<?= $pageTitle ?>
Logo
ಮುಖಪುಟ ಓದುವುದು ಕೇಳು
Politics

"ಮಂತ್ರಿ ಆಗಲಿ, ಸ್ಪೀಕರ್ ಆಗಲಿ, ಶಾಸಕ ಆಗಲಿ': ಯು.ಟಿ ಖಾದರ್ ಹೇಳಿದ್ದೇನು?

"ಮಂತ್ರಿ ಆಗಲಿ, ಸ್ಪೀಕರ್ ಆಗಲಿ, ಶಾಸಕ ಆಗಲಿ': ಯು.ಟಿ ಖಾದರ್ ಹೇಳಿದ್ದೇನು?
Summary: 'If given, a minister, if not, a speaker, if not, an MLA', U.T. Khader said. He made this statement to mean that power or position is not important, he is ready to accept any responsibility given by the party.

belagavi news :

🏛️ 'ಕೊಟ್ಟರೆ ಮಂತ್ರಿ, ಇಲ್ಲದಿದ್ದರೆ ಸ್ಪೀಕರ್, ಅದಿಲ್ಲದಿದ್ದರೆ ಶಾಸಕ: ಯು.ಟಿ ಖಾದರ್ ಸ್ಪಷ್ಟನೆ

ಮಂಗಳೂರು: ನಾನು ಈಗ ಸ್ಪೀಕರ್ ಆಗಿಯೇ ಇದ್ದೇನೆ, ಯಾವುದೇ ಮಂತ್ರಿ ಸ್ಥಾನಕ್ಕೆ ಆಕಾಂಕ್ಷಿಯಲ್ಲ ಎಂದು ಸ್ಪೀಕರ್ ಯು.ಟಿ ಖಾದರ್

ಸ್ಪಷ್ಟಪಡಿಸಿದ್ದಾರೆ. ಯಾರಿಗೆ ಯಾವ ಹುದ್ದೆ ನೀಡಬೇಕು ಎಂಬುದು ಸರ್ಕಾರ ಹಾಗೂ ಪಕ್ಷದ ನಿರ್ಧಾರ ಎಂದು ಅವರು ಹೇಳಿದರು.

ಮಂಗಳವಾರ ನಗರದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದವರು, "2023ರಲ್ಲಿ ನನ್ನ ಹೆಸರು ಸಚಿವ ಸ್ಥಾನಕ್ಕೆ ಪರಿಗಣನೆಯಲ್ಲಿತ್ತು. ಆದರೆ ಬಳಿಕ ನನಗೆ ವಿಧಾನಸಭಾ ಸಭಾಧ್ಯಕ್ಷ (ಸ್ಪೀಕರ್) ಸ್ಥಾನ ನೀಡಲಾಯಿತು. ಅದನ್ನು ಯಾವುದೇ ಚರ್ಚೆ ಇಲ್ಲದೆ ಸ್ವೀಕರಿಸಿ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದೇನೆ. ನನಗೆ ಹುದ್ದೆ ಮುಖ್ಯವಲ್ಲ ಕೆಲಸ ಮುಖ್ಯ" ಎಂದು ಹೇಳಿದರು.

"ಕೊಟ್ಟರೆ ಮಂತ್ರಿ, ಇಲ್ಲದಿದ್ದರೆ ಸ್ಪೀಕರ್, ಅದಿಲ್ಲದಿದ್ದರೆ ಶಾಸಕನಾಗಿ ಜವಾಬ್ದಾರಿ ನಿರ್ವಹಿಸುವೆ" ಎಂದು ಅವರು ಪುನರುಚ್ಚರಿಸಿದರು.

ಮಾಜಿ ಸಚಿವ ಜಮೀರ್ ಅಹ್ಮದ್ ಅವರ ಆಡಿಯೋ ವೈರಲ್ ಕುರಿತು ಪ್ರತಿಕ್ರಿಯಿಸಿದ ಖಾದರ್, "ಈ ವಿಷಯದ ಬಗ್ಗೆ ಈಗ ಮಾತನಾಡಲು ಆಗುವುದಿಲ್ಲ. ಸಭಾಧ್ಯಕ್ಷ ಸ್ಥಾನದಿಂದ ಹೊರಬಂದವಳಿಕ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡುತ್ತೇನೆ" ಎಂದು ತಿಳಿಸಿದರು.

ಪಕ್ಷ ಸೂಚಿಸಿದರೆ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧನಿದ್ದೇನೆ, ಪಡೆದು ಆದರೆ ಅಂತ ಯಾವುದೇ ಸೂಚನೆ ಇದುವರೆಗೆ ಬಂದಿಲ್ಲ ಎಂದು ಅವರು ಹೇಳಿದರು. "ನಾನು ಸ್ಪೀಕರ್ ಆಗಿ ಸಂತೋಷದಿಂದ ಇದ್ದೇನೆ. ಶಾಸಕನಿಗೆ ಜೀವನದಲ್ಲಿ ಒಮ್ಮೆಯಾದರೂ ಸ್ಪೀಕರ್ ಆಗುವ ಅವಕಾಶ ಸಿಗಬೇಕು. ನಮ್ಮನು ಈ ಮಟ್ಟಕ್ಕೆ ಬೆಳೆಸಿದ್ದು ಪಕ್ಷ, ಕಾರ್ಯಕರ್ತರು ಮತ್ತು ಮತದಾರರು" ಎಂದು ಯು.ಟಿ. ಖಾದರ್ ಹೇಳಿದರು.

🏛️ ಸಚಿವ ಸಂಪುಟ ಸರ್ಕಸ್: ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸರ್ಕಾರದ ಪ್ರಮಾಣ ವಚನಕ್ಕೆ ಕ್ಷಣಗಣನೆ

ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ರಚನೆಗೆ ಸಂಬಂಧಿಸಿದ ಕಸರತ್ತು ತೀವ್ರಗೊಂಡಿದೆ. ನೂತನ ಸರ್ಕಾರವನ್ನು ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ರಚಿಸಲಾಗುತ್ತಿದ್ದು, ಜೂನ್ 3ರಂದು ಮಧ್ಯಾಹ್ನ 4:05ಕ್ಕೆ ಲೋಕಭವನದಲ್ಲಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಇದೆ ವೇಳೆ ಸಂಪುಟ ರಚನೆ ಕುರಿತ ಚರ್ಚೆಗಳು ಜೋರಾಗಿ ನಡೆಯುತ್ತಿದ್ದು, ಸಂಪುಟ ಅಕಾಂಕ್ಷಿಗಳ ಪಟ್ಟಿಯೊಂದಿಗೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಇತರ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ನಾಯಕನೊಂದಿಗೆ ಮ್ಯಾರಥಾನ್ ಸಭೆಗಳನ್ನು ನಡೆಸಿದ್ದಾರೆ.

ಆದರೆ ಸಚಿವ ಸಂಪುಟದ ಅಂತಿಮ ನಿರ್ಧಾರ ಇನ್ನು ಪ್ರಕಟವಾಗಿಲ್ಲ. ಮಾಜಿ ಸಚಿವರಾದ ಜಿ.ಪರಮೇಶ್ವರ್, ಕೆ.ಜೆ.ಜಾರ್ಜ್ ಸೇರಿದಂತೆ ಹಿರಿಯ ನಾಯಕರು ಕೂಡ ದೆಹಲಿಯಲ್ಲಿ ಚರ್ಚೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇತ್ತ ರಾಜ್ಯದಲ್ಲಿ ಸಚಿವ ಸ್ಥಾನಗಳ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಹಿರಿಯರು ಹಾಗೂ ಹೊಸಬರು ಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವುದು ಕಂಡು ಬರುತ್ತಿದೆ. ಕೆಲವೆಡೆ ತಮ್ಮ ನೆಚ್ಚಿನ ನಾಯಕರಿಗೆ ಸ್ಥಾನ ನೀಡುವಂತೆ ಪ್ರತಿಭಟನೆಗಳು ನಡೆದಿವೆ.

ಯಾರಿಗೆಲ್ಲ ಸಚಿವ ಸ್ಥಾನ ಸಿಗಲಿದೆ ಎಂಬುದು ಇನ್ನು ಸಸ್ಪೆನ್ಸ್ ಆಗಿಯೇ ಉಳಿದಿದ್ದು, ಪ್ರಮಾಣವಚನ ಸಮಾರಂಭದ ಜೊತೆಗೆ ಮೊದಲ ಹಂತದ ಸಂಪುಟ ಸದಸ್ಯರ ಹೆಸರುಗಳು ಪ್ರಕಟವಾಗುವ ಸಾಧ್ಯತೆ ಇದೆ.

Also Read:

ಟಿಎಂಸಿ ಒಳ ರಾಜಕೀಯ ಕದನ:ಸಾಮ್ರಾಜ್ಯ ಕುಸಿತದ ಸೂಚನೆಗಳೇ?

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online