belagavi news :
ರವೀಂದ್ರನಾಥ್ ಟ್ಯಾಗೋರ್ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಟ್ಯಾಗೋರ್ ಅವರನ್ನು ಭಾರತೀಯ ನಾಗರಿಕತೆಯ"ಕಲಾತೀತ ಧ್ವನಿ"ಎಂದು ವರ್ಣಿಸಿರುವ ಪ್ರಧಾನಿ, ಸಾಹಿತ್ಯ ಮತ್ತು ಸಂಸ್ಕೃತಿಗೆ ಅವರು ನೀಡಿದ ಅನನ್ಯ ಕೊಡುಗೆಯನ್ನು ಸ್ಮರಿಸಿದ್ದಾರೆ. ಬಂಗಾಳಿ ಕ್ಯಾಲೆಂಡರ್ ನ ಪೋಚಿಸ್ ಬೋವಿಶಾಕ್ 'ದಿನದಂದು ಆಚರಿಸಲ್ಪಡುವ ಈ ಸಂದರ್ಭದಲ್ಲಿ, ಗುರುದೇವರಂದ್ರನಾಥ್ ಟ್ಯಾಗೋರ್ ಅವರು ಅಸಾಧಾರಣ ಪ್ರತಿಭೆಯ ಲೇಖನ, ಚಿಂತಕ, ದಾರ್ಶನಿಕ ಹಾಗೂ ಶ್ರೇಷ್ಠ ಶಿಕ್ಷಣ ತಜ್ಞರಾಗಿದ್ದರು ಎಂದು ಪ್ರಧಾನಿ ಮೋದಿ ವಿಶ್ಲೇಷಿಸಿದ್ದಾರೆ.
ನೊಬೆಲ್ ಪ್ರಶಸ್ತಿ ಪುರಸ್ಕೃತ ಮಹಾನ್ ಕವಿ ರವೀಂದ್ರನಾಥ್ ಟ್ಯಾಗೋರ್ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ. ಟ್ಯಾಗೋರ್ ಅವರನ್ನು ಭಾರತದ ನಾಗರಿಕತೆಯ ಆತ್ಮದ"ಕಲಾತೀತ ಧ್ವನಿ"ಎಂದು ವರ್ಣಿಸಿದ ಪ್ರಧಾನಿ, ಸಾಹಿತ್ಯ ಮತ್ತು ಸಾಂಸ್ಕೃತಿಗೆ ಅವರು ನೀಡಿದ ಅನನ್ಯ ಕೊಡುಗೆಯನ್ನು ಸ್ಮರಿಸಿದ್ದಾರೆ. ಬಂಗಾಳಿ ಕ್ಯಾಲೆಂಡರ್ ನ ವೈಶಾಖ ಮಾಸದ ೨೫ ದಿನವಾದ ಪೊಚಿಸ್ ಬೋಯಿಶಾಕ್'ಸಂದರ್ಭದಲ್ಲಿ ಆಚರಿಸಲ್ಪಡುವ ರವೀಂದ್ರ ಜಯಂತಿಯ ವಿಶೇಷ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ."ಗುರುದೇವ ಟ್ಯಾಗೋರ್ ಅವರು ಅಸಾಧಾರಣ ಪ್ರತಿಭೆಯುಳ್ಳ ಲೇಖಕ , ಚಿಂತಕ ಮತ್ತು ಕವಿಯಾಗಿದ್ದರ. ಅವರು ಅಪ್ರತಿಮ ದಾರ್ಶನಿಕ, ಶಿಕ್ಷಣ ತಜ್ಞ ಮತ್ತು ಕಲಾವಿದರಾಗಿಯು ಗುರುತಿಸಿಕೊಂಡಿದ್ದಾರೆ,"ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ರವೀಂದ್ರನಾಥ ಟ್ಯಾಗೋರ್ ಅವರು ಮಾನವೀಯತೆಯ ಆಳವಾದ ಭಾವನೆಗಳಿಗೆ ಹಾಗೂ ನಮ್ಮ ಸಂಸ್ಕೃತಿಯ ಉದಾತ ಆದರ್ಶಗಳಿಗೆ ಜೀವಂತ ರೂಪ ನೀಡಿದ ಮಹಾನ್ ವ್ಯಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿಯವರು ಉಲ್ಲೇಖಿಸಿದ್ದಾರೆ. ಹೊಸ ಆಲೋಚನೆಗಳು, ಸೃಜನಾತ್ಮಕ ಶಕ್ತಿ ಮತ್ತು ಸಾಂಸ್ಕೃತಿಕ ಆತ್ಮವಿಶ್ವಾಸದ ಮೂಲಕ ಅವರು ಸಮಾಜವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ."ನಾವು ಅವರನ್ನು ಆಳವಾದ ಗೌರವ ಮತ್ತು ಕೃತಜ್ಞತೆಯಿಂದ ಸ್ಮರಿಸುತ್ತೇವೆ. ಅವರ ವಿಚಾರಗಳು ಸದಾ ಕಾಲ ನಮಗೆ ಮಾರ್ಗದರ್ಶನ ನೀಡುತ್ತಿರಲಿ", ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ರವೀಂದ್ರನಾಥ್ ಟ್ಯಾಗೋರ್ ಅವರು ಮೇ 7,1861 ರಂದು ಜನಿಸಿದವರಾಗಿದ್ದರು, ಬಂಗಾಳಿ ಸಮುದಾಯವು ಅವರ ಜನ್ಮದಿನವನ್ನು ಸಾಂಪ್ರದಾಯಿಕ ಬಂಗಾಳಿ ಕ್ಯಾಲೆಂಡರ್ ಪ್ರಕಾರ ಆಚರಿಸುತ್ತದೆ. ಈ ಬಾರಿ ಪಶ್ಚಿಮ ಬಂಗಾಳದ ರಾಜಕೀಯ ಬೆಳವಣಿಗೆ ನಡುವೆಯೇ ರವೀಂದ್ರ ಜಯಂತಿ ಆಚರಣೆ ಗಮನ ಸೆಳೆದಿದೆ. ಶಾಂತಿನಿಕೇತನ ಮತ್ತು 'ಗೀತಾಂಜಲಿ'ಈ ಮೂಲಕ ಭಾರತವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಿದ ಟ್ಯಾಗೋರ್ ಅವರ ಸಾಂಸ್ಕೃತಿಕ ಪರಂಪರೆ ಇಂದಿಗೂ ಪ್ರಸ್ತುತವಾಗಿದೆ. ಅವರ ಸಾಹಿತ್ಯ ಮತ್ತು ತತ್ವ ಚಿಂತನೆಗಳು ವಿಶ್ವದಾದ್ಯಂತ ಮಾನವತೆಯ ಸಂದೇಶವನ್ನು ಹೊರಡಿವೆ.
Also Read:
Acid Attack Threat: ಗುಲ್ಬರ್ಗಾ ವಿವಿ ಕುಲಪತಿಗೆ ಜೀವ ಬೆದರಿಕೆ ಶಾಕ್