Belagavi news :
ದಾವಣಗೆರೆಯಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಮಹಮ್ಮದ್ ಸಿರಾಜ್ ನಡುವಿನ ಸಂಭಾಷಣೆ ಎಂದು ಹೇಳಲಾಗಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಚಾರ ಹೊಸ ತಿರುವು ಪಡೆದುಕೊಂಡಿದೆ. ಈ ಆಡಿಯೋವನ್ನು ವೈರಲ್ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮೊಹಮ್ಮದ್ ಸಿರಾಜ್ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿದ್ಯಾನಗರದಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಿರಾಜ್, ಡಿವೈಎಸ್ಪಿ ಬಂಕಾಳಿ ನಾಗಪ್ಪ ಅವರಿಗೆ ಅಧಿಕೃತ ದೂರು ಸಲ್ಲಿಸಿದರು. ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ್ದ ಅವರು, ತಮ್ಮ ಹೆಸರಿಗೆ ಧಕ್ಕೆ ತರುವ ಉದ್ದೇಶದಿಂದ ಷಡ್ಯಂತ್ರ ರೂಪಿಸಿ ಆಡಿಯೋ ಹರಿ ಬಿಡಲಾಗಿದೆ ಎಂದು ಆರೋಪಿಸಿದರು.
ಪ್ರಕರಣದ ಕುರಿತು ಸಮಗ್ರ ತಣಿಕೆ ನಡೆಸಿ, ಆಡಿಯೋ ಸೃಷ್ಟಿ ಹಾಗೂ ಪ್ರಸಾರದಲ್ಲಿ ಭಾಗಿಯಾಗಿರುವರು ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸದ್ಯ ಸೈಬರ್ ಪೊಲೀಸರು ದೂರು ಆದರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
"ಸುಳ್ಳು ಸುದ್ದಿ ಹರಡಿದ್ದಾರೆ, ನನ್ನ ಮಾನಹಾನಿಯಾಗಿದೆ" - ಸಿರಾಜ್ ಆಕ್ರೋಶ
ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಮಾತನಾಡಿದ ಮೊಹಮ್ಮದ್ ಸಿರಾಜ್, ವೈರಲ್ ಆಗಿರುವ ಆಡಿಯೋ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. "ನನ್ನ ಬಗ್ಗೆ ಸುಳ್ಳು ಸುದ್ದಿ ಹರಿ ಬಿಡಲಾಗಿದ್ದು, ಇದರಿಂದ ನನ್ನ ಮಾನಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಡಿವೈಎಸ್ಪಿ ಬಂಕಾಳಿ ನಾಗಪ್ಪ ಅವರಿಗೆ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ" ಎಂದು ಹೇಳಿದರು.
ತಮ್ಮ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ ಎಂದು ಆರೋಪಿಸಿದ ಅವರು, "ನಾವು ಯಾವುದೇ ರೀತಿಯಲ್ಲೂ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಲ್ಲ. ಜಮೀರ್ ಅಹ್ಮದ್ ಅವರು ಪಕ್ಷ ಸಂಘಟನೆಯ ವಿಚಾರಗಳ ಬಗ್ಗೆ ಮಾತ್ರ ಮಾತನಾಡಿದ್ದಾರೆ. ವೈರಲ್ ಆಗಿರುವ ರೀತಿಯಲ್ಲಿ ಅವರು ಎಂದಿಗೂ ಮಾತನಾಡಿಲ್ಲ" ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಸಚಿವ ಎಸ್ .ಎಸ್ ಮಲ್ಲಿಕಾರ್ಜುನ್ ನೀಡಿರುವ ದೂರು ಹಾಗೂ ಕೆಲ ಶಾಸಕರ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಸಿರಾಜ್, "ಆರೋಪ ಮಾಡಿರುವವರು ಅದನ್ನು ಸಾಬೀತುಪಡಿಸಬೇಕು. ದಾಖಲೆಗಳಿದ್ದರೆ ಸಾರ್ವಜನಿಕರಾಗಿ ಬಹಿರಂಗಪಡಿಸಲಿ" ಎಂದು ಸವಾಲು ಹಾಕಿದರು.
"ಘಟನೆಯ ಬಳಿಕ ಜಮೀರ್ ಅಹ್ಮದ್ ಅವರು ನನಗೆ ಕರೆ ಮಾಡಿಲ್ಲ, ನಾನು ಅವರಿಗೆ ಕರೆ ಮಾಡಿಲ್ಲ. ನಾವು ಯಾವ ಪಕ್ಷ ವಿರೋಧಿ ಕೆಲಸ ಮಾಡಿದ್ದೇವೆ ಎಂಬುದು ಇನ್ನೂ ಅರ್ಥವಾಗಿಲ್ಲ" ಎಂದು ಅವರು ಹೇಳಿದರು.
ಬ್ರಷ್ಟಾಚಾರದ ಆರೋಪಗಳ ಬಗ್ಗೆ ಮಾತನಾಡಿದ ಸಿಯಾಜ್, "ವಕ್ಪ್ ಬೋರ್ಡ್ ನಲ್ಲಿ ಅವ್ಯವಹಾರ ನಡೆಸಿ ಹಣ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದನ್ನು ದಾಖಲೆ ಸಮೇತ ಸಾಬೀತು ಮಾಡಿದರೆ ನಾನು ಸಾರ್ವಜನಿಕ ಜೀವನದಿಂದಲೇ ದೂರು ಸರಿಯುತ್ತೇನೆ. ಆದರೆ ಆರೋಪ ಸಾಬೀತಗದಿದ್ದರೆ ಅದನ್ನು ಸುಮ್ಮನೆ ಬಿಡುವುದಿಲ್ಲ. ಸತ್ಯ ಹೊರ ಬರುವವರೆಗೂ ಹೋರಾಟ ಮುಂದುವರಿಸುತ್ತೇನೆ" ಎಂದು ಕಿಡಿಕಾರಿದರು.
'ಅದು ಎಲ್ಲಿಗೆ ಹೋಗಿ ಮುಟ್ಟುತ್ತೋ ಮುಟ್ಟಲಿ. ನಾನು ಹೋರಾಟಕ್ಕೆ ಸಿದ್ಧನಿದ್ದೇನೆ. ಈ ರೀತಿ ಮಾತು ಬಂದರೆ ನಾಳೆ ನಾವು ಅದೇ ರೀತಿ ಮಾತನಾಡಬೇಕಾಗುತ್ತದೆ. ಸಚಿವ ಜಮೀರ್ ತಲೆದಂಡದ ವಿಚಾರ ಹೈಕೋರ್ಟ್ ಗೆ ಬಿಟ್ಟಿದ್ದು, ಜಮೀರ್ ಅಹ್ಮದ್ ಜೊತೆ ಇಡೀ ಸಮಾಜ ಇಂದು ಇರುತ್ತದೆ. ನಾಳೆಯೂ ಇರುತ್ತದೆ, ಜಮೀರ್ ಅಹ್ಮದ್ ಮಾಸ್ ಲೀಡರ್, ಅವರು ಇಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ" ಎಂದು ಸಿರಾಜ್ ಹೇಳಿದ್ದಾರೆ.
Also Read: