<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ರಾಜಕೀಯಕ್ಕೆ ಬರುತ್ತಾರಾ ಶಿವಣ್ಣ? ದಳಪತಿ ವಿಜಯ್ ಹಾದಿ ಬಗ್ಗೆ ಉತ್ತರವೇನು?

ರಾಜಕೀಯಕ್ಕೆ ಬರುತ್ತಾರಾ ಶಿವಣ್ಣ? ದಳಪತಿ ವಿಜಯ್ ಹಾದಿ ಬಗ್ಗೆ ಉತ್ತರವೇನು?
Summary: The question of whether Shivarajkumar will enter politics in the Thalapathy Vijay path has been answered. He has given clarity about his political stance, which has piqued the curiosity of fans.

Belagavi News :

ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸ್ಟಾರ್ ನಟರು ರಾಜಕೀಯ ಪ್ರವೇಶಿಸುವುದು ಹೊಸದೇನಲ್ಲ. ತಮಿಳುನಾಡಿನಲ್ಲಿ ದಳಪತಿ ವಿಜಯ್ ತಮ್ಮದೇ ಆದ ಟಿವಿಕೆ ಪಕ್ಷವನ್ನು ಸ್ಥಾಪಿಸಿ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಅವರ ಪಕ್ಷವು ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಗಮನ ಸೆಳೆದಿರುವ ನಡುವೆ, ಕರ್ನಾಟಕದಲ್ಲಿಯೂ ಸಿನಿಮಾ ಕಾರ್ಯರ ರಾಜಕೀಯದ ಪ್ರವೇಶದ ಬಗ್ಗೆ ಚರ್ಚೆಗಳು ಮತ್ತೆ ಚುರುಕುಗೊಂಡಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕರುನಾಡ ಚಕ್ರವರ್ತಿ ಡಾಕ್ಟರ್ ಶಿವರಾಜ್ ಕುಮಾರ್ ರಾಜಕೀಯಕ್ಕೆ ಬರುತ್ತಾರೆ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ. ಆದರೆ ಈ ಎಲ್ಲಾ ಊಹಾಪೋಹಗಳಿಗೆ ಅಂತ್ಯವನ್ನು ನೀಡುವಂತೆ ಶಿವಣ್ಣ ತಮ್ಮ ಸ್ಪಷ್ಟ ನಿಲುವನ್ನು ಪುನಃ ವ್ಯಕ್ತಪಡಿಸಿದ್ದಾರೆ. ಅವರು ರಾಜಕೀಯ ಪ್ರವೇಶದ ಆಫರ್ ಗಳನ್ನು ವಿನಮ್ರವಾಗಿ ನಿರಾಕರಿಸಿದ್ದು, ಸದ್ಯಕ್ಕೆ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯವಾಗಿರಲು ನಿರ್ಧರಿಸಿದ್ದಾರೆ.

ತಮ್ಮ ತಂದೆ ದಿವಗಂತ ಡಾ. ರಾಜಕುಮಾರ್ ನೀಡಿದ ಬಹುವಳ್ಳಿಯನ್ನು ಮುಂದುವರಿಸುತ್ತಿರುವ ಶಿವರಾಜ್ ಕುಮಾರ್,"ಸಿನಿಮಾ ನನ್ನ ಜೀವನ, ಅಭಿಮಾನಿಗಳೇ ನನ್ನ ಶಕ್ತಿ" ಎಂಬ ಧೋರಣೆಯಲ್ಲಿ ಬಣ್ಣ ಹಚ್ಚಿ ಅಭಿಮಾನಿಗಳನ್ನು ರಂಜಿಸುವುದಕ್ಕೆ ಆದಿತ್ಯ ನೀಡುತ್ತಿದ್ದಾರೆ. ಈ ಮೂಲಕ ರಾಜಕೀಯಕ್ಕಿಂತ ಚಿತ್ರರಂಗವೇ ತಮ್ಮ ಮೊದಲ ಆಯ್ಕೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

Sponsored

ಇತ್ತೀಚೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಶಿವರಾಜ್ ಕುಮಾರ್ ಅವರನ್ನು ರಾಜಕೀಯಕ್ಕೆ ಆಹ್ವಾನಿಸಿದ್ದರು,ಅವರು ಅದನ್ನು ಸಹ ಸೌಮ್ಯವಾಗಿ ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ. ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಈಗಾಗಲೇ ರಾಜಕೀಯದಲ್ಲಿ ಸಕ್ರಿಯರಾಗಿರುವ ಹಿನ್ನೆಲೆಯಲ್ಲಿ, ಕುಟುಂಬದಿಂದಲೇ ರಾಜಕೀಯ ಸಂಪರ್ಕ ಇದ್ದರು ಶಿವಣ್ಣ ಮಾತ್ರ ಚುನಾವಣಾ ರಾಜಕೀಯದಿಂದ ದೂರವೇ ಉಳಿಯಲು ನಿರ್ಧರಿಸಿದ್ದಾರೆ.

ದಕ್ಷಿಣ ಭಾರತದ ಇತರ ನಟರಂತೆ ರಾಜಕೀಯ ಪ್ರವೇಶದ ನಿರೀಕ್ಷೆ ಇದ್ದರು,ಶಿವರಾಜ್ ಕುಮಾರ್ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅವರ ಈ ನಿರ್ಧಾರ ಅಭಿಮಾನಿಗಳಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿಸಿದರು, ಚಿತ್ರರಂಗದಲ್ಲಿ ಅವರ ಮುಂದಿನ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.

ಇದೀಗ ದಳಪತಿ ವಿಜಯ್ ರಾಜಕೀಯ ಯಶಸ್ಸಿನ ನಡುವೆ ಶಿವರಾಜಕುಮಾರ್ ಅವರ ನಿಲುವು ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ಕರ್ನಾಟಕ ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ರಾಜಕೀಯ ಪ್ರವೇಶದ ಯಶಸ್ಸು ಹಾಗೂ ತಮಿಳುನಾಡಿನಲ್ಲಿ ದಳಪತಿ ವಿಜಯ ಅವರ ಪಕ್ಷದ ಬೆಳವಣಿಗೆಯ ಹಿನ್ನೆಲೆಯಲ್ಲಿ, ಕನ್ನಡ ಚಿತ್ರರಂಗದಲ್ಲಿಯೂ ಸಿನಿಮಾ ತಾರೆಯರ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆಗಳು ಮತ್ತೆ ಜೋರಾಗಿದೆ. ಇದೇ ಸಂದರ್ಭ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಹೆಸರು ಮತ್ತು ರಾಜಕೀಯ ಚರ್ಚೆಯ ಕೇಂದ್ರಬಿಂದುವಾಗಿದೆ.

Sponsored

ಅನೇಕರು " ಕನ್ನಡದಲ್ಲೂ ಪವನ್ ಕಲ್ಯಾಣ್, ವಿಜಯ್ ಮಾದರಿಯಲ್ಲಿ ಯಶಸ್ವಿಯಾಗುವ ನಾಯಕ ಯಾರು?" ಎಂಬ ಪ್ರಶ್ನೆ ಎತ್ತುತ್ತಿದ್ದು,ಹೆಚ್ಚಿನವರು ಶಿವರಾಜ್ ಕುಮಾರ್ ಹೆಸರು ಮುಂದಿಡುತ್ತಿದ್ದಾರೆ. ಆದರೆ ಶಿವಣ್ಣ ಹಲವು ವರ್ಷಗಳ ಹಿಂದೆಯೇ ರಾಜಕೀಯ ಪ್ರವೇಶದ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದರು. ಅವರು ರಾಜಕೀಯಕ್ಕೆ ಬರುವುದಿಲ್ಲ ಎಂದು ನೇರವಾಗಿ ಹೇಳಿರುವುದು ಈಗ ಮತ್ತೆ ಸ್ಮರಣೆಯಾಗುತ್ತಿದೆ.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಒಂದು ಹಳೆಯ ವಿಡಿಯೋ ವೈರಲ್ ಆಗಿದೆ. ಆ ವಿಡಿಯೋದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಾರ್ವಜನಿಕ ವೇದಿಕೆಯಲ್ಲಿ ಶಿವರಾಜ್ ಕುಮಾರ್ ಅವರನ್ನು ರಾಜಕೀಯಕ್ಕೆ ಆಹ್ವಾನಿಸಿರುವುದು ಕಂಡುಬರುತ್ತದೆ. ಆ ಸಂದರ್ಭದಲ್ಲಿ ಡಿಕೆ ಶಿವಕುಮಾರ್, ಶಿವರಾಜ್ ಕುಮಾರ್ ಅವರೇ, ನೀವು ಪಾರ್ಲಿಮೆಂಟ್ ಚುನಾವಣೆಗೆ ನಿಲ್ಲಲು ರೆಡಿಯಾಗಿ, ನಿಮಗೆ ಎಲ್ಲಿ ಬೇಕೋ ಅಲ್ಲಿ ಸೀಟ್ ಕೊಡುತ್ತೇನೆ" ಎಂದು ಬಹಿರಂಗವಾಗಿ ಹೇಳಿದ್ದಾರೆ.

ಈ ಹೇಳಿಕೆ ಈಗ ಮತ್ತೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಶಿವರಾಜ್ ಕುಮಾರ್ ರಾಜಕೀಯ ಪ್ರವೇಶದ ಬಗ್ಗೆ ಹೊಸ ಕುತೂಹಲ ಹುಟ್ಟಿಸಿದೆ. ಆದರೆ ಶಿವಣ್ಣ ತಮ್ಮ ಹಿಂದಿನ ನಿಲುವಿನಲ್ಲಿ ಸ್ತಿರರಾಗಿದ್ದು, ಚಿತ್ರರಂಗವೇ ತಮ್ಮ ಪ್ರಥಮ ಆದ್ಯತೆಯೆಂದು ಸ್ಪಷ್ಟಪಡಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಟರು ರಾಜಕೀಯ ಪ್ರವೇಶಿಸುವ ಸಾಧ್ಯತೆಗಳ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಿದ್ದರು, ಶಿವರಾಜ್ ಕುಮಾರ್ ಮಾತ್ರ ಸಿನಿಮಾ ಕ್ಷೇತ್ರದಲ್ಲೇ ಮುಂದುವರಿಯಲು ನಿರ್ಧರಿಸಿರುವುದು ಅಭಿಮಾನಿಗಳಿಗೆ ಸ್ಪಷ್ಟ ಸಂದೇಶವಾಗಿದೆ. ಅವರ ಮುಂದಿನ ಸಿನಿಮಾಗಳು ಹಾಗೂ ಚಿತ್ರರಂಗದ ಸಕ್ರಿಯತೆ ಮೇಲೆ ಗಮನ ಹೆಚ್ಚಾಗಿದೆ.

Sponsored

ಈ ನಡುವೆ, ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿ ನಟರ ರಾಜಕೀಯ ಯಶಸ್ಸು ಕಾಣುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿಯೂ ಇಂತಹ ಬೆಳವಣಿಗೆ ಸಾಧ್ಯವೇ ಎಂಬ ಪ್ರಶ್ನೆ ಮತ್ತೆ ರಾಜಕೀಯ ಹಾಗೂ ಕಾರಣವಾಗಿದೆ.

ದಕ್ಷಿಣ ಭಾರತದ ರಾಜಕೀಯದಲ್ಲಿ ಸಿನಿಮಾ ತಾರೆಯರ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕದಲ್ಲಿ ನಟರ ರಾಜಕೀಯ ಪ್ರವೇಶದ ಬಗ್ಗೆ ಚರ್ಚೆ ಮತ್ತೆ ತೀವ್ರಗೊಂಡಿದೆ. ತಮಿಳುನಾಡಿನಲ್ಲಿ ದಳಪತಿ ವಿಜಯ್ ತಮ್ಮ ರಾಜಕೀಯ ಸಮಾವೇಶದಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಶಕ್ತಿ ಪ್ರದರ್ಶಿಸುವುದು ಹಾಗೂ ಆಂಧ್ರಪ್ರದೇಶದಲ್ಲಿ ಪವನ್ ಕಲ್ಯಾಣ್ ರಾಜಕೀಯದಲ್ಲಿ ಯಶಸ್ಸು ಕಂಡಿರುವುದು ಈ ಚರ್ಚೆಗೆ ಮತ್ತಷ್ಟು ಇಂಧನ ನೀಡಿದೆ.

ಈ ಬೆಳವಣಿಗೆಯ ನಡುವೆ ಕರ್ನಾಟಕ ಚಕ್ರವರ್ತಿ ಡಾ. ಶಿವರಾಜಕುಮಾರ್ ಹೆಸರು ಮತ್ತು ರಾಜಕೀಯ ಚರ್ಚೆಯ ಕೇಂದ್ರ ಬಿಂದು ಆಗಿದೆ. ಆದರೆ, ಶಿವಣ್ಣ ಹಲವು ಬಾರಿ ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ್ದು, ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

ಹಿಂದೆ ವೇದಿಕೆ ಅಂದರಲ್ಲಿ ರಾಜಕೀಯ ಆಹ್ವಾನಕ್ಕೆ ಪ್ರತಿಕ್ರಿಸಿದವರು, 'ನಮ್ಮ ತಂದೆ ಡಾ. ರಾಜಕುಮಾರ್ ನಮಗೆ ಕೊಟ್ಟಿರುವ ಬಳುವಳಿ ಒಂದೇ, ಅದು ಬಣ್ಣ ಹಚ್ಚುವುದು ಮತ್ತು ನಿಮ್ಮನ್ನು ರಂಜಿಸುವುದು. ನಾನು ಈಗಷ್ಟೇ ಐದಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದೇನೆ. ನನಗೆ ಸಿನಿಮಾ ಮಾಡುವುದೇ ಖುಷಿ" ಎಂದು ಹೇಳಿ ರಾಜಕೀಯ ಪ್ರವೇಶದ ಆಫರ್ ಅನ್ನು ವಿನಮ್ರವಾಗಿ ನಿರಾಕರಿಸಿದರು.

Sponsored

ಶಿವರಾಜ್ ಕುಮಾರ್ ಅವರ ಈ ಹೇಳಿಕೆ ಅವರ ಚಿತ್ರರಂಗದ ಮೇಲಿನ ನಿಷ್ಠೆಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಅವರು ಸಿನಿಮಾ ವನ್ನೇ ತಮ್ಮ ಜೀವನದ ಮುಖ್ಯ ಭಾಗವಾಗಿ ನೋಡುತ್ತಿದ್ದು, ಸದ್ಯಕ್ಕೆ ರಾಜಕೀಯ ಪ್ರವೇಶದ ಯಾವುದೇ ಯೋಜನೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ಒಳನಾಡಿನಲ್ಲಿ ವಿಜಯ್ ಅವರ ರಾಜಕೀಯ ಸಮಾವೇಶಕ್ಕೆ ದೊರೆತ ಭಾರಿ ಜನಬೆಂಬಲ, ಕರ್ನಾಟಕದ ಅಭಿಮಾನಿಗಳಲ್ಲಿಯೂ ಹೊಸ ಚರ್ಚೆಗೆ ಕಾರಣವಾಗಿದೆ. "ಕನ್ನಡದಲ್ಲಿಯು ಇಂತಹ ಜನಪ್ರಿಯ ನಟರು ರಾಜಕೀಯಕ್ಕೆ ಬಂದರೆ ಬದಲಾವಣೆ ತರಬಹುದು" ಎಂಬ ಅಭಿಪ್ರಾಯಗಳು ಸಮಾಜದ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಶಿವರಾಜ್ ಕುಮಾರ್ ಮಾತ್ರ ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯುವಂತೆ ತಮ್ಮ ಸ್ಥಿರ ನಿಲುವನ್ನು ಮುಂದುವರಿಸಿದ್ದಾರೆ.

ವಿಶೇಷವೆಂದರೆ, ಶಿವಣ್ಣ ಅವರ ಪತ್ನಿ ಗೀತಾ ಶಿವರಾಜಕುಮಾರ್ ಈಗಾಗಲೇ ರಾಜಕೀಯದಲ್ಲಿ ಸಕ್ರಿಯರಾಗಿದ್ದು, ಚುನಾವಣಾ ಕಣದಲ್ಲೂ ಸ್ಪರ್ಧಿಸಿದ್ದಾರೆ. ಹಲವಾರು ಸಂದರ್ಭಗಳಲ್ಲಿ ಶಿವಣ್ಣ ತಮ್ಮ ಪತ್ನಿಯ ಪರವಾಗಿ ಪ್ರಚಾರ ಕಾರ್ಯಗಳಲ್ಲಿ ಭಾಗವಹಿಸಿರುವುದು ಇದೆ. ಆದರೂ ವೈಯಕ್ತಿಕವಾಗಿ ತಾವು ಚುನಾವಣಾ ರಾಜಕೀಯಕ್ಕೆ ಇಳಿಯುವ ಬಗ್ಗೆ ಅವರು ಎಂದಿಗೂ ಆಸಕ್ತಿ ತೋರಿಸಿಲ್ಲ.

"ನಾನು ನಿಮ್ಮ ಪ್ರೀತಿಯ ಶಿವಣ್ಣನಾಗಿ ಉಳಿಯಲು ಬಯಸುತ್ತೇನೆ, ರಾಜಕೀಯ ನಾಯಕನಾಗಿ ಅಲ್ಲ" ಎಂಬುದು ಅವರ ಖಡಕ್ ಮತ್ತು ಸ್ಪಷ್ಟ ನಿಲುವು ಎಂದು ಅವರ ಆಪ್ತ ವಲಯ ಹೇಳುತ್ತದೆ. ಈ ಹೇಳಿಕೆ ಅವರ ಅಭಿಮಾನಿಗಳಲ್ಲಿ ಮತ್ತಷ್ಟು ಸ್ಪಷ್ಟನೆ ನೀಡಿದ್ದು, ಶಿವರಾಜ್ ಕುಮಾರ್ ರಾಜಕೀಯ ಪ್ರವೇಶದ ಊಹಾಪೋಗಳಿಗೆ ತಾತ್ಕಾಲಿಕ ತೆರೆ ಬಿದ್ದಂತಾಗಿದೆ.

Sponsored

Also Read:

Bengaluru Special: ಮಾವು- ಹಲಸು ಪ್ರಿಯರಿಗೆ ಡಬಲ್ ಧಮಾಕಾ!🥭🍐

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online