BELAGAVI NEWS:
ಕೇಂದ್ರ ಮೀಸಲು ಪೊಲೀಸ್ ಪಡೆ Central Reserve police force 2026 ನೆ ಸಾಲಿನ ಬಾರಿ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 9,175 ಕಾನ್ಸ್ಟೇಬಲ್ (ತಾಂತ್ರಿಕ, ಟ್ರೇಡ್ಸ್ ಮನ್, ಪಯೋನಿಯರ್) ಹುದ್ದೆಗಳು ಭರ್ತಿಯಾಗಲಿವೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 10ನೇ ತರಗತಿ ಅಥವಾ ITI ವಿದ್ಯಾರ್ಹತೆ ಅಗತ್ಯವಿದ್ದು, 18 ರಿಂದ 27 ವರ್ಷದೊಳಗಿನ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಆಯ್ಕೆ ಪ್ರಕ್ರಿಯೆ ದೈಹಿಕ ಪರೀಕ್ಷೆ, ಲಿಖಿತ ಪರೀಕ್ಷೆ ಹಾಗೂ ಕೌಶಲ್ಯ ಪರೀಕ್ಷೆಗಳ ಮೂಲಕ ನಡೆಯಲಿವೆ. ಆಸಕ್ತ ಅಭ್ಯರ್ಥಿಗಳು ಮೇ 19 ಯೊಳಗೆ ಅರ್ಜಿ ಸಲ್ಲಿಸಬೇಕು. ಉತ್ತಮ ವೇತನ ಮತ್ತು ಕೇಂದ್ರ ಸರ್ಕಾರದ ಸೌಲಭ್ಯಗಳೊಂದಿಗೆ ಈ ಉದ್ಯೋಗವು ಯುವಕರಿಗೆ ಉತ್ತಮ ಅವಕಾಶವಾಗಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆ (CRPF) 2026 ನೆ ಸಾಲಿನ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆ ಮೂಲಕ ಕಾನ್ಸ್ಟೇಬಲ್ ( ತಾಂತ್ರಿಕ, ಟ್ರೇಡ್ಸ್ ಮನ್ ಮತ್ತು ಪಯೋನಿಯರ್ ) ವಿಭಾಗಗಳಲ್ಲಿ ಒಟ್ಟು ಮಗುವಿನ 9,175 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಆಂಧ್ರಪ್ರದೇಶಕ್ಕೆ 504 ಮತ್ತು ತೆಲಂಗಾಣಕ್ಕೆ 353 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದ್ದು ದೇಶಾದ್ಯಂತ ಮಹಿಳಾ ಅಭ್ಯರ್ಥಿಗಳಿಗೆ 79 ಹುದ್ದೆಗಳು ಮೀಸಲಿವೆ. ಪಯೋನಿಯರ ವಿಭಾಗದ ಹುದ್ದೆಗಳಿಗೆ ಎಲ್ಲ ರಾಜ್ಯದ ಅಭ್ಯರ್ಥಿಗಳು ಸ್ಪರ್ಧಿಸಬಹುದಾಗಿದೆ.
ಅರ್ಹತೆ ಮತ್ತು ವಯೋಮಿತಿ: ಸೆಂಟ್ರಲ್ ರಿಸರ್ವ್ ಪೊಲೀಸ್ ಪಡೆ (CRPF) ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ಸಂಬಂಧಿತ ಟ್ರೆಂಡ್ ನಲ್ಲಿ ಐಟಿಐ ಪಾಸಾಗಿರಬೇಕು.
ಚಾಲಕ (Driver)ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 10 ನೇ ತರಗತಿ ಜೊತೆಗೆ ಬಾರಿ ವಾಹನ ಚಾಲನ ಪರವಾನಗಿ (HMV Licence) ಹೊಂದಿರಬೇಕು.
ಬಯೋ ಮಿತಿಯ ವಿಷಯದಲ್ಲಿ ಸಾಮಾನ್ಯ ಹುದ್ದೆಗಳಿಗೆ 18 ರಿಂದ 23 ವರ್ಷಗಳೊಳಗಿನವರು ಅರ್ಹರಾಗಿದ್ದು ಚಾಲಕ ಹುದ್ದೆಗಳಿಗೆ 21ರಿಂದ 27 ವರ್ಷಗಳೊಳಗಿನವರು ಅರ್ಜಿ ಸಲ್ಲಿಸಬಹುದು. ಸರ್ಕಾರದ ನಿಯಮಗಳ ಪ್ರಕಾರ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಲಿಕೆ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ: Central Reserve police force (CRPF) ನೇಮಕಾತಿಗೆ ಅಭ್ಯರ್ಥಿಗಳ ಆಯ್ಕೆ ಬಹು ಹಂತಗಳಲ್ಲಿ ನಡೆಯಲಿದೆ.
ಮೊದಲ ಹಂತವಾಗಿ ದೈಹಿಕ ದಕ್ಷತೆ ಪರೀಕ್ಷೆ (PET) ಮತ್ತು ದೈಹಿಕ ಗುಣಮಟ್ಟ ಪರೀಕ್ಷೆ (PST) ನಡೆಯುತ್ತದೆ. ಈ ಹಂತಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮುಂದಿನ ಹಂತವಾಗಿ 100 ಅಂಕಗಳ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (CBT) ಇರಲಿದೆ. ಈ ಪರೀಕ್ಷೆಯಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳ ಕಡಿತ (Negative Marking) ವಿಧಿಸಲಾಗುತ್ತದೆ.
ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣ ರಾಧವರಿಗೆ ಹುದ್ದೆಯ ಅವಶ್ಯಕತೆ ಅನುಸಾರ 50 ಅಂಕಗಳ ಕೌಶಲ್ಯ ಪರೀಕ್ಷೆ (Trade Test) ನಡೆಯುತ್ತದೆ. ನಂತರ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳ ಮೂಲಕ ಅಂತಿಮವಾಗಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ದೈಹಿಕ ಮಾನದಂಡಗಳು:
ದೈಹಿಕ ಗುಣಮಟ್ಟ ಪರೀಕ್ಷೆಯಲ್ಲಿ ಪುರುಷ ಅಭ್ಯರ್ಥಿಗಳು ಕನಿಷ್ಠ 170 ಸೆಂ. ಮೀ ಎತ್ತರ ಮತ್ತು ಮಹಿಳಾ ಅಭ್ಯರ್ಥಿಗಳು ಕನಿಷ್ಠ 157 ಸೆಂ.ಮೀ ಎತ್ತರ ಹೊಂದಿರಬೇಕು (ಎಸ್ ಟಿ ಅಭ್ಯರ್ಥಿಗಳಿಗೆ ಸಡಿಲಿಕೆ ಇದೆ). ದೈಹಿಕ ದಕ್ಷತೆ ಪರೀಕ್ಷೆಯಲ್ಲಿ ಪುರುಷರು 5 ಕಿಲೋಮೀಟರ್ ಓಟವನ್ನು 24 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕಾಗುತ್ತದೆ. ಮಹಿಳೆಯರಿಗೆ 1.6 ಕಿಲೋಮೀಟರ್ ಓಟದ ಗುರಿ ಇರುತ್ತದೆ.
ವೇತನ ಮತ್ತು ಅರ್ಜಿ ಸಲ್ಲಿಕೆ: Central Reserve Police Force (CRPF) ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಹಂತ - 3 ರ ಅಡಿಯಲ್ಲಿ ಆಕರ್ಷಕ ವೇತನ ನೀಡಲಾಗುತ್ತದೆ. ಆರಂಭಿಕ ಮೂಲವೇತನ ₹21,700 ಆಗಿದ್ದು, ಡಿ ಎ, ಎಚ್ ಆರ್ ಎ ಸೇರಿದಂತೆ ವಿವಿಧ ಭತ್ಯೆ ಗಳೊಂದಿಗೆ ಒಟ್ಟು ಮಾಸಿಕ ವೇತವು ಸುಮಾರು ₹40,000ರವರೆಗೆ ಇರಬಹುದು.
ಆಸಕ್ತ ಅಭ್ಯರ್ಥಿಗಳು ಮೇ 19,2026 ಯೊಳಗೆ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು. ಸಾಮಾನ್ಯ ಮತ್ತು ಓಬಿಸಿ ವರ್ಗದ ಅಭ್ಯರ್ಥಿಗಳಿಗೆ ₹100 ಅರ್ಜಿ ಶುಲ್ಕವಿದ್ದು, ಎಸ್ ಸಿ /ಎಸ್ ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಪ್ರಮುಖ ಮಾಹಿತಿ:
ಒಟ್ಟು ಹುದ್ದೆಗಳು: 1,175
ಅರ್ಜಿ ಸಲ್ಲಿಸಲು ಕೊನೆಯ ದಿನ :ಮೇ 19
ವಿದ್ಯಾರ್ಹತೆ: 10 ನೇ ತರಗತಿ / ITI
Also Read:
ಉತ್ತರ ಪ್ರದೇಶಕ್ಕೆ ಗಂಗಾ ಎಕ್ಸ್ ಪ್ರೆಸ್ ವೇ ಬಲ - ಪ್ರಧಾನಿ ಮೋದಿ ಉದ್ಘಾಟನೆ