150ನೇ ವರ್ಷದ ಪೂರೈಸಿದ ರಾಷ್ಟ್ರೀಯ ಗೀತೆ ವಂದೇ ಮಾತರಂ. ಈ ಬಾರಿಯ ಗಣರಾಜ್ಯೋತ್ಸವ ಮೆರವಣಿಗೆಯ ಮುಖ್ಯ ಥೀಮ್ ಆಗಿರಲಿದೆ. ಈ ಭಾರಿ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಸಾಂಪ್ರದಾಯಿಕ ವಿವಿಐಪಿ ಸೇರಿದಂತೆ ಇತರೆ ಲೇಬಲ್ ಗಳನ್ನು ಉಪಯೋಗಿಸದೆ. ಸಮತೆಯ ಸಂದೇಶವನ್ನು ಸಾರುವ ಮಹತ್ವದ ಬದಲಾವಣೆಗಳನ್ನು ಮಾಡಲು ತೀರ್ಮಾನಿಸಲಾಗಿದೆ. ದೇಶಭಕ್ತಿ ಸ್ವತಂತ್ರ ಹೋರಾಟ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವಂತೆ ಕರ್ತವ್ಯ ಪಥದಲ್ಲಿ ವಿಶೇಷ ಅಲಂಕಾರ ಮತ್ತು ಪ್ರದರ್ಶನಗಳನ್ನು ಆಯೋಜನೆ ಮಾಡಲಾಗಿದೆ. ಕರ್ತವ್ಯ ಪಥದ ಆವರಣಗಳಿಗೆ ಭಾರತೀಯ ನದಿಗಳ ಹೆಸರನ್ನು ಇಡಲು ತೀರ್ಮಾನಿಸಲಾಗಿದೆ. ಕರ್ತವ್ಯ ಪಥದ ಉದ್ದಕ್ಕೂ ಇರುವ ಆವರಣಗಳಲ್ಲಿ ವಂದೇ ಮಾತರಂನ ಮೊದಲ ಚರಣಗಳನ್ನು ವಿವರಿಸುವ ಮತ್ತು ಅಪರೂಪದ ಹಳೆಯ ವರ್ಣ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಅಷ್ಟೇ ಅಲ್ಲದೆ ಒಂದೇ ಮಾತರಂ ಗೀತೆಯನ್ನು ರಚಿಸಿದ" ಬಂಕಿಮ ಚಂದ್ರ ಚಟರ್ಜಿ"ಯವರಿಗೆ ಗೌರವವನ್ನು ಸಲ್ಲಿಸಲು ಹೂವಿನ ಕಲಾ ಕೃತಿಯನ್ನು ನಿರ್ಮಿಸಲಾಗುತ್ತದೆ. ಮೆರವಣಿಗೆ ಸ್ಥಳದಲ್ಲಿನ ಎಲ್ಲಾ ಆವರಣಗಳಿಗೆ ಭಾರತೀಯ ಪ್ರಮುಖ ನದಿಗಳ ಹೆಸರುಗಳನ್ನು ಇಡುವುದಾಗಿ ತೀರ್ಮಾನಿಸಲಾಗಿದೆ ಎಂದು ಶುಕ್ರವಾರದಂದು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಭಾರತದ ನೈಸರ್ಗಿಕ ಪರಂಪರೆ ಏಕತೆ ಮತ್ತು ಸಮಾನತೆಯ ಭಾವನೆಯನ್ನು ಪ್ರತಿಬಿಂಬಿಸುವುದರೊಂದಿಗೆ 77ನೇ ಗಣರಾಜ್ಯೋತ್ಸವಕ್ಕೆ ವಿಶೇಷವಾಗಿ ಮೆರಗನ್ನು ನೀಡಲಿದೆ. ಕರ್ತವ್ಯ ಪಥದ ಆವರಣಗಳಿಗೆ ನದಿಗಳ ಹೆಸರುಗಳನ್ನು ಇಡಲಾಗುತ್ತಿದೆ. ಅವು ಯಾವ ನದಿಗಳೆಂದರೆ :ಬ್ರಹ್ಮಪುತ್ರ, ಗಂಗಾ, ಘಾರ್ಗಾ,ಬಿಯಾಸ್, ಚಂಬಲ, ಸಿಂಧೂ, ಚೆನಾಬ್,ಗಂಡಕ, ಝೀಲಂ, ಕೃಷ್ಣ, ಮಹಾನದಿ, ಕಾವೇರಿ, ನರ್ಮದಾ, ಕೋಸಿ,ಪೆನ್ನಾರ, ಸೋನೆ,ರವಿ, ಪೆರಿಯಾರ್, ಸಟ್ಲೆಜ್, ತೀಸ್ತಾ,ವೈಗೈ ಮತ್ತು ಯಮುನಾ ಸೇರಿದಂತೆ ಹಲವು ನದಿಗಳ ಹೆಸರುಗಳನ್ನು ಇಡಲು ತೀರ್ಮಾನಿಸಲಾಗಿದೆ. ರಕ್ಷಣಾ ಕಾರ್ಯದರ್ಶಿಯಾದ ಆರ್. ಕೆ. ಸಿಂಗ್ ಅವರು ಈ ಬಾರಿಯ ಗಣರಾಜ್ಯೋತ್ಸವ ಹಲವು ಪ್ರಥಮಗಳಿಗೆ ಸಾಕ್ಷಿ ಆಗಲಿರುವ ಗಣರಾಜ್ಯೋತ್ಸವದ ವಿಶಾಲರೂಪರೇಶಗಳನ್ನು ವಿವರವಾಗಿ ಸೌತ್ ಬ್ಲಾಕ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ದೇಶದ 77ನೇ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಮುಖ್ಯವಾಗಿ ಯುರೋಪಿನ ಆಯೋಗದ ಅಧ್ಯಕ್ಷ ಉರ್ಸುಲಾ ವಾನ್ ಡೇರ್ ಲೇಯೆನ್ ಮತ್ತು ಯುರೋಪಿಯನ್ನ ಕೌನ್ಸಿಲ್ ಅಧ್ಯಕ್ಷ ಕೋಸ್ಟಾ ಯವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ದೇಶದ 77ನೇ ಗಣರಾಜ್ಯೋತ್ಸವದ ಥೀಮ್ ನಲ್ಲಿ ವಂದೇ ಮಾತರಂ ನ 150 ವರ್ಷಗಳು ಆಗಿದ್ದು ಮೆರವಣಿಗೆಯು ಈ ಐತಿಹಾಸಿಕ ಗೀತೆ ಗೌರವ ಸಲ್ಲಿಸುವ ರೀತಿಯಲ್ಲಿ ರೂಪಗೊಂಡಿದೆ ಮತ್ತು ಜನವರಿ 19 ರಿಂದ 26ರ ವರೆಗೆ ದೇಶದ 120ಕ್ಕೂ ಹೆಚ್ಚು ನಗರಗಳ 235 ಕ್ಕೂ ಅಧಿಕ ಸ್ಥಳಗಳಲ್ಲಿ ಒಂದೇ ಮಾತರಂ ವಿಷಯದ ಮೇಲೆ ಸೈನ್ಯ ಮತ್ತು ಕೇಂದ್ರದ ಶಸ್ತ್ರಾಸ್ತ್ರ ಪೊಲೀಸ್ ಪಡೆಗಳು ಬ್ಯಾಂಡ್ ಪ್ರದರ್ಶನಗಳು ನಡೆಯಲಿವೆ. ಮೆರವಣಿಗೆ ಕೊನೆಯಲ್ಲಿ ಒಂದೇ ಮಾತರಂ ವಿಷಯದ ಬ್ಯಾನರ್ ಹೊತ್ತ ಬಲೂನುಗಳನ್ನು ಗಾಳಿಯಲ್ಲಿ ಹಾರಿಸಲಾಗುವುದು/ ಭಾರತೀಯ ಸೇನೆ ನೌಕಾಪಡೆ, ವಾಯುಪಡೆ ಹಾಗೂ ಕರಾವಳಿ ಕಾವಲು ಪಡೆಗಳ ಬ್ಯಾಂಡ್ ಗಳು ಭಾಗವಹಿಸಲಿವೆ. ಗಣರಾಜ್ಯೋತ್ಸವ ಜನರ ಮನಸ್ಸಿನಲ್ಲಿ ರಾಷ್ಟ್ರಭಕ್ತಿ ಮತ್ತು ಸ್ವತಂತ್ರ ಹೋರಾಟದ ಆತ್ಮವನ್ನು ಮೂಡಿಸಲಿದೆ. ಇದೇ ವೇಳೆಯಲ್ಲಿ ನವದೆಹಲಿ ಕರ್ತವ್ಯ ಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಹಾಗೂ 13 ಸಚಿವಾಲಗಳು ಮತ್ತು ಸೇವೆಗಳ ಪ್ರತಿನಿಧಿಗಳಿಂದ ಒಟ್ಟು 30 ಟ್ಯಾಬ್ಲೋಗಳು ಪ್ರದರ್ಶನವನ್ನು ನೀಡಲಿದೆ ಎಂದು ಸಚಿವಾಲಯವು ತಿಳಿಸಿದೆ. ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ನೈಹತಿಯ ಕಾಂತಲ್ಪಾರಾದಲ್ಲಿರುವ ಬಂಕಿಮ್ ಚಂದ್ರ ಚಟರ್ಜಿ ಅವರ ಪೂರ್ವಜರ ಮನೆ ಮೇಲೆ ಹಾಗೂ ಜನ್ಮಸ್ಥಳವು ಸೇರಿದ ಈ ಐತಿಹಾಸಿಕ ಕಟ್ಟಡಗಳನ್ನು ಬಂಕಿಮ್ ಭವನ ಗವೇಷಣ ಕೇಂದ್ರ ಎಂದು ಕರೆಯಲಾಗುತ್ತಿದ್ದು. ಅದು ಋಷಿ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರ ನಿವಾಸ ಮತ್ತು ವಸ್ತು ಸಂಗ್ರಹಾಲಯ ಅಥವಾ ಬಂಕಿಮ್ ಸಂಗ್ರಹಾಲಯ ಎಂದು ಪ್ರಸಿದ್ಧಿಯನ್ನು ಪಡೆದಿದೆ. ಭಾರತದ ಸಂಪ್ರದಾಯಿಕ ಸಂಗೀತ ವಾದ್ಯಗಳ ಹೆಸರುಗಳನ್ನು ನಾಮಕರಣ ಮಾಡಲಾಗುತ್ತದೆ ಎಂದು ಸಚಿವಾಲಯವು ತಿಳಿಸಿದೆ. ಜನವರಿ 29ರಂದು ನಡೆಯಲಿರುವ ಕಾರ್ಯಕ್ರಮ ಈ ಬಾರಿ ಸಂಸ್ಕೃತಿಗೆ ವಿಶೇಷ ಆದ್ಯತೆ ನೀಡಲಾಗಿದೆ .ವಿಜಯ್ ಚೌಕನಿಂದ ಇಂಡಿಯಾ ಗೇಟ್ ವರೆಗೆ ನಡೆಯುವ ಪೂರ್ವಾಭ್ಯಾಸವು ಮೆರವಣಿಗೆ ಮಾರ್ಗವನ್ನು ವಿಸ್ತರಿಸುತ್ತದೆ ಮೆರವಣಿಗೆಯ ಅಡೆತಡೆಗಳಿಲ್ಲದ ಚಲನೆಯನ್ನು ಖಚಿತಪಡಿಸಲು ಜನವರಿ 17 19 20 ಮತ್ತು 21ರಂದು ಬೆಳಿಗ್ಗೆ 10:15ರ ರಿಂದ ಮಧ್ಯಾನ 12:30 ರವರೆಗೆ ನಿರ್ಬಂಧಗಳು ಜಾರಿಯಾಗಿದೆ .77ನೇ ಗಣರಾಜ್ಯೋತ್ಸವದ ಪರೇಡ್ ಪೂರ್ವಭ್ಯಾಸಕ್ಕಾಗಿ ದೆಹಲಿಯಲ್ಲಿ ಕೆಲವು ಪ್ರಮುಖ ಸಂಚಾರ ನಿರ್ಬಂಧ ಹೇರಲಾಗುವುದು ಎಂದು ಪೊಲೀಸರು ಶುಕ್ರವಾರದಂದು ತಿಳಿಸಿದರು. ವಾಹನ ಸಂಚಾರ ವಿಜಯ್ ಚೌಕ್ಯ ಗೇಟ್ ಮಾರ್ಗದಲ್ಲಿ ನಿಷೇಧವಾಗಿದ್ದು ಪರ್ಯಾಯ ಮಾರ್ಗಗಳು ಮತ್ತು ಪಕ್ಕದ ಪ್ರದೇಶಗಳಲ್ಲಿ ದಟ್ಟಣೆ ಉಂಟಾಗುತ್ತದೆ ಗಣರಾಜ್ಯೋತ್ಸವದ ಭದ್ರತೆ ಮತ್ತು ಯಶಸ್ವಿ ಮೆರವಣಿಗಾಗಿ ಅಗತ್ಯವಾಗಿವೆ. 77ನೇ ಗಣರಾಜ್ಯೋತ್ಸದಲ್ಲಿ ವಂದೇ ಮಾತರಂ ಗೀತೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ.
ಇನ್ನಷ್ಟು ಓದಿರಿ:
NHM ಯೋಜನೆ ವೇತನ ಪಾವತಿ ಸುದ್ದಿ