<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ಕ್ರೇಜಿ ಸ್ಟಾರ್ ರವಿಚಂದ್ರನ್ ರ 'ಕ್ರೇಜಿ ಪಯಣ' : ರಾಮಾಯಣ ಮಹಾಭಾರತವೇ ಜೀವನದ ಪಾಠ

ಕ್ರೇಜಿ ಸ್ಟಾರ್ ರವಿಚಂದ್ರನ್ ರ 'ಕ್ರೇಜಿ ಪಯಣ' : ರಾಮಾಯಣ ಮಹಾಭಾರತವೇ ಜೀವನದ ಪಾಠ
Summary: Crazy Star Ravichandran's much-awaited birthday special album 'Crazy Payana' has been unveiled.

BELAGAVI NEWS :

ಕನ್ನಡ ಚಿತ್ರರಂಗದ ಕನಸುಗಾರ, ಶೋಮ್ಯಾನ್,ಕ್ರೇಜಿಸ್ಟಾರ್,ರಣಧೀರ,ರವಿಮಾಮ ಹೀಗೆ ಹಲವು ಬಿರುದುಗಳಿಂದ ಅಭಿಮಾನಿಗಳ ಹೃದಯ ಗೆದ್ದಿರುವ ರವಿಚಂದ್ರನ ಇಂದು ತಮ್ಮ 65ನೇ ಜನ್ಮದಿನದ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.ಕನ್ನಡ ಸಿನಿ ರಂಗವನ್ನು ಹೊಸ ಕನಸುಗಳು ಮತ್ತು ಭವ್ಯತೆಯೊಂದಿಗೆ ಶ್ರೀಮಂತ ಗೊಳಿಸಿದ ಈ ಹಿರಿಯ ನಟನಿಗೆ ಕುಟುಂಬಸ್ಥರು,ಹಿರಿಯರು,ಆಪ್ತರು ಮತ್ತು ಸಿನಿ ಸ್ನೇಹಿತರು ಹಾಗೂ ಸಾವಿರಾರು ಅಭಿಮಾನಿಗಳು ಶುಭಾಶಯಗಳು ಅವರನ್ನು ಹರಿಸಿದ್ದಾರೆ.

ಜನ್ಮದಿನದ ವಿಶೇಷವಾಗಿ ಕ್ರೇಜಿಸ್ಟಾರ್ ಅಭಿಮಾನಿಗಳಿಗೆ'ಕ್ರೇಜಿ ಪ್ರಯಾಣ' ಶೀರ್ಷಿಕೆಯ ವಿಶೇಷ ಆಲ್ಬಮ್ ಅನ್ನು ಅರ್ಪಿಸಿದ್ದಾರೆ.ಇಂದು ಮುಂಜಾನೆ 6:03 ಕ್ಕೆ ಅನಾವರಣಗೊಂಡ ಈ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

'ರಾಮಾಯಣ ಮಹಾಭಾರತ ಇಲ್ಲದೆ ಯಾವ ಪ್ರಯಾಣವು ಮುಗಿಯುವುದಿಲ್ಲ' ಎಂಬ ಅರ್ಥಪೂರ್ಣ ಸಾಲುಗಳಿಂದ ಆರಂಭವಾಗಿರುವ ಈ ಗೀತೆ,ರವಿಚಂದ್ರನ್ ಅವರ ಜೀವನದ ಅನುಭವ,ಚಿಂತನೆ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ.ಜೊತೆಗೆ ತಮ್ಮ ಪ್ರೀತಿಸಿ ಬೆಳೆಸಿದ ಪೋಷಕರು,ಕನ್ನಡಿಗರು ಹಾಗೂ ಅಭಿಮಾನಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಂತೆಯೂ ಈ ಹಾಡು ಭಾಸವಾಗುತ್ತದೆ.ಜನ್ಮದಿನದ ಸಂಭ್ರಮದಲ್ಲಿ ಬಿಡುಗಡೆಯಾದ 'ಕ್ರೇಜಿ ಪಯಣ' ಈಗ ಅಭಿಮಾನಿಗಳ ಪಾಲಿಗೆ ವಿಶೇಷ ಬರ್ತಡೇ ಟ್ರೀಟ್ ಆಗಿದೆ.

ತಮ್ಮಸಿನಿಮಗಳ ಯಶಸ್ಸನ್ನು ಇಲ್ಲಿ ಉಲ್ಲೇಖಿಸಿ," ಅಪ್ಪನ ನಂಬಿಕೆ,ಅಮ್ಮನ ಪ್ರೀತಿ, ಈ ಪಯಣಕ್ಕೆ ಉಸಿರು ಅವರೇ,ಹಸಿರಾಗುವ ನಿಮ್ಮ ಪ್ರೀತಿ ಕಾರಣ,ಹರುಷ ಸ್ಪರ್ಶ ಈ ಕನ್ನಡ ಮಣ್ಣಿಂದಲೇ, ಈ ಕರ್ನಾಟಕದ ಹೃದಯದಿಂದಲ್ಲೇ, ನಿಮ್ಮ ಪ್ರೀತಿ ಜೊತೆಯಲ್ಲೇ ಅಂದೂ ಇಂದು ಎಂದು ಮುಂದು" ಎಂದು ತಿಳಿಸಿದ್ದಾರೆ.ಹಾಡು ನಟನ ವೃತ್ತಿಜೀವನದ ಒಂದು ಮೆಲುಕು ಹಾಕಿದ್ದು,ಸಾಹಿತ್ಯ ಬಹಳ ಅರ್ಥಪೂರ್ಣವಾಗಿದೆ.

ಕನ್ನಡ ಚಿತ್ರರಂಗದ ಕನಸುಗಾರನಾಗಿ,ಶೋ ಮ್ಯಾನ್ ಆಗಿ,ಕ್ರೇಜಿಸ್ಟಾರ್ ಆಗಿ ಗುರುತಿಸಿಕೊಂಡಿರುವ ವಿ.ರವಿಚಂದ್ರನ್ ಅವರ ಸಿನಿ ಪಯಣವೇ ಒಂದು ಅದ್ಬುತ ಕಥೆ. 1961ರ ಮೇ 30 ರಂದು ಖ್ಯಾತ ನಿರ್ಮಾಪಕ ವೀರಸ್ವಾಮಿ ಅವರ ಪುತ್ರನಾಗಿ ಜನಿಸಿದ ರವಿಚಂದ್ರನ್ ,ಇಂದು ಕನ್ನಡ ಚಿತ್ರರಂಗದ ಅತ್ಯಂತ ಪ್ರಭಾವಿ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿದ್ದಾರೆ.

1971ರಲ್ಲಿ 'ಕುಲ ಗೌರವ'ಚಿತ್ರದ ಮೂಲಕ ಬಾಲ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅವರು,ಕಳೆದ ಐದು ದಶಕಗಳಿಗೂ ಹೆಚ್ಚು ಕಾಲ ಕನ್ನಡಿಗರನ್ನು ತಮ್ಮ ವಿಶಿಷ್ಟ ಶೈಲಿ,ಕನಸುಗಳು ಮತ್ತು ಭವ್ಯ ಚಿತ್ರಗಳ ಮೂಲಕ ರಂಜಿಸುತ್ತಾ ಬಂದಿದ್ದಾರೆ. ನಾಯಕನಾಗಿ ಮಾತ್ರವಲ್ಲದೆ ಕನ್ನಡ ಸಿನಿಪ್ರಿಯರಿಗೆ ಹೊಸ ಟ್ರೆಂಡ್ ಗಳನ್ನು ಪರಿಚಯಿಸಿದ ಕ್ರಿಯೇಟಿವ್ ಶೋಮ್ಯಾನ್ ಎಂಬ ಹೆಗ್ಗಳಿಕೆಯನ್ನು ಕೂಡ ಪಡೆದಿದ್ದಾರೆ.

'ಪ್ರೇಮಲೋಕ', 'ರಣಧೀರ', 'ಅಂಜದಗಂಡು', 'ರಾಮಾಚಾರಿ', 'ಶಾಂತಿ ಕ್ರಾಂತಿ','ಸಿಪಾಯಿ','ಹಳ್ಳಿ ಮೇಷ್ಟ್ರು','ಪುಟ್ನಂಜ', 'ಯುದ್ಧ ಕಾಂಡ','ಅಣ್ಣಯ್ಯ,'ಮಲ್ಲ','ಕನಸುಗಾರ', 'ಕ್ರೇಜಿಸ್ಟಾರ್','ಏಕಾಂಗಿ', ಹಾಗೂ 'ದೃಶ್ಯ' ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರಗಳ ಮೂಲಕ ಅವರು ಕನ್ನಡ ಸಿನಿಪ್ರಿಯರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ.

ನಟನಾಗಿ ಮಾತ್ರ ಸೀಮಿತವಾಗದೆ,ನಿರ್ದೇಶಕ, ನಿ ರ್ಮಪಕ,ಗೀತರಚನಕಾರ ಮತ್ತು ಸಂಪಾದಕರಾಗಿಯೂ ಮತ್ತು ಸಂಗೀತ ನಿರ್ದೇಶಕ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸುವ ರವಿಚಂದ್ರನ್,ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮಗಳನ್ನುಬು ನೀಡಿದ ಅಪರೂಪದ ಕಲಾವಿದ.ಅವರ ಕನಸುಗಳು,ಸೃಜನಶೀಲತೆ ಮತ್ತು ವಿಭಿನ್ನ ಚಿತ್ರಕಲ್ಪನೆಗಳೇ ಅವರನ್ನು ಕನ್ನಡ ಸಿನಿರಂಗದ 'ಕ್ರೇಜಿಸ್ಟಾರ್' ಆಗಿ ಶಾಶ್ವತವಾಗಿ ಉಳಿಸಿವೆ.

ರವಿ ಚಂದ್ರನ್ ಅವರಿಗೆ ಈಶ್ವರ ಎಂಬ ಮತ್ತೊಂದು ಹೆಸರು ಇದೆ.ಇದು ಅವರ ಪೋಷಕರು ಜಾತಕದ ಪ್ರಕಾರ ಇಟ್ಟ ಹೆಸರು. ಮನೆಯಲ್ಲಿ ತಂದೆ ತಾಯಿ ಈಶ್ವರ ಎಂದೇ ಕರೆಯುತ್ತಿದ್ದರಂತೆ.

ಕನ್ನಡ ಚಿತ್ರರಂಗಕ್ಕೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದಷ್ಟು ಅಲ್ಲ, ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿಯರನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಿದ ಹೆಗ್ಗಳಿಕೆಯೂ ಕ್ರೇಜಿಸ್ಟಾರ್ ರವಿಚಂದ್ರನ್ ಅವರಿಗೆ ಸಲ್ಲುತ್ತದೆ.ತಮ್ಮ ಭವ್ಯ ಕನಸುಗಳು ಮತ್ತು ಅದ್ದೂರಿ ಚಿತ್ರಗಳ ಮೂಲಕ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಖ್ಯಾತ ನಟಿಯರಾದ ಜೂಹಿ ಚಾವ್ಲಾ, ಖುಷ್ಬು, ಮೂನ್ ಮೂನ್ ಸೇನ್,ಮಧುಬಾಲ, ಮೀನಾ,ರೋಜಾ, ಭಾನುಪ್ರಿಯ ಹಾಗೂ ಶಿಲ್ಪಾ ಶೆಟ್ಟಿ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆತಂದ ಹೊಸ ಟ್ರೆಂಡ್ ಸೃಷ್ಟಿಸಿದ್ದರು. ಆ ಕಾಲದಲ್ಲೇ ಕನ್ನಡ ಸಿನಿಮಾಗಳನ್ನು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದವರಲ್ಲಿ ರವಿಚಂದ್ರನ್ ಪ್ರಮುಖರು.

ಇನ್ನೊಂದೆಡೆ,ಕ್ರೇಜಿಸ್ಟಾರ್ ಅವರ 65 ನೆ ಜನ್ಮದಿನದ ಅಂಗವಾಗಿ ಇಂದು ಬೆಂಗಳೂರಿನ ಕೆಂಗೇರಿ ಸಮೀಪದ ಜೆಕೆ ಗ್ರ್ಯಾಂಡ್ ಅರೇನಾ ದಲ್ಲಿ'ಕ್ರೇಜಿ ಬ್ರಹ್ಮ ರಿಯುನಿಯನ್ ಮೇಘ ಇವೆಂಟ್ ಅದ್ದೂರಿಯಾಗಿ ನಡೆಯಲಿದೆ. ಪ್ರಸ್ತುತ ಇನ್ನೋವೇಟಿವ್ ಕ್ರಿಯೇಶನ್ ಅಂಡ್ ಸೊಲ್ಯೂಷನ್ಸ ನ ವ್ಯವಸ್ಥಾಪಕ ನಿರ್ದೇಶಕ ವಿನಯ್ ಹಾಗೂ ಕಲಾಲೂಹ ಸಂಸ್ಥಾಪಕ ಡಾ. ಚೇತನ ಆರ್ ಎಸ್ ಈ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.

ರವಿಚಂದ್ರನ್ ಮತ್ತು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಜೋಡಿ 16ವರ್ಷಗಳ ಕಾಲ ಕನ್ನಡ ಚಿತ್ರರಂಗಕ್ಕೆ ನೀಡಿದ ಅಮೂಲ್ಯ ಕೊಡುಗೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಈ ವೇಳೆ ಅವರ ಸೂಪರ್ ಹಿಟ್ ಹಾಡುಗಳ ವಿಶೇಷ ಗಾಯನ ಕಾರ್ಯಕ್ರಮವು ನಡೆಯಲಿದ್ದು,8000ಕ್ಕೂ ಹೆಚ್ಚು ಅಭಿಮಾನಿಗಳು ಮತ್ತು ಸಿನಿಪ್ರಿಯರು ಭಾಗವಹಿಸುವ ನಿರೀಕ್ಷೆ ಇದೆ.ಕ್ರೇಜಿಸ್ಟಾರ್ ಮತ್ತು ಹಂಸಲೇಖ ಅವರ ಸುವರ್ಣ ನೆನಪುಗಳನ್ನು ಮತ್ತು ಜೀವಂತಗೊಳಿಸಲಿರುವ ಈ ಕಾರ್ಯಕ್ರಮ ಈಗಾಗಲೇ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

Also Read:

SSB ಜಾಬ್ಸ್ 2026:ಕ್ರೀಡಾಪಟುಗಳಿಗೆ ಬಂಪರ್ ಅವಕಾಶ,44 ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ನೇಮಕಾತಿ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online