ಮಣಿಪುರದ ಜನರು ಅಥವಾ ಬುಡಕಟ್ಟು ಸಮುದಾಯದವರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಅಲ್ಲಿರುವ ಜನರಲ್ಲಿ ಭೀತಿ ಮತ್ತು ಆತಂಕ ಹೆಚ್ಚಾಗಿದೆ. ಭದ್ರತಾಪಡಿಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮುಂದಾಗಿದ್ದು,ಪ್ರದೇಶದಲ್ಲಿ ತೀವ್ರ ಎಚ್ಚರಿಕೆ ಜಾರಿಯಲ್ಲಿದೆ.
ಮಣಿಪುರದಲ್ಲಿ ಎರಡು ಬುಡಕಟ್ಟು ಸಮುದಾಯಗಳ ಘರ್ಷಣೆಯಿಂದಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದೆ. ಹಿಂಸಾಚಾರ ಹೆಚ್ಚಾದಂತೆ ಪರಿಸ್ಥಿತಿ ಅಸ್ತವಸ್ತಗೊಂಡಿದ್ದು,ಭದ್ರತಾ ಪಡೆಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮುಂದಾಗಿವೆ. ಮಣಿಪುರದಲ್ಲಿ ತಂಗ್ಖುಲ್ ನಾಗಾ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವಿನ ಘರ್ಷಣೆಯಿಂದ ಉಖ್ರುಲ್ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಈ ಬೆನ್ನಲ್ಲೇ ಶಸ್ತ್ರ ಸಜ್ಜಿತ ಕುಕಿ ಉಗ್ರರು ಹಲೋ ಮನೆಗಳಿಗೆ ಬೆಂಕಿ ಹಚ್ಚಿದ್ದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು ನಿಷೇಧಾಜ್ಞೆ ಜಾರಿಗೆಗೋಳಿಸಲು ಅಧಿಕಾರಿಗಳು ಸೂಚಿಸಿದ್ದಾರೆ. ಮತ್ತು ಇದರೊಂದಿಗೆ ತಂಗ್ಖುಲ್ ನಾಗಾ ಸಮುದಾಯದ ಸದಸ್ಯರ ಮೇಲೆ ಜನರ ಗುಂಪೊಂದು ದಾಳಿ ನಡೆಸಿ ನಂತರ ಆ ಪ್ರದೇಶದಲ್ಲಿ ಹಿಂಸಾಚಾರ ಉಂಟಾಗಿದೆ ಎಂದು ಅಧಿಕಾರಿಗಳು ಸೋಮವಾರದಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಣಿಪುರದಲ್ಲಿ ಘಟನೆಯಿಂದ ಉಂಟಾದ ಹಾನಿಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ ಜೊತೆಗೆ ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನ ವಾಗಿದ್ದು ಕಟ್ಟೆಚ್ಚರ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿಯೊಬ್ಬರು ಮಾಧ್ಯಮ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ ಎಂದು ತಿಳಿಸಲಾಗಿದೆ. ಉಖ್ರುಲ್ ಜಿಲ್ಲೆಯಲ್ಲಿ ಲಿಟಲ್ ಗ್ರಾಮದಲ್ಲಿ ಭಾನುವಾರ ಸಂಜೆ ತಂಗ್ಖುಲ್ ನಾಗಾ ಮತ್ತು ಕುಕಿ ಬುಡ್ಕಟ್ಟು ಗುಂಪುಗಳು ನಡುವೆ ಬಾರಿ ಕಲ್ಲುತೂರಾಟ ನಡೆದಿದ್ದು ಈ ವೇಳೆ ಬುಡಕಟ್ಟು ಗುಂಪುಗಳನ್ನು ಸದರಿಸಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್ ಗಳನ್ನು ಹಾರಿಸಿದ್ದು,ಭಯದ ವಾತಾವರಣ ಉಂಟಾಗಿದೆ.
ಇದಾದ ನಂತರ ಸೋಮವಾರ ಮಧ್ಯರಾತ್ರಿಯ ವೇಳೆಗೆ,ಲಿಟಲ್ ಸರೈಕಾಂಗ್ ನಲ್ಲಿನ ತಂಗ್ಖುಲ್ ನಾಗಾ ಸಮುದಾಯದ ಸದಸ್ಯರು ಹಲವು ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಕುಕಿ ಉಗ್ರವೇ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗುತ್ತದೆ.
ಉಗ್ರರು ಮುಖಕ್ಕೆ ಮಾಸ್ ಧರಿಸಿರುವ ಶಸ್ತ್ರ ಸಜ್ಜಿತರು ಆಗಿ ಕಾಣುತ್ತಿದ್ದರು. ಗ್ರಾಮದಲ್ಲಿ ಮನೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚುತ್ತಿರುವುದು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವದನ್ನು ವಿಡಿಯೋದಲ್ಲಿ ರೆಕಾರ್ಡ್ ಮಾಡಲಾಗಿದೆ.ಈ ವಿಡಿಯೋಗಳ ಸತ್ಯತೆ ಅಧಿಕಾರಿಗಳು ಇನ್ನು ದೃಢಪಡಿಸಿಲ್ಲ ಎಂದು ತಿಳಿಸಲಾಗಿದೆ.
ಈ ಸ್ಥಳಗಳಿಗೆ ಭೇಟಿ ನೀಡಿದ ಮಣಿಪುರದ ಸಿಎಂ ಆಗಿರುವ ವೈ ಖೇಮ್ಚಂದ್ ಸಿಂಗ್ ಈ ರೀತಿಯಾಗಿ ಮಾತನಾಡಿದ್ದಾರೆ. ಉಖ್ರುಲ್ ಜಿಲ್ಲೆಯಲ್ಲಿ ನಡೆದ ದುರದೃಷ್ಟಕರ ಘಟನೆಯಿಂದಾಗಿ ಗಾಯಗೊಂಡವರನ್ನು ಭೇಟಿ ಮಾಡಲು ಇಂದು ಬೆಳಿಗ್ಗೆ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದೇನೆ ಅವರು ಬೇಗನೆ ಚೇತರಿಸಿಕೊಳ್ಳಲು ಅಗತ್ಯ ಇಲ್ಲ ವೈದ್ಯಕೀಯ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಇದರೊಂದಿಗೆ ಯಾರು ಕಾನೂನು ಕೈಗೆತ್ತಿಕೊಳ್ಳಬಾರದು,ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು ಎಂದು ಮಣಿಪುರದ ಮುಖ್ಯಮಂತ್ರಿ ಕೋರಿದ್ದಾರೆ. ಹಾಗೆ ತಪ್ಪುಮಾಹಿತಿಯಿಂದ ಈ ಘಟನೆ ಉಂಟಾಗಿದ್ದು ಸದ್ಯ ನಿಯಂತ್ರಣದಲ್ಲಿದೆ ಎಂದು ಎಲ್ಲ ಸಮುದಾಯಗಳಿಗೆ ಭರವಸೆಯನ್ನು ನೀಡಿದ್ದಾರೆ.
ತಂಗ್ಖುಲ್ ನಾಗಾ ಮತ್ತು ಕುಕಿ ಸಮುದಾಯಗಳ ಸದಸ್ಯರ ನಡುವಿನ ಉದ್ವಿಗ್ನತೆಯಿಂದಾಗಿ ಗ್ರಾಮದಲ್ಲಿ ಶಾಂತಿ ಮತ್ತು ನೆಮ್ಮದಿಗೆ ಭಂಗವಾಗುವ ಆತಂಕವಿದೆ.ಹಾಗೆ ಭಾನುವಾರ ಸಂಜೆ 7:00 ಯಿಂದ ಮುಂದಿನ ಆದೇಶದವರೆಗೂ ಗುಂಪಾಗಿ ಯಾರು ಓಡಾಡದಂತೆ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆಶಿಶ್ ದಾಸ್ ಅವರು ಆದೇಶವನ್ನು ಹೊರಡಿಸಿದ್ದಾರೆ.ಹಾಗೆ ಕಾನೂನು ವ್ಯವಸ್ಥೆ ಕಾಪಾಡಲು ಮತ್ತು ಅನುಮಾನ ಪದ ವ್ಯಕ್ತಿಗಳ ಚಲನವಲನವನ್ನು ತಡೆಯಲು ಹತ್ತಿರದ ಎಲ್ಲಾ ಪ್ರದೇಶಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ.
ಮಣಿಪುರದ ಈ ಘಟನೆಯಿಂದಾಗಿ ಮಣಿಪುರದ ಅತಿ ದೊಡ್ಡ ನಾಗಾ ಸಮುದಾಯಗಳಲ್ಲಿ ತಂಗ್ಖುಲ್ ಕೂಡ ಒಂದು.ಲಿಟಲ್ ಸರೈಖಾಂಗ್ ಗ್ರಾಮದಲ್ಲಿ ಹೆಚ್ಚಾಗಿ ಕುಕಿಂಗ್ ಸಮುದಾಯದವರು ಹೆಚ್ಚಾಗಿದ್ದಾರೆ ಎಂದು ದೃಢಪಡಿಸಲಾಗಿದೆ.ಹೀಗೆ ಎರಡು ಸಮುದಾಯಗಳ ನಡುವೆ ತೀವ್ರವಾದ ವಾದ ವಿವಾದಗಳು ನಡೆಯುತ್ತಿದ್ದು ಅಲ್ಲಿನ ವಾತಾವರಣ ಅಂದರೆ ಮಣಿಪುರದ ವಾತಾವರಣ ತೀವ್ರ ಹದಗೆಟ್ಟಿದೆ.
ಇದರ ಜೊತೆಗೆ ಶನಿವಾರ ರಾತ್ರಿ ಲಿಟಲ್ ಗ್ರಾಮದಲ್ಲಿ ತಂಗ್ಖುಲ್ ನಾಗಾ ಸಮುದಾಯದ ಸದಸ್ಯರ ಮೇಲೆ ಏಳರಿಂದ ಎಂಟು ಜನರು ಹಲ್ಲೆ ನಡೆಸಿದ್ದರು ಎಂಬ ಆರೋಪದ ಬಳಿಕ ಈ ಪ್ರದೇಶದಲ್ಲಿ ಹಿಂಸಾಚಾರ ಭುಗಿಲೆದಿದೆ ಎಂದು ಸ್ಪಷ್ಟವಾಗಿ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.
ಇನ್ನಷ್ಟು ಓದಿರಿ:
ನಮ್ಮ ಮೆಟ್ರೋ ಪ್ರಯಾಣಿಕರಿಗೆ ವಿಶೇಷ ಮಾಹಿತಿ ; ಏನದು?