<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

IPL 2026: ನಿನ್ನ ವಯಸ್ಸಲ್ಲಿ ನಾವು ಹೀಗೆ ಆಡಿರಲಿಲ್ಲ! ವೈಭವ್ ಪ್ರತಿಭೆಗೆ Amitabh Bachchan ಸಲಾಂ

IPL 2026: ನಿನ್ನ ವಯಸ್ಸಲ್ಲಿ ನಾವು ಹೀಗೆ ಆಡಿರಲಿಲ್ಲ! ವೈಭವ್ ಪ್ರತಿಭೆಗೆ Amitabh Bachchan ಸಲಾಂ
Summary: In IPL 2026, young talent Vaibhav has won the hearts of not only cricket fans but also Bollywood celebrities with his amazing performance. "We would not have played like this at your age!" Amitabh Bachchan expressed his appreciation and saluted Vaibhav's talent.

BELAGAVI NEWS :

ನ್ಯೂ ಚಂಡಿಗಢದ ಮಹಾರಾಜ ಯಾದವಿಂದ್ರ ಸಿಂಗ್ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ 2026 ರ ಕ್ವಾಲಿಫೈಯರ್ 2 ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧ ಗುಜರಾತ್ ಟೈಟನ್ಸ್(GT) ಭರ್ಜರಿ ಗೆಲುವು ಸಾಧಿಸಿದೆ. 214 ರನ್ ಗುರಿಯನ್ನು ಬೆನ್ನಟ್ಟಿದ್ದ ಗುಜರಾತ್ ಕೇವಲ 18.4 ಓವರ್ ಗಳಲ್ಲಿ 7ವಿಕೆಟ್ ಗಳ ಗೆಲುವು ದಾಖಲಿಸಿ ಮೂರನೇ ಬಾರಿಗೆ ಐಪಿಎಲ್ ಫೈನಲ್ ಗೆ ಪ್ರವೇಶಿಸಿದೆ.

ಆದರೆ ಈ ಪಂದ್ಯದಲ್ಲಿ ಸೋಲಿನ ನಡುವೆಯೂ ರಾಜಸ್ಥಾನ್ ಪರ 15ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಏಕಾಂಗಿ ಹೋರಾಟ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದೆ. ಅವರ ಅದ್ಭುತ ಬ್ಯಾಟಿಂಗ್ ಗೆ ಕ್ರಿಕೆಟ್ ದಿಗ್ಗಜರು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ನ ದಿಗ್ಗಜ ನಟ Amitabh Bachchan ಸಹ ವೈಭವ್ ಅವರ ಆಟವನ್ನು ಕೊಂಡಾಡಿದ್ದು. "ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಪ್ರದರ್ಶನ ಆರೋಪ” ಎಂಬಂತೆ ಮೆಚ್ಚುಗೆ ವ್ಯಕ್ತವಾಗಿದೆ.

Sponsored

ವೈಭವ್ ಸೂರ್ಯವಂಶೀಯ ಈ ಪ್ರದರ್ಶನ IPL 2026ರಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದು. ಭವಿಷ್ಯದ ಕ್ರಿಕೆಟ್ ತಾರೆಯಾಗಿ ಅವರ ಹೆಸರು ಈಗಾಗಲೇ ವಿಶ್ವಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಮಾಡು ಇಲ್ಲವೇ ಮಡಿ (Do or Die) ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ವಿಭಾಗ ನಿರೀಕ್ಷೆತ ಪ್ರದರ್ಶನ ನೀಡಲು ವಿಫಲವಾಯಿತು. ಆದರೆ ಆರಂಭಿಕನಾಗಿ ಕಣಕ್ಕಿಳಿದ ಯುವ ಪ್ರತಿಭೆ ವೈಭವ ಸೂರ್ಯವಂಶಿ ತಂಡಕ್ಕೆ ಭರವಸೆಯ ಇನ್ನಿಂಗ್ಸ್ ನೀಡಿದರು. ವಿಕೆಟ್ ಗಳು ಒಂದೊಂದಾಗಿ ಬೀಳುತ್ತಿದ್ದರು. ಅವರು ಒಂದು ತುದಿಯಲ್ಲಿ ದೃಢವಾಗಿ ನಿಂತು ರಾಜಸ್ಥಾನ್ ಇನಿಂಗ್ಸ್ ಅನ್ನು ನಿಭಾಯಿಸಿದರು.

ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ನೋಡ ನೋಡುತ್ತಲೇ ಅರ್ಧಶತಕವನ್ನು ಪೂರೈಸಿದ ವೈಭವ್ ನಂತರ ತಮ್ಮ ಎಂದಿನ ಆಕ್ರಮಣಕಾರಿ ಶೈಲಿಗೆ ಮರಳಿದರು. ಶತಕದತ್ತ ದಿಟ್ಟವಾಗಿ ಮುನ್ನಡೆದ ಅವರು, 90 ರ ಹತ್ತಿರಕ್ಕೆ ತಲುಪಿದರು. ಆದರೆ ದುರಾದೃಷ್ಟವಶಾತ್ ಮತ್ತೊಮ್ಮೆ "ನರ್ವಸ್ 90" ಗೆ ಬಲಿಯಾಗಿ 96 ರನ್ ಗಳಿಗೆ ವಿಕೆಟ್ ಒಪ್ಪಿಸಿದರು.

ಅವರ ಈ ಆಘಾತಕಾರಿ ವಿಕೆಟ್ ಪತನದ ಬಳಿಕ ವೈಭವ್ ಬೇಸರದಿಂದ ಪೆವಿಲಿಯನ್ಗೆ ಮರಳಿದರು. ಇದರ ಜೊತೆಗೆ ತಂಡವು ಸೋಲನ್ನು ಅನುಭವಿಸಿದ ಕಾರಣ ಈ ಪಂದ್ಯ ಯುವ ಆಟಗಾರನಿಗೆ ಭಾರೀ ನಿರಾಶೆ ತಂದಿತು.

Sponsored

ವೈಭವ್ ಸೂರ್ಯವಂಶೀಯ ಈ ಏಕಾಂಗಿ ಹೋರಾಟ ಕ್ರಿಕೆಟ್ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದು, ಅವರ ಭವಿಷ್ಯದ ಬಗ್ಗೆ ಭಾರಿ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಐಪಿಎಲ್ 2026ರ ಕ್ವಾಲಿಫೈಯರ್ 2 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಯುವ ಪ್ರತಿಭೆ ವೈಭವ್ ಎಂದು ಸೂರ್ಯವಂಶಿ (Vaibhav Suryavanshi) ಅವರ ಆಟಕ್ಕೆ ಕ್ರಿಕೆಟ್ ಜಗತ್ತಿನ ದಿಗ್ಗಿಜರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಬಂದ ಸೋಲಿನ ಬಳಿಕ ಡಂಕೌಟ್ ನಲ್ಲಿ ಕುಳಿತು ವೈಭವ್ ಕಣ್ಣೀರು ಹಾಕಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಈ ವಿಡಿಯೋ ಹಾಗೂ ಫೋಟೋಗಳು ವೈರಲ್ ಆದ ಬಳಿಕ ಕ್ರಿಕೆಟ್ ಅಭಿಮಾನಿಗಳು ಮತ್ತು ಮಾಜಿ ಆಟಗಾರರು ವೈಭವ್ ಗೆ ಬೆಂಬಲ ಸೂಚಿಸಿದ್ದಾರೆ. ಅವರಲ್ಲಿ ಬಾಲಿವುಡ್ ದಿಗ್ಗಜ ನಟ Amitabh Bachchan ಕೊಡ ತಮ್ಮ ಎಕ್ಸ್ (X) ಖಾತೆಯಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.

ಅಮಿತಾ ಬಚ್ಚನ್ ಅವರು, "15 ನೇ ವಯಸ್ಸಿನಲ್ಲಿ ನಿನ್ನ ಆಟ ಸ್ಮರಣೀಯವಾದದ್ದು ಸೂರ್ಯ (ವೈಭವ್ ಸೂರ್ಯವಂಶಿ). ನಿನ್ನ ವಯಸ್ಸಿನಲ್ಲಿ ನಮಗೆ ಸರಿಯಾಗಿ ಗೋಲಿ ಹಾಗೂ ಗಲ್ಲಿ ಕ್ರಿಕೆಟ್ ಆಡಲು ಕೊಡ ಬರುತ್ತಿರಲಿಲ್ಲ "ಎಂದು ವೈಭವ್ ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.

Sponsored

ಗುಜರಾತ್ ವಿರುದ್ಧದ ಈ ಪಂದ್ಯದಲ್ಲಿ ವೈಭವ್ ಕೇವಲ 47 ಎಸೆತಗಳಲ್ಲಿ 96 ರನ್ ಗಳ ಸ್ಪೋಟಕ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್ ನಲ್ಲಿ ಅವರು 8 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್ ಗಳನ್ನು ಬಾರಿಸಿ ತಮ್ಮ ಪ್ರತಿಭೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಆದರೆ ರಾಜಸ್ಥಾನ್ ರಾಯಲ್ಸ್ ತಂಡದ ದುರ್ಬಲ ಬೌಲಿಂಗ್ ಮತ್ತು ಫೀಲ್ಡಿಂಗ್ ನ ಕಾರಣದಿಂದ ತಂಡಕ್ಕೆ ಸೋಲಿನ ಆಘಾತ ಎಂದುರಾಯಿತು. ಇದರ ನಡುವೆಯೂ ವೈಭವ್ ಅವರ ಅದ್ಭುತ ಪ್ರದರ್ಶನ IPL 2026ರಲ್ಲಿ ಹೊಸ ದಾಖಲೆಗಳನ್ನೇ ಬರೆಯುವಂತೆ ಮಾಡಿದೆ.

Also Read:

ಕ್ರೇಜಿ ಸ್ಟಾರ್ ರವಿಚಂದ್ರನ್ ರ 'ಕ್ರೇಜಿ ಪಯಣ' : ರಾಮಾಯಣ ಮಹಾಭಾರತವೇ ಜೀವನದ ಪಾಠ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online