<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಗ್ಯಾಸ್ ಬೆಲೆ ಶಾಕ್! 19 ಕೆಜಿ ಕಮರ್ಷಿಯಲ್ ಸಿಲಿಂಡರ್ ದರ ಎಷ್ಟು ಗೊತ್ತಾ?

ಗ್ಯಾಸ್ ಬೆಲೆ ಶಾಕ್! 19 ಕೆಜಿ ಕಮರ್ಷಿಯಲ್ ಸಿಲಿಂಡರ್ ದರ ಎಷ್ಟು ಗೊತ್ತಾ?
Summary: The price of a 19 kg commercial gas cylinder changes every month and is determined based on the government's fuel revision. The price of cylinders used for hotels, restaurants and other commercial uses may vary slightly according to the state and city. In the wake of the recent price changes, traders are curious about how much a 19 kg cylinder costs.

belagavi news:

ಮೈಸೂರು (ಮೇ 3): ವಾಣಿಜ್ಯ ಸಿಲಿಂಡರ್ ಗ್ಯಾಸ್ ಬೆಲೆ ಏರಿಕೆ ವಿಚಾರವಾಗಿ ಕೆಪಿಸಿಸಿ ವತ್ತಾರ್ ಎಂ. ಲಕ್ಷ್ಮಣ್ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅವರು ಕಚ್ಚಾ ತೈಲದ ಬೆಲೆ ಮತ್ತು 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ತಯಾರಿಕಾ ವೆಚ್ಚದ ಕುರಿತಾಗಿ ಪ್ರಶ್ನೆಗಳನ್ನು ಎತ್ತಿದ್ದು, ಸಿಲಿಂಡರ್ ದರ ನಿರ್ಧಾರದಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿದ್ದಾರೆ. 19 ಕೆಜಿ ಗ್ಯಾಸ್ ಸಿಲಿಂಡರ್ ತಯಾರಿಕೆಗೆ ಎಷ್ಟು ಖರ್ಚಾಗುತ್ತದೆ ಎಂಬುದನ್ನು ವಿವರವಾಗಿ ಹೇಳುತ್ತಾ , ಬೆಲೆ ಏರಿಕೆಯ ಹಿಂದಿನ ಕಾರಣಗಳನ್ನು ಸರ್ಕಾರ ಸ್ಪಷ್ಟ ಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮೈಸೂರಿನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವತ್ತಾರ್ ಎಂ. ಲಕ್ಷ್ಮಣ್ ಮಾತನಾಡಿದರು. ಅವರು ಕಚ್ಚಾ ತೈಲದಿಂದ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ತಯಾರಿಕೆಗೆ ಆಗುವ ವೆಚ್ಚದ ವಿವರಗಳನ್ನು ನೀಡಿದರು. ಅವರ ಪ್ರಕಾರ, ಕಚ್ಚಾ ತೈಲ ದಿಂದ ಸಿಲಿಂಡರ್ ತಯಾರಿಕೆಗೆ ಸುಮಾರು 1900 ರೂಪಾಯಿ ವೆಚ್ಚವಾಗುತ್ತದೆ. ಸಿಪ್ಪಿಂಗ್, ಟ್ರಾನ್ಸ್ಪೋರ್ಟ್, ರೀ ಫೈನಿಂಗ್ ಮತ್ತು ಡೀಲರ್ ಕಮಿಷನ್ ಸೇರಿ ಒಟ್ಟು ವೆಚ್ಚ ಸುಮಾರು 2370 ರೂಪಾಯಿವರೆಗೆ ತಲುಪುತ್ತದೆ ಎಂದವರು ಹೇಳಿದರು.

Sponsored

ಆದರೆ ಕೇಂದ್ರ ಸರ್ಕಾರ ಈಗ ಅದೇ 19 ಕೆ.ಜಿ ಸಿಲಿಂಡರ್ ಅನ್ನು 3155 ರೂಪಾಯಿಗೆ ಮಾರಾಟ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ಇದರ ಜೊತೆಗೆ ಜಿಎಸ್ಟಿ ಹೆಚ್ಚುವರಿ ಯಾಗಿ ವಿಧಿಸಲಾಗುತ್ತಿದೆ ಎಂದವರು ತಿಳಿಸಿದರು.

ಮೇ 1ರಂದು ಕೇಂದ್ರ ಸರ್ಕಾರ ಏಕಾಏಕಿ 993 ರೂ. ಗ್ಯಾಸ್ ದರ ಏರಿಕೆ ಮಾಡುವ ಮೂಲಕ ಜನರಿಗೆ ಶಾಕ್ ನೀಡಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದ್ದಾರೆ.

ಈ ವರ್ಷದಲ್ಲೇ ಗ್ಯಾಸ್ ಬೆಲೆ ಐದು ಬಾರಿ ಹೆಚ್ಚಿಸಲಾಗಿದೆ ಎಂದು ಹೇಳಿದವರು 2026 ಜನವರಿ ಆರಂಭದಲ್ಲಿ 19 ಕೆ.ಜಿ ಸಿಲಿಂಡರ್ ದರ 1774 ರೂ. ಇತ್ತು. ಆದರೆ ಈಗ ಜಿಎಸ್ಟಿ ಸೇರಿ ಅದು ಸುಮಾರು 4,000 ರೂ. ತಲುಪಿದೆ ಎಂದು ತಿಳಿಸಿದ್ದಾರೆ. ಗ್ಯಾಸ್ ಸಿಲಿಂಡರ್ ಗಳ ಕೃತಕ ಅಭಾವವನ್ನು ಕೇಂದ್ರ ಸರ್ಕಾರವೇ ಸೃಷ್ಟಿಸುತ್ತಿದೆ ಎಂದು ಅವರು ಆರೋಪಿಸಿದ್ದು , ಗೃಹ ಬಳಿಕೆಯ ಸಿಲಿಂಡರ್ ಬೆಲೆಯೋ ಶೀಘ್ರದಲ್ಲೇ ಹೆಚ್ಚುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇದಲ್ಲದೆ ವೈಟ್ ಪೆಟ್ರೋಲ್ ಬೆಲೆ 7 ರೂ. ಹೆಚ್ಚಿಸಲಾಗಿದೆ ಹಾಗೂ ಎಕ್ಸ್ಪೋರ್ಟ್ ಪೆಟ್ರೋಲ್ ಗೆ 23 ರೂ. ಕಡಿತ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಯುದ್ಧದ ಪರಿಸ್ಥಿತಿ ಮುಂದುವರೆಯಿದ್ದರೆ ನಿಜವಾಗಿಯೂ ದೇಶಕ್ಕೆ ನಷ್ಟವಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಅವರು ಎತ್ತಿದ್ದಾರೆ.

Sponsored

ಮೈಸೂರಿನಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಯುದ್ಧ ಆರಂಭವಾದ ಬಳಿಕ ದೇಶಕ್ಕೆ ಸುಮಾರು 35000 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಹೇಳಿದ್ದಾರೆ. 14 ಕೆಜಿ ಗೃಹ ಬಳಕೆಯ ಸಿಲಿಂಡರ್ ದರ 915 ಆಗಿದ್ದು, ಅದರ ಮೇಲೆ 18% ಜಿಎಸ್ಟಿ ವಿಧಿಸಲಾಗುತ್ತಿದೆ ಎಂದವರು ತಿಳಿಸಿದರು.

ಬಿಜೆಪಿ ಸರ್ಕಾರ ಬಡವರ ಮೇಲೆ ಆರ್ಥಿಕ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದವರು ಕಾಂಗ್ರೆಸ್ ಸರ್ಕಾರ 1-2 ರೂಪಾಯಿದರ ಹೆಚ್ಚಿಸಿದರೆ ಅದಕ್ಕೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗುತ್ತದೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವವರು ಕೇಂದ್ರ ಸರ್ಕಾರದ ನೀತಿಗಳ ಬಗ್ಗೆ ಏಕೆ ಮೌನವಾಗಿದ್ದಾರೆ ಎಂಬ ಪ್ರಶ್ನೆಯನ್ನು ಎತ್ತಿದ ಅವರು ಕೇಂದ್ರದ ನೀತಿಗಳ ವಿರುದ್ಧವು ಧ್ವನಿ ಎತ್ತಬೇಕು ಎಂದು ವಾಗ್ದಾಳಿ ನಡೆಸಿದರು.

Also Read:

Sponsored

ಭಾನುವಾರದ ದಿನ ಭವಿಷ್ಯ: ಇಂದಿನ ನಿಮ್ಮ ರಾಶಿಯಲ್ಲಿ ಏನು ಇದೆ? ತಿಳಿದುಕೊಳ್ಳಿ!

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online