<?= $pageTitle ?>
Logo
ಮುಖಪುಟ ಓದುವುದು ಕೇಳು
Education

ಇಂದು CUET UG 2026 ಪರೀಕ್ಷೆ ಆರಂಭ: ಪರೀಕ್ಷಾರ್ಥಿಗಳಿಗೆ NTA ಮಹತ್ವದ ಗೈಡ್ ಲೈನ್ಸ್

ಇಂದು CUET UG 2026 ಪರೀಕ್ಷೆ ಆರಂಭ: ಪರೀಕ್ಷಾರ್ಥಿಗಳಿಗೆ NTA ಮಹತ್ವದ ಗೈಡ್ ಲೈನ್ಸ್
Summary: CUET UG 2026 exam begins today, and 1,24,020 students will face the exam on the first day. Here are the important guidelines released by NTA, including the documents required for entry to the exam centers and the dress code.

belagavi news :

ನವದೆಹಲಿ: ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದ CUET UG 2026 ಪರೀಕ್ಷೆ ಇಂದು (ಮೇ 11) ಆರಂಭವಾಗಿದೆ. ರಾಷ್ಟ್ರೀಯ ಪರೀಕ್ಷಾ ಮಂಡಳಿ (NTA) ನಡೆಸುತ್ತಿರುವ ಈ ಪರೀಕ್ಷೆ ಮೇ 31ರವರೆಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ವಿಧಾನದಲ್ಲಿ ನಡೆಯಲಿದೆ.

ಈ ವರ್ಷ CUET (UG) ಪರೀಕ್ಷೆಗೆ ಒಟ್ಟು 15,68,866 ಅಭ್ಯರ್ಥಿಗಳು ನೊಂದಣಿ ಮಾಡಿಕೊಂಡಿದ್ದಾರೆ. 67,56,321 ಟೆಸ್ಟ್ ಇನ್ ಸ್ಟೆನ್ಸ್ ಗಳು ಹಾಗೂ 12,902 ವಿಭಿನ್ನ ವಿಷಯ ಸಂಯೋಜನೆಗಳು ದಾಖಲಾಗಿವೆ.

ಪರೀಕ್ಷೆಯನ್ನು 21 ದಿನಗಳಲ್ಲಿ 35 ಶಿಫ್ಟ್ ಗಳಲ್ಲಿ ಭಾರತ ಸೇರಿದಂತೆ 13 ವಿದೇಶಗಳ 14 ಅಂತಾರಾಷ್ಟ್ರೀಯ ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಮೊದಲ ದಿನ ಎರಡು ಶಿಫ್ಟ್ ಗಳಲ್ಲಿ ಪರೀಕ್ಷೆ : ಮೇ 11 ರಿಂದ ಅಂದರೆ ಇಂದಿನಿಂದ ಆರಂಭವಾಗುವ ಪರೀಕ್ಷೆ ಎರಡು ಶಿಫ್ಟ್ ಗಳಲ್ಲಿ ನಡೆಯಲಿದೆ. ಮೊದಲ ದಿನ ಒಟ್ಟು 1,24,020 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

• ಮೊದಲ ಶಿಫ್ಟ್ ನಲ್ಲಿ 314 ಪರೀಕ್ಷೆ ಕೇಂದ್ರಗಳಲ್ಲಿ 63,247 ವಿದ್ಯಾರ್ಥಿಗಳು 8 ವಿಷಯಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.

• ಎರಡನೇ ಶಿಫ್ಟ್ ನಲ್ಲಿ 281 ಪರೀಕ್ಷಾ ಕೇಂದ್ರಗಳಲ್ಲಿ 60,773 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ.

ಮೊದಲ ದಿನ ಇಂಗ್ಲಿಷ್ ,ಅಕೌಂಟೆನ್ಸಿ, ಬಿಜಿನೆಸ್ ಸ್ಟಡೀಸ್, ಎಕನಾಮಿಕ್ಸ್, ಹಿಸ್ಟರಿ, ಪೊಲಿಟಿಕಲ್ ಸೈನ್ಸ್, ಕೆಮಿಸ್ಟ್ರಿ, ಜಿಯೋಗ್ರಫಿ, ಕಂಪ್ಯೂಟರ್ ಸೈನ್ಸ್ ಮತ್ತು ಸೋಶಿಯಾಲಜಿ ವಿಷಯಗಳ ಪರೀಕ್ಷೆ ನಡೆಯಲಿವೆ.

ಪರೀಕ್ಷಾ ಕೇಂದ್ರಕ್ಕೆ ತೆಗೆದು ಕೊಂಡು ಹೋಗಬೇಕಾದಾಗ ಅಗತ್ಯ ವಸ್ತುಗಳಿವು:

NTA ವಿದ್ಯಾರ್ಥಿಗಳಿಗೆ ಮುಖ್ಯಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ. ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕಾದ ವಸ್ತುಗಳು ಇಂತಿವೆ.

• ಅಡ್ಮಿಟ್ ಕಾರ್ಡ್ ಮತ್ತು ಸೆಲ್ಫ್ ಡಿಕ್ಲರೇಷನ್ ಫಾರ್ಮ್

• ಎರಡು ಪಾಸ್ಪೋರ್ಟ್ ಸೈಜ್ ಫೋಟೋಗಳು

• ಮೂಲ ಫೋಟೋ ಐಡಿ ಪ್ರೂಫ್

• ಪಾರದರ್ಶಕ ಪೆನ್

• ಪಾರದರ್ಶಕ ನೀರಿನ ಬಾಟಲ್

ಮಧುದೇಹ (ಡಯಾಬಿಟಿಸ್) ರೋಗಿಗಳು ಅಗತ್ಯ ಆಹಾರ ವಸ್ತುಗಳನ್ನು ತೆಗೆದುಕೊಂಡು ಹೋಗಬಹುದು.

ಡ್ರೆಸ್ ಕೋಡ್ ಹೇಗಿದೆ?

ವಿದ್ಯಾರ್ಥಿಗಳು ಹಗುರ ಬಣ್ಣದ ಮತ್ತು ಸರಳ ಬಟ್ಟೆಗಳನ್ನು ಧರಿಸುವಂತೆ ಎನ್ ಟಿಎ ಸಲಹೆ ನೀಡಿದೆ. ಸಾಮಾನ್ಯ ಶೂ, ಚಪ್ಪಲಿ ಅಥವಾ ಕಡಿಮೆ ಹೀಲ್ ನ ಪುಟ್ವೇರ್ ಧರಿಸಲು ಅನುಮತಿ ಇದೆ. ಧಾರ್ಮಿಕ ನಂಬಿಕೆಗೆ ಸಂಬಂಧಿಸಿದ ದಾರ ಅಥವಾ ಇತರ ವಸ್ತುಗಳನ್ನು ಧರಿಸಬಹುದಾದರು ಅಂತಹ ವಿದ್ಯಾರ್ಥಿಗಳು ಪರಿಶೀಲಿನ ಪ್ರಕ್ರಿಯೆ ಹೆಚ್ಚಿನ ಸಮಯ ಬೇಕಾಗುವ ಕಾರಣ ಪರೀಕ್ಷಾ ಕೇಂದ್ರಕ್ಕೆ ಮುಂಚಿತವಾಗಿಯೇ ತಪ್ಪಿಸಬೇಕು ಎಂದು ಸೂಚಿಸಲಾಗಿದೆ.

PwD ಅಭ್ಯರ್ಥಿಗಳಿಗೆ ವಿಶೇಷ ಸೌಲಭ್ಯ:

PwD ( Person with Disability) ಮತ್ತು PwBD ( Person with Benchmark Disability) ಅಭ್ಯರ್ಥಿಗಳಿಗೆ ಸ್ಕ್ರೈಬ್, ಹೆಚ್ಚುವರಿ ಸಮಯ ಸೇರಿದಂತೆ ಅಗತ್ಯವಿರುವ ಎಲ್ಲ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗಿದೆ.

ಎಲ್ಲಾ ಅಭ್ಯರ್ಥಿಗಳು ತಮ್ಮ ಅಡ್ಮಿಟ್ ಕಾರ್ಡ್ ನಲ್ಲಿ ಉಲ್ಲೇಖಿಸಿರುವ ಪರೀಕ್ಷಾ ನಗರ, ಕೇಂದ್ರ, ದಿನಾಂಕ ಹಾಗೂ ಶಿಫ್ಟ್ ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಜೊತೆಗೆ ರಿಪೋರ್ಟಿಂಗ್ ಸಮಯಕ್ಕೂ ಮುನ್ನವೇ ಪರೀಕ್ಷಾ ಕೇಂದ್ರಕ್ಕೆ ತಲುಪುವಂತೆ ಎನ್ ಟಿಎ ಸೂಚಿಸಿದೆ.

Also Read:

ಫೈನಲಿ ವಿಜಯ್ ತಮಿಳುನಾಡು ಸಿಎಂ! ಟಿವಿಕೆ ಸರ್ಕಾರದ ಟಾಪ್ ಸಚಿವರು ಯಾರು ಗೊತ್ತಾ ?

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online