<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

ಮುಂಬೈ vs ಪಂಜಾಬ್ ಪಂದ್ಯಕ್ಕೆ ಮುನ್ನ ಬಿಗ್ ಟ್ವಿಸ್ಟ್

ಮುಂಬೈ vs ಪಂಜಾಬ್ ಪಂದ್ಯಕ್ಕೆ ಮುನ್ನ ಬಿಗ್ ಟ್ವಿಸ್ಟ್
Summary: Mumbai Indians and Punjab Kings are facing off in the IPL today, here is the important information related to the match.

Belagavi news:

ಐಪಿಎಲ್ 2026ರ 58ನೇ ಪಂದ್ಯ ಇಂದು ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ. ಈ ಹೈ ವೋಲ್ಟೇಜ್ ಪಂದ್ಯವು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ, ಧರ್ಮಶಾಲಾದಲ್ಲಿ ನಡೆಯಲಿದೆ. ಎರಡು ತಂಡಗಳು ತಮ್ಮ ಹಿಂದಿನ ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಈ ಪಂದ್ಯಕ್ಕೆ ಹೆಚ್ಚಿನ ಮಹತ್ವ ಬಂದಿದೆ.

ಪಂಜಾಬ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮೂರು ವಿಕೆಟ್ಗಳಿಂದ ಸೋತಿದ್ದರೆ, ಮುಂಬೈ ಇಂಡಿಯನ್ಸ್ ತಂಡವು ರ್‌ಸಿಬಿ ವಿರುದ್ಧ ಎರಡು ವಿಕೆಟ್ ಗಳಿಂದ ಸೋಲು ಕಂಡಿದೆ. ಪ್ಲೇ ಆಫ್ ದೃಷ್ಟಿಯಿಂದ ಪಂಜಾಬ್ ಕಿಂಗ್ಸ್ ಗೆ ಇಂದಿನ ಪಂದ್ಯ ಅತ್ಯಂತ ನಿರ್ಣಾಯಕವಾಗಿದ್ದು, ಜಯದ ಗುರಿಯೊಂದಿಗೆ ಕಣಕ್ಕಿಳಿಯಲಿದೆ. ಇತ್ತ ಮುಂಬೈ ಇಂಡಿಯನ್ಸ್ ಈಗಾಗಲೇ ಪ್ಲೇ ಆಫ್ ನಿಂದ ಹೊರ ಬಿದ್ದಿದೆ.

ಟೂರ್ನಿಯಾ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಪಂಜಾಬ್ ಕಿಂಗ್ಸ್ ಇದೀಗ ಸತತ ನಾಲ್ಕು ಸೋಲುಗಳಿಂದ ಹಿನ್ನಡೆ ಅನುಭವಿಸಿದೆ. ವಿಶೇಷವಾಗಿ ಅರ್ಶ್ದೀಪ್ ಸಿಂಗ್ ನೇತೃತ್ವದ ವೇಗದ ದಾಳಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ ಎಂದು ವಿಶ್ಲೇಷಿಸಲಾಗಿದೆ. ಲಾಕಿ ಫರ್ಗುಸನ್ ಮತ್ತು ಬೆನ್ ದ್ವಾರ್ಶಿಸ್ ಸೇರಿಕೊಂಡರು ತಂಡ ಇನ್ನೂ ಲಯ ಕಂಡುಕೊಳ್ಳುವಲ್ಲಿ ವಿಫಲವಾಗಿದೆ. ಈ ಪಂದ್ಯದಲ್ಲಿ ಯುಜ್ವೇಂದ್ರ ಚಾಹಲ್ ಆಡುವ 11ರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕುರಿತು ಕುತೂಹಲ ಇದೆ.

Sponsored

ಮುಂಬೈ ಇಂಡಿಯನ್ಸ್ ಪರ ರಯಾನ್ ರಿಕಲ್ಟನ್ ಉತ್ತಮ ಫಾರ್ಮ್ ನಲ್ಲಿ ಇದ್ದು, 9 ಪಂದ್ಯಗಳಲ್ಲಿ 382 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಎರಡು ಅರ್ಥಶತಕಗಳು ಸೇರಿವೆ. ಅವರ ಸ್ಟ್ರೈಕ್ ರೇಟ್ 188.17 ಆಗಿದೆ. ಬೌಲಿಂಗ್ ವಿಭಾಗದಲ್ಲಿ ಅಲ್ಲಾ ಗಜನ್ಪರ 13 ವಿಕೆಟ್ಗಳೊಂದಿಗೆ ಗಮನ ಸೆಳೆದಿದ್ದಾರೆ. ಧರ್ಮಶಾಲಾ ಪಿಚ್ ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಟ್ರೆಂಟ್ ಬೋಲ್ಟ್ ಅವರ ಪ್ರದರ್ಶನ ನಿರ್ಣಾಯಕವಾಗಲಿದೆ.

ಇದೇ ವೇಳೆ, ಹಾರ್ದಿಕ್ ಪಾಂಡ್ಯ ಸಣ್ಣ ಗಾಯದ ಕಾರಣ ಕಳೆದ ಎರಡು ಪಂದ್ಯಗಳಿಂದ ಹೊರಗುಳಿದಿದ್ದರು. ಅವರ ಬದಲಿಗೆ ಸೂರ್ಯ ಕುಮಾರ್ ಯಾದವ್ ನಾಯಕತ್ವ ವಹಿಸಿಕೊಂಡಿದ್ದರು. ಇಂದಿನ ಪಂದ್ಯಕ್ಕೆ ಪಾಂಡ್ಯ ಕಣಕ್ಕಿಳಿಯುವ ಸಾಧ್ಯತೆಯಿದ್ದು, ತಂಡದ ಸಂಯೋಜನೆ ಕುರಿತು ಕುತೂಹಲ ಹೆಚ್ಚಾಗಿದೆ. ಒಟ್ಟಿನಲ್ಲಿ ಈ ಪಂದ್ಯ ಎರಡು ತಂಡಗಳಿಗೆ ಮಹತ್ವದ ಪರೀಕ್ಷೆಯಾಗಲಿದೆ.

ಐಪಿಎಲ್ 202658ನೇ ಪಂದ್ಯದಲ್ಲಿ ಇಂದು ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಧರ್ಮ ಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿದೆ. ಈ ಪಂದ್ಯಕ್ಕೂ ಮುನ್ನ ಎರಡು ತಂಡಗಳ ಮುಖಾಮುಖಿ ದಾಖಲೆ ಹಾಗೂ ಪಿಚ್- ಹವಾಮಾನ ಮಾಹಿತಿ ಗಮನ ಸೆಳೆಯುತ್ತಿದೆ.

ಇತಿಹಾಸದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದಿದ್ದು, ಪಂಜಾಬ್ 17 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಮುಂಬೈ ಇಂಡಿಯನ್ಸ್ 18 ಪಂದ್ಯಗಳಲ್ಲಿ ಜಯ ಸಾಧಿಸಿ ಸ್ವಲ್ಪ ಮುನ್ನಡೆಯಲ್ಲಿದೆ. ಇನ್ನೂ ಐಪಿಎಲ್ 2026ರ ಮೊದಲ ಮುಖಾಮುಖಿಯಲ್ಲಿ ಪಂಜಾಬ್ ಕಿಂಗ್ಸ್ ಏಳು ವಿಕೆಟ್ ಗಳಿಂದ ಜಯ ಗಳಿಸಿತು.

Sponsored

ಧರ್ಮಶಾಲಾದ ಎಚ್ ಪಿಸಿಎ ಕ್ರೀಡಾಂಗಣವು ದೇಶದ ಅತ್ಯಂತ ಸುಂದರ ಮೈದಾನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇಲ್ಲಿ ಸಾಮಾನ್ಯವಾಗಿ ಬ್ಯಾಟ್ಸ್ಮನ್ ಸ್ನೇಹಿ ಕಾಣಿಸಿಕೊಳ್ಳುತ್ತದೆ. ಸ್ಥಿರವಾದ ಬೌನ್ಸ್ ಇರುವ ಕಾರಣ ಬ್ಯಾಟ್ಸ್ಮನ್ಗಳಿಗೆ ದೊಡ್ಡ ಮೊತ್ತ ಗಳಿಸಲು ಅನುಕೂಲವಾಗುತ್ತದೆ.

ಹವಾಮಾನ ವರದಿಯ ಪ್ರಕಾರ, ಧರ್ಮಶಾಲಾದಲ್ಲಿ ಇಂದು ತಾಪಮಾನ 22 ರಿಂದ 24 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆ. ಆದರೆ ಶೀತಗಾಳಿಯ ಪರಿಣಾಮ ಆಟಗಾರರಿಗೆ ಸವಾಲು ಎದುರಾಗಬಹುದು. ಆಕ್ಯುವೇದರ್ ವರದಿಯಂತೆ ಪಂದ್ಯ ದಿನ ಮಳೆಯ ಸಾಧ್ಯತೆ ಶೇ. 40 ರಿಂದ 50ರಷ್ಟು ಇದೆ. ಟಾಸ್ ಸಮಯದಲ್ಲಿ ಮಳೆಯ ಸಾಧ್ಯತೆ ಶೇ. 47 ರಷ್ಟು ಇರುವುದಾಗಿ ಅಂದಾಜಿಸಲಾಗಿದೆ.

ಒಟ್ಟಿನಲ್ಲಿ ಮುಖಾಮುಖಿ ದಾಖಲೆ, ಪರಿಸ್ಥಿತಿ ಮತ್ತು ಹವಾಮಾನ ಅಂಶಗಳು ಇಂದಿನ ಪಂದ್ಯವನ್ನು ಇನ್ನಷ್ಟು ಕುತೂಹಲಕಾರಿಯಾಗಿಸಿವೆ.

ಇವತ್ತಿನ ಈ ಪಂದ್ಯಕ್ಕೂ ಮುನ್ನ ಎರಡು ತಂಡಗಳ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಪ್ರಕಟವಾಗಿದೆ. ಪಂಜಾಬ್ ಕಿಂಗ್ಸ್ ತಂಡದಲ್ಲಿ ಪ್ರಿಯಾಂಶ್ ಆರ್ಯ, ಪ್ರಭಾಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಕೂಪರ್ ಕೊನೋಲಿ, ಶ್ರೇಯಸ್ ಅಯ್ಯರ್ (ನಾಯಕ), ಮಾರ್ಕಸ್ ಸ್ಟೋಯಿನಿಸ್, ಸೂರ್ಯಾಂಶ ಶೆಡ್ಜ್ , ಮಾರ್ಕೋ ಯಾನ್ಸನ್, ಲಾಕಿ ಫರ್ಗುಸನ್,ಅರ್ಶ್ದೀಪ್ ಸಿಂಗ್, ಯಜ್ವೇಂದ್ರ ಚಾಹಲ್ ಮತ್ತು ಯಶ್ ಠಾಕೂರ್ ಸ್ಥಾನ ಪಡೆಯುವ ಸಾಧ್ಯತೆ ಇದೆ.

Sponsored

ಇಂಪ್ಯಾಕ್ಟ್ ಪ್ಲೇಯರ್ ಆಗಿ ಶಶಾಂಕ್ ಸಿಂಗ್ ಆಯ್ಕೆಯಾಗುವ ನಿರೀಕ್ಷೆ ಇದೆ.

ಇತ್ತ ಮುಂಬೈ ಇಂಡಿಯನ್ಸ್ ತಂಡದಲ್ಲಿ ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್), ನಮನದೀರ್, ಸೂರ್ಯ ಕುಮಾರ್ ಯಾದವ್ (ನಾಯಕ), ತಿಲಕ್ ವರ್ಮ, ವಿಲ್ ಜಾಕ್ಸ್, ರಾಜ್ ಬಾವಾ, ಕಾರ್ಬಿನ್ ಬಾಷ್, ಶಾರ್ದುಲ್ ಠಾಕೂರ್, ದೀಪಕ್ ಚಾಹರ್, ಅಲ್ಲಾ ಗಜನ್ಪರ ಮತ್ತು ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆಯುವ ಸಾಧ್ಯತೆ ಇದೆ.

ಮುಂಬೈ ತಂಡದ ಇಂಪ್ಯಾಕ್ಟ್ ಪ್ಲೇಯರ್ ಆಗಿ ರೋಹಿತ್ ಶರ್ಮಾ ಕಣಕ್ಕಿಳಿಯುವ ನಿರೀಕ್ಷೆ ಇದೆ.

ಈ ಸಂಭಾವ್ಯ ತಂಡಗಳೊಂದಿಗೆ ಇಂದು ನಡೆಯುವ ಪಂದ್ಯಕ್ಕೆ ಹೆಚ್ಚಿನ ಕುತೂಹಲ ಹೆಚ್ಚಿದ್ದು, ಪ್ಲೇ ಆಫ್ ಹೋರಾಟ ಮತ್ತು ತಂಡಗಳ ತಂತ್ರಜ್ಞಾನ ಪಂದ್ಯ ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.

Sponsored

Also Read:

ಸುಪ್ರೀಂ ಕೋರ್ಟ್ ನಲ್ಲಿ ದರ್ಶನ್ ಭವಿಷ್ಯ ನಿರ್ಧಾರ?

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online