<?= $pageTitle ?>
Logo
ಮುಖಪುಟ ಓದುವುದು ಕೇಳು
Entertainment

ಮಾಸ್ ಎಂಟ್ರಿಗೆ ಸಜ್ಜಾದ 'ಬಲರಾಮನ ದಿನಗಳು':'ಕ್ವಾಟರರು ಹಾಡು ಬಿಡುಗಡೆ

ಮಾಸ್ ಎಂಟ್ರಿಗೆ ಸಜ್ಜಾದ 'ಬಲರಾಮನ ದಿನಗಳು':'ಕ್ವಾಟರರು ಹಾಡು ಬಿಡುಗಡೆ
Summary: The much-awaited 'Quatarru' song from the film 'Balaramana Dindiguni' starring Vinod Prabhakar has been unveiled. Actress Vandita Gowda has put on strong steps in this song, which has a mass beat and attractive visuals, and is attracting the attention of moviegoers.

belagavi news :

'ಮಾದೇವ' ಚಿತ್ರದ ಯಶಸ್ಸಿನ ಬಳಿಕ ಮರಿ ಟೈಗರ್ ವಿನೋದ್ ಪ್ರಭಾಕರ್ ಅವರ ಮುಂದಿನ ಸಿನಿಮಾ "ಬಲರಾಮ ದಿನಗಳು" ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಇದೀಗ ಚಿತ್ರದ ‘ಕ್ವಾಟರ್ರು’ ಹಾಡು ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದಿದೆ. ನಿರ್ದೇಶಕ ಕೆ.ಎಂ.ಚೈತನ್ಯ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಗೆ ಪ್ರಿಯಾ ಆನಂದ್ ಜೋಡಿಯಾಗಿದ್ದು,ಸಂತೋಷ್ ನಾರಾಯಣನ್ ಅವರ ಸಂಗೀತ ಹಾಡಿಗೆ ಹೊಸ ಮೆರುಗು ನೀಡಿದೆ.ವಿಶೇಷವಾಗಿ ನಟಿ ವಂದಿತಾ ಗೌಡ ಅವರ ಎನರ್ಜಿಟಿಕ್ ಡ್ಯಾನ್ಸ್ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತಿದೆ.

ಹಾಡಿನ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ನಟಿ ತಾರಾ ಅನುರಾಧ ಭಾಗವಹಿಸಿ ತಂಡಕ್ಕೆ ಶುಭ ಹಾರೈಸಿದರು.ಈಗಾಗಲೇ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದು, "ಬಲರಾಮ ದಿನಗಳ " ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿದೆ.

"ಬಲರಾಮ ದಿನಗಳು" ಚಿತ್ರದ "ಕ್ವಾಟರ್ರು" ಹಾಡು ಬಿಡುಗಡೆಯಾದ ಬಳಿಕ ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.

ಹಾಡಿನ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ನಟಿ ತಾರಾ ಅನುರಾಧಾ, "ಈ ಪೆಪ್ಪಿ ಸಾಂಗ್ ತುಂಬಾ ಚೆನ್ನಾಗಿದೆ.ನಿರ್ಮಾಪಕ ಶ್ರೇಯಸ್ ಒಬ್ಬ ಪ್ಯಾಶನೇಟ್ ವ್ಯಕ್ತಿ.ಅವರಿಗೆ ವಿನೋದ್ ಪ್ರಭಾಕರ್ ಮೇಲಿರುವ ಪ್ರೀತಿ ಚಿತ್ರದ ಮೇಲೂ ಕಾಣಿಸುತ್ತದೆ. ಪದ್ಮಮ್ಮ ಇಡೀ ತಂಡಕ್ಕೆ ತಾಯಿಯಂತೆ ಬೆಂಬಲ ನೀಡಿದ್ದಾರೆ. ಮೂವರು ಸೇರಿ ಚಿತ್ರವನ್ನು ಅದ್ಬುತವಾಗಿ ಮುನ್ನಡೆಸಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಚಿತ್ರದ ಛಾಯಾಗ್ರಾಹಕ ವೇಣು ಅವರ ಕ್ಯಾಮೆರಾ ವರ್ಕ್ ಬಗ್ಗೆ ವಿಶೇಷವಾಗಿ ಪ್ರಶಂಸಿಸಿದ ಅವರು, "ಸಿನಿಮಾ ಕ್ಲಾಸಿಕ್ ಆಗಿ ಮೂಡಿಬಂದಿದೆ. ಸಂತೋಷ್ ನಾರಾಯಣ್ ಅವರಂತಹ ಖ್ಯಾತ ಸಂಗೀತ ನಿರ್ದೇಶಕರಿಂದ ಕೆಲಸ ಮಾಡಿಸಿರುವುದು ತಂಡದ ದೊಡ್ಡ ಸಾಧನೆ. ಟಿ - ಸೀರಿಸ್ ಕೂಡ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿರುವುದು ಚಿತ್ರದ ಗುಣಮಟ್ಟಕ್ಕೆ ಸಾಕ್ಷಿ" ಎಂದರು.

"ಬಲರಾಮ ದಿನಗಳು" ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆಯುವ ಎಲ್ಲ ಲಕ್ಷಣಗಳನ್ನೂ ಹೊಂದಿದೆ. ಸಿನಿಮಾ ನೀಡಲು ನಾನು ಕೂಡ ಕಾತರದಿಂದ ಕಾಯುತ್ತಿದ್ದೇನೆ" ಎಂದು ತಾರಾ ಅನುರಾಧಾ ತಮ್ಮ ಉತ್ಸಾಹ ಹಂಚಿಕೊಂಡರು.

ನಿರ್ದೇಶಕ ಕೆ.ಎಂ.ಚೈತನ್ಯ ಮಾತನಾಡಿ.ಬಲರಾಮನ ದಿನಗಳ ಚಿತ್ರದಲ್ಲಿ ಒಟ್ಟು 7 ಹಾಡುಗಳಿವೆ. ಇದು 3ನೇ ಹಾಡು. ವಿನೋದ್ ಪ್ರಭಾಕರ್ ತುಂಬಾ ಟ್ಯಾಲೆಂಟೆಡ್. ಈ ಚಿತ್ರವನ್ನು ಥಿಯೇಟರ್ ನಲ್ಲೇ ನೋಡಬೇಕು. ಆಗಲೇ ಫೀಲ್ ಬರೋದು. ಆ ದಿನಗಳು ಬಿಡುಗಡೆಯಾದ 19 ವರ್ಷಗಳ ನಂತರ ಈ ಸಿನಿಮಾ ಮಾಡಲು ಸಾಕಷ್ಟು ಪುಸ್ತಕಗಳನ್ನು ಸ್ಟಡಿ ಮಾಡಿ ಅಂಡರ್‌ವರ್ಡ್ಲ್ ಬಗ್ಗೆ ತಿಳಿದುಕೊಂಡು ಕಥೆ ಬರೆದೆ. ಅದರ ಮತ್ತೊಂದು ವರ್ಷನ್ ಇದು ಎಂದು ಹೇಳಿದರು.

"ಬಲರಾಮ ದಿನಗಳು" ಚಿತ್ರದ ಪ್ರಮೋಷನ್ ಜೋರಾಗಿದ್ದು,ಚಿತ್ರತಂಡದ ಆತ್ಮವಿಶ್ವಾಸ ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ನಾಯಕ ವಿನೋದ್ ಪ್ರಭಾಕರ್ ಮಾದೇವ ' ಚಿತ್ರದ ಬಳಿಕ ನಾನು ಒಪ್ಪಿಕೊಂಡ ಸಿನಿಮಾ ಇದು. ಒಬ್ಬ ನಟನಾಗಿ ಯಾವುದೇ ರೀತಿಯ ಪಾತ್ರ ಮಾಡಲು ನಾನು ಸದಾ ಸಿದ್ಧನಿದ್ದೇನೆ. ಬಯೋಪಿಕ್ ಸಿನಿಮಾ ಮಾಡುವಾಗ ಸಹಜವಾಗಿಯೇ ಒಂದು ಜವಾಬ್ದಾರಿ ಮತ್ತು ಭಯ ಇರುತ್ತದೆ. ನನ್ನ ಸಿನಿ ಪಯಣದಲ್ಲೇ ಇದು ಅತಿದೊಡ್ಡ ಚಿತ್ರ. ಕೆವಿ ಎನ್ ಮೂಲಕ ಸಿನಿಮಾ ಬಿಡುಗಡೆಯಾಗುತ್ತಿರುವುದು ನಮಗೆ ಆನೆಬಲ ಸಿಕ್ಕಂತಾಗಿದೆ" ಎಂದು ಹೇಳಿದರು.

ನಿರ್ಮಾಪಕ ಶ್ರೇಯಸ್ ಮಾತನಾಡಿ, "ಇಂದು ಚಿತ್ರದ ಮೂರನೇ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಶೀಘ್ರದಲ್ಲೇ ಮತ್ತೊಂದು ಹಾಡು ಹಾಗೂ ಬಹು ನಿರೀಕ್ಷಿತ ಟ್ರೈಲರ್ ಬಿಡುಗಡೆ ಮಾಡುವ ಯೋಜನೆ ಇದೆ" ಎಂದು ಮಾಹಿತಿ ನೀಡಿದರು.

ನಿರ್ಮಾಪಕೀ ಪದ್ಮಾವತಿ ಜಯರಾಮ್ ಮಾತನಾಡಿ, "ಈ ಚಿತ್ರದ ಬಗ್ಗೆ ನನಗೆ ಯಾವುದೇ ಆತಂಕ ಇಲ್ಲ. ನಿರ್ದೇಶಕರ ಮೇಲೆ ಅಪಾರವಿಶ್ವಾಸವಿದೆ. ಜೊತೆಗೆ ಚಿತ್ರರಂಗದ ಹಿರಿಯ ಕಲಾವಿದರನ್ನು ನನ್ನ ಮಗ ಕಾರ್ಯಕ್ರಮಕ್ಕೆ ಕರೆತಂದಿರುವುದು ತುಂಬಾ ಸಂತೋಷ ತಂದಿದೆ" ಎಂದು ಹೇಳಿದರು.

ಈಗಾಗಲೇ ಹಾಡುಗಳ ಮೂಲಕ ಸದ್ದು ಮಾಡುತ್ತಿರುವ "ಬಲರಾಮ ದಿನಗಳು" ಶೀಘ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದು, ಅಧಿಕೃತ ಬಿಡುಗಡೆ ದಿನಾಂಕಕ್ಕಾಗಿ ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.

Also Read:

'ಕಸದಿಂದ ಕಾಸು' ಹಗರಣದ ಬೃಹತ್ ಜಾಲ ಬಯಲು: ಎಳೆ ಎಳೆಯಾಗಿ ಬಿಚ್ಚಿಟ್ಟ ಆರ್. ಅಶೋಕ್

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online