂತೆ ಬಹಳ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ 2016ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ ಸಿನಿಮಾ 'ತೆರಿ ' (Theri) ಅವರ ಮೊದಲ ಸಿನಿಮಾ ಅನುಭವವಾಗಿದ್ದು, ಆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ವಿಜಯ್ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಂಡ ಪ್ರೇಕ್ಷಕರ ಗಮನ ಸೆಳೆದಿದ್ದರು.
ಭವಿಷ್ಯದ ಯೋಜನೆಗಳು:
ತಂದಿ ವಿಜಯ್ ಚಿತ್ರರಂಗದಲ್ಲಿ ದೊಡ್ಡ ಹೆಸರಾಗಿದ್ದರು ಮತ್ತು ಅವರ ಸಹೋದರ ಜೇಸನ್ ಸಂಜಯ್ ನಿರ್ದೇಶನದತ್ತ ಆಸಕ್ತಿ ತೋರಿದ್ದರೂ, ದಿವ್ಯಾ ಸಾಶಾ ಪ್ರಸ್ತುತ ತಮ್ಮ ಉನ್ನತ ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಅವರು ಭವಿಷ್ಯದಲ್ಲಿ ನಾಯಕಿಯಾಗಿ ಚಿತ್ತಾರಂಗಕ್ಕೆ ಬರುತ್ತಾರೆಯೇ ಎಂಬುದು ಸದ್ಯ ಕುತೂಹಲವಾಗಿದೆ ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಸರಳ ಜೀವನ ಶೈಲಿಯಿಂದಲೇ ಅವರು ಅಭಿಮಾನಿಗಳು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Also Read:
ಡಿಕೆ ಶಿವಕುಮಾರ್ ಗೆ ದೊಡ್ಡ ಅವಕಾಶ ಸಿಗುತ್ತಾ? ರಾಜಣ್ಣ ಹೇಳಿಕೆಯಿಂದ ರಾಜಕೀಯ ಚರ್ಚೆ