Belagavi news:
ಜೆಟ್ ಇಂದಿನ ದರ ವಿಪರೀತವಾಗಿ ಏರಿಕೆಯಾದ ಹಿನ್ನೆಲೆ ಮತ್ತು ವಾಯು ಪ್ರದೇಶ ನಿರ್ಬಂಧಗಳ ಪರಿಣಾಮವಾಗಿ ಏರ್ ಇಂಡಿಯಾ ತನ್ನ ಆರು ಅಂತರಾಷ್ಟ್ರೀಯ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಬೆಳವಣಿಗೆ ವಿಮಾನಯಾನ ಕ್ಷೇತ್ರದಲ್ಲಿ ಭಾರಿ ಪರಿಣಾಮ ಬೀರಿದೆ.
ವಿಮಾನಯಾನ ಸಂಸ್ಥೆ ಬುಧವಾರ ಅಧಿಕೃತವಾಗಿ ಘೋಷಣೆ ಮಾಡಿದ್ದು, ದೆಹಲಿ-ಚಿಕಾಗೋ ಸೇರಿದಂತೆ ಪ್ರಮುಖ ಆರು ಅಂತರರಾಷ್ಟ್ರೀಯ ವಿಮಾನಗಳಲ್ಲಿ ಸೇವೆಗಳನ್ನು ಕಡಿತಗೊಳಿಸಲಾಗಿದೆ ಅಥವಾ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ. ಹೆಚ್ಚುತ್ತಿರುವ ಕಾರ್ಯಾಚರಣ ವೆಚ್ಚ ಮತ್ತು ಇಂಧನ ದರ ಏರಿಕೆ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಂದರ್ಶ ಪರಿಸ್ಥಿತಿಯಿಂದ ಉಂಟಾದ ವಾಯು ಪ್ರದೇಶ ನಿರ್ಬಂಧಗಳು ಕೂಡ ವಿಮಾನಗಳ ಸಂಚಾರಕ್ಕೆ ತೊಂದರೆ ಉಂಟು ಮಾಡಿದ್ದು, ಇದರಿಂದ ಪ್ರಯಾಣ ಸಮಯ ಹೆಚ್ಚಳ ಹಾಗೂ ಹೆಚ್ಚುವರಿ ವೆಚ್ಚ ಎದುರಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಕೆಲವು ಮಾರ್ಗಗಳಲ್ಲಿ ವಿಮಾನಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿತ್ತು. ಆದರೆ ನಿರಂತರ ನಷ್ಟವನ್ನು ತಪ್ಪಿಸಲು ಅಂತರಾಷ್ಟ್ರೀಯ ಸೇವೆಗಳನ್ನು ತಾತ್ಕಾಲಿಕವಾಗಿ ತಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಪ್ರಯಾಣಿಕರಿಗೆ ಉಂಟಾಗಿರುವ ಅಸೌಕರ್ಯಕ್ಕಾಗಿ ಏರ್ ಇಂಡಿಯಾ ವಿಷಾದ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಸುಧಾರಿಸಿದ ನಂತರ ಸೇವೆಗಳನ್ನು ಪುನರಾರಂಭಿಸುವ ಸಾಧ್ಯತೆ ಇದೆ ಎಂದು ಸೂಚಿಸಿದೆ.
ವಾಯು ಪ್ರದೇಶ ನಿರ್ಬಂಧ ಮತ್ತು ಜೆಡ್ ಇಂಧನ ದರ ಏರಿಕೆ:
ಕೆಲವು ಪ್ರದೇಶಗಳಲ್ಲಿ ನಿರಂತರವಾಗಿ ವಿಧಿಸಲಾಗಿರುವ ವಾಯು ಪ್ರದೇಶ ನಿರ್ಬಂಧಗಳು ಮತ್ತು ಜಟ್ ಇಂಧನದ ಏರಿಕೆಯ ಹಿನ್ನೆಲೆಯಲ್ಲಿ ಏರ್ ಇಂಡಿಯಾದ ಅಂತರಾಷ್ಟ್ರೀಯ ಕಾರ್ಯಾಚರಣೆಗಳಿಗೆ ಭಾರಿ ವೆಚ್ಚ ಹೆಚ್ಚಾಗಿದೆ. ಈ ಕಾರಣದಿಂದಾಗಿ ಕೆಲವು ಮಾರ್ಗಗಳಲ್ಲಿ ಸೇವೆಗಳನ್ನು ತಾತ್ಕಾಲಿಕವಾಗಿ ಕಡಿತಗೊಳಿಸಲಾಗಿದೆ ಎಂದು ಏರ್ ಇಂಡಿಯಾ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ವಿಮಾನಯಾನ ಸಂಸ್ಥೆಯ ಪ್ರಕಾರ, ಇಂಧನ ವೆಚ್ಚದ ಏರಿಕೆ ಹಾಗೂ ಮಾರ್ಗ ನಿರ್ಬಂಧಗಳಿಂದಾಗಿ ಕಾರ್ಯಾಚರಣೆ ನಿರ್ವಹಣೆ ಸವಾಲಾಗಿದ್ದು, ಲಾಭದಾಯಕತೆಯ ಮೇಲೆ ಪರಿಣಾಮ ಬೀರಿದೆ. ಇದನ್ನು ಸಮತೋಲನಗೊಳಿಸಲು ಕೆಲ ಅಂತರಾಷ್ಟ್ರೀಯ ಮಾರ್ಗಗಳ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಏರ್ ಇಂಡಿಯಾ ಈ ಕ್ರಮವು ತಾತ್ಕಾಲಿಕವಾಗಿದ್ದು, ಪರಿಸ್ಥಿತಿ ಸುಧಾರಿಸಿದ ಬಳಿಕ ಸೇವೆಗಳನ್ನು ಹಂತ ಹಂತವಾಗಿ ಪುನರಾರಂಭಿಸುವ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದೆ.
ಏರ್ ಇಂಡಿಯಾದ ಆರು ಅಂತರಾಷ್ಟ್ರೀಯ ಮಾರ್ಗಗಳು ತಾತ್ಕಾಲಿಕ ಬಂದ್:
ನಷ್ಟದಲ್ಲಿರುವ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಆಗಸ್ಟ್ ನವರಿಗೆ ಆರು ಅಂತರಾಷ್ಟ್ರೀಯ ಮಾರ್ಗಗಳಲ್ಲಿ ತನ್ನ ಸೇವೆಗಳನ್ನು ತಾತ್ಕಾಲಿಕವಾಗಿ ಸಗೆತಗೊಳಿಸುವುದಾಗಿ ಘೋಷಿಸಿದೆ. ದೆಹಲಿ-ಚಿಕಾಗೋ, ಮುಂಬೈ-ನ್ಯೂಯಾರ್ಕ್, ದೆಹಲಿ-ಶಾಂಘೈ, ಚೆನ್ನೈ-ಸಿಂಗಾಪುರ್, ಮುಂಬೈ- ಢಾಕಾ ಮತ್ತು ದೆಹಲಿ-ಮಾಲೆ ಮಾರ್ಗಗಳಲ್ಲಿ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ಜೆಟ್ ಇಂಧನ ದರ ಏರಿಕೆ ಹಾಗೂ ವಾಯು ಪ್ರದೇಶ ನಿರ್ಬಂಧಗಳಿಂದ ಹೆಚ್ಚುತ್ತಿರುವ ಕಾರ್ಯಾಚರಣ ವೆಚ್ಚವನ್ನು ನಿಯಂತ್ರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಈ ಮಾದಗಳ ಕಡಿತದ ಬಳಿಕವೂ ಏರ್ ಇಂಡಿಯಾ ತನ್ನ ಅಂತರಾಷ್ಟ್ರೀಯ ನೆಟ್ವರ್ಕ್ ಅನ್ನು ಮುಂದುವರಿಸಲಿದೆ.
ಕಂಪನಿಯ ಪ್ರಕಾರ, ಪ್ರತಿ ತಿಂಗಳು 1,200ಕ್ಕೂ ಹೆಚ್ಚು ಅಂತರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸಲಾಗುತ್ತದೆ. ಇದರಲ್ಲಿ ಉತ್ತರ ಅಮೆರಿಕಕ್ಕೆ ವಾರಕ್ಕೆ 33 ವಿಮಾನಗಳು, ಯುರೋಪ್ ಗೆ 47 ವಿಮಾನಗಳು, ಯುನೈಟೆಡ್ ಕಿಂಗ್ಡಂ ಗೆ 57 ವಿಮಾನಗಳು, ಆಸ್ಟ್ರೇಲಿಯಾಕ್ಕೆ ಎಂಟು ವಿಮಾನಗಳು ಹಾಗೂ ಪೂರ್ವ, ಆಗ್ನೇಯ ಏಷ್ಯಾ ಮತ್ತು ಸಾರ್ಕ್ ರಾಷ್ಟ್ರಗಳಿಗೆ 158 ವಿಮಾನಗಳು ಹಾರಾಟ ನಡೆಸಲಿವೆ.
ಇದೇ ವೇಳೆ ಆಫ್ರಿಕಾದ ಮಾರಿಷಸ್ ವಾರಕ್ಕೆ ಏಳು ವಿಮಾನಗಳ ಸೇವೆಯು ಮುಂದುವರೆಯಲಿದೆ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ. ಪ್ರಯಾಣಿಕರಿಗೆ ಉಂಟಾಗುವ ಅಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
Also Read:
ಚಿಕ್ಕ ಜಗಳಕ್ಕೆ ದೊಡ್ಡ ದುರಂತ: ಮೊಬೈಲ್ ಬಚ್ಚಿಟ್ಟಿದ್ದಕ್ಕೆ ಸ್ನೇಹಿತನಿಂದ ಹತ್ಯೆ