<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ವಿಜಯಪುರ: ಬೀದಿ ನಾಯಿಗಳಿಗೆ ವಿಷ ಹಾಕಿದ ಪ್ರಕರಣ

ವಿಜಯಪುರ: ಬೀದಿ ನಾಯಿಗಳಿಗೆ ವಿಷ ಹಾಕಿದ ಪ್ರಕರಣ
Summary: A group of miscreants have poisoned stray dogs in Vijayapura. One dog has died in the incident and more dogs are suspected to be sick. The incident has caused outrage and concern among the locals. Vijayapura police have started an investigation into the incident.

Belagavi news:

ವಿಜಯಪುರ: ಬಾಲಕನ ಮೇಲೆ ನಡೆದ ನಾಯಿ ದಾಳಿಯ ಘಟನೆ ಬೆನ್ನಲ್ಲೇ ನಗರದಲ್ಲಿ ಅಮಾನವೀಯ ಘಟನೆ ನಡೆದಿದೆ. ಕೆಲವು ದುಷ್ಕರ್ಮಿಗಳು ಬೀದಿ ನಾಯಿಗಳಿಗೆ ಆಹಾರದಲ್ಲಿ ವಿಷ ಬೆರೆಸಿ, ನೀಡಿರುವ ಶಂಕೆ ವ್ಯಕ್ತವಾಗಿದೆ.

ಈ ಘಟನೆಯಲ್ಲಿ ಶಾಸ್ತ್ರಿ, ನಗರದಲ್ಲಿ ಒಂದು ಬೀದಿ ನಾಯಿ ಸಾವನ್ನಪ್ಪಿದ್ದು , ಮತ್ತೇರಡು ನಾಯಿಗಳು ವಿಷಪ್ರಾಶನದಿಂದ ತೀವ್ರ ಅಸ್ವಸ್ಥಗೊಂಡಿವೆ. ಅವುಗಳನ್ನು ಶ್ವಾನ ಪ್ರಿಯರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಈ ಅಮಾನವೀಯ ಕೃತ್ಯಕ್ಕೆ ಪ್ರಾಣಿ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಘಟನೆ ಕುರಿತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Sponsored

ವಿಜಯಪುರ ಬಾಲಕನ ಮೇಲೆ ನಾಯಿ ದಾಳಿಗೆ ಘಟನೆ ಬಳಿಕ ನಗರದಲ್ಲಿ ಬೀದಿ ನಾಯಿಗಳ ವಿಷಯಕ್ಕೆ ಸಂಬಂಧಿಸಿದ ಉದ್ವಿಗ್ನತೆ ಹೆಚ್ಚಾಗಿದೆ. ರಾಜಕುಮಾರ್ ಲೇಔಟ್ ನಲ್ಲಿ ನಡೆದ ಘಟನೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರ ಬೆನ್ನಲ್ಲೇ ಮಹಾನಗರ ಪಾಲಿಗೆ ಸಿಬ್ಬಂದಿ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಚಿಕಿತ್ಸೆ ಹಾಗೂ ಸ್ಥಳಾಂತರ ಯೋಜನೆ ರೂಪಿಸಿದ್ದರು. ಆದರೆ ಈ ಕ್ರಮಗಳು ಆರಂಭವಾಗುವ ಮುನ್ನವೇ ಕೆಲ ಕಿಡಿಗೇಡಿಗಳು ಬೀದಿ ನಾಯಿಗಳಿಗೆ ಆಹಾರದಲ್ಲಿ ವಿಷ ಬೆರೆಸಿ ಹಾಕಿರುವ ಘಟನೆ ಬೆಳಕಿಗೆ ಬಂದಿದೆ ಇದರಿಂದ ಪ್ರಾಣಿ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಸ್ತ್ರಿ ನಗರದಲ್ಲಿ ಯಾವುದೇ ನಾಯಿ ದಾಳಿ ಘಟನೆ ನಡೆದಿ ರದಿದ್ದರೂ, ಅಲ್ಲಿ ನಾಯಿಗಳಿಗೆ ವಿಷ ಹಾಕಿರುವುದು ಅನುಮಾನಕ್ಕೆ ಕಾರಣವಾಗಿದೆ. ಸ್ಥಳೀಯ ನಿವಾಸಿಗಳು ಇದನ್ನು ಕಳ್ಳತನಕ್ಕೆ ಹೊಂಚು ಹಾಕಿದವರು ಕೃತ್ಯವಾಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಘಟನೆಯಲ್ಲಿ ಶಾಸ್ತ್ರಿ ನಗರ ಬಡಾವಣೆಯ ಒಟ್ಟು 6 ಬೀದಿ ನಾಯಿಗಳಿಗೆ ವಿಷಯ ನೀಡಲಾಗಿದೆ. ಒಂದು ನಾಯಿ ಸ್ಥಳದಲ್ಲೇ ಸಾವನ್ನಪ್ಪಿದೆ. ಇನ್ನೆರಡು ನಾಯಿಗಳು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಅವುಗಳ ಸ್ಥಿತಿ ಗಂಭೀರವಾಗಿದೆ ಎಂದು ಶ್ವಾನ ಪ್ರಿಯರು ತಿಳಿಸಿದ್ದಾರೆ.

ವಿಜಯಪುರ: ಅಸ್ವಸ್ಥಗೊಂಡ ಬೀದಿ ನಾಯಿಗಳನ್ನು ಕಸದ ವಾಹನದಲ್ಲಿ ಸಾಗಿಸಿದ್ದಕ್ಕೆ ಪಾಲಿಗೆ ಹಾಗೂ ಪಶು ಸಂಗೋಪನೆ ಇಲಾಖೆ ವಿರುದ್ಧ ಪ್ರಾಣಿ ಪ್ರಿಯರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಸುಪ್ರೀಂ ಕೋರ್ಟ್ ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆ ಎಂದು ಅವರು ಆರೋಪಿಸಿದ್ದಾರೆ.

Sponsored

ಬೀದಿ ನಾಯಿಗಳಿಗೆ ವಿಷ ಹಾಕಿದವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಪ್ರಾಣಿ ಪ್ರಿಯರು ವಿಜಯಪುರದಲ್ಲಿ ಶ್ವಾನಪಾಲನಾ ಕೇಂದ್ರ ನಿರ್ಮಾಣಕ್ಕೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ರಾಜ್ಯಸಭಾ ಸದಸ್ಯ ಸುಧಾ ಮೂರ್ತಿಯವರು ಶ್ವಾನಪಾಲನಾ ಕೇಂದ್ರಕ್ಕಾಗಿ 2 ಕೋಟಿ ರೂಪಾಯಿ ಅನುದಾನ ನೀಡಿರುವ ಹಿನ್ನೆಲೆಯಲ್ಲಿ ಯೋಜನೆಯ ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಾರ್ವಜನಿಕ ಮನವಿ ಮಾಡಿದ್ದಾರೆ.

Also Read:

ಅಮೆರಿಕದ ಗೆಲವು ಖಚಿತ: ಇರಾನ್ ಯುದ್ಧದ ಬಗ್ಗೆ ಟ್ರಂಪ್ ಮಹತ್ವದ ಹೇಳಿಕೆ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online