<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಪಂಜಾಬ್ ನಲ್ಲಿ ಹೈ ಅಲರ್ಟ್: ಜಲಂದರ್ ನ ಬಿಎಸ್ಎಫ್ ಕಚೇರಿ 2 ಸ್ಥಳಗಳಲ್ಲಿ ಬಾರಿ ಸ್ಪೋಟ, ಗ್ರೈನೆಡ್ ದಾಳಿ

ಪಂಜಾಬ್ ನಲ್ಲಿ ಹೈ ಅಲರ್ಟ್: ಜಲಂದರ್ ನ ಬಿಎಸ್ಎಫ್ ಕಚೇರಿ 2 ಸ್ಥಳಗಳಲ್ಲಿ ಬಾರಿ ಸ್ಪೋಟ, ಗ್ರೈನೆಡ್ ದಾಳಿ
Summary: There are reports of a major blast at two places including a BSF office in Jalandhar. It is suspected to be a grenade attack and security forces have launched a search operation after the incident. A cordon and search operation has been declared in Jalandhar and the entire Punjab region.

belagavi news:

ಪಂಜಾಬ್ ನಲ್ಲಿ ಸಂಭವಿಸಿರುವ ಸ್ಪೋಟದ ಘಟನೆ ಭದ್ರತಾ ವಲಯದಲ್ಲಿ ಗಂಭೀರ ಆತಂಕಕ್ಕೆ ಕಾರಣವಾಗಿದೆ. ವರದಿಗಳ ಪ್ರಕಾರ, ನಿನ್ನೆ ರಾತ್ರಿ ಮಿಲಿಟರಿ ಕ್ಯಾಂಪ್ ಗಳ ಸಮೀಪ ಬಾರಿ ಪ್ರಮಾಣದ ಸ್ಪೋಟಗಳು ಸಂಭವಿಸಿವೆ. ಸ್ಪೋಟಕ್ಕೆ ಸಂಬಂಧಿಸಿದಂತೆ ಪತ್ತೆಯಾಗಿರುವ ಸ್ಕೂಟರ್ ಮಾಲೀಕನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಾಥಮಿಕ ತನಿಕೆಯಲ್ಲಿ ಆ ಸ್ಕೂಟರ್ ಒಂದು ಡೆಲಿವರಿ ಏಜೆಂಟ್ ಬಳಸುತ್ತಿದ್ದ ವಾಹನವಾಗಿತ್ತು ಎಂದು ತಿಳಿದು ಬಂದಿದೆ.

ಸೂಕ್ಷ್ಮ ಗಡಿ ರಾಜ್ಯವಾದ ಪಂಜಾಬ್ ನಲ್ಲಿ ಇಂತಹ ಘಟನೆ ನಡೆದಿದ್ದು ದೇಶದ ಭದ್ರತಾ ಸಂಸ್ಥೆಗಳನ್ನು ಎಚ್ಚರಿಕೆಯ ಸ್ಥಿತಿಗೆ ತಂದಿದೆ. ಈ ಘಟನೆ ಬಳಿಕ ಸ್ಥಳೀಯ ಜನರಲ್ಲಿ ಆತಂಕ ಹೆಚ್ಚಾಗಿದೆ. ರಾಜಕೀಯ ವಲಯದಲ್ಲೂ ಈ ಘಟನೆ ಚರ್ಚೆಗೆ ಕಾರಣವಾಗಿದೆ. ವಿಪಕ್ಷಗಳು ರಾಜ್ಯ ಸರ್ಕಾರದ ಮೇಲೆ ಕಾನೂನು ಮತ್ತು ಸುವ್ಯವಸ್ಥೆ ವೈಫಲ್ಯದ ಆರೋಪ ಮಾಡಿದ್ದು, ಆಮ್ ಆದ್ವಿ ಪಕ್ಷ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ .

ಪಂಜಾಬ್ ನಲ್ಲಿ ಗಡಿ ಭದ್ರತಾ ಪಡೆಗಳ ನೆಲೆಗಳ ಬಳಿ ಸಂಬಂಧಿಸಿದ ಸ್ಫೋಟ ಘಟನೆಗಳು ಭದ್ರತಾ ಸಂಸ್ಥೆಗಳಲ್ಲಿ ಗಂಭೀರ ಅಚ್ಚರಿಯನ್ನು ಹುಟ್ಟಿಸಿವೆ. ಮಂಗಳವಾರ ರಾತ್ರಿ ಮೇ 5 ಜಲಂದರ್ ನಲ್ಲಿ ಇರುವ ದೇಶದ ಗಡಿ ಭದ್ರತಾ ಪಡೆ, ಬಿಎಸ್ಎಫ್ ಪ್ರಧಾನ ಕಛೇರಿ ಸಮೀಪ ಪಾರ್ಕ್ ಮಾಡಿದ ಸ್ಕೂಟರ್ ನಲ್ಲಿ ಬಾರಿ ಸ್ಪೋಟ ಸಂಭವಿಸಿದೆ. ಸ್ಪೋಟದ ನಂತರ ವಾಹನಕ್ಕೆ ಬೆಂಕಿ ಹೊತ್ತುಕೊಂಡಿದ್ದು, ತಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದೇ ವೇಳೆ ಅಮೃತಸರ ಮತ್ತೊಂದು ಬಿಎಸ್ಎಫ್ ನೆಲೆಯ ಸಮೀಪವು ಸ್ಪೋಟ ಸಂಭವಿಸಿರುವುದು ವರದಿಯಾಗಿದೆ.

ಒಟ್ಟು ಎರಡು ಪ್ರತ್ಯೇಕ ಸ್ಥಳಗಳಲ್ಲಿ ಈ ರೀತಿಯ ಘಟನೆಗಳು ನಡೆದಿರುವುದು ರಾಜ್ಯದ ಭದ್ರತಾ ವ್ಯವಸ್ಥೆಯನ್ನು ಅಲರ್ಟ್ ಸ್ಥಿತಿಗೆ ತಳಿದೆ. ಸ್ಪೋಟದ ನಿಖರ ಕಾರಣವನ್ನು ಇನ್ನೂ ಅಧಿಕಾರಿಗಳು ದೃಢಪಡಿಸಿಲ್ಲ. ಪಂಜಾಬ್ ಪೊಲೀಸರು ಹಾಗೂ ಕೇಂದ್ರ ಭದ್ರತಾ ಪಡೆಗಳು ಸಂಯುಕ್ತವಾಗಿ ತನಿಖೆ ಆರಂಭಿಸಿವೆ. ಅದೃಷ್ಟವಶಾತ್ ಈ ಘಟನೆಗಲ್ಲಿ ಯಾವುದೇ ಜೀವ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಆದರೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರು ಭಯದಿಂದ ಓಡಿ ಹೋಗಿದ ದೃಶ್ಯಗಳು ಕಂಡುಬಂದಿವೆ.

ಪಂಜಾಬ್ ನ ಜಲಂದರ್ ನಲ್ಲಿ ನಡೆದ ಸ್ಕೂಟರ್ ಸ್ಪೋಟ ಪ್ರಕರಣದ ತನಿಖೆ ಮುಂದುವರೆದಿದ್ದು, ಪೊಲೀಸರು ಸ್ಕೂಟರ್ ಮಾಲಿಕ ಮತ್ತು ಘಟನೆಯ ಸಮಯದಲ್ಲಿ ಸ್ಥಳದಲ್ಲಿದ್ದ ಮತ್ತೊಬ್ಬ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಿದ್ದಾರೆ. ಧನ ಪ್ರೀತ್ ಕೌರ್ ಅವರು ನೀಡಿದ ಮಾಹಿತಿಯ ಪ್ರಕಾರ, ಪಾರ್ಕ್ ಮಾಡಿದ್ದ ಸ್ಕೂಟರ್ ನಲ್ಲಿ ಬೆಂಕಿ ಹತ್ತಿಕೊಂಡಿರುವುದರಿಂದ ಈ ಹಂತದಲ್ಲಿ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಸ್ಥಳದ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಘಟನೆಯ ದಿನವು ಗುರು ಪ್ರೀತ್ ಸಿಂಗ್ ಸ್ಕೂಟರ್ ಬಳಿ ಹೋಗುತ್ತಿದ್ದ ಸಂದರ್ಭದಲ್ಲಿ ಪಾರ್ಕ್ ಮಾಡಿದ ವಾಹನದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ತಕ್ಷಣ ತನ್ನ ತಂದೆಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ಪಿಟಿಐ ವರದಿ ಪ್ರಕಾರ, ಸ್ಕೂಟರ್ ಚಾಲಕನನ್ನು 22 ವರ್ಷದ ಗುರು ಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಆತ ಡೆಲಿವರಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದು, ದಿನನಿತ್ಯ ಆ ಪ್ರದೇಶಕ್ಕೆ ಪಾರ್ಸೆಲ್ ಡೆಲಿವರಿ ಮಾಡಲು ಹೋಗುತ್ತಿದ್ದನೆಂದು ಸಂಬಂಧಿಕರು ತಿಳಿಸಿದ್ದಾರೆ. ಪೊಲೀಸರು ಈಗ ಸ್ಪೋಟಕ್ಕೆ ನಿಖರ ಕಾರಣ ಏನು, ಯಾವುದೇ ಸ್ಪೋಟಕ ವಸ್ತು ಬಳಕೆಯಾದಿತೆ ಅಥವಾ ಅದು ತಾಂತ್ರಿಕ ಕಾರಣವೇ ಎಂಬುದನ್ನು ತಿಳಿಯಲು ಪರಿಶೀಲನೆ ಮುಂದುವರಿಸಿದ್ದಾರೆ.

ಪಂಜಾಬ್ ನಲ್ಲಿ ಮತ್ತೊಂದು ಸ್ಫೋಟ ಘಟನೆ ನಡೆದಿದ್ದು, ಅಮೃತಸರದ ಕಾಸ್ ಪ್ರದೇಶದಲ್ಲಿರುವ ಸೇನಾ ಶಿಬಿರದ ಬಳಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರಾರ್ಥಮಿಕ ಮಾಹಿತಿ ಪ್ರಕಾರ, ಮೋಟಾರ್ ಸೈಕಲ್ ನಲ್ಲಿ ಬಂದ ದುಷ್ಕರ್ಮಿ ಒಬ್ಬರು ಗ್ರೆನೆಟ್ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಪ್ರದೇಶವು ಅಟ್ಟಾರಿ- ವಾಘಾ ಅಂತರಾಷ್ಟ್ರೀಯ ಗಡಿಯಿಂದ ಸುಮಾರು ಹದಿನೈದು ಕಿಲೋಮೀಟರ್ ದೂರದಲ್ಲಿದೆ. ಅಮೃತ್ ಸರ್ ಗ್ರಾಮೀಣ ಪ್ರದೇಶದಲ್ಲಿ ಮಂಗಳವಾರ ರಾತ್ರಿ 10.30 ರಿಂದ 11 ಗಂಟೆಯ ನಡುವೆ ಸೇನಾ ಶಿಬಿರದ ಹೊರ ಭಾಗದಲ್ಲಿ ಸ್ಫೋಟ ಸಂಭವಿಸಿದೆ ಎಂದು ಆದಿತ್ಯ ವಾರಿಯರ ತಿಳಿಸಿದ್ದಾರೆ.

ಘಟನೆಯ ತಕ್ಷಣವೇ ಸೇನಾಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ಆರಂಭಿಸಿದ್ದಾರೆ. ಪೊರೆನ್ಸಿಕ್ ತಂಡವು ಸ್ಥಳಕ್ಕೆ ಆಗಮಿಸಿದ್ದು, ಸ್ಫೋಟದ ನಿಕರ ಸ್ವರೂಪ ಮತ್ತು ಬಳಸಲಾದ ವಸ್ತುಗಳ ಬಗ್ಗೆ ತನಿಖೆ ನಡೆಯುತ್ತಿದೆ. ಸ್ಥಳದಲ್ಲಿ ಕಟ್ಟು ನಿಟ್ಟಿನ ಪರಿಶೀಲನೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Also Read:

ಪರಮೇಶ್ವರ್ ಸ್ಟ್ರಾಂಗ್ ಸ್ಟೇಟ್ಮೆಂಟ್! ನಾಯಕತ್ವ ಗೊಂದಲ ಶೀಘ್ರ ಅಂತ್ಯವಾಗಬೇಕು.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online