<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಜಿಬಿಎ ಚುನಾವಣೆಗೆ ಜೆಡಿಎಸ್ ನೊಂದಿಗೆ ಚರ್ಚೆ

ಜಿಬಿಎ ಚುನಾವಣೆಗೆ ಜೆಡಿಎಸ್ ನೊಂದಿಗೆ ಚರ್ಚೆ
Summary: ಜಿಬಿಎ ಚುನಾವಣೆ ಚಾಲನೆಗೆ ಜೆಡಿಎಸ್ ಶಾಸಕರೊಂದಿಗೆ ಚರ್ಚೆಯನ್ನು ನಡೆಸಿ ಅವರ ಅಭಿಪ್ರಾಯಗಳನ್ನು ಪಡೆದು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.

Belagavi news :

ಬಿಜೆಪಿಯ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ಜಿಬಿಎ ಚುನಾವಣೆಯ ಬಗ್ಗೆ ಮಾತನಾಡುವ ಸಂದರ್ಭದಲ್ಲಿ,ಜೆಡಿಎಸ್ ನೊಂದಿಗೆ ಚರ್ಚಿಸಿ ಅವರಿಂದ ಅಭಿಪ್ರಾಯಗಳನ್ನು ಪಡೆದು ಚುನಾವಣೆಯ ಬಗ್ಗೆ ಸಿದ್ಧತೆಯನ್ನು ಮಾಡಿಕೊಳ್ಳುತ್ತೇವೆ ಎಂದು ವ್ಯಕ್ತಪಡಿಸಿದರು.

ವಿಜಯೇಂದ್ರ ಅವರು ಜಿಬಿಎ ಚುನಾವಣೆಯ ಕುರಿತು ವಿಶೇಷ ಸಭೆಯನ್ನು ಏರ್ಪಡಿಸಿದರು. ಆ ಸಭೆಯಲ್ಲಿ ಬಿ.ವೈ.ವಿಜಯೇಂದ್ರ ಅವರು,ಈ ಚುನಾವಣೆಯನ್ನು ಜೆಡಿಎಸ್ ಜೊತೆ ಚರ್ಚಿಸಿ ಅವರಿಂದ ಬರುವಂತಹ ಅಭಿಪ್ರಾಯಗಳನ್ನು ಸಂಗ್ರಹಿಸಿ ಜಿಬಿಎ ಪಾಲಿಕೆಗಳ ಚುನಾವಣೆಗೆ ತಯಾರಿಯನ್ನು ನಿರ್ಧರಿಸುತ್ತೇವೆ ಎಂದು ಹೇಳುವ ಮೂಲಕ ಈ ಸಭೆಗೆ ಮುನ್ನಡೆ ನೀಡಿದರು.

ಜಿಬಿಎ ಚುನಾವಣೆ ಸಲುವಾಗಿ ನಿನ್ನೆ ಅಂದರೆ ಶನಿವಾರ, ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಸಭೆಯನ್ನು ಏರ್ಪಡಿಸಲಾಗಿತ್ತು. ಸಭೆಯ ಬಳಿಕ ಮಾತನಾಡಿದ ವಿಜಯೇಂದ್ರ ಅವರು, "ಈ ಜಿಬಿಎ ಚುನಾವಣೆಯಲ್ಲಿ ನಾವು ಜೆಡಿಎಸ್ ನೊಂದಿಗೆ ಚರ್ಚೆಯನ್ನು ನಡೆಸಿ ಬಿಜೆಪಿಯ ಹಿರಿಯ ನಾಯಕ ತಂಡ ಮಾಡಿ,ಜೊತೆಗಿ ಜೆಡಿಎಸ್ ನೊಂದಿಗೆ ಚರ್ಚೆಯನ್ನು ನಡೆಸಿ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ" ಎಂದು ಸ್ಪಷ್ಟವಾಗಿ ಹೇಳುವುದರ ಮೂಲಕ ಸಭೆಯನ್ನು ಮುನ್ನಡೆಸಿದರು.

ಬಿ.ವೈ.ವಿಜಯೇಂದ್ರ ಅವರು ಮೈತ್ರಿಯ ಬಗ್ಗೆ ದೇವೇಗೌಡರ ಅವರ ಅಭಿಪ್ರಾಯಗಳು ಹೇಳಿದ್ದಾರೆ,ನಾನು ಇದರ ಬಗ್ಗೆಯೂ ಮಾತನಾಡಿದ್ದೇನೆ ಶೀಘ್ರದಲ್ಲೇ ಚರ್ಚೆಯನ್ನು ನಡೆಸಿ ಜಿಬಿಎ ಚುನಾವಣೆಯ ಬಗ್ಗೆ ಮಾಹಿತಿಗಳನ್ನು ನೀಡುತ್ತೇವೆ ಎಂದು ಸ್ಪಷ್ಟವಾಗಿ ತಿಳಿಸಿದರು.

ಜಿಬಿಎ ಚುನಾವಣೆಗೆ ಬೇಕಾದ ಅಭ್ಯರ್ಥಿಗಳ ಆಯ್ಕೆಯನ್ನು ಶೀಘ್ರದಲ್ಲೇ ಪ್ರಾರಂಭಿಸುತ್ತೇವೆ:

ನಿನ್ನೆ ನಡೆದ ಸಭೆಯಲ್ಲಿ,ಮಾತನಾಡಿದ ವಿಜಯೇಂದ್ರ ಅವರು ಜಿಬಿಎ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯನ್ನು ಶೀಘ್ರದಲ್ಲಿ ಪ್ರಾರಂಭಿಸುತ್ತೇವೆ ಎಂದು ಈ ರೀತಿಯಾಗಿ ಹೇಳಿದರು. ಜಿಬಿಎ ಚುನಾವಣೆ ಯಾವಾಗ ನಡೆದರೂ ನಾವು ಗೆಲ್ಲುತ್ತೇವೆ ಎಂಬ ಭರವಸೆಯೊಂದಿಗೆ ಕಾಂಗ್ರೆಸ್ ಪಕ್ಷದ ನಡುವೆಯೂ ಬಿಜೆಪಿಯು ಐದು ಬಾರಿ ಜಿಬಿಎಯನ್ನು ಗೆದ್ದು ಒಳ್ಳೆಯ ಅವಕಾಶಗಳನ್ನು ಪಡೆದಿದೆ.

ಹೀಗಾಗಿ ಈ ಜಿಬಿಎ ಚುನಾವಣೆಗೆ ಬೇಕಾದ ಅಭ್ಯರ್ಥಿಗಳ ಆಯ್ಕೆಯನ್ನು ಅತಿ ಶೀಘ್ರದಲ್ಲಿ ಪ್ರಾರಂಭಿಸಬೇಕು ಎನ್ನುವುದು ಇದರ ಮಾತಾಗಿದೆ.ಫೆಬ್ರುವರಿ 28 ಮತ್ತು ಮಾರ್ಚ್ 1 ರಂದು ಜಿಬಿಎ ಪ್ರತ್ಯೇಕ ಸಭೆಯನ್ನು ಕರೆಯಬೇಕು ಎಂದು ತಿಳಿಸಿದರು. ಈ ಸಭೆಯಲ್ಲಿ ಹಿರಿಯ ನಾಯಕರೆಲ್ಲರೂ ಕೂಡ ಭಾಗವಹಿಸುತ್ತಾರೆ ಜೊತೆಗೆ ಕಾರ್ಯಕರ್ತರ ಅಭಿಪ್ರಾಯಗಳನ್ನು ಮತ್ತು ಸಲಹೆಗಳನ್ನು ಪಡೆಯುವುದರ ಮೂಲಕ ಆಯ್ಕೆ ಪ್ರಕ್ರಿಯೆ ಕುರಿತು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಜಿಬಿಎ ಚುನಾವಣೆಯ ಬಗ್ಗೆ ಮಾತನಾಡುವ ಜೊತೆಗೆ ಬಿ.ವೈ.ವಿಜಯೇಂದ್ರ ಅವರು,5 ಜಿಬಿಎ ಪಾಲಿಕೆಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ಸರ್ವ ಸಂಕಲ್ಪವೊಂದಿಗೆ ಮುನ್ನಡೆಯುತ್ತಿದ್ದೇವೆ ಎಂದು ಈ ಸಭೆಯಲ್ಲಿ ವ್ಯಕ್ತಪಡಿಸಿದರು.ಈ ಸಭೆಯಲ್ಲಿ ವಿಜಯೇಂದ್ರ ಅವರಷ್ಟೇ ಅಲ್ಲದೆ, ರಾಷ್ಟ್ರೀಯ ಅಧ್ಯಕ್ಷರು ಜಿ ಬಿ ಚುನಾವಣೆಯ ನೇಮಕ ಮಾಡಿದ ಉಸ್ತುವಾರಿ ರಾಮ್ ಮಾಧವ್ ಜಿ,ಮತ್ತು ಸಹ ಉಸ್ತುವಾರಿ ಸತೀಶ್ ಪುನಿಯಾ ಜೊತೆಗೆ ಸಂಜಯ್ ಉಪಾಧ್ಯಾಯ ಕೂಡ ಭಾಗವಹಿಸಿದ್ದರು.

ಇವರ ಜೊತೆಗೆ ವಿಪಕ್ಷ ನಾಯಕರದ ಆರ್ ಅಶೋಕ್, ಚಲವಾದಿ ನಾರಾಯಣಸ್ವಾಮಿ, ನಮ್ಮೆಲ್ಲ ಸಂಸದರು, ಶಾಸಕರು ಇಂದಿನ ಮೇಯರ್ ಗಳು ,ಉಪಮೇಯರಗಳು ಕಾರ್ಪೊರೇಟರ್ಗಳು ಹಿಂದಿನ ಹಿರಿಯ ಕಾರ್ಯಕರ್ತರು ಕೂಡ ಈ ಸಭೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದರು.

ಇದಿಷ್ಟೇ ಅಲ್ಲದೆ, ಈ ಸಭೆಯಲ್ಲಿಬೆಂಗಳೂರು ಮಹಾನಗರ ಗಾರ್ಡನ್ ಸಿಟಿ ಇದೀಗ ಗಾರ್ಬೇಜ್ ಸಿಟಿಯಾಗಿ ಪರಿವರ್ತನೆಯಾಗಿದೆ ಎಂದು ಉಸ್ತುವಾರಿ ಸಚಿವರು ಅಥವಾ ಕಾಂಗ್ರೆಸ್ ಸರ್ಕಾರವು ಅಭಿವೃದ್ಧಿ ವಿಚಾರದಲ್ಲಿ ಬೆಂಗಳೂರು ಮಹಾನಗರಕ್ಕೆ ಆದ್ಯತೆ ನೀಡಿಲ್ಲ ಎಂಬುದು ತೀವ್ರವಾಗಿ ಚರ್ಚೆಗೆ ಒಳಪಟ್ಟಿದೆ. ಈ ಬೆಂಗಳೂರು ಮಹಾನಗರವು ಕೇವಲ ಭಾರತಕ್ಕೆ ಅಷ್ಟೇ ಸೀಮಿತವಾಗದೆ ಜಗತ್ತಿನಲ್ಲಿ ಹೆಸರುವಾಸಿಯಾಗಿದೆ ಆದ್ದರಿಂದ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ಹೇಳಿದರು.

ಶನಿವಾರ ನಡೆದಂತಹ ಈ ಸಭೆಯಲ್ಲಿ, ಟೆನಲ ರೋಡ್ ಬಗ್ಗೆ ಮಾತನಾಡುವ ಸಂದರ್ಭದಲ್ಲಿ, ಈ ನಮ್ಮ ಸರ್ಕಾರಕ್ಕೆ ಒಂದು ಗುಂಡಿ ಮುಚ್ಚಲು ಆಗುತ್ತಿಲ್ಲ ಎಂದು ತೀವ್ರವಾಗಿ ಟೀಕಿಸಿದರು. ಬ್ರಷ್ಟಾಚಾರ ಮತ್ತು ಬೆಲೆ ಏರಿಕೆ ನಡೆದಿದೆ ಇದೆಲ್ಲದರ ಪರಿಣಾಮವಾಗಿ ಬೆಂಗಳೂರು ಮಹಾನಗರದ ಜನತೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಬೇಸತ್ತು ಹೋಗಿದ್ದಾರೆ.ಇದರ ಜೊತೆಗೆ ಇನ್ನೊಂದು ಕಡೆ ಡಿ.ಕೆ.ಶಿವಕುಮಾರ್ ಅವರು ಅಪಾರ್ಟ್ಮೆಂಟ್ ವೆಲ್ಫೇರ್ ಅಸೋಸಿಯೇಷನ್ ನವರನ್ನು ಭೇಟಿ ಮಾಡಿದಾಗ ಅವರು ಮಾತನಾಡಿರುವಂತ ಶೈಲಿಮತ್ತು ಅವರ ನಡವಳಿಕೆಯನ್ನು ಜನರು ಗಮನಿಸಿದ್ದಾರೆ.

ಚರ್ಚೆಯಲ್ಲಿ ಕಾಂಗ್ರೆಸ್ ಸರ್ಕಾರದ ಮುದಲಿಕೆ :

ಈ ಜಿಬಿಎ ಸಭೆಯಲ್ಲಿ ಮಾತನಾಡಿದಂತಹ ಎಸ್ ಆರ್ ವಿಶ್ವನಾಥ್,ಬೆಂಗಳೂರಿಗೆ ಕಾಂಗ್ರೆಸ್ ಸರ್ಕಾರದಿಂದ ಆದಂತಹ ಅನ್ಯಾಯ,ಮತ್ತು ಯಾವುದೇ ಕೆಲಸ ಕಾರ್ಯ ಮಾಡದೆ ಯಾವುದೇ ಯೋಜನೆ ಜಾರಿಗೊಳಿಸದೆ ಸಾಕಷ್ಟು ತೆರಿಗೆಗಳನ್ನು ಹಾಕಿದೆ.ಇದೆಲ್ಲದರ ಬಗ್ಗೆ ವಿಶ್ವನಾಥ್ ಅವರು ಮಾತನಾಡಿದರು.

ಜಿಬಿಎ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಮುಖಭಂಗ ಮಾಡಲು ತೀರ್ಮಾನ ನಡೆಸಲಾಗಿದೆ. 5 ಜಿಬಿಎಗಳಲ್ಲಿ ನಾವು ಗೆಲ್ಲುತ್ತೇವೆ ಎಂದು ಸಲಹೆ ಕೊಟ್ಟಿದ್ದೇವೆ,ಹಿರಿಯರು ಕೂಡ ಇದಕ್ಕೆ ಮಾರ್ಗದರ್ಶನವನ್ನು ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಚುನಾವಣೆಯನ್ನು ಗೆಲ್ಲಲು ಮಾಡಬೇಕಾದ ಕಾರ್ಯತಂತ್ರದ ಬಗ್ಗೆ ಅಂತಿಮವಾಗಿ ಮೀಸಲಾತಿ ಪ್ರಕಟವಾದ ಬಳಿಕ ತೀರ್ಮಾನಗಳನ್ನು ಕೈಗೊಳ್ಳುತ್ತೇವೆ ಎಂದು ವಿವರಿಸಿದರು.

ಇನ್ನಷ್ಟು ಓದಿರಿ:

ಗೃಹಲಕ್ಷ್ಮೀ ಹಣ ಪಡೆಯುವವರಿಗೆ ಇದು ಕಡ್ಡಾಯ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online