<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ದೇಶದಲ್ಲೇ ಮೊದಲು: ಬೆಂಗಳೂರು ಪೊಲೀಸ್ '112' ಸೇವೆ ಬಹು ಭಾಷೆಯಲ್ಲಿ ಆರಂಭ

ದೇಶದಲ್ಲೇ ಮೊದಲು: ಬೆಂಗಳೂರು ಪೊಲೀಸ್ '112' ಸೇವೆ ಬಹು ಭಾಷೆಯಲ್ಲಿ ಆರಂಭ
Summary: The 'Our 112' service introduced by Bengaluru Police is now available with multilingual facilities, a first in the country. It will help citizens easily access emergency services in their own language. This new initiative aims to further improve public safety and connectivity and is a significant milestone in the field of digital police services.

belagavi news:

ಬೆಂಗಳೂರು: ಕಾನೂನು ಸು ವ್ಯವಸ್ಥೆ ಕಾಪಾಡಲು ಸದಾ ಶ್ರಮಿಸುತ್ತಿರುವ ಬೆಂಗಳೂರಿನಗರ್ ಪೊಲೀಸ್ ಇಲಾಖೆ ತಂತ್ರಜ್ಞಾನದ ಬಳಕೆಯಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ದೇಶದ ವಿವಿಧ ಭಾಗಗಳಿಂದ ಬಂದು ನೆಲೆಸಿರುವ ಜನರಿಂದ ಕೂಡಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇನ್ನು ಮುಂದೆ ಭಾಷೆಯ ಅಡೆತಡೆ ಇಲ್ಲದೆ ತುರ್ತು ಸೇವೆಗಳು ಲಭ್ಯವಾಗಲಿವೆ.

ಬೆಂಗಳೂರು ನಗರ ಪೊಲೀಸ್ ಇಲಾಖೆಯು ತನ್ನ ತುರ್ತು ಸಹಾಯವಾಣಿ 'ನಮ್ಮ 112' ಸೇವೆಗೆ ಬಹುಭಾಷಾ ಧ್ವನಿ ಕೃತಕ ಬುದ್ಧಿಮತ್ತೆ (AI ) ತಂತ್ರಜ್ಞಾನವನ್ನು ಅಳವಡಿಸಿದ್ದು, ಭಾರತದಲ್ಲಿ ಮೊದಲ ಬಾರಿಗೆ ಇಂತಹ ನವೀನ ಪ್ರಯತ್ನಕ್ಕೆ ಚಾಲನೆ ನೀಡಿದೆ. ಗೃಹ ಸಚಿವ ಡಾ.ಜಿ ಪರಮೇಶ್ವರ ಅವರು ಬುಧವಾರ ಈ ಆಧುನಿಕ ವ್ಯವಸ್ಥೆಯನ್ನು ಉದ್ಘಾಟಿಸಿದರು.

'ನಮ್ಮ 112' ಸೇವೆಗೆ AI ಆಧಾರಿತ ಧ್ವನಿ ತಂತ್ರಜ್ಞಾನವನ್ನು ಸೇರಿಸುವ ಮೂಲಕ ಕರೆಗಳನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗಲಿದೆ. ಇದರಿಂದ ಪ್ರತಿಕ್ರಿಯೆ ಸಮಯ ಕಡಿಮೆಯಾಗಿದ್ದು ಸಾರ್ವಜನಿಕರ ಸುರಕ್ಷತೆ ಇನ್ನಷ್ಟು ಬಲಪಡಲಿದೆ.

Sponsored

'ನಾನಾ ರಾಜ್ಯಗಳ ವಿದ್ಯಾರ್ಥಿಗಳು ಉದ್ಯೋಗಿಗಳ ಪ್ರವಾಸಿಗರನ್ನು ಒಳಗೊಂಡ ಜಾಗತಿಕ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ತುರ್ತು ಸಂದರ್ಭಗಳಲ್ಲಿ ಸಹಾಯ ಪಡೆಯಲು ಭಾಷಾ ವ್ಯವಸ್ಥೆಗಳು ಅಡ್ಡಿ ಯಾಗಬಾರದು ಎಂಬ ಉದ್ದೇಶದಿಂದ ಬೆಂಗಳೂರು ನಗರ ಪೊಲೀಸ್ ಇಲಾಖೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. 'ವಂಕಿ' (VANKI - Voice AI for Nationwide Key Interventions) ಎಂಬ ವಿನೂತನ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಇವೆವಸ್ತೆಯು ಸದ್ಯಕ್ಕೆ ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಮರಾಠಿ ಸೇರಿದಂತೆ 10ಕ್ಕೂ ಹೆಚ್ಚು ಭಾರತೀಯ ಭಾಷೆಗಳನ್ನು ಬೆಂಬಲಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ಬೇರೆ ರಾಜ್ಯಗಳಿಂದ ಬಂದಿರುವ ಜನರು ಹಾಗೂ ಪ್ರವಾಸಿಗರು ಸಹ ತುರ್ತು ಸಂದರ್ಭಗಳಲ್ಲಿ ಯಾವುದೇ ಭಾಷೆ ತೊಂದರೆ ಇಲ್ಲದೆ ಸಹಾಯ ಕೇಳಬಹುದು.

ಜೊತೆಗೆ, ಭಾರತೀಯ ಭಾಷೆಗಳಲ್ಲದೇ ಸ್ಪ್ಯಾನಿಷ್ , ಫ್ರೆಂಚ್ ಮತ್ತು ಅರೇಬಿಕ್ ನಂತಹ ವಿದೇಶಿ ಭಾಷೆಗಳನ್ನು ಇದು ಅರ್ಥ ಮಾಡಿಕೊಳ್ಳಬಲ್ಲದ್ದಾಗಿದೆ. ಕರೆ ಮಾಡುವರು ತಮ್ಮ ಆಯ್ಕೆಯ ಭಾಷೆಯಲ್ಲಿ ಮಾತನಾಡಿದಾಗ, AI ತಂತ್ರಜ್ಞಾನವು ಅದನ್ನು ತಕ್ಷಣವೇ ಗ್ರಹಿಸಿ ಅಗತ್ಯ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳಿಗೆ ರವಾನಿಸುತ್ತದೆ. ಇದರಿಂದ ಪ್ರತಿಕ್ರಿಯೆ ನೀಡುವ ಸಮಯ ಗಣನೀಯವಾಗಿ ಕಡಿಮೆಯಾಗಲಿದೆ.

ಸಾರ್ವಜನಿಕ ಸ್ನೇಹಿ ಪೊಲೀಸಿಂಗ್: ಇದನ್ನು ತಂತ್ರಜ್ಞಾನ ಸಂಸ್ಥೆಗಳಾದ ಮಂಡೆ ವೆಂಚರ್ಸ್ ಮತ್ತು ಆಯೋಸ (Monday Ventures &Aeos) ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಸಾರ್ವಜನಿಕ ಸೇವೆಯಲ್ಲಿ ತಂತ್ರಜ್ಞಾನವನ್ನು ಹೇಗೆ ಪರಿಣಾಮಕಾರಿಯಾಗಿ ಬಳಸಬಹುದು ಎಂಬುದಕ್ಕೆ ಬೆಂಗಳೂರು ಪೊಲೀಸರು ಮಾದರಿಯಾಗಿದ್ದಾರೆ.

"ಪ್ರತಿಯೊಬ್ಬ ನಾಗರಿಕರಿಗೂ ಅವರ ಭಾಷೆಯ ಹಂಗಿಲ್ಲದೆ, ಆತ್ಮವಿಶ್ವಾಸ ಮತ್ತು ಘನತೆಯಿಂದ ತುರ್ತು ನೆರವು ಸಿಗಬೇಕು ಎಂಬುದು ನಮ್ಮ ಪೊಲೀಸ್ ಇಲಾಖೆಯ ದೂರದೃಷ್ಟಿಯಾಗಿದೆ."ಎಂಬ ಬೆಂಗ್ಳೂರ್ ಪೊಲೀಸ್ ಇಲಾಖೆ ತಿಳಿಸಿದೆ. ಈ ಮುಂದಾಳುತ್ವವು ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದರೊಂದಿಗೆ ನಗರದಲ್ಲಿ ನಡೆಸಿರುವ ವಿವಿಧ ಭಾಷೆ ಜನರಿಗೆ ಭದ್ರತೆ ಮತ್ತು ವಿಶ್ವಾಸವನ್ನು ಒದಗಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

Sponsored

ರಾಜ್ಯವನ್ನು ಮಾದಕ ಪದಾರ್ಥ ಮುಕ್ತವಾಗಿಸಲು ಪೊಲೀಸ್ ಇಲಾಖೆ ಇನ್ನಷ್ಟು ಕಟ್ಟುನಿಟ್ಟಾಗಿ ಕಾರ್ಯನಿರ್ಹಿಸಬೇಕೆಂದು ಗೃಹ ಸಚಿವ ಜಿ ಪರಮೇಶ್ವರ್ ಸೂಚಿಸಿದ್ದಾರೆ. ಒಂದು ದಿನವಾದರೂ ರಾಜ್ಯದಲ್ಲಿ ಮಾದಕ ಪದಾರ್ಥಗಳು ಲಭ್ಯವಾಗದಂತೆ ಪೊಲೀಸರು ಕರ್ತವ್ಯ ನಿರ್ವಹಿಸಬೇಕು ಎಂದು ಈಗಾಗಲೇ ಪೊಲೀಸರಿಗೆ ತಿಳಿಸಿದ್ದೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು.

ನಗರ ಪೊಲೀಸರ ವಶಕ್ಕೆ ಸಿಕ್ಕಿರುವ ಮಾದಕ ಪದಾರ್ಥಗಳ ಕುರಿತು ಮಾತನಾಡಿದ ಗೃಹ ಸಚಿವರು, ಡ್ರಗ್ಸ್ ಸಾಗಾಟ, ಉತ್ಪಾದನೆ ಮತ್ತು ಬಳಕೆಯ ವಿರುದ್ಧ ಸಮಗ್ರ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು. ಈ ದಿಕ್ಕಿನಲ್ಲಿ ಪೊಲೀಸರು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು ಕಠಿಣ ಕ್ರಮಗಳ ಮೂಲಕ ಜಾಲವನ್ನು ಬಲಹೀನಗೊಳಿಸುವ ಕೆಲಸ ನಡೆಯುತ್ತಿದೆ ಎಂದು ವಿವರಿಸಿದ್ದರು. ಈ ನಿಟ್ಟಿನಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಮ್ಮ ಸರ್ಕಾರ ಬಂದ ನಂತರ ಡ್ರಗ್ಸ್ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದಲ್ಲಿ ಡ್ರಗ್ಸ್ ನಿರ್ಮೂಲನೆ ಪೊಲೀಸರು ಪಣತೊಟ್ಟಿದು ಆ ನಿಟ್ಟಿನಲ್ಲಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.

ಐಪಿಎಲ್ ಬಂದೋಬಸ್ತ್ ಬಗ್ಗೆ ಶ್ಲಾಘನೆ : ನಗರದಲ್ಲಿ ಇದುವರೆಗೂ 5 ಐಪಿಎಲ್ ಪಂದ್ಯಗಳು ನಡೆಯುತ್ತಿದ್ದು ಪೊಲೀಸರು ಉತ್ತಮವಾಗಿ ಬಂದೋಬಸ್ತ್ ನಿರ್ವಹಿಸುತ್ತಿದ್ದಾರೆ. ಮುಂಬೈ, ಹೈದರಾಬಾದ್, ದೆಹಲಿ, ಪೊಲೀಸರು ಸಹ ಇಲ್ಲಿಗೆ ಬಂದು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಬಂದೋಬಸ್ತ್ ನಿರ್ವಹಣೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಇದೇ ವೇಳೆ ಗೃಹ ಸಚಿವರು ಜಿ. ಪರಮೇಶ್ವರ್ ಶ್ಲಾಘಿಸಿದರು.

Also Read:

Sponsored

ಬೆಂಗಳೂರಿನ ಹಲವೆಡೆ ಮಳೆ ಆರ್ಭಟ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online