<?= $pageTitle ?>
Logo
ಮುಖಪುಟ ಓದುವುದು ಕೇಳು
Sports

ಸಿಸಿಎಲ್ ಕಪ್ ಅಭಿಮಾನಿಗಳಿಗೆ ಅರ್ಪಣೆ : ಕಿಚ್ಚ ಸುದೀಪ

ಸಿಸಿಎಲ್ ಕಪ್ ಅಭಿಮಾನಿಗಳಿಗೆ ಅರ್ಪಣೆ : ಕಿಚ್ಚ ಸುದೀಪ
Summary: ದಶಕಗಳ ನಂತರ ಸಿಸಿಎಲ್ ಕಪ್ ಗೆದ್ದಿರುವ ಕರ್ನಾಟಕ ಬುಲ್ಡೋಜರ್ಸ್ ಇಂದು ತಾಯ್ನಾಡಿಗೆ ಟ್ರೋಫಿ ತರುತ್ತಿದ್ದಾರೆ.
belagavi news :
ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2026ರಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವು 12 ವರ್ಷಗಳ ನಂತರ ಚಾಂಪಿಯನ್ ಗಳಾಗಿದ್ದಾರೆ. ಚಾಂಪಿಯನ್ ಟ್ರೋಫಿಯನ್ನು ಇಂದು ತಾಯ್ನಾಡಿಗೆ ಬರಮಾಡಿಕೊಂಡಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕ ಕಿಚ್ಚ ಸುದೀಪ್ ಅವರು ಇದರ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು “ನಾನು ಯಾವಾಗಲೂ ಹೇಳುವಂತೆ ,ನಮಗೆ ಇದು ಕೇವಲ ಒಂದು ಟೂರ್ನಮೆಂಟ್ ಅಲ್ಲ, ಇದೊಂದು ಭಾವನೆ. ದಶಕಗಳ ನಂತರ ಕಪ್ಪನ್ನು ಮನೆಗೆ ತೆಗೆದುಕೊಳ್ಳುತ್ತಿರುವುದು ಪದಗಳಲ್ಲಿ ವಿವರಿಸಲಾಗದ ಅನುಭವ ಮತ್ತು ಅದ್ಭುತ ಆಟಗಾರರ ಈ ತಂಡವನ್ನು ಅದ್ಭುತ ಪ್ರದರ್ಶನವನ್ನು ನೀಡಿದರು. ಒತ್ತಡದ ನಡುವೆಯೂ ತಂಡವು ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದ ರೀತಿ ಅದ್ಭುತವಾಗಿತ್ತು. ಈ ಗೆಲುವು ಕಷ್ಟದ ದಿನಗಳಲ್ಲಿ ನಮ್ಮನ್ನು ಬೆಂಬಲಿಸಿದ ಅಭಿಮಾನಿಗಳಿಗೆ ಸಮರ್ಪಣೆ ಎಂದು ಈ ಸಲ ಕಪ್ ನಮ್ದೇ ಎಂದು ಘೋಷಿಸಿ ಇದು ಕೇವಲ ಮಾತಲ್ಲ, ಇದು ವಾಸ್ತವ “ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.

ಎಕೆಕೆ ಎಂಟರ್ಟೈನ್ಮೆಂಟ್ ಮಾಲೀಕತ್ವದ ಕರ್ನಾಟಕ ಬುಲ್ಡೋಜರ್ಸ್ ಸಿಸಿಎಲ್ ನ ಗೆಲುವನ್ನು ಪಡೆದುಕೊಂಡಿದೆ. 2013,2014, 2026ರಲ್ಲಿ ಮತ್ತು ಆರು ಬಾರಿ ರನ್ನರ್ ಸ್ಥಾನವನ್ನು ಈ ತಂಡ ಪಡೆದುಕೊಂಡಿದೆ. ಈ ತಂಡವು ಸಿನಿಮಾ ಮತ್ತು ಕ್ರಿಕೆಟ್ ಸಂಗಮದಲ್ಲಿ ಕನ್ನಡಿಗರ ಹೆಮ್ಮೆಯ ಶಕ್ತಿಯಾಗಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಕ್ರಿಕೆಟ್ ಅಭಿಮಾನಿಗಳಿಗೆ ಕರ್ನಾಟಕ ಬುಲ್ಡೋಜರ್ಸ್ ತಂಡದ ಭಾಗವಾಗಲು ಒಂದು ಅದ್ಭುತ ಆಕರ್ಷಣೀಯ ಪ್ರವೇಶವನ್ನು ನೀಡಲಾಗಿದೆ.

ಮೊದಲ ಬಾರಿಗೆ ಉತ್ಸಾಹ ಭರಿತ ಅಭಿಮಾನಿಗಳಿಗೆ ಸಿಸಿಎಲ್ ನಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ಕರ್ನಾಟಕ ಬುಲ್ಡೋಜರ್ಸ್ ಜೊತೆ ಆಡಲು ಅವಕಾಶವನ್ನು ಪಡೆಯಬಹುದು. ಗ್ರೌಂಡ್ ನ ಒಳಗಿನ ರೋಮಾಂಚನವನ್ನು ಅನುಭವಿಸಬಹುದು. ಈ ಅವಕಾಶವೂ ನಿಜವಾಗಿಯೂ ವಿಶೇಷವಾಗಿದೆ. ಅಭಿಮಾನಿಗಳು ಕಿಚ್ಚ ಸುದೀಪ್ ಅವರ ನಾಯಕತ್ವದಲ್ಲಿ ಆಟವನ್ನು ಆಡಬಹುದು.

ಭಾರತೀಯ ಚಿತ್ರರಂಗದ ಅತ್ಯಂತ ವರ್ಚಸ್ವಿ ನಾಯಕರಲ್ಲಿ ಒಬ್ಬರು ಮತ್ತು ಕ್ರಿಕೆಟ್ ಉತ್ಸಾಹದ ನಿಜವಾದ ರಾಯಭಾರಿಯೊಂದಿಗೆ ಮೈದಾನವನ್ನು ಹಂಚಿಕೊಳ್ಳುವ ಅವಕಾಶವನ್ನು ಈಗ ಕರ್ನಾಟಕ ಬುಲ್ಡೋಜರ್ಸ್ ತಂಡವು ನೀಡಿದೆ. ತಂಡದ ಮಾಲೀಕರು ಮತ್ತು ಎಕೆಕೆ ಎಂಟರ್ಟೈನ್ಮೆಂಟ್ನ ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಖೇಣಿ ಮಾತನಾಡಿ ,”ಈ ಜಯವು ಬುಲ್ಡೋಜರ್ಸ್ ಕಿಚ್ಚಿನ ಸಂಕೇತವಾಗಿದೆ. ಕರ್ನಾಟಕಕ್ಕೆ ಟ್ರೋಫಿ ಮರುಳುತ್ತಿರುವುದನ್ನು ನಮಗೆಲ್ಲ ಬಾವುಕ ಕ್ಷಣವಾಗಿದೆ.

ಹನ್ನೆರಡು ವರ್ಷಗಳ ಸುದೀರ್ಘ ಕಾಯುವಿಕೆ ಮತ್ತು ಹಲವು ಬಾರಿ ಗೆಲುವಿನ ಹತ್ತಿರ ಬಂದು ಮಿಸ್ ಆಗಿದ್ದು, ಈ ಸಲ ಗೆದ್ದಿರುವುದು ಸಂತೋಷದ ವಿಷಯವಾಗಿದೆ. ನಾವು ಕೇವಲ ಗೆಲುವಿಗಾಗಿ ಆಡಲಿಲ್ಲ ಚಂದನವನದ ಗೌರವಕ್ಕಾಗಿ ಆಡಿದ್ದೇವೆ. ಸುದೀಪ್ ನೇತೃತ್ವದಲ್ಲಿ ಈ ತಂಡ ಒಟ್ಟಾಗಿ ಹೋರಾಟ ನಡೆಸಿದ ರೀತಿ ನಮಗೆಲ್ಲ ಹೆಮ್ಮೆ ತಂದಿದೆ. ಅಬ್ಬರ ಮತ್ತೆ ಶುರುವಾಗಿದೆ. ಕಿಚ್ಚ ಸುದೀಪ್ ನೇತ್ರತ್ವದ ಪ್ರದೀಪ್, ಜೆಕೆ ,ಕೃ,ಣ ಚಂದನ್, ರಾಜೀವ್, ನಿರೂಪ್, ಪ್ರತಾಪ್, ಸಚಿನ್, ಅರ್ಜುನ್, ಬಚ್ಚನ್ ಮತ್ತು ಮಂಜುನಾಥ್ ಅವರನ್ನು ಒಳಗೊಂಡ ತಂಡ ಭರ್ಜರಿ ಪ್ರದರ್ಶನವನ್ನು ನೀಡಿತು.

113 ರನ್ ಗಳ ಗುರಿಯನ್ನು ಬೆನ್ನಟ್ಟಿದ ಬುಲ್ಡೋಜರ್ಸ್ ಪರ ಸ್ಟಾರ್ ಬ್ಯಾಟ್ಸ್ಮನ್ ರಾಜೀವ್ ಕೇವಲ 35 ಎಸೆತಗಳಲ್ಲಿ 96 ರನ್ ಬಾರಿಸಿ ‘ಪಂದ್ಯ ಪುರುಷ ಪ್ರಶಸ್ತಿಗೆ’ ಪಾತ್ರರಾಗಿದ್ದಾರೆ. ಬೌಲಿಂಗ್ ನಲ್ಲಿ ಎದುರಾಳಿಗಳನ್ನು ಕಟ್ಟಿ ಹಾಕಿದ ಪ್ರತಾಪ್ 'ಅತ್ಯುತ್ತಮ ಬೌಲರ್' ಗೌರವಕ್ಕೆ ಪಾತ್ರರಾಗಿದ್ದಾರೆ. ಕೊಯಮತ್ತೂರಿನ ಎಸ್.ಎನ್.ಆರ್ ಸ್ಟೇಡಿಯಂನಲ್ಲಿ ನಡೆದ ರೋಚಕ ಫೈನಲ್ ನಲ್ಲಿ ಬೆಂಗಾಲ್ ಟೈಗರ್ಸ್ ವಿರುದ್ಧ 6 ವಿಕೆಟ್ಗಳ ಅದ್ಭುತ ಜಯ ಸಾಧಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದೆ.


ಇನ್ನಷ್ಟು ಓದಿರಿ:
ರಷ್ಯಾದಲ್ಲಿ ಆತಂಕಕಾರಿ ಘಟನೆ : ಭಾರತೀಯರಿಗೆ ಗಾಯ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online