ಬಳ್ಳಾರಿ ಘಟನೆ ಆಕಸ್ಮಿಕವಲ್ಲ, ಇದು ಪೂರ್ವನಿಯೋಜಿತ ಸಂಚು. ಫಿಲ್ಮ್ ಸ್ಟೈಲ್‌ನಲ್ಲಿ ಎಂಟ್ರಿ ಕೊಟ್ಟ ಶಾಸಕ ಭರತ್ ರೆಡ್ಡಿ ಅವರ ಬೆಂಬಲಿಗರು ಬಾರ್‌ಗಳಿಂದ ಸೋಡಾ ಬಾಟಲಿಗಳಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಎಸೆದಿದ್ದಾರೆ ಎಂದು ನೇರ ಆರೋಪ ಮಾಡಿದರು.
ಘಟನೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅವರ ಮೃತದೇಹವನ್ನು ಸಂಪ್ರದಾಯದ ಪ್ರಕಾರ ಮಣ್ಣು ಮಾಡಬೇಕಿತ್ತು. ಆದರೆ, ಯಾರದ್ದೋ ಒತ್ತಾಯಕ್ಕೆ ಮಣಿದು ಸುಟ್ಟು ಹಾಕಿದ್ದಾರೆ. ಸಾಕ್ಷಿ ನಾಶ ಮಾಡಬೇಕು ಅಂತ ವ್ಯವಸ್ಥಿತವಾಗಿ ಸುಟ್ಟು ಹಾಕಲಾಗಿದೆ. ಅವರ ಕುಟುಂಬಸ್ಥರನ್ನು ಪೊಲೀಸರು ಹೆದರಿಸಿ, ಬೆದರಿಸಿದ್ದಾರೆ. ಏಕೆ ಸುಟ್ಟು ಹಾಕಿದರು ಎಂಬ ಬಗ್ಗೆ ಗೊತ್ತಿಲ್ಲ. ಆದರೆ, ಇಂದಲ್ಲ ನಾಳೆ ಈ ಸತ್ಯ ಹೊರಗೆ ಬರುತ್ತೆ ಎಂದಿದ್ದಾರೆ ಎಂದರು.
ಎಎಸ್ಪಿ ರವಿಕುಮಾರ ರಾಜಶೇಖರನ ಕುಟುಂಬದ ಸದಸ್ಯರ ಬೆದರಿಸಿ ಮಾನವ ಸರ್ಪಗಾವಲಿನಲ್ಲಿ ಮೃತದೇಹವನ್ನು ಸುಟ್ಟು ಹಾಕಿಸಿದ್ದಾರೆ. ಇದು ಬೇಕಂತಲೇ ಮಾಡಿದ ಮರ್ಡರ್. ಅವರೇ ಕೊಂದು ನಮ್ಮ ಮೇಲೆ ಹಾಕಲು ಮುಂದಾಗಿದ್ದಾರೆ. ನಮ್ಮ ರಾಜಕೀಯ ಭವಿಷ್ಯ ನಾಶ ಮಾಡಲು ಭರತ್ ರೆಡ್ಡಿ ಪ್ರಯತ್ನ ಮಾಡ್ತಿದ್ದಾರೆ. ರಾಜಕೀಯ ಶಾಶ್ವತ ಅಲ್ಲ. ನಾನು ಸೋಲಬೇಕು, ನೀನು ಸೋಲಬೇಕು. ಇದು ನಾಟಕ ರಂಗ. ಜೀವ ತೆಗೆಯೋ ಅಧಿಕಾರ ದೇವರಿಗೆ ಮಾತ್ರ ಇದೆ. ಡಿಎಸ್ಪಿ ನಂದಾರೆಡ್ಡಿ ಮತ್ತು ಎಎಸ್ಪಿ ರವಿ ಕುಮಾರ ಅವರ ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ನಡೆದ ಗಲಭೆಯಲ್ಲಿ ಗುಂಡೇಟಿಗೆ ಬಲಿಯಾದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಅವರ ಮೃತದೇಹವನ್ನು ಕುಟುಂಬಸ್ಥರ ವಿರೋಧದ ನಡುವೆ ಯಾರದ್ದೋ ಒತ್ತಾಯಕ್ಕೆ ಮಣಿದು ದಹನ ಮಾಡಲಾಗಿದೆ ಎಂದು ಮಾಜಿ ಸಚಿವ ಶ್ರೀ ರಾಮುಲು ಗಂಭೀರ ಆರೋಪ ಮಾಡಿದ್ದಾರೆ.
ರಾಜಶೇಖರ ತಂದೆ ಮಣ್ಣು ಮಾಡಿದ ಪೋಟೋ ಪ್ರದರ್ಶನ ಮಾಡಿದ ಶ್ರೀ ರಾಮುಲು, ರಾಜಶೇಖರ ಅವರ ಅಂತ್ಯ ಸಂಸ್ಕಾರಕ್ಕೆ ಮೊದಲು ನೆಲ ಅಗೆಯಲಾಗಿತ್ತು. ಆತನ ತಂದೆ ಸುರೇಂದ್ರ ರೆಡ್ಡಿ ಅವರ ಸಮಾಧಿ ಪಕ್ಕದಲ್ಲೇ ನೆಲ ಅಗೆಯಲಾಗಿತ್ತು. ಆದರೆ, ಸಾಕ್ಷಿ ಸಿಗಬಾರದು ಎಂದು ರಾಜಶೇಖರ ಮೃತದೇಹವನ್ನು ಹೀಗೆ ದಹನ ಮಾಡಿದ್ದಾರೆ. ನೆಲ ಅಗೆದು ಅಂತ್ಯ ಸಂಸ್ಕಾರ ಮಾಡದೇ ದಹನ ಮಾಡಿದ್ದು ಯಾಕೆ? ಕುಟುಂಬ ಸದಸ್ಯರು ಪರಿಪರಿಯಾಗಿ ಬೇಡುಕೊಂಡ್ರು ಸಹ ಮೃತದೇಹವನ್ನು ಸುಟ್ಟು ಹಾಕಿದ್ದಾರೆ.
ಎಎಸ್ಪಿ ರವಿಕುಮಾರ ರಾಜಶೇಖರನ ಕುಟುಂಬದ ಸದಸ್ಯರ ಬೆದರಿಸಿ ಮಾನವ ಸರ್ಪಗಾವಲಿನಲ್ಲಿ ಮೃತದೇಹವನ್ನು ಸುಟ್ಟು ಹಾಕಿಸಿದ್ದಾರೆ. ಇದು ಬೇಕಂತಲೇ ಮಾಡಿದ ಮರ್ಡರ್. ಅವರೇ ಕೊಂದು ನಮ್ಮ ಮೇಲೆ ಹಾಕಲು ಮುಂದಾಗಿದ್ದಾರೆ. ನಮ್ಮ ರಾಜಕೀಯ ಭವಿಷ್ಯ ನಾಶ ಮಾಡಲು ಭರತ್ ರೆಡ್ಡಿ ಪ್ರಯತ್ನ ಮಾಡ್ತಿದ್ದಾರೆ. ರಾಜಕೀಯ ಶಾಶ್ವತ ಅಲ್ಲ. ನಾನು ಸೋಲಬೇಕು, ನೀನು ಸೋಲಬೇಕು. ಇದು ನಾಟಕ ರಂಗ. ಜೀವ ತೆಗೆಯೋ ಅಧಿಕಾರ ದೇವರಿಗೆ ಮಾತ್ರ ಇದೆ. ಡಿಎಸ್ಪಿ ನಂದಾರೆಡ್ಡಿ ಮತ್ತು ಎಎಸ್ಪಿ ರವಿ ಕುಮಾರ ಅವರ ಅಮಾನತು
ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ನಜ್ಜೂರು ಅವರ ಅಮಾನತು ಮಾಡೋದಲ್ಲ, ರವಿಕುಮಾರ ಅವರನ್ನು ಅಮಾನತು ಮಾಡಬೇಕು. ಇದೆಲ್ಲ ಪೂರ್ವ ನಿಯೋಜಿತ ಹಲ್ಲೆಯಾಗಿದೆ. ಯಾವ್ಯಾವ ಕೇಸ್ ಹಾಕಬೇಕು ಎಂದು ಭರತ್ ರೆಡ್ಡಿ ಹತ್ರ ಐಜಿ ಚರ್ಚೆ ಮಾಡ್ತಾರೆ. ಮದ್ಯೆ ಮಧ್ಯೆ ಜನಾರ್ದನ ರೆಡ್ಡಿ ಪೂರಕವಾಗಿಯೂ ಮಾತನಾಡ್ತಾರೆ. ನಮ್ಮ ತಪ್ಪಿದ್ರೇ ನಮ್ಮನ್ನು ಬಿಡ್ತಿದ್ರಾ? ಇವತ್ತಿಲ್ಲ, ನಾಳೆ ರವಿಕುಮಾರ್ ಅವರನ್ನು ಬಿಡೋ ಪ್ರಶ್ನೆ ಇಲ್ಲ ಪ್ರಕರಣ ಸಿಬಿಐಗೆ ಹೋದಾಗ ಎಲ್ಲರೂ ಹೊರಗೆ ಬರೋದು ಖಚಿತ ಎಂದರು.
ಬಳ್ಳಾರಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ಶ್ರೀರಾಮುಲು ಮತ್ತು ಶಾಸಕ ಜನಾರ್ದನ ರೆಡ್ಡಿ ಜಂಟಿ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೆಲವು ಆರೋಪ ಮಾಡಿದ್ದಾರೆ.
ಇನ್ನಷ್ಟು ಓದಿರಿ :
KSRTC ಟಿಕೆಟ್ ದರಗಳಲ್ಲಿ ಇಳಿಕೆ : ಪ್ರಯಾಣಿಕರಿಂದ ಭರ್ಜರಿ ಸ್ವಾಗತ