<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಪ್ರಯಾಣಿಕರಿಗೆ ಶಾಕ್: ಮೇ 20ರಿಂದ ಬಸ್ಸುಗಳು ಓಡುವುದೇ ಡೌಟ್!

ಪ್ರಯಾಣಿಕರಿಗೆ ಶಾಕ್: ಮೇ 20ರಿಂದ ಬಸ್ಸುಗಳು ಓಡುವುದೇ ಡೌಟ್!
Summary: Transport bus services across the state are likely to be suspended from May 20. Transport employees have decided to go on an indefinite strike and have said that the protests will intensify if the government does not respond to their various demands. In this context, there are fears that it will have a major impact on the public transport system.

belagavi news:

ವೇತನ ಹೆಚ್ಚಳ, ಹಿಂಬಾಕಿ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಸಾರಿಗೆ ನೌಕರರು ಮೇ 20ರಿಂದ ಅನಿರ್ದಿಷ್ಟಾವಧಿ ಮುಸ್ಕರಕ್ಕೆ ಮುಂದಾಗಿದ್ದಾರೆ. ಸರ್ಕಾರ ಹಾಗೂ ನೌಕರರ ನಡುವೆ ನಡೆದ ಸಂಧಾನ ಸಭೆಗಳು ಅಳಕಾರಿಯಾಗದೆ ವಿಫಲವಾಗಿರುವ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಸ್ಕರ ಜಾರಿಯಾದರೆ ರಾಜ್ಯಾದ್ಯಂತ ಬಸ್ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದ್ದು ಸಾರ್ವಜನಿಕ ಸಾರಿಗೆ ವ್ಯವಸ್ಥೆ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.

ಬೆಂಗಳೂರು ಮೇ 2: ಕರ್ನಾಟಕದ ಜನಸಾಮಾನ್ಯರ ಜೀವನಾಡಿಯಾಗಿರುವ ರಾಜ್ಯ ಸಾರಿಗೆ ಬಸ್ ಸೇವೆಗಳು 20 ರಿಂದ ಸ್ಥಗಿತಗೊಳ್ಳುವ ಸಾಧ್ಯತೆ ಎದುರಾಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯು ಮೇ 26 ಬೆಳೆಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದೆ.

ಈ ಮುಷ್ಕರದಲ್ಲಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ KSRTC,BMTC,NWKRTC ಹಾಗೂ KKRTC ಸೇರಿ ಸುಮಾರು 1.25 ಲಕ್ಷ ನೌಕರರು ಭಾಗವಹಿಸುವ ನಿರೀಕ್ಷೆ ಇದೆ. ಇದರಿಂದ ರಾಜ್ಯಾದ್ಯಂತ ಸಾರಿಗೆ ಬಸ್ ಸಂಚಾರದಲ್ಲಿ ತೀವ್ರ ಅಡಚಣೆ ಉಂಟಾಗುವ ಸಾದ್ಯತೆ ವ್ಯಕ್ತವಾಗಿದೆ.

Sponsored

ಸಾರಿಗೆ ನೌಕರರ ಪ್ರಮುಖ ಬೇಡಿಕೆಗಳೇನು?

• ವೇತನ ಹಿಂಬಾಕಿ: ಬಾಕಿ ಇರುವ 38 ತಿಂಗಳ ವೇತನದ ಹಿಂಬಾಕಿಯನ್ನು ಕೂಡಲೇ ನೀಡಬೇಕು.

• ವೇತನ ಹೆಚ್ಚಳ: 2024ರ ಜನೆವರಿ 1 ರಿಂದ ಅನ್ವಯವಾಗುವಂತೆ ಮೂಲವೇತನವನ್ನು ಶೇ. 25 ರಷ್ಟು ಏರಿಕೆ ಮಾಡಬೇಕು.

• ತುಟ್ಟಿಭತ್ಯೆ ವಿಲೀನ: ಶೇ. 31 ರಷ್ಟು ತುಟ್ಟಿಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸಬೇಕು.

Sponsored

• ಒಂದೇ ಕಂತಿನಲ್ಲಿ ಪಾವತಿ: ಸರ್ಕಾರ ಒಪ್ಪಿರುವ 26 ತಿಂಗಳ ಬಾಕಿ ಹಣ 1,272 ಕೋಟಿ ರೂಪಾಯಿಯನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಬೇಕು.

• ಇತರೆ ಭತ್ಯೆಗಳು: ಬಾಟಾ ಸೇರಿದಂತೆ ಇತರೆ ಭತ್ಯೆ ಗಳನ್ನು ಹೆಚ್ಚಿಸಬೇಕು ಹಾಗೂ ಕೋವಿಡ್ ಸಮಯದ ಬಾಕಿ ಹಣವನ್ನು (Arrears) ನೀಡಬೇಕು.

ವಿಫಲವಾದ 12 ಸುತ್ತಿನ ಸಭೆಗಳು:

ವೇತನ ಹೆಚ್ಚಳ ಮತ್ತು ಹಿಂಬಾಕಿ ಪಾವತಿ ವಿಚಾರದಲ್ಲಿ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರ ನೇತೃತ್ವದಲ್ಲಿ ಇದುವರೆಗೆ 12 ಬಾರಿ ಮಾತುಕತೆ ನಡೆದಿದ್ದರೂ ಯಾವುದೇ ಪರಿಹಾರ ದೊರಕಿಲ್ಲ. ಈ ಎಲ್ಲಾ ಸಭೆಗಳು ಪಲಿತಾಂಶವಿಲ್ಲದೆ ವಿಫಲವಾಗಿವೆ. ಸರ್ಕಾರವು 38 ತಿಂಗಳ ಹಿಂಬಾಕಿಯ ಬದಲಿಗೆ ಕೇವಲ 26 ತಿಂಗಳ ಬಾಕಿ ಹಣ ನೀಡಲು ಮುಂದಾಗಿದೆ. ಆದರೆ ನೌಕರರು ಸಂಪೂರ್ಣ 38 ತಿಂಗಳ ಬಾಕಿ ಪಾವತಿಸಲೇಬೇಕು ಎಂಬ ತಮ್ಮ ನಿಲುವನ್ನು ಕಠಿಣವಾಗಿ ಮುಂದಿಟ್ಟಿದ್ದಾರೆ.

Sponsored

ಸರ್ಕಾರದ ಧೋರಣೆಯನ್ನು ಖಂಡಿಸಿರುವ ನೌಕರರ ಸಂಘಟನೆಗಳು ತಮ್ಮ ಬೇಡಿಕೆಗಳು ಈಡೇರಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿವೆ.

ಈ ಹಿಂದೆ ಕೂಡ ಹಲವು ಬಾರಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಕೊನೆ ಘಳಿಗೆಯಲ್ಲಿ ಸರ್ಕಾರ ಮಾತುಕತೆ ನಡೆಸಿ ಅವರ ಮನವೊಲಿಸುತ್ತಿತ್ತು. ಆದರೆ ಬೇಡಿಕೆಗಳನ್ನು ಇನ್ನೂ ಈಡೇರಿಸಿಲ್ಲ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Also Read:

ಐಪಿಎಲ್ ನಲ್ಲಿ ರೋಹಿತ್ ಮತ್ತು ಕೊಹ್ಲಿ ದಾಖಲೆಮುರಿದ ಕೆ.ಎಲ್.ರಾಹುಲ್

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online