Belagavi news:
ಬಿಹಾರ್ ರಾಜಕೀಯದಲ್ಲಿ ಮಹತ್ವದ ತಿರುಗು ಕಂಡುಬಂದಿದ್ದು, ಸಾಮ್ರಾಟ್ ಚೌದ್ರಿ ನೇತೃತ್ವದ ಬಿಜೆಪಿ-ಎನ್.ಡಿ.ಎ ಸರ್ಕಾರ ತನ್ನ ಸಚಿವ ಸಂಪುಟವನ್ನು ಬಾರಿ ಪ್ರಮಾಣದಲ್ಲಿ ವಿಸ್ತರಿಸಿದೆ. ಪಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಒಟ್ಟು 31 ನಾಯಕರು ಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಇದರಲ್ಲಿ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಹೆಸರು ವಿಶೇಷ ಗಮನ ಸೆಳೆದಿದೆ.
ನಿಶಾಂತ್ ಕುಮಾರ್ ಮೊದಲ ಬಾರಿಗೆ ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟಿದ್ದು, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಬಿಹಾರ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಜೆಡಿಯು ಮತ್ತು ಬಿಜೆಪಿ ಮೈತ್ರಿಯೊಳಗೆ ಈ ನಡೆ ಭವಿಷ್ಯದ ರಾಜಕೀಯ ಸಮೀಕರಣಗಳ ದೃಷ್ಟಿಯಿಂದ ಮಹತ್ವದ್ದೆಂದು ವಿಶೇಷಕರು ಅಭಿಪ್ರಾಯಪಟ್ಟಿದ್ದಾರೆ.
ಸಾಮ್ರಾಟ್ ಚೌದರಿ ನೇತೃತ್ವದ ಎನ್.ಡಿ.ಎ ಸರ್ಕಾರದ ಈ ಸಂಪುಟ ವಿಸ್ತರಣೆ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರೂಪಿಸುವ ರಾಜಕೀಯ ತಂತ್ರ ಎಂದು ಹೇಳಲಾಗುತ್ತಿದೆ. ಯುವ ನಾಯಕರು, ಪ್ರಾದೇಶಿಕ ಸಮೀಕರಣಗಳು ಮತ್ತು ಜಾತಿ ಆಧಾರಿತ ಪ್ರತಿನಿಧಿತ್ವಕ್ಕೆ ಹೆಚ್ಚಿನ ಒತ್ತು ನೀಡಿರುವುದಾಗಿ ಗಮನಾರ್ಹವಾಗಿದೆ.
ಗಾಂಧಿ ಮೈದಾನದಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ಬಿಜೆಪಿ, ಜಡಿಯು ಹಾಗೂ ಮೈತ್ರಿ ಪಕ್ಷಗಳ ಹಿರಿಯ ನಾಯಕರು ಭಾಗವಹಿಸಿದ್ದರು. ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮವು ರಾಜಕೀಯ ಶಕ್ತಿ ಪ್ರದರ್ಶನದ ವೇದಿಕೆಯಂತೆಯೇ ಕಂಡು ಬಂತು. ನಿಶಾಂತ್ ಕುಮಾರ್ ಅವರ ರಾಜಕೀಯ ಪ್ರವೇಶವು ಜೆಡಿಎಸ್ ಒಳ ರಾಜಕೀಯದಲ್ಲೂ ಹೊಸ ಚರ್ಚೆಗೆ ಕಾರಣವಾಗಿದ್ದು, ನಿತೀಶ್ ಕುಮಾರ್ ಅವರ ರಾಜಕೀಯ ಪರಂಪರೆಯನ್ನು ಮುಂದುವರಿಸುವ ನಾಯಕನಾಗಿ ಅವರನ್ನು ನೋಡಲಾಗುತ್ತಿದೆ. ಇದೇ ವೇಳೆ, ಎನ್ ಡಿ ಮೈತ್ರಿ ಕೂಟವು ಬಿಹಾರದಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಲು ಈ ಸಂಪುಟ ವಿಸ್ತರಣೆಯನ್ನು ಪ್ರಮುಖ ಹೆಜ್ಜೆಯಾಗಿ ಪರಿಗಣಿಸಿದೆ.
ನಿಶಾಂತ್ ಕುಮಾರ್ ಸೇರಿ 31 ಮಂದಿಗೆ ಸಚಿವ ಸ್ಥಾನ :
ಬಿಹಾರ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಸಾಮ್ರಾಟ್ ಚೌದರಿ ನೇತೃತ್ವದ ಬಿಜೆಪಿ-ಎನ್ ಡಿ ಎ ಸರ್ಕಾರ ತನ್ನ ಸಚಿವ ಸಂಪುಟವನ್ನು ಭಾರಿ ಪ್ರಮಾಣದಲ್ಲಿ ವಿಸ್ತರಿಸಿದೆ. ಪಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ ಸೈಯದ್ ಅತಾ ಹಸ್ನೈನ್ ಅವರು ನಿಶಾಂತ್ ಕುಮಾರ್ ಸೇರಿದಂತೆ ಒಟ್ಟು 31 ನಾಯಕರಿಗೆ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.
ಐತಿಹಾಸಿಕ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಜೆಡಿಯು ಹಿರಿಯ ನಾಯಕ ನಿತೀಶ್ ಕುಮಾರ್ ಸಾಕ್ಷಿಯಾಗಿದ್ದು, ಎನ್ ಡಿ ಎ ಮೈತ್ರಿ ಕೂಟದ ಒಗ್ಗಟ್ಟಿನ ಪ್ರದರ್ಶನವಾಗಿ ಕಾರ್ಯಕ್ರಮ ಗಮನ ಸೆಳೆಯಿತು. ಬಿಜೆಪಿ, ಜೆಡಿಎಸ್, ಹ್ಯಾಮ್ ಹಾಗೂ ಆರ್ ಎಲ್ ಎಮ್ ಪಕ್ಷದ ಪ್ರಮುಖ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಮುಂಬರುವ ಚುನಾವಣೆಗೆ ಬಲಿಷ್ಠ ಸಂದೇಶ ರವಾನಿಸಿದ್ದರು.
ವಿಸ್ತರಣೆಯ ಅತ್ಯಂತ ಚರ್ಚಿತ ಅಂಶವೆಂದರೆ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಅವರ ರಾಜಕೀಯ ಪ್ರವೇಶ. ಮೊದಲ ಬಾರಿಗೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ನಿಶಾಂತ್ ಕುಮಾರ್, ಬಿಹಾರ್ ರಾಜಕೀಯದಲ್ಲಿ ಹೊಸ ಪೀಳಿಗೆಯ ನಾಯಕನಾಗಿ ಗಮನಿಸಲಿದ್ದಾರೆ. ಜೆಡಿಎಸ್ ಒಳ ರಾಜಕೀಯದಲ್ಲೂ ಈ ಬೆಳವಣಿಗೆ ಹೊಸ ಚರ್ಚೆಗೆ ಕಾರಣವಾಗಿದೆ.
ನೂತನ ಸಂಪುಟದಲ್ಲಿ ಅನುಭವ ಮತ್ತು ಯುವ ನಾಯಕತ್ವದ ಸಮತೋಲನ ಕಾಯ್ದುಕೊಳ್ಳಲು ಎನ್.ಡಿ.ಎ ಒತ್ತು ನೀಡಿದೆ. ಮಾಜಿ ಉಪ ಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ, ಹಿರಿಯ ನಾಯಕ ಶ್ರಾವಣ್ ಕುಮಾರ್ ಮತ್ತು ಅನುಭವಿಗಳಾದ ಅಶೋಕ್ ಚೌದರಿ ಮತ್ತೆ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುತ್ತಿದ್ದಾರೆ. ಸಾಮಾಜಿಕ ಮತ್ತು ಪ್ರಾದೇಶಿಕ ಸಮೀಕರಣಗಳನ್ನು ಗಮನದಲ್ಲಿಟ್ಟುಕೊಂಡು 5 ಮೈತ್ರಿ ಪಕ್ಷಗಳಿಗೆ ಸಮರ್ಪಕ ಪ್ರತಿನಿಧಿತ್ವ ನೀಡಲಾಗಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಸಂಪುಟ ವಿಸ್ತರಣೆ ಮುಂಬರುವ ಬಿಹಾರ್ ಚುನಾವಣೆಗೆ ಎನ್ ಡಿ ಎ ಮೈತ್ರಿಕೂಟದ ತಂತ್ರಗಾರಿಕೆಯನ್ನು ಸ್ಪಷ್ಟಪಡಿಸಿದೆ. ಯುವ ಮುಖಗಳಿಗೆ ಅವಕಾಶ ನೀಡುವುದರ ಜೊತೆಗೆ ಅನುಭವಗಳನ್ನು ಉಳಿಸಿಕೊಂಡು ಆಡಳಿತ ಮತ್ತು ಚುನಾವಣಾ ಲಾಭ ಎರಡನ್ನು ಸಾಧಿಸಲು ಮೈತ್ರಿ ಯತ್ನಿಸುತ್ತಿದೆ.
ಬಿಹಾರ್ ರಾಜಕೀಯ ಹೊಸ ಸಮೀಕರಣ:
ಬಿಹಾರ್ ರಾಜಕೀಯದಲ್ಲಿ ಭಾರಿ ಬದಲಾವಣೆಗಳ ತೆರಮಾಲೆ ಮುಂದುವರೆದಿದ್ದು, ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರ ತನ್ನ ರಾಜಕೀಯ ಹಿಡಿತವನ್ನು ಮತ್ತಷ್ಟು ಬಲಪಡಿಸುವ ಬಿಸಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಸ್ಥಾನದಿಂದ ನಿತೀಶ್ ಕುಮಾರ್ ಹೊರ ನಡೆದು ರಾಜ್ಯಸಭೆಗೆ ಆಯ್ಕೆಯಾದ ಬಳಿಕ ರಾಜ್ಯ ರಾಜಕೀಯದಲ್ಲಿ ದೊಡ್ಡತ್ತಿರುವ ಕಂಡುಬಂದಿದೆ. ಅದರ ಬೆನ್ನಲೆ ಬಿಜೆಪಿ ನಾಯಕ ಸಾಮ್ರಾಟ್ ಚೌದರಿ ಬಿಹಾರದ ಮೊದಲ ಬಿಜೆಪಿ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಈಗ ಸಚಿವ ಸಂಪುಟ ವಿಸ್ತರಣೆಯ ಮೂಲಕ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಜ್ಜಾಗಿದ್ದು, ನಿತೀಶ್ ಕುಮಾರ್ ಪುತ್ರ ನಿಶಾಂತ್ ಕುಮಾರ್ ಅವರ ರಾಜಕೀಯ ಪ್ರವೇಶವೇ ಪ್ರಮುಖ ಚರ್ಚೆಯ ವಿಷಯವಾಗಿದೆ. ಪಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ನಿಶಾಂತ್ ಕುಮಾರ್ ಸೇರಿದಂತೆ 31 ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಬಿಹಾರ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾದಂತಾಗಿದೆ.
ಈ ಸಂಪುಟ ವಿಸ್ತರಣೆಯಲ್ಲಿ ಎನ್ ಡಿ ಎ ಮೈತ್ರಿಕೂಟವು ಜಾತಿ, ಪ್ರಾದೇಶಿಕ ಮತ್ತು ರಾಜಕೀಯ ಸಮೀಕರಣಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಚಿರಾಗ ಪಾಸ್ವಾನ್ ನೇತೃತ್ವದ ಎಲ್ ಜೆಪಿ ಜಿತನ್ ರಾಮ್ ಮಾಂಜಿ ಅವರ ಹ್ಯಾಮ್ ಪಕ್ಷ ಸೇರಿದಂತೆ ಮೈತ್ರಿಯ ಎಲ್ಲಾ ಪ್ರಮುಖ ಮಿತ್ರ ಪಕ್ಷಗಳಿಗೆ ಸೂಕ್ತ ಪ್ರತಿನಿಧಿತ್ವ ನೀಡಲಾಗಿದೆ. ಇದರ ಮೂಲಕ ಮುಂಬರುವ ಚುನಾವಣಾ ಸವಾಲುಗಳನ್ನು ಎದುರಿಸಲು ಎಂ.ಡಿಎ ತನ್ನ ಸಂಘಟನಾ ಶಕ್ತಿಯನ್ನು ಗಟ್ಟಿಗೊಳಿಸುವ ಪ್ರಯತ್ನ ನಡೆಸಿದೆ.
ರಾಜಕೀಯ ವಿಶ್ಲೇಷಕರ ಪ್ರಕಾರ, ನಿಶಾಂತ್ ಕುಮಾರ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿರುವುದು ಜೆಡಿಎಸ್ ವಂಶದ ನಾಯಕತ್ವದ ಸಂದೇಶವಾಗಿಯೂ ಕಾಣಲಾಗುತ್ತಿದೆ. ಮತ್ತೊಂದೆಡೆ, ಬಿಜೆಪಿ ನೇತೃತ್ವದ ಸರ್ಕಾರವು ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವ ಮೂಲಕ ಬಿಹಾರದಲ್ಲಿ ತನ್ನ ರಾಜಕೀಯ ನೆಲೆಯನ್ನು ವಿಸ್ತರಿಸಲು ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ, ಸಾಮ್ರಾಟ್ ಚೌದ್ರಿ ಹಾಗೂ ಮೈತ್ರಿ ಕೂಟದ ಹಿರಿಯ ನಾಯಕರು ಭಾಗವಹಿಸಿದ್ದರು. ಈ ಸಮಾರಂಭವು ಕೇವಲ ಸಂಪುಟ ವಿಸ್ತರಣೆ ಅಷ್ಟೇ ಅಲ್ಲ, ಎನ್ ಡಿ ಶಕ್ತಿ ಪ್ರದರ್ಶನದ ವೇದಿಕೆಯಾಗಿಯೂ ಪರಿಣಮಿಸಿತು.
ಒಟ್ಟಾರಿಯಾಗಿ, ನಿತೀಶ್ ಕುಮಾರ್ ಪುತ್ರನ ರಾಜಕೀಯ ಪ್ರವೇಶ ಮತ್ತು ಬಿಜೆಪಿ ನೇತೃತ್ವದ ಸರ್ಕಾರದ ಈ ಬಾರಿ ಸಂಪುಟ ವಿಸ್ತರಣೆ ಬಿಹಾರದ ಮುಂದಿನ ರಾಜಕೀಯ ಭವಿಷ್ಯಕ್ಕೆ ಹೊಸ ದಿಕ್ಕು ನೀಡುವ ಬೆಳವಣಿಗೆಯಾಗಿ ಕಾಣಲಾಗುತ್ತಿದೆ.
Also Read:
Viral Wedding: ಸೋದರ ಸಂಬಂಧಿಯನ್ನೇ ವರಿಸಿದ ಯುವತಿ, ಜನರಲ್ಲಿ ಅಚ್ಚರಿ