Belagavi news:
ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ ಅವರು ಕನ್ನಡದ ಲೆಜೆಂಡರಿ ನಟ ಹಾಗೂ ಗಾಯಕರಾದ ಡಾ. ರಾಜಕುಮಾರ್ ಅವರು ಹಾಡಿದ ರಾಯರ ಭಕ್ತಿಗೀತೆಗಳನ್ನು ಭಾವನಾತ್ಮಕವಾಗಿ ನೆನೆದಿದ್ದಾರೆ. ಈ ಸ್ಮರಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ತಾರಾ ಅವರು ಮಾತನಾಡುವ ಸಂದರ್ಭದಲ್ಲಿ, ಡಾ. ರಾಜಕುಮಾರ್ ಅವರ ಭಕ್ತಿ ಗೀತೆಗಳು ಮತ್ತು ಅವರ ಧ್ವನಿಯಲ್ಲಿರುವ ಭಕ್ತಿ ಭಾವ ಇಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಹೇಳಿದ್ದಾರೆ. ವಿಶೇಷವಾಗಿ ರಾಯರ ಹಾಡುಗಳು ಜನರಲ್ಲಿ ಆಧ್ಯಾತ್ಮಿಕ ಭಾವನೆ ಮತ್ತು ಶಾಂತಿಯನ್ನು ಮೂಡಿಸುತ್ತಿದ್ದವು ಎಂದು ಅವರು ಸ್ಮರಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಡಾ. ರಾಜ್ ಕುಮಾರ್ ಅವರ ಹಾಡುಗಳು ಇಂದಿಗೂ ವಿಶೇಷ ಸ್ಥಾನ ಹೊಂದಿದ್ದು, ಅವರ ಭಕ್ತಿ ಗೀತೆಗಳು ಹಲವು ಪೀಳಿಗೆಗಳ ಅಭಿಮಾನಿಗಳಿಗೆ ಪ್ರೇರಣೆಯಾಗಿವೆ. ನಟಿ ತಾರಾ ಅವರ ಈ ಹೇಳಿಕೆಗಳು ಇದೀಗ ಅಭಿಮಾನಿಗಳಲ್ಲಿ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿಸಿವೆ.
ಈ ಸ್ಮರಣೀಯ ವಿಡಿಯೋ ಮತ್ತು ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಡಾಕ್ಟರ್ ರಾಜಕುಮಾರ್ ಅವರ ಶಾಶ್ವತ ನೆಲೆ ಮತ ಚಲಾಯಿ ಚರ್ಚೆಗೆ ಬಂದಿದೆ.
ರಾಯರ ಭಕ್ತಿಗೀತೆಗಳಿಗೆ ಅಪಾರ ಜನಪ್ರಿಯತೆ : ಪಿ.ಬಿ.ಶ್ರೀನಿವಾಸ್ ಮತ್ತು ಡಾ. ರಾಜಕುಮಾರ್ ಹಾಡುಗಳು ಇಂದಿಗೂ ಜನಮನ ಸೆಳೆಯುತ್ತಿವೆ.
ರಾಯರು ಕುರಿತು ಭಕ್ತಿ ಗೀತೆಗಳು ಕರ್ನಾಟಕದಲ್ಲಿ ಭಕ್ತಿ ಭಾವದ ಪ್ರಮುಖ ಭಾಗವಾಗಿದೆ. ಹಲೋ ಖ್ಯಾತ ಗಾಯಕರಿಂದ ರಾಯರ ಕುರಿತ ಹಾಡುಗಳು ಮೂಡಿಬಂದಿದ್ದು, ಇಂದಿಗೂ ಅವು ಭಕ್ತರ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿವೆ.
ರಾಜ್ಯದ ಹಲವಾರು ದೇವಾಲಯಗಳಲ್ಲಿ ವಿಶೇಷವಾಗಿ ಗುರುವಾರದ ದಿನಗಳಲ್ಲಿ ರಾಯರ ಭಕ್ತಿ ಗೀತೆಗಳನ್ನು ಪ್ರಸಾರ ಮಾಡಲಾಗುತ್ತದೆ. ಈ ಹಾಡುಗಳು ಭಕ್ತರಿಗೆ ಆಧ್ಯಾತ್ಮಿಕ ಶಾಂತಿ ಮತ್ತು ಭಕ್ತಿ ಭಾವವನ್ನು ನೀಡುತ್ತಿವೆ.
ಈ ಗೀತೆಗಳಲ್ಲಿ ವಿಶೇಷ ಜನಪ್ರಿಯತೆ ಪಡೆದಿರುವುದು ಖ್ಯಾತ ಗಾಯಕ ಪಿ.ಬಿ.ಶ್ರೀನಿವಾಸ್ ಅವರ ಹಾಡುಗಳು ಹಾಗೂ ಕನ್ನಡದ ಲೆಜೆಂಡರಿ ನಟ ಗಾಯಕ ಡಾ. ರಾಜ್ ಕುಮಾರ್ ಅವರು ಹಾಡಿದ ಭಕ್ತಿ ಗೀತೆಗಳು.
ಈ ಹಾಡುಗಳು ಪೀಳಿಗೆಗಳಿಂದ ಪೀಳಿಗೆಗಳಿಗೆ ಹರಿದು ಬಂದಿದ್ದು, ಇಂದಿಗೂ ಭಕ್ತಿಯ ಕಾರ್ಯಕ್ರಮಗಳು, ದೇವಾಲಯಗಳು ಹಾಗೂ ಆಧ್ಯಾತ್ಮಿಕ ಸಮಾರಂಭಗಳಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿವೆ. ರಾಯರ ಭಕ್ತಿಗೀತೆಗಳ ಈ ಪರಂಪರೆ ಕನ್ನಡ ಸಂಸ್ಕೃತಿಯ ಪ್ರಮುಖ ಅಂಗವಾಗಿ ಉಳಿದಿದೆ.
ಅಜನೀಶ್ ಲೋಕನಾಥ್ ರಾಯರ ಭಕ್ತಿಗೀತೆಗಳು ಹೊಸ ಆಲ್ಬಮ್ ಬಿಡುಗಡೆ; ನಟಿತಾರ ಭಾವನಾತ್ಮಕ ನೆನಪು ಹಂಚಿಕೆ :
ಖ್ಯಾತ ಸಂಗೀತ ನಿರ್ದೇಶಕ ಅಜನೀಸ್ ಲೋಕನಾಥ್ ಅವರು ರಾಯರ ಭಕ್ತಿಗೀತೆಗಳ ಹೊಸ ಆಲ್ಬಮ್ ಅನ್ನು ಬಿಡುಗಡೆ ಮಾಡಿದ್ದಾರೆ, ಈ ಆಲ್ಬಮ್ ಬಿಡುಗಡೆ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದು, ಕಾರ್ಯಕ್ರಮ ಭಕ್ತಿ ಭಾವದಿಂದ ಕಂಗೊಳಿಸಿತು.
ಆಲ್ಬಮ್ ಬಿಡುಗಡೆ ಸಂದರ್ಭದಲ್ಲಿ ಹಿರಿಯ ನಟಿ ತಾರಾ ಅವರು ಭಾಗವಹಿಸಿ ಭಾವನಾತ್ಮಕ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಅವರು ಕನ್ನಡದ ಲೆಜೆಂಡರಿ ನಟ ಡಾ.ರಾಜಕುಮಾರ ಅವರು ಹಾಡಿದ ರಾಯರ ಭಕ್ತಿಗೀತೆಗಳನ್ನು ನೆನೆದು ಭಾವೋದ್ರಿಕ್ತರಾದರು. "ಅಣ್ಣಾವ್ರ ಧ್ವನಿಯಲ್ಲಿ ಬಂದ ರಾಯರ ಹಾಡುಗಳು ಇಂದಿಗೂ ಮನಸ್ಸಿನಲ್ಲಿ ಉಳಿದಿವೆ"ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಇತರ ಗಣ್ಯರೂ ಉಪಸ್ಥಿತರಿದ್ದು, ರಾಯರ ಭಕ್ತಿ ಗೀತೆಗಳ ಮಹತ್ವ ಮತ್ತು ಅವುಗಳ ಶಾಶ್ವತ ಜನಪ್ರಿಯತೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸ ಆಲ್ಬಮ್ ಆಧುನಿಕ ಸಂಗೀತ ಶೈಲಿಯಲ್ಲೂ ಭಕ್ತಿ ಭಾವವನ್ನು ಉಳಿಸಿಕೊಂಡಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಕಾರ್ಯಕ್ರಮದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ಭಕ್ತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಯರ ಭಕ್ತಿಗೀತೆಗಳ ಪರಂಪರೆ ಹೊಸ ತಲೆಮಾರಿಗೆ ತಲುಪುತ್ತಿರುವುದಾಗಿ ಹಲವರು ಸಂತೋಷ ವ್ಯಕ್ತಪಡಿಸಿದ್ದಾರೆ.
Also Read: