<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಚೆನ್ನೈನಲ್ಲಿ ವಿಜಯ್ ಮ್ಯಾಜಿಕ್!'ಸೂಪರ್ ಕಿಂಗ್'ಖ್ಯಾತಿಗೆ TVK ವಲಯದಲ್ಲಿ ಸನಿಹ, ರಾಜ್ಯಾದ್ಯಂತ ಸಂಭ್ರಮ

ಚೆನ್ನೈನಲ್ಲಿ ವಿಜಯ್ ಮ್ಯಾಜಿಕ್!'ಸೂಪರ್ ಕಿಂಗ್'ಖ್ಯಾತಿಗೆ TVK ವಲಯದಲ್ಲಿ ಸನಿಹ, ರಾಜ್ಯಾದ್ಯಂತ ಸಂಭ್ರಮ
Summary: TVK party in Tamil Nadu is nearing the magic number, and under Vijay's leadership, the Chennai 'Super King' wave is attracting attention. An atmosphere of celebration has been created across the state.

belagavi news:

ತಮಿಳುನಾಡಿನಲ್ಲಿ ಸಾಂಪ್ರದಾಯಿಕವಾಗಿ ಡಿಎಂಕೆ ಹಾಗೂ ಎಡಿಎಂಕೆ ಪಕ್ಷಗಳು ಪರ್ಯಾಯವಾಗಿ ಅಧಿಕಾರ ನಡೆಸುತ್ತಾ ಬಂದಿವೆ. ಆದರೆ ಇದೀಗ ನಟ ವಿಜಯ್ ನೇತೃತ್ವದ TVK ಪಕ್ಷ ಅಚ್ಚರ ರೀತಿಯಲ್ಲಿ ಹೊಸ ಪ್ರಬಲ ರಾಜಕೀಯ ಶಕ್ತಿಯಾಗಿ ಹೊರಹೊಮ್ಮುತ್ತಿರುವುದು ಗಮನ ಸೆಳೆಯುತ್ತಿದೆ.

ಚೆನ್ನೈ : ತಮಿಳುನಾಡಿನ ಕ್ಷಿಪ್ರ ರಾಜಕೀಯ ಬದಲಾವಣೆಯಲ್ಲಿ ಜನಪ್ರಿಯ ನಟ ವಿಜಯ್ ನೇತೃತ್ವದ ತಮಿಳಿಗ ವೇಟ್ರಿ ಕಳಗಂ ( TVK) ಪಕ್ಷ ಭರ್ಜರಿ ಸಾಧನೆ ಮಾಡಿದೆ.100 ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸಾಂಪ್ರದಾಯಿಕ ಪಕ್ಷಗಳಾದ ಡಿ ಎಂ ಕೆ ಹಾಗೂ ಎಡಿಎಂಕೆ ಗಳಿಗೆ ಬಾರಿ ಹಿನ್ನೆಡೆ ಉಂಟಾಗಿದೆ. ಈ ಮೂಲಕ TVK ಏಕಾಂಗಿಯಾಗಿ ಬಹುಮತಕ್ಕೆ ಅಗತ್ಯವಾದ ಮ್ಯಾಜಿಕ್ ನಂಬರ್ (118) ಗುರಿಯತ್ತ ವೇಗವಾಗಿ ಮುನ್ನುಗ್ಗುತ್ತಿದೆ.

ಚುನಾವಣೋತ್ತರ ಸಮೀಕ್ಷೆಗಳ ಪೈಕಿ ಆಕ್ಸಿಸ್ ಮೈ ಇಂಡಿಯಾ ಹೊರತಾಗಿ ಬಹುತೇಕ ಸಮೀಕ್ಷೆಗಳು ವಿಜಯ ನೇತೃತ್ವದ ಪಕ್ಷಕ್ಕೆ ಅಧಿಕಾರದ ಸಾಧ್ಯತೆ ಕಡಿಮೆ ಎಂದು ಅಂದಾಜು ಮಾಡಿದ್ದವು. ಆದರೆ ನಟನೆಯ ಮೂಲಕ ಜನಮಾಸನದಲ್ಲಿ ಗಾಢ ಪ್ರಭಾವ ಬೀರಿರುವ ವಿಜಯ್ ಈಗ ರಾಜಕೀಯದಲ್ಲಿ ಐತಿಹಾಸಿಕ ಸಾಧನೆಯ ಹೊಸ್ತಿಲಲ್ಲಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯ ಪ ಡು ತ್ತಿದ್ದಾರೆ.

Sponsored

ವಿವಾದಗಳನ್ನು ಮೆಟ್ಟಿ ನಿಂತ 'ಜನನಾಯಕ': ಎಲ್ಲಾ ಲೆಕ್ಕಚಾರಗಳನ್ನು ಬುಡಮೇಲು ಮಾಡಿರುವ ನಟ ವಿಜಯ್ ತಮಿಳಿಗ ವೈಟ್ರೀ ಕಳಗಂ (TVK) ಪಕ್ಷವನ್ನು ಏಕಾಂಗಿಯಾಗಿ ಅಧಿಕಾರದ ಗದುಗೆಯ ಸನಿಹಕ್ಕೆ ತಂದು ನಿಲ್ಲಿಸಿರುವುದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಡಿ ಎಂ ಕೆ ನೇತೃತ್ವದ ಸರ್ಕಾರದ ಆಡಳಿತ ವಿರೋಧಿ ಅಲೆ, ಚಿತ್ರರಂಗದಿಂದ ರಾಜಕೀಯಕ್ಕೆ ಬಂದ ನಂತರ ಎದುರಾದ ವಿವಾದಗಳು ಹಾಗೂ ವೈಯಕ್ತಿಕ ಸವಾಲುಗಳನ್ನೆಲ್ಲ ಮೆಟ್ಟಿನಿಂತ ವಿಜಯ್, ಈಗ ಚುನಾವಣಾ ಫಲಿತಾಂಶಗಳಲ್ಲಿ ಮಹತ್ವದ ಮುನ್ನಡೆ ಸಾಧಿಸಿದ್ದಾರೆ.

ಮತವಾಗಿ ಬದಲಾಗಿದ ಅಭಿಮಾನಿ!: ಸದ್ಯದ ಟ್ರೆಂಡ್ ಪ್ರಕಾರ, TVK 106 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಎಡಿಎಂಕೆ 64, ಡಿಎಂಕೆ 43 ಹಾಗೂ ಕಾಂಗ್ರೆಸ್ 5 ಸ್ಥಾನಗಳಲ್ಲಿ ಮುಂದಿದೆ. ಫಸ್ಟ್ ಬಹುಮತಕ್ಕೆ ಅಗತ್ಯವಾದ 118 ಸ್ಥಾನಗಳ ಗಡಿಗೆ TVK ಇನ್ನು 12 ಸ್ಥಾನಗಳ ದೂರದಲ್ಲಿದೆ. ಇತರ ಯಾವುದೇ ಪಕ್ಷಗಳು ದೊಡ್ಡ ಮಟ್ಟದ ಮುನ್ನಡೆ ಸಾಧಿಸಿರುವುದು ಗಮನಾರ್ಹವಾಗಿದ್ದು, TVK ಏಕೈಕ ಪ್ರಬಂಧ ಶಕ್ತಿಯಾಗಿ ಹೊರಹೊಮ್ಮುತ್ತಿರುವುದಾಗಿ ವಿಶ್ಲೇಷಿಸಲಾಗುತ್ತಿದೆ.

ಸಿಹಿ ಹಂಚಿ TVK ಕಾರ್ಯಕರ್ತರ ಸಂಭ್ರಮ: ಪಕ್ಷವು ಗೆಲುವಿನತ್ತ ಸ್ಪಷ್ಟ ಮುನ್ನಡೆ ಸಾಧಿಸುವ ಸುಳಿವು ಸಿಗುತ್ತಿದ್ದಂತೆ ಟಿವಿಕೆ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಚೆನ್ನೈನಲ್ಲಿರುವ ಟಿವಿಕೆ ಕಚೇರಿ ಎದ್ದರು ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

ವಿಜಯ್ ಕುಟುಂಬದಲ್ಲಿ ಸಂಭ್ರಮದ ಅಲೆ: ಮತ್ತೊಂದೆಡೆ, TVK ಗೆಲುವಿನತ್ತ ಸಾಗುತ್ತಿದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ವಿಜಯ ಅವರ ಕುಟುಂಬದಲ್ಲೂ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಬಂಧುಗಳು ಸೇರಿ ಸಿಟಿ ಹೊಡೆದು, ಕುಣಿದು ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Sponsored

Also Read:

ಪವರ್ ಫೈಟ್ ನಡುವೆ ಹೈ ವೋಲ್ಟೇಜ್ ಚುನಾವಣೆ ಫಲಿತಾಂಶ ಎಂದು ರಾಜಕೀಯ ಲೆಕ್ಕಾಚಾರಗಳಲ್ಲಿ ಹೊಸ ತಿರುವು.

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online