Belagavi news :
ನಿನ್ನೆ ಅಂದರೆ ಶನಿವಾರ ರಷ್ಯಾದಲ್ಲಿ ನಡೆದಂತಹ ಈ ಚಾಕು ಇರಿತ ಪ್ರಕರಣ ರಷ್ಯಾದ ವಿಶ್ವವಿದ್ಯಾಲಯವೊಂದರ ಆವರಣದಲ್ಲಿ ನಡೆದಿದೆ.ಈ ಘಟನೆಯಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.
ರಷ್ಯಾದ ಮಾಸ್ಕೋದಲ್ಲಿ ನಿನ್ನೆ ಶನಿವಾರ,ಚಾಕು ಇರಿತ ಘಟನೆ ಸಂಭವಿಸಿದ್ದು,ಭಾರತೀಯ ವಿದ್ಯಾರ್ಥಿಗಳಿಗೆ ಭಯದ ವಾತಾವರಣವನ್ನು ಸೃಷ್ಟಿಸಿದೆ. ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ ಆರು ಜನರು ಗಾಯಗೊಂಡಿದ್ದಾರೆ.ಎಂದು ರಷ್ಯಾದ ಭಾರತೀಯ ರಾಯಭಾರಿ ಕಚೇರಿಯ ಸ್ಪಷ್ಟವಾಗಿ ತಿಳಿಸಿದೆ.
ಮಾಸ್ಕೋದಲ್ಲಿರುವಂತಹ ಭಾರತೀಯ ರಾಯಭಾರಿ ಕಛೇರಿ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಈ ರೀತಿಯಾಗಿ ಹಂಚಿಕೊಂಡಿದ್ದಾರೆ. ಉಫಾದಲ್ಲಿ ದಾಳಿಯ ದುಷ್ಟಕರ ಘಟನೆ ಸಂಭವಿಸಿದ್ದು,ನಾಲ್ವರು ಭಾರತೀಯ ವಿದ್ಯಾರ್ಥಿಗಳು ಈ ದಾಳಿಗೆ ಒಳಗಾಗಿದ್ದಾರೆ ಅವರಿಗೆ ಗಾಯಗಳಾಗಿವೆ.ಅಧಿಕಾರಿಗಳೊಂದಿಗೆ ರಾಯಭಾರಿ ಕಚೇರಿ ಸಂಪರ್ಕದಲ್ಲಿದ್ದು,ಖಜಾನ್ ನಲ್ಲಿರುವ ಕಾಂಸೋಲೆಟ್ ನ ಅಧಿಕಾರಿಗಳು ಕಾಯಗಂಡ ವಿದ್ಯಾರ್ಥಿಗಳಿಗೆ ನೆರವಾಗಲು ಉಫಾಗೆ ತೆರಳುವಂತೆ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈಗ ಘಟನೆಯನ್ನು ಪ್ರಾಥಮಿಕ ವರದಿಯ ಪ್ರಕಾರ ನೋಡುವುದಾದರೆ,ಚಾಕು ಹೊಂದಿದ ಅಪ್ರಾಪ್ತನೋರ್ವ ರಷ್ಯಾದ ಬಾಷ್ಕೋರ್ಟೊಸ್ತಾನ್ ಗಣರಾಜ್ಯದ ಉಫಾದಲ್ಲಿರುವ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯ ವಸತಿ ನಿಲಯಕ್ಕೆ ಪ್ರವೇಶಿಸಿದ್ದಾನೆ.ಅಲ್ಲಿದ್ದ ವಿದ್ಯಾರ್ಥಿಗಳ ಮೇಲೆ ದಾಳಿಯನ್ನು ಮಾಡಿ ಹಲವರಿಗೆ ಚಾಕುವಿನಿಂದ ಇರಿದಿದ್ದಾನೆ,ಈ ಘಟನೆಯು ತೀವ್ರ ಆತಂಕಕಾರಿ ಘಟನೆಯಾಗಿದ್ದು,ಭಯದ ವಾತಾವರಣವನ್ನು ಸೃಷ್ಟಿಸಿದೆ.
ದಾಳಿಯಲ್ಲಿ ಗಾಯಗೊಂಡಿರುವಂತಹ ನಾಲ್ವರು ವಿದ್ಯಾರ್ಥಿಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಷ್ಯಾದ ಫೆಡರಲ್ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.ಒಬ್ಬನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು,ಇತರು ಮೂವರು ಸ್ಥಿರವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಚಾಕು ಇರಿತ ಘಟನೆಗೆ ಕಾರಣವಾದ ದಾಳಿ ಕೋರನನ್ನು ಬಂಧಿಸಲು ಮುಂದಾದಾಗ ತೀವ್ರ ಪ್ರತಿರೋಧ ತೋರಿದ ದಾಳಿಕೋರ,ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಕೂಡ ಚಾಕುವಿನಿಂದ ಇರಿದಿದ್ದಾನೆ.ಅಷ್ಟೇ ಅಲ್ಲದೆ ಆರೋಪಿ ತನಗೂ ಸಹ ಚಾಕುವಿನಿಂದ ಗಾಯ ಮಾಡಿಕೊಂಡಿದ್ದಾನೆ ಎಂದು ಸಚಿವಾಲಯದ ವಕ್ತಾರಿ ಮೇಜರ್ ಜನರಲ್ ಐರಿನ ವೋಲ್ಕ್ ಅವರನ್ನು ಉಲ್ಲೇಖಿಸಿ ಮಾಧ್ಯಮಗಳ ವರದಿ ಮಾಡಿವೆ ಎಂದು ತಿಳಿಸಲಾಗಿದೆ.
ಈ ದಾಳಿಕೋರನು ನಿಷೇಧಿತ ನಿಯೋನಜಿ ಸಂಘಟನೆಗೆ ಸೇರಿದವ ಎಂದು ಗುರುತಿಸಲಾಗಿದೆ.ಈ ದಾಳಿಯ ಸಮಯದಲ್ಲಿ ಹತ್ಯಾಕಾಂಡದ ಬಗ್ಗೆ ರಾಷ್ಟ್ರೀಯತಾವದಿ ಘೋಷಣೆಗಳನ್ನು ಕೂಗುತ್ತಿದ್ದ ಎಂದು ವರದಿಗಳ ಪ್ರಕಾರ ಹೇಳಲಾಗಿದೆ.ಈಗಯಾಳುಗಳು ರಕ್ತದಿಂದ ಗೋಡೆಯ ಮೇಲೆ ಚಿತ್ರಿಸಿದ ಸ್ವಸ್ತಿಕದ ಫೋಟೋವನ್ನು ಹಂಚಿಕೊಂಡಿದೆ.
ಹೀಗಾಗಿ ರಷ್ಯಾದಲ್ಲಿ ಈ ಘಟನೆಯ ಪರಿಣಾಮವಾಗಿ ಭಯದ ವಾತಾವರಣ ಉಂಟಾಗಿದೆ.ಮತ್ತು ಭಾರತೀಯ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಲಾಗಿದೆ.
ಇನ್ನಷ್ಟು ಓದಿರಿ: