<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ
Summary: The Congress has taken a serious view that the Modi government is giving more priority to the interests of oil companies than the interests of the common people. The Congress has accused the government of being unfair to the common people with its stance on fuel prices and policies.

belagavi news :

ಕಳೆದ ಹತ್ತು ದಿನಗಳಲ್ಲಿ ಪೆಟ್ರೋಲ್ ಬೆಲೆ ಮೂರನೇ ಬಾರಿ ಏರಿಕೆಯಾಗಿದೆ ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿರುವ ಕಾಂಗ್ರೆಸ್,"ದುಬಾರಿ ಮನುಷ್ಯ ಮೋದಿ"ಎಂದು ಕಿಡಿ ಕಾರಿದ್ದಾರೆ. ಕಳೆದ 9 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಸುಮಾರು ಐದು ರೂಪಾಯಿ ಏರಿಸಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಇಂದು ಮತ್ತೆ ಪೆಟ್ರೋಲ್ ದರವನ್ನು 94 ಪೈಸೆ ಮತ್ತು ಡಿಸೈನ್ ದರವನ್ನು ರೂ.95 ಎಂದು ಹೇಳಿದೆ. ಇಂಧನಧರ ಏರಿಕೆಯಿಂದ ಜನಸಾಮಾನ್ಯರ ಜೀವನ ವೆಚ್ಚ ಹೆಚ್ಚುತ್ತಿದ್ದು, ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಏರುತ್ತಿರುವ ಹಣ ದುಬ್ಬರದ ನಡುವೆ ಸರಕಾರದ ನಿಲುವಿನ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಸಾಮಾನ್ಯ ಜನರು ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸುತ್ತಿರುವಾಗ, ಅವರಿಗೆ ಪರಿಹಾರ ನೀಡುವ ಬದಲಾಗಿ ಮೋದಿ ಸರ್ಕಾರ ತೈಲ ಕಂಪನಿಗಳ ಹಿತಾಸಕ್ತಿಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಆರೋಪಿಸಿದೆ. ಇತರ ದೇಶಗಳ ಸರ್ಕಾರಗಳು ತಮ್ಮ ನಾಗರಿಕ ಕಲ್ಯಾಣಕ್ಕೆ ಒತ್ತು ನೀಡುತ್ತಿದ್ದರೆ,ಮೋದಿ ಸರ್ಕಾರ ಕೇವಲ ತೈಲ ಕಂಪನಿಗಳ ಲಾಭದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದೆ ಎಂದು ಕಾಂಗ್ರೆಸ್ ಟೀಕಿಸಿದೆ.

ಸರ್ಕಾರವು ಜನರಿಂದಲೇ ಲೂಟಿ ಮಾಡುವ ಮಟ್ಟಕ್ಕೆ ಇದೆ ಎಂದು ಆರೋಪಿಸಿರುವ ಕಾಂಗ್ರೆಸ್,"ಒಮ್ಮೆ ಜನರ ಕಲ್ಯಾಣದ ಬಗ್ಗೆ ಚಿಂತಿಸಿ"ಎಂದು ಪ್ರಶಿಸಿದೆ. ಜೊತೆಗೆ, ಎಷ್ಟು ದಿನ ಹೀಗೆ ಬಂಡವಾಳ ಶಾಹಿ ಪರವಾಗಿ ನೀತಿ ರೂಪಿಸಿದ್ದೀರಿ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರವು ಇಂದು ಪೆಟ್ರೋಲ್, ಡೀಸೆಲ್ ಹಾಗೂ ಸಿಎನ್ಜಿ ಬೆಲೆಗಳನ್ನು ಮತ್ತೆ ಹೆಚ್ಚಿಸಿದೆ. ಜಾಗತಿಕ ಇಂಧನ ಮಾರುಕಟ್ಟೆಯ ಅಸ್ಥಿರತೆ ಮುಂದುವರೆದಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಇದು ಕಳೆದ ಹತ್ತು ದಿನಗಳಲ್ಲಿ ಮೂರನೇ ಬಾರಿ ನಡೆದ ದರ ಏರಿಕೆಯಾಗಿದ್ದು, ಪಶ್ಚಿಮ ಏಷ್ಯಾದ ಸಂಘರ್ಷದಿಂದ ಉಂಟಾಗಿರುವ ಇಂಧನ ಬಿಕ್ಕಟ್ಟು ಜಾಗತಿಕ ಮಟ್ಟದಲ್ಲಿ ಪರಿಣಾಮ ಬೀರುತ್ತಿದೆ. ಕಚ್ಚಾತ ಇಲ್ಲದ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ದುರ್ಬಲ ವಾಗಿರುವುದೂ ದರ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಹಿಂದಿನ ಏರಿಕೆಗಳನ್ನು ನೋಡಿದರೆ, ಮೇ 15ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ ಗೆ ತಲಾ ₹3 ಹೆಚ್ಚಿಸಲಾಗಿತ್ತು. ನಂತರ ಮೇ 19 ರಂದು ಲೀಟರ್ ಗೆ 90 ಪೈಸೆ ಹೆಚ್ಚಳವಾಗಿತ್ತು. ಇಂದು ಮತ್ತೆ ಸುಮಾರು 94 ಪೈಸೆ ಹೆಚ್ಚಳ ಮಾಡಲಾಗಿದೆ.

Also Read:

ರಾಯರ ಹಾಡುಗಳ ನೆನಪಿನಲ್ಲಿ ನಟಿ ತಾರಾ : ಡಾ. ರಾಜಕುಮಾರ್ ಬಗ್ಗೆ ವಿಶೇಷ ಹೇಳಿಕೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online