belagavi news:
ಬೆಂಗಳೂರು: ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿಲ್ಲ ಎಂಬುದನ್ನು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರ್ ನಿವಾಸದ ಬಳಿ ಮಾತನಾಡಿದವರು, ತಮಿಳುನಾಡು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಬಂದಿದ್ದಾರೆ ಎಂಬ ವದಂತಿ ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ. ಅವರು ಯಾವ ಈಗಲ್ಟನ ರೆಸಾರ್ಟ್ಗೂ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದುರಸ್ತಿ ಕೆಲಸದ ಕಾರಣದಿಂದ ಈಗಲ್ಟನ ಮುಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ಶಾಸಕರ ಹೈದ್ರಾಬಾದ್ ಗೆ ತೆರಳಿದ್ದಾರೆ ಎಂಬ ಮಾಹಿತಿ ಟಿವಿಯಲ್ಲಿ ನೋಡಿದ್ದು ಹೊರತು ಈ ಕುರಿತು ಪಕ್ಷದ ಹೈಕಮಾಂಡ್ ನಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ತಮಿಳುನಾಡು ಕಾಂಗ್ರೆಸ್ ಶಾಸಕರ ವಿಚಾರ ಕುರಿತು ಪ್ರತಿಕ್ರಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಾರ್ಟಿ ಹೈಕಮಾಂಡ್ ಮಾತನಾಡಿದರೆ ಅದು ಬೇರೆ ವಿಚಾರವಾಗುತ್ತದೆ. ಆಗ ನಾನು ಪಕ್ಷದ ನಿರ್ಣಯದಂತೆ ನೆಲುವು ತೆಗೆದುಕೊಳ್ಳುತ್ತಿದ್ದೆ ಎಂದು ಹೇಳಿದ್ದಾರೆ. ಆದರೆ ಈಗ ತನಗೆ ಈ ಕುರಿತು ಯಾವುದೇ ಮಾಹಿತಿ ಇಲ್ಲ, ಯಾರು ಸಂಪರ್ಕದಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಚಾರ ಹಾಗೂ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮಗಳಿಗೆ ಪಕ್ಷದಿಂದ ಕರೆದಾಗ ಮಾತ್ರ ಹೋಗಿದೆ ಎಂದು ಹೇಳಿದವರು ತಮಿಳುನಾಡಿನ ವಿಷಯದ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ಅದೇ ವೇಳೆ, ಯಡಿಯೂರಪ್ಪ ಅವರ ಅಭಿಮಾನೋತ್ಸವ ಕುರಿತು ಮಾತನಾಡಿದ ಅವರು, ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿ, ಅವರು ರಾಜ್ಯಕ್ಕೆ ಸೇವೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಆದರೆ ರಾಜಕೀಯವಾಗಿ ಅವರದ್ದೇ ಒಂದು ವಿಚಾರಧಾರೆ ತಮ್ಮದೊಂದು ವಿಚಾರಧಾರೆ ಎಂದು ಹೇಳಿದ್ದಾರೆ. ಕೇರಳದಲ್ಲಿ ಸಿಎಂ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲಾ ನಾಯಕರನ್ನು ಕರೆದು ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುವುದು ಸಾಮಾನ್ಯ ಪ್ರಕ್ರಿಯೆ ಎಂದು ತಿಳಿಸಿದ್ದಾರೆ.
ಬೆಂಗಳೂರುದಲ್ಲಿ ಮರಗಳ ರಂಬೆ- ಕೊಂಬೆ ತೆರವು ವಿಚಾರ ಹಾಗೂ ರಾಜಕೀಯ ಟಿಕೆಟ್ ವಿವಾದಗಳ ಕುರಿತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಪ್ಯಾಲೇಸ್ ಪಕ್ಕದಲ್ಲಿ ಬಿದ್ದಿದ ಮರಗಳನ್ನು ತೆರವು ಮಾಡಲಾಗುತ್ತಿದೆ. ಬಿದ್ದಿರುವ ಹಾಗೂ ಬೀಳುವ ಸಾಧ್ಯತೆ ಇರುವ ಎಲ್ಲಾ ಮರಗಳನ್ನು ಕತ್ತರಿಸಲು ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪೊಲೀಸರು ನೀಡಿದ 480 ಮರಗಳ ಪಟ್ಟಿಯನ್ನು ತೆರೆವು ಮಾಡಲು ಹೇಳಲಾಗಿದೆ ಎಂದು ಹೇಳಿದ್ದಾರೆ.
ಅದೇ ವೇಳೆ, ಆರ್ .ಅಶೋಕ್ ಅವರ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅವರು ಏನು ಹೇಳಿದ್ದಾರೆ ಅದನ್ನು ನಾವು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಐಪಿಎಲ್ ಟಿಕೆಟ್ ವಿಚಾರದಲ್ಲಿ ಅಶೋಕ್ ಕೇಳಿದ್ದನ್ನು ನೀಡಲಾಗಿದೆ, ಕಾಶಪ್ಪನವರ್ ಹಾಗೂ ಕೆಲವು ಎಂಎಲ್ ಎಗಳ ನಡುವೆ ಗಲಾಟೆ ನಡೆದಿದ್ದರೂ ಅದನ್ನು ತಾವು ನಿಭಾಯಿಸಿದ್ದಾಗಿ ತಿಳಿಸಿದ್ದಾರೆ. ಬಿಜೆಪಿ ಹಾಗೂ ಗುಜರಾತ್ ನಾಯಕರು ರಾಜಕೀಯವಾಗಿ ವಿಷಯವನ್ನು ದೊಡ್ಡದಾಗಿಸುತ್ತಿದ್ದಾರೆ ಎಂದು ಆರೋಪಿಸಿದವರು ಟಿಕೆಟ್ ವಿಚಾರದಲ್ಲಿ ಸೃಷ್ಟಿಸಲಾಗಿದೆ ಎಂದು ಹೇಳಿದ್ದಾರೆ.
ನಾನು ಕರ್ನಾಟಕದ ಜನಪ್ರತಿನಿಧಿ. ಎಲ್ಲಾ ಪಕ್ಷದ ಶಾಸಕರು ಸೇರಿ ಹೇಳಿದ್ರಲ್ಲ ಅದನ್ನು ಮಾಡಿದ್ದೇವೆ. ಕಾಂಗ್ರೆಸ್ ಸೇರಿದಂತೆ ದಳ, ಬಿಜೆಪಿ ಕ್ರೀಡಾಂಗಣದಲ್ಲಿ ಅವರು ಬೇಡ ಎಂದರೆ ಸರೆಂಡರ್ ಮಾಡಲಿ. ನಾನು ಭಾವನೆ ಬಗ್ಗೆ ಹೇಳಿದ್ದೇನೆ. ನಾನು ನನಗೋಸ್ಕರ ಮಾಡಿದ್ನಾ?.. ನಮ್ಮ ಪ್ರತಿನಿಧಿಗಳಿಗಾಗಿ ಕೆಎಸ್ ಸಿಎ ಅವರನ್ನು ಕರೆದು ಮಾತನಾಡಿದಾಗ ಅವರು ಒಪ್ಪಿಕೊಂಡರು. ಮೊದಲು ಎರಡು ಕೊಡ್ತಾ ಇದ್ದರೂ ಮೂರು ಕೊಡಿ ಎಂದಿದ್ದೆ ಎಂದು ತಿಳಿಸಿದರು.
Also Read: