<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಬೆಳಗಾವಿಯಲ್ಲಿ ನೀರಿಗಾಗಿ ಹಾಹಾಕಾರ: 8-10ದಿನಕೊಮ್ಮೆ ನೀರು ಪೂರೈಕೆ

ಬೆಳಗಾವಿಯಲ್ಲಿ ನೀರಿಗಾಗಿ ಹಾಹಾಕಾರ: 8-10ದಿನಕೊಮ್ಮೆ ನೀರು ಪೂರೈಕೆ
Summary: The quantity of drinking water in Belgaum district is decreasing day by day, severely affecting the lives of the people. Water shortage has caused chaos in many parts, creating a situation where people are struggling to meet their basic needs.

belagavi news :

ಬಿಸಿಲಿನ ಝಳಕ್ಕೆ ಸಪ್ತ ನದಿಗಳ ನಾಡಂಬ ಬೆಳಗಾವಿ ಜಿಲ್ಲೆಯಲ್ಲಿ ದಿನೇ ದಿನೇ ನೀರಿನ ಮಟ್ಟ ಕುಸಿಯುತ್ತಿದ್ದು, ಕುಡಿಯುವ ನೀರಿಗಾಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ನೀರಿನ ಸಂಕಷ್ಟ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಬೆಳಗಾವಿ ಮಹಾನಗರಕ್ಕೆ ಹುಕ್ಕೇರಿ ತಾಲೂಕಿನ ಹಿಡಕಲ್ ಬಳಿ ಇರುವ ರಾಜಲಗಮ ಗೌಡ ಜಲಾಶಯ ಮತ್ತು ಬೆಳಗಾವಿ ತಾಲೂಕಿನ ರಾಕಸಕೊಪ್ಪ ಜಲಾಶಯದಿಂದ ನೀರು ಪೂರೈಕೆ ಆಗುತ್ತದೆ. ಆದರೆ ಕಳೆದ ವರ್ಷಗಿಂತ ಈ ಬಾರಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿರುವುದು ಸಾರ್ವಜನಿಕರಲ್ಲಿ ಚಿಂತೆ ಹೆಚ್ಚಿಸಿದೆ.

ಕಳೆದ 15 ದಿನಗಳಲ್ಲಿ ನಗರದ ಅನೇಕ ಬಡಾವಣೆಗಳಲ್ಲಿ ಏಳರಿಂದ ಎಂಟು ದಿನಕ್ಕೊಮ್ಮೆ ಮಾತ್ರ ನೀರು ಪೂರೈಕೆ ಮಾಡಲಾಗುತ್ತಿದ್ದು, ಜನರು ನೀರಿನ ಅಭಾವದಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಹಲೋ ಕಡೆ ಟ್ಯಾಂಕರ್ ನೀರಿನ ಅವಲಂಬನೆ ಹೆಚ್ಚಾಗಿದ್ದು, ಶೀಘ್ರದಲ್ಲೇ ಮಳೆಯಾಗದಿದ್ದರೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ನಗರಕ್ಕೆ ಪ್ರತಿದಿನ 105 ಎಂ ಎಲ್ ಡಿ ನೀರು ಸರಬರಾಜು ಆಗುತ್ತಿದೆ.ಈ ಪೈಕಿ ಹಿಡಕಲ್ ಜಲಾಶಯದಿಂದ 65 ಎಂಎಲ್ಡಿ, ರ ರಕಸಕೊಪ್ಪ ಜಲಾಶಯದಿಂದ 40 ಎಂ ಎಲ್ ಡಿ ನೀರು ಬರುತ್ತಿದೆ.

ಬೆಳಗಾವಿ ಮಹಾನಗರಕ್ಕೆ ಪ್ರತಿದಿನ ಸುಮಾರು 105 mld ನೀರು ಸರಬರಾಜು ಮಾಡಲಾಗುತ್ತಿದ್ದು, ಇದರಲ್ಲಿ ಹಿಡಕಲ್ ಜಲಾಶಯದಿಂದ 65 mld ಹಾಗೂ ರಾಜಸಕೊಪ್ಪ ಜಲಾಶಯದಿಂದ 40 mld ನೀರು ಪೂರೈಕೆ ಆಗುತ್ತಿದೆ. 48.98 ಟಿಎಂಸಿ ಅಡಿ ಸಾಮರ್ಥ್ಯದ ಹಿಡಕಲ್ ಆಣೆಕಟ್ಟೆಯಲ್ಲಿ ಸದ್ಯ 11.41 tmc ನೀರು ಸಂಗ್ರಹಿಸಿದೆ. 0.5 ಟಿಎಂಸಿ ಸಾಮರ್ಥ್ಯದ ರಾಕಸಕೊಪ್ಪ ಜಲಾಶಯದಲ್ಲಿ ಕೇವಲ 0.2 ಟಿಎಂಸಿ ನೀರು ಮಾತ್ರ ಲಭ್ಯವಿದೆ.

ಅದೇ ರೀತಿ ಸವದತ್ತಿ ತಾಲೂಕಿನ ಮುನವಳ್ಳಿ ಸಮೀಪದ ನವಿಲು ತೀರ್ಥ ಅಣೆಕಟ್ಟಿನಲ್ಲಿ 6.44 ಟಿಎಂಸಿ ನೀರು ಉಳಿದಿದೆ. ಇಂದಿನ ವರ್ಷ ಹಿಡಕಲ್ ಜಲಾಶಯದಲ್ಲಿ ಮೇ 11ರಂದು 11.90 ಟಿಎಂಸಿ ನೀರಿತ್ತು ಆದರೆ ಇಂದು 11.43 ನೀರಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 2.5 ಟಿಎಂಸಿ ನೀರು ಕಡಿಮೆ ಇದೆ. ಜೊತೆಗೆ ಇದೇ ರೀತಿ ನವಿಲತೀರ್ಥ ಜಲಾಶಯದಲ್ಲಿ ಇಂದು 6.44 ಟಿಎಂಸಿ ನೀರಿದೆ ಕಳೆದ ವರ್ಷ 8.83 ಟಿಎಂಸಿ ನೀರಿದ್ದು, ಇದರಿಂದ ಹಿಂದಿನ ವರ್ಷಕ್ಕಿಂತ 2.39 ಟಿಎಂಸಿ ನೀರು ಕಡಿಮೆ ಇದೆ.

ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ಸಂಸ್ಥೆಯ ಪ್ರಕಟಣೆಯ ಪ್ರಕಾರ, ಬೆಳಗಾವಿ ಮಹಾನಗರದ 58 ವಾರ್ಡ್ ಗಳಿಗೆ ನೀರು ಪೂರೈಕೆ ಮಾದರಿಯಲ್ಲಿ ಬದಲಾವಣೆ ಮಾಡಲಾಗಿದೆ. ರಾಕಸಕೊಪ್ಪ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ಸದ್ಯ ಅತಿ ಕಡಿಮೆ ಸಂಗ್ರಹ ಮಾತ್ರ ಉಳಿದಿದೆ. ಈ ಹಿನ್ನೆಲೆಯಲ್ಲಿ ಬೇಸಿಗೆ ಮುಂದಿನ ಎರಡು ತಿಂಗಳುಗಳು ನೀರನ್ನು ಅತ್ಯಂತ ಮಿತವಾಗಿ ಬಳಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.

ಬೆಳಗಾವಿ ಮಹಾನಗರದಲ್ಲಿ ನೀರಿನ ಕೊರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೀರು ಪೂರೈಕೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಮೂರು ದಿನಕ್ಕೊಮ್ಮೆ ಬರುವ ನೀರನ್ನು ಈಗ ನಾಲ್ಕು ದಿನಕ್ಕೊಮ್ಮೆ, ನಾಲ್ಕು ದಿನಕ್ಕೊಮ್ಮೆ ಬರುವ ನೀರನ್ನು 5ದಿನಕೊಮ್ಮೆ,5ದಿನಕೊಮ್ಮೆ ಬರುವ ನೀರನ್ನು 6 ದಿನಕ್ಕೊಮ್ಮೆ ಬರಲಿದೆ. ಒಂದು ಗಂಟೆ 45 ನಿಮಿಷ ಮಾತ್ರ ನೀರು ಸರಬರಾಜು ಮಾಡುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ನಡುವೆ ನಾಗರಿಕರು ನೀರಿನ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ, ಶಿಕ್ಷಕ ನಾರಾಯಣ್ ಗಣಾಚಾರ್ಯ ಅವರು ಮಾತನಾಡಿ,"ನಮ್ಮ ಗುರುಪ್ರಸಾದ್ ಕಾಲೋನಿಯಲ್ಲಿ ಮೊದಲು ನಾಲ್ಕು ದಿನಕೊಮ್ಮೆ ನೀರು ಬರುತ್ತಿತ್ತು. ಈಗ ಎಂಟು ದಿನಕ್ಕೊಮ್ಮೆ ಮಾತ್ರ ನೀರು ಬಿಡುಲಾಗುತ್ತದೆ.

24/7 ಮೈ ಪ್ಲ್ಯಾನ್ ಅಳವಡಿಸಿದ್ದರು ಇನ್ನೂ ಸರಿಯಾದ ಪೂರೈಕೆ ಆಗುತ್ತಿಲ್ಲ, ಜಿಲ್ಲಾಡಳಿತ ಹಾಗೂ ಪಾಲಿಕೆ ಶೀಘ್ರ ಕ್ರಮ ಕೈಗೊಳ್ಳಬೇಕು"ಎಂದು ಮನವಿ ಮಾಡಿದ್ದಾರೆ. ಅದೇ ರೀತಿ ನಾರ್ವೆಕರ್ ಗಲ್ಲಿಯ ನಿವಾಸಿ ವಿಜಯ ಅವರು ಮಾತನಾಡಿ,"ಹಿಂದೆ ನಾಲ್ಕು ದಿನಕೊಮ್ಮೆ ನೀರು ಬರುತ್ತಿತ್ತು. ಈಗ ಎಂಟರಿಂದ ಹತ್ತು ದಿನಕೊಮ್ಮೆ ಮಾತ್ರ ನೀರು ಬರುತ್ತಿದೆ. ಬಂದರು ಹನಿ ಹನಿ ನೀರು ಮಾತ್ರ ಬರುತ್ತಿದೆ. ನೀರು ಬಂದ ದಿನ ಮನೆಯಲ್ಲಿರುವ ಎಲ್ಲಾ ಪಾತ್ರೆಗಳನ್ನು ತುಂಬಿಸಿಕೊಳ್ಳಬೇಕಾಗಿದೆ"ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಪರಿಸ್ಥಿತಿಯಿಂದ ನಗರದಲ್ಲಿ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ ಎಂದ ಆತಂಕ ವ್ಯಕ್ತವಾಗಿದೆ.

Also Read:

ಭಾರತ ತಂಡಕ್ಕೆ ಭುವನೇಶ್ವರ್ ಕುಮಾರ್ ಅವಶ್ಯಕ : ಆರ್ ಅಶ್ವಿನ್ ಅಭಿಪ್ರಾಯ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online