BELAGAVI NEWS:
ಬೆಂಗಳೂರುದಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ ' ಮುಖ್ಯಮಂತ್ರಿ 1 ಲಕ್ಷ ಮನೆ ಯೋಜನೆ' ಅಡಿಯಲ್ಲಿ ಮನೆ ಪಡೆದಿದ್ದರೂ ದೀರ್ಘಕಾಲದಿಂದ ಬಾಕಿ ಹಣ ಪಾವತಿಸದ ಸುಮಾರು 5,000 ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಗಂಭೀರ ಎಚ್ಚರಿಕೆ ನೀಡಿದೆ.
ನೋಟಿಸ್ ನೀಡಿದರು ಸ್ಪಂದಿಸದ ಫಲಾನುಭವಿಗಳ ಮನೆ ಹಂಚಿಕೆಯನ್ನು ರದ್ದುಗೊಳಿಸುವಂತೆ ಸರ್ಕಾರ ಆದೇಶಿಸಿದ್ದು ಆ ಮನೆಗಳನ್ನು ಇತರೆ ಅರ್ಹ ಬಡವರಿಗೆ ಮರುಹಂಚಿಕೆ ಮಾಡುವ ಕ್ರಮ ಕೈಗೊಳ್ಳಲಾಗಿದೆ. ಬಾಕಿ ಹಣ ವಸೂಲಾಗದ ಹಿನ್ನೆಲೆಯಲ್ಲಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಬೆಂಗಳೂರು: ಏಪ್ರಿಲ್ 29, ರಾಜೀವ್ ಗಾಂಧಿ ವಸತಿ ನಿಗಮದ ಅಡಿಯಲ್ಲಿ ಮನೆ ಪಡೆದುಕೊಂಡು ದೀರ್ಘಕಾಲದಿಂದ ಬಾಕಿ ಹಣ ಪಾವತಿಸದ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ನೀಡಲಾಗಿದೆ ಮನೆಗಳಿಗೆ ಸಂಬಂಧಿಸಿ, ನೋಟಿಸ್ ನೀಡಿದರು ಸ್ಪಂದಿಸದವರ ಹಂಚಿಕೆಯನ್ನು ರದ್ದು ಗಳಿಸುವಂತೆ ವಸತಿ ಇಲಾಖೆ ಆದೇಶಿಸಿದೆ. ಆ ಮನೆಗಳನ್ನು ಈಗ ಅರ ಫಲಾನುಭವಿಗಳಿಗೆ ಮರು ಹಂಚಿಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಬಾಕಿ ಹಣ ವಸೂಲಾಗದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಯೋಜನೆಯ ನೈಜ್ಯ ಉದ್ದೇಶವಾದ ಬಡವರಿಗೆ ಮನೆ ಒದಗಿಸುವ ಕಾರ್ಯವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ.
'ಮುಖ್ಯಮಂತ್ರಿ 1 ಲಕ್ಷ ಮನೆ ಯೋಜನೆ' ಅಡಿಯಲ್ಲಿ ಬೆಂಗಳೂರು ನಗರ ಜಿಲ್ಲೆಯ 20 ವಿವಿಧ ಸ್ಥಳಗಳಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಿಸಿ ಬಡ ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲಾಗಿತ್ತು. ಈ ಯೋಜನೆಯಲ್ಲಿ ಫಲಾನುಭವಿಗಳು ಆರಂಭಿಕ ಠೇವಣಿಯಾಗಿ ₹1 ಲಕ್ಷ ಪಾವತಿಸಿ ತಮ್ಮ ಮನೆಗಳನ್ನು ಆಯ್ಕೆ ಮಾಡಿಕೊಂಡಿದ್ದರು. ನಂತರ ರಾಜುಗಾಂಧಿ ವಸತಿ ನಿಗಮ ಅಡಿ ಪ್ರತಿ ಮನೆಯ ಒಟ್ಟು ಬೆಲೆಯನ್ನು ₹ 12.5 ಲಕ್ಷ ಎಂದು ನಿಗದಿ ಪಡಿಸಿತ್ತು. ಈ ಯೋಜನೆಯ ಉದ್ದೇಶ ಬಡ ಹಾಗೂ ಅರ್ಹ ಕುಟುಂಬಗಳಿಗೆ ವಸಂತಿ ಸೌಲಭ್ಯ ಒದಗಿಸುವುದಾಗಿದ್ದು, ಹಂತ ಹಂತವಾಗಿ ಹಣ ಪಾವತಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಸುಮಾರು 5000 ಫಲಾನುಭವಿಗಳಿಂದ ಒಟ್ಟು ಸುಮಾರು ₹5 ಸಾವಿರ ಕೋಟಿ ಬಾಕಿ ಹಣ ವಸೂಲಿಯಾಗಬೇಕಿದೆ ಎಂದು ತಿಳಿದುಬಂದಿದೆ. Rajiv Gandhi Housing Corporation ಮೂರು ಹಂತಗಳಲ್ಲಿ ನೋಟಿಸ್ ಜಾರಿ ಮಾಡಿದರು ಹಲವರು ಇನ್ನೂ ಬಾಕಿ ಹಣ ಪಾವತಿಸಿಲ್ಲ. ಈ ನಡುವೆ ಕಾಸ್ಕಿ ಬ್ಯಾಂಕುಗಳಿಂದ ಸಾಲ ಸಿಗದಿರುವುದು ಅನೇಕ ಪಳಾನುಭವಿಗಳಿಗೆ ಪ್ರಮುಖ ಅಡಚಣೆಯಾಗಿದ್ದು ಹಣ ಪಾವತಿಸಲು ಸಾಧ್ಯವಾಗಿಲ್ಲ ಎನ್ನಲಾಗಿದೆ. ಸರ್ಕಾರದ ವತಿಯಿಂದ ಸಾಲ ಮೇಳಗಳನ್ನು ಆಯೋಜಿಸಿದರು ಕೂಡ ಈ ಸಮಸ್ಯೆಗೆ ಪೂರ್ಣ ಪರಿಹಾರ ದೊರಕಿಲ್ಲ ಎಂದು ವರದಿಯಾಗಿದೆ. ಇದರ ಪರಿಣಾಮವಾಗಿ ಯೋಜನೆಯ ಹಣಕಾಸು ವಸೂಲಿ ಪ್ರಕ್ರಿಯೆ ಗಂಭೀರ ಸ್ಥಿತಿಗೆ ತಲುಪಿದೆ.
ಬಾಕಿ ಹಣ ವಸೂಲಾಗದ ಹಿನ್ನೆಲೆಯಲ್ಲಿ ಮನೆ ಹಂಚಿಕೆ ರದ್ದುಗೊಳಿಸುವ ನಿಗಮದ ಪ್ರಸ್ತಾವನೆಗೆ ರಾಜ್ಯ ಸರ್ಕಾರ ಅಸ್ತು ಎಂದಿದೆ. ಈಗಿರುವ ಹಂಚಿಕೆ ರದ್ದುಪಡಿಸಿ ಮನೆಗೆ ಕಾಯುತ್ತಿರುವ ಇತರೆ ಅರ್ಹ ಬಡ ಫಲಾನುಭವಿಗಳಿಗೆ ಈ ಮನೆಗಳನ್ನು ನೀಡಲು ಸೂಚಿಸಲಾಗಿದೆ.
Also Read: