<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Corporate

SSB ಜಾಬ್ಸ್ 2026:ಕ್ರೀಡಾಪಟುಗಳಿಗೆ ಬಂಪರ್ ಅವಕಾಶ,44 ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ನೇಮಕಾತಿ

SSB ಜಾಬ್ಸ್ 2026:ಕ್ರೀಡಾಪಟುಗಳಿಗೆ ಬಂಪರ್ ಅವಕಾಶ,44 ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ನೇಮಕಾತಿ
Summary: Golden opportunity for athletes looking for government jobs! The Armed Forces Border Force has invited applications for the recruitment of 404 constable posts. Candidates who have passed 10th standard and have achieved sports achievements at the national/international level can apply.

BELAGAVI NEWS :

ಪೋಲಿಸ್ ಮತ್ತು ರಕ್ಷಣಾ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಕನಸು ಕಾಣುತ್ತಿರುವ ಯುವಕ ಯುವತಿಯರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಅವಕಾಶ ದೊರೆಯುತ್ತಿದೆ.ಕೇಂದ್ರ ಗ್ರಹ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸಶಸ್ತ್ರ, ಸೀಮಾ ಬಲ್ ಕ್ರೀಡಾ ಕೋಟಾದಡಿ 404 ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.

ಹತ್ತನೇ ತರಗತಿ ಉತ್ತೀರ್ಣರಾಗಿರುವ ಹಾಗೂ ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.ವಿಶೇಷವೆಂದರೆ,ಈ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆ ಇರುವುದಿಲ್ಲ.ಅಭ್ಯರ್ಥಿಗಳ ಕ್ರೀಡಾ ಸಾಧನೆ,ದಾಖಲೆಗಳ ಪರಿಶೀಲನೆ ಮತ್ತು ದೈಹಿಕ ಅರ್ಹತೆಯ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.

ಒಟ್ಟು 404ಹುದ್ದೆಗಳ ಬರ್ತಿ ಅರ್ಜಿ ಆಹ್ವಾನಿಸಲಾಗಿದ್ದು,ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಬ್ಬರು ಅರ್ಜಿ ಸಲ್ಲಿಸಲು ಅವಕಾಶವಿದೆ.18 ರಿಂದ 23 ವರ್ಷದೊಳಗಿನ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.ಆಯ್ಕೆಯಾದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ವೇತನ ಶ್ರೇಣಿಯಂತೆ ಆಕರ್ಷಕ ಸಂಬಳ, ಭತ್ಯೆಗಳು ಹಾಗೂ ಉದ್ಯೋಗ ಭದ್ರತೆ ದೊರೆಯಲಿದೆ.

Sponsored

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಇದು ಸರ್ಕಾರಿ ಉದ್ಯೋಗದ ಕನಸುಗಳನ್ನು ನನಸಾಗಿಸಿಕೊಳ್ಳುವ ಅಪರೂಪದ ಅವಕಾಶವಾಗಿದೆ.ಕೇಂದ್ರ ಸರ್ಕಾರದ ಭದ್ರತಾ ಪಡೆಗಳಲ್ಲಿ ಸೇವೆ ಸಲ್ಲಿಸುವ ಆಸಕ್ತಿ ಹೊಂದಿರುವ ಕ್ರೀಡಾಪಟುಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಈ ಸುವರ್ಣ ಅವಕಾಶವನ್ನು ಕೈಚಲ್ಲಬೇಡಿ.

ಹುದ್ದೆಗಳಿಗೆ ವಿವಿಧ ಕ್ರೀಡಾ ಹಿನ್ನೆಲೆ:

ಈ ಕಾನ್ಸ್ಟೇಬಲ್ ಹುದ್ದೆಗಳಿಗೆ ವಿವಿಧ ಕ್ರೀಡಾ ಹಿನ್ನಲೆಯುಳ್ಳ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ವಾಲಿಬಾಲ್,ಕಬಡ್ಡಿ,ಅಥ್ಲೆಟಿಕ್ಸ್,ಶೂಟಿಂಗ್,ಬಾಕ್ಸಿಂಗ್,ಬ್ಯಾಡ್ಮಿಂಟನ್,ಫುಟ್ಬಾಲ್,ಹಾಕಿ,ಈಜು,ಕುಸ್ತಿ,ಯೋಗಾಸನ,ಜೂಡೋ ಟೇಕ್ವಾಂಡೋ, ಪವರ್ ಲಿಫ್ಟಿಂಗ್ ಸೇರಿದಂತೆ ಇನ್ನೂ ಪ್ರಮುಖ ಕ್ರೀಡಾ ವಿಭಾಗಗಳ ಕ್ರೀಡಾಪಟುಗಳಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

SSB Recruitment 2026: ವಿದ್ಯಾರ್ಹತೆ ಏನು?

Sponsored

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೆಯ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.ಆದರೆ ಕೇವಲ ಶೈಕ್ಷಣಿಕ 65 ಇದ್ದರೆ ಸಾಕಾಗುವುದಿಲ್ಲ; ಕ್ರೀಡಾಕ್ಷೇತ್ರದಲ್ಲಿಯೂ ಗಮನಾರ್ರ ಸಾಧನೆ ಮಾಡಿರುವುದು ಕಡ್ಡಾಯವಾಗಿದೆ.

ಅಭ್ಯರ್ಥಿಗಳು ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಾಷ್ಟ್ರೀಯ ಅಥವಾ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ರಾಜ್ಯ ಅಥವಾ ದೇಶವನ್ನು ಪ್ರತಿನಿಧಿಸಿರಬೇಕು.ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ವಿಶೇಷವಾಗಿ ಹಿರಿಯ ಅಥವಾ ಕಿರಿಯ ರಾಷ್ಟ್ರೀಯ ಚಾಂಪಿಯನ್ಶಿಪ್ಗಳಲ್ಲಿ ಪದಕ ವಿಜೇತರಾಗಿರುವವರು ಹಾಗೂ 'ಖೇಳೋ ಇಂಡಿಯಾ' ಕ್ರೀಡಾಕೂಟದಲ್ಲಿ ಪದಕ ಪಡೆದ ಕ್ರೀಡಾಪಟುಗಳು ಈ ನೇಮಕಾತಿಯಲ್ಲಿ ಹೆಚ್ಚಿನ ಅವಕಾಶ ಪಡೆಯಲಿದ್ದಾರೆ.ಕ್ರೀಡಾ ಸಾಧನೆಯೇ ಈ ನೇಮಕಾತಿಯ ಪ್ರಮುಖ ಮಾನದಂಡವಾಗಿರುವುದರಿಂದ ಅರ ಹಾಕಿ ಕ್ರೀಡಾಪಟುಗಳು ತಮ್ಮ ಸಾಧನೆಗೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಅಗತ್ಯ.

ಕ್ರೀಡಾ ಪ್ರತಿಭೆಯೊಂದಿಗೆ ಕೇಂದ್ರ ಸರ್ಕಾರದ ಉದ್ಯೋಗ ಪಡೆಯಲು ಬಯಸುವ ಯುವಕರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಅರ್ಜಿ ಸಲ್ಲಿಸಬಹುದು.

Sponsored

ವಯಸ್ಸು ಅಥವಾ ಮೀಸಲಾತಿ ವಿವರ:ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 23 ವರ್ಷಗಳ ನಡುವೆ ಇರಬೇಕು.ಸರ್ಕಾರದ ನಿಯಮಾವಳಿಗಳ ಅನ್ವಯ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.ಇನ್ನು ದೈಹಿಕ ಅರ್ಹತೆಗಳ ವಿಷಯದಲ್ಲಿ,ಪುರುಷರ ಅಭ್ಯರ್ಥಿಗಳಿಗೆ ಕನಿಷ್ಠ 170 cm ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ 157cm ಎತ್ತರ ನಿಗದಿಪಡಿಸಲಾಗಿದೆ.ಎಸ್ ಟಿ ವರ್ಗದ ಅಭ್ಯರ್ಥಿಗಳಿಗೆ ಎತ್ತರದಲ್ಲಿ ಸಡಿಲಿಕೆ ಇರಲಿದ್ದು, ಪುರುಷ ಅಭ್ಯರ್ಥಿಗಳಿಗೆ ಎದೆಯ ಅಳತೆಯ ನಿರ್ದಿಷ್ಟ ಮಾನದಂಡಗಳು ಅನ್ವಯಿಸುತ್ತವೆ. ಜೊತೆಗೆ ಅಭ್ಯರ್ಥಿಗಳ ಬಿಎಮ್ಐ 18 ರಿಂದ 25ರ ನಡುವೆ ಇರಬೇಕಾಗುತ್ತದೆ.

ಆಕರ್ಷಕ ವೇತನದೊಂದಿಗೆ ಕೇಂದ್ರ ಸರಕಾರಿ ಉದ್ಯೋಗ: SSB ಕಾನ್ಸ್ಟೇಬಲ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.21,700 ರಿಂದ ರೂ.69, 100 ವರೆಗೆ ಆಕರ್ಷಕ ಮೂಲ ವೇತನ ನೀಡಲಾಗುತ್ತದೆ.ಇದರ ಜೊತೆಗೆ ಕೇಂದ್ರ ಸರ್ಕಾರದ ನಿಯಮಾನುಸಾರ ತುಟ್ಟಿ ಭತ್ಯೆ, ವೈದ್ಯಕೀಯ ಸೌಲಭ್ಯ, ಪ್ರಯಾಣ ಭತ್ಯೆ ಸೇರಿದಂತೆ ವಿವಿಧ ಸೌಲಭ್ಯಗಳು ಹಾಗೂ ಪಿಂಚಣಿ ಪ್ರಯೋಜನಗಳ ಲಭ್ಯವಾಗಲಿದೆ.ಹೀಗಾಗಿ ಇದು ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಿಕೊಡುವ ಉದ್ಯೋಗಾವಕಾಶವಾಗಿದೆ.

ಅರ್ಜಿ ಶುಲ್ಕ ಎಷ್ಟು?

ನೇಮಕಾತಿಗೆ ಅರ್ಜಿ ಸಲ್ಲಿಸುವ ಸಾಮರ್ಥ್ಯ, ಒಬಿಸಿ ಮತ್ತು EWS ವರ್ಗದ ಅಭ್ಯರ್ಥಿಗಳು ರೂ.100 ಅರ್ಜಿ ಶುಲ್ಕ ಪಾವತಿಸಬೇಕಾಗುತ್ತದೆ.ಆದರೆ ಎಸ್ ಸಿ, ಎಸ್ ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ,ಇದು ಅಭ್ಯರ್ಥಿಗಳಿಗೆ ಮತ್ತೊಂದು ಹೆಚ್ಚು ಅನುಕೂಲವಾಗಿದೆ.

Sponsored

ಲಿಖಿತ ಪರೀಕ್ಷೆ ಇಲ್ಲ,ಕ್ರೀಡಾ ಸಾಧನೆಗೆ ಆದ್ಯತೆ:

ಈ ನೇಮಕಾತಿಯ ಪ್ರಮುಖ ವಿಶೇಷತೆ ಎಂದರೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ನಡೆಸಲಾಗುವುದಿಲ್ಲ.ಅಭ್ಯರ್ಥಿಗಳ ಆಯ್ಕೆಯನ್ನು ಸಂಪೂರ್ಣವಾಗಿ ಅವರ ಕ್ರೀಡಾ ಸಾಧನೆ,ಪದಕಗಳು ಹಾಗೂ ಸ್ಪರ್ಧೆಗಳಲ್ಲಿ ಗಮನಿಸಿದ ಸಾಧನೆಗಳ ಆಧಾರದ ಮೇಲೆ ಮಾಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲ ಕ್ರೀಡಾ ಸಾಧೆಗಳಿಗೆ ಅಂಕಗಳನ್ನು ನೀಡಲಾಗಿದೆ.ಈ ಎಲ್ಲಾ ಹಂತಗಳಲ್ಲಿ ಯಶಸ್ವಿಯಾಗುವ ಅಭ್ಯರ್ಥಿಗಳು ಅಂತಿಮವಾಗಿ ನೇಮಕ ಮಾಡಲಾಗುತ್ತದೆ.ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರತಿಭೆ ಸಾಬೀತುಪಡಿಸಿಕೊಳ್ಳುವುದು ಯುವಕರಿಗೆ ಯಾವುದೇ ರೀತಿಯಾದ ಪರೀಕ್ಷೆ ಒತ್ತಡವಿಲ್ಲದೆ ಕೇಂದ್ರ ಸರ್ಕಾರದ ಭದ್ರತಾ ಪಡೆ ಒಂದರಲ್ಲಿ ಉದ್ಯೋಗ ಪಡೆಯಲು ಇದು ಅಪರೂಪದ ಅವಕಾಶವಾಗಿದೆ.

Also Read:

Sponsored

ಬಾಂಗ್ಲಾ ದೇಶದಲ್ಲಿ ಈಗ ಬಲಿಯಿಂದ ಪಾರಾದ 'ಡೊನಾಲ್ಡ್ ಟ್ರಂಪ್' ! ವೈರಲ್ ಆಯ್ತು ಈ ಕಥೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online