<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

50 ದಿನಗಳ ಯಶಸ್ಸು : ' ಲವ್ ಮಾಕ್ಟೇಲ್'

50 ದಿನಗಳ ಯಶಸ್ಸು : ' ಲವ್ ಮಾಕ್ಟೇಲ್'
Summary: The film 'Love Mocktail 3' has shown the path of a dream that has been built for half a century. Based on the love story of Adi and Nidhi, this film won the hearts of the audience and recorded a successful run of 50 days in the cinemas.

belagavi news :

'ಲವ್ ಮಾಕ್ಟೇಲ್ 3' 50 ದಿನ ಯಶಸ್ಸು: ಡಾರ್ಲಿಂಗ್ ಕೃಷ್ಣ ಅಭಿಮಾನಿಗಳಿಗೆ ಧನ್ಯವಾದ. ನಿರ್ದೇಶಕ ಮತ್ತು ನಾಯಕ ನಟ ಡಾರ್ಲಿಂಗ್ ಕೃಷ್ಣ ಅಭಿನಯಿಸಿರುವ 'ಲವ್ ಮಾಕ್ಟೇಲ್ 3' ಚಿತ್ರವು ಮತ್ತೊಮ್ಮೆ ಮಹತ್ವದ ಮೈಲಿಗಳು ತಲುಪಿದೆ. ಪ್ರೇಕ್ಷಕರ ಪ್ರೀತಿ ಮತ್ತು ಬೆಂಬಲದಿಂದ ಚಿತ್ರವು 50 ದಿನ ಯಶಸ್ವಿಯಾಗಿ ರನ್ ಆಗಿರುವ ಸಂಭ್ರಮವನ್ನು ಚಿತ್ರತಂಡ ಇಂದು ಆಚರಿಸಿದೆ.

ಈ ಸಂಭ್ರಮದ ಸಂದರ್ಭದಲ್ಲಿ, ಚಿತ್ರತಂಡದ ಪರವಾಗಿ ಡಾರ್ಲಿಂಗ್ ಕೃಷ್ಣ ತಮ್ಮ ಅಭಿಮಾನಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸಿದ್ದಾರೆ. ಈ ಯಶಸ್ಸು ಚಿತ್ರತಂಡದ ಪರಿಶ್ರಮ ಮತ್ತು ಪ್ರೇಕ್ಷಕರ ಬೆಂಬಲದ ಫಲಿತಾಂಶವೆಂದು ಅವರು ಹೇಳಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೆ ಬಂದು ಸದಾಕಾಲ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವ ಸಿನಿಮಾಗಳು ವಿರಳವಾಗಿವೆ. ಅಂತಹ ಅಪರೂಪದ ಸಾಲಿಗೆ ಸೇರಿದ ಲವ್ ಮಾಕ್ಟೇಲ್ ಸರಣಿ, ತನ್ನ ಪ್ರೇಕ್ಷಕರ ಮನಸ್ಸಿಗೆ ವಿಶೇಷ ಸ್ಥಾನ ಪಡೆದಿದೆ. ಈ ಸರಣಿಯ ಮೂರನೇ ಭಾಗ,'ಲವ್ ಮಾಕ್ಟೇಲ್ 3', ಥಿಯೇಟರ್ ಗಳಲ್ಲಿ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದರಿಂದ ಚಿತ್ರ ತಂಡ ಹಾಗೂ ಅಭಿಮಾನಿಗಳ ನಡುವೆ ಸಂತೋಷ ಮತ್ತು ಉಲ್ಲಾಸವನ್ನು ಹುಟ್ಟು ಹಾಕಿದೆ.

Sponsored

ಈ ವರ್ಷದ ಸೂಪರ್ ಹಿಟ್ ಚಿತ್ರಗಳ ಪಟ್ಟಿಗೆ ಸೇರಿದ 'ಲವ್ ಮಾಕ್ಟೇಲ್ 3'ಸಿನಿಮಾ ಐವತ್ತು ದಿನಗಳ ಯಶಸ್ವಿ ರನ್ ಮೂಲಕ ತನ್ನ ಗೆಲುವಿಗೆ ಇನ್ನಷ್ಟು ಪ್ರಭಾವಶಾಲಿ ಸ್ಥಿತಿ ತಂದುಕೊಟ್ಟಿದೆ. ಬಿಡುಗಡೆ ಸಂದರ್ಭದಲ್ಲಿ'ಧುರಂದರ್2'ನಂಥಾ ಪ್ರಬಲ ಸ್ಪರ್ಧೆ ಎದುರಾಗಿದ್ದರು, ಲವ್ ಮಾಕ್ಟೇಲ್3' ತನ್ನ ಆಂತರಿಕ ಶಕ್ತಿ ಮತ್ತು ಪ್ರೇಕ್ಷಕರ ಬೆಂಬಲದಿಂದ ಎಲ್ಲಾ ಸವಾಲುಗಳನ್ನು ಜಯಿಸಿ, ಇದೀಗ ನೂರರ ಗಡಿಯತ್ತ ದಾಪುಗಾಲೀಡುತ್ತದೆ. ಈ ಸಾಧನೆಯಿಂದ ‘ಲವ್ ಮಾಕ್ಟೇಲ್ 3’ ಕನ್ನಡ ಚಿತ್ರರಂಗದಲ್ಲಿ ಅಪರೂಪದ ಯಶಸ್ಸಿನ ಚಿತ್ರ ಎಂಬ ಸ್ಥಾನವನ್ನು ದೃಢಪಡಿಸಿದೆ.

ಇಂದಿನ ಒಟಿಟಿಗದಲ್ಲಿ ಯುಗದಲ್ಲಿ ಯಾವುದೇ ಸಿನಿಮಾ 50 ದಿನಗಳ ಪ್ರದರ್ಶನ ಕಾಣುವುದು ಸುಲಭದ ಮಾತಲ್ಲ. ‘ಲವ್ ಮಾಕ್ಟೇಲ್ 3’ ಕೂಡ ರಿಲೀಸ್ ಸಮಯದಲ್ಲಿ ‘ಧುರಂದರ್ 2’ ಎಂತಹ ದೊಡ್ಡ ಸಿನಿಮಾಗಳ ಸ್ಪರ್ಧೆ ಎದುರಿಸಿತು. ಆದರೆ, ತನ್ನ ಕಥೆಯ ಸೊಗಡು ಮತ್ತು ಭಾವನಾತ್ಮಕ ಕಸುವಿನಿಂದ, ಲವ್ ಮಾಕ್ಟೇಲ್ 3 ಬಾಕ್ಸ್ ಆಫೀಸ್ ನಲ್ಲಿ ಗಟ್ಟಿಯಾಗಿ ನಿಂತಿತು. ಈ ಸಿನಿಮಾ ಕೇವಲ ಕಮರ್ಷಿಯಲ್ ಅಂಶಗಳಿಗೆ ಅಡ್ಡ ಬಿದ್ದಿಲ್ಲ; ಜನರಿಗೆ ಕನೆಕ್ಟ್ ಆಗುವ ಕಥೆ ಗೆಲ್ಲುತ್ತದೆ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ನಟ ಹಾಗೂ ನಿರ್ದೇಶಕ ಡಾರ್ಲಿಂಗ್ ಕೃಷ್ಣ ಅವರ ಕಲ್ಪನೆಯಿಂದ ಮೂಡಿ ಬಂದ ‘ಲವ್ ಮಾಕ್ಟೇಲ್ 3’ ಸಿನಿಮಾ ರಿಲೀಸ್ ಆದ ಮೊದಲ ದಿನದಿಂದಲೇ ಪಾಸಿಟಿವ್ ವಿಮರ್ಶೆಗಳನ್ನು ಪಡೆಯಿತು. ಒಬ್ಬ ನಾಯಕನ ಜೀವನದ ವಿವಿಧ ಹಂತದ ಪ್ರೇಮ ಕಥೆಗಳನ್ನು ಹೇಳುವ ಈ ಸರಣಿ, ಈ ಬಾರಿ ಸಹ ಪ್ರೇಕ್ಷಕರ ಹೃದಯಕ್ಕೆ ಹತ್ತಿರವಾಗಿದ್ದು, 50 ದಿನಗಳ ಮಹತ್ವದ ಮೈಲಿಗಲ್ಲು ತಲುಪಿದೆ. ಈ ಯಶಸ್ಸಿನ ಸಂದರ್ಭದಲ್ಲಿ, ಕೃಷ್ಣ ತಮ್ಮ ಅಭಿಮಾನಿಗಳು ಮತ್ತು ಸಿನಿಪ್ರೇಕ್ಷಕರಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.

ನಿರ್ಮಾಪಕರು: ಕ್ರಿಸ್ ಮಿ ಬ್ಯಾನರ್ ನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್.

Sponsored

ಮುಖ್ಯ ನಟರು: ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ಸಂವೃತ, ಅಮೃತ ಅಯ್ಯಂಗಾರ್, ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಚೆಲ್ ಡೇವಿಡ್,ನಯೆರಾ, ಜಗದೀಶ್, ಅಭಿಲಾಶ್, ಗಿರಿರಾಜ್, ದಳಪತಿ.

ಛಾಯಾಗ್ರಾಹಕ ಮತ್ತು ಸಂಕಲನ: ಶ್ರೀ ಕ್ರೇಜಿ ಮೈಂಡ್ಸ ಸಂಗೀತ: ನಕುಲ್ ಅಭಯಂಕರ್ ಕಲಾ ನಿರ್ದೇಶಕರ ಅಮರ್ ಮತ್ತು ಜೋನ ಈ ತಂಡದ ಶ್ರಮದಿಂದ ಲವ್ ಮಾಕ್ಟೇಲ್ 3 ಚಿತ್ರವು ಕಥೆ ದೃಶ್ಯ ಮತ್ತು ಸಂಗೀತದ ಹಿತದೃಷ್ಟಿಯಿಂದ ಪ್ರೇಕ್ಷಕರಿಗೆ ಮನರಂಜನೆಯ ಸಂಪೂರ್ಣ ಅನುಭವ ಒದಗಿಸಿದೆ.

Also Read:

ಚಿನ್ನಸ್ವಾಮಿ ಸ್ಟೇಡಿಯಂಗೆ ಶಾಕ್: ಐಪಿಎಲ್ ಫೈನಲ್ ಅಹಮದಾಬಾದ್ ಗೆ ಹೋಗಿದ್ದೇಕೆ?

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online