<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Life_Style

ಎಸಿ ಏರ್ ಕೂಲರ್ ಬಳಸುವಾಗ ಈ ತಪ್ಪು ಬೇಡ: ಸುರಕ್ಷತಾ ಟಿಪ್ಸ್ ಇಲ್ಲಿವೆ

ಎಸಿ ಏರ್ ಕೂಲರ್ ಬಳಸುವಾಗ ಈ ತಪ್ಪು ಬೇಡ: ಸುರಕ್ಷತಾ ಟಿಪ್ಸ್ ಇಲ್ಲಿವೆ
Summary: With the increasing use of ACs and air coolers in summer, experts are warning that there is a possibility of danger if they are not used properly.

belagavi news:

ಬೇಸಿಗೆ ಹೋಲಿಸಿದರೆ, ಏರ್ ಕೂಲರ್ ಸ್ಪೋಟಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಇವುಗಳನ್ನು ನಿರ್ವಹಿಸುವಾಗ ಕೆಲವು ತಪ್ಪುಗಳನ್ನು ಮಾಡಬಾರದು ಎಂದು ತಜ್ಞರು ತಿಳಿಸುತ್ತಾರೆ.

ಬೇಸಿಗೆಯ ತೀವ್ರ ಸೆಖೆ ಮತ್ತು ತೇವಾಂಶದಿಂದ ತಪ್ಪಿಸಿಕೊಳ್ಳಲು ಅನೇಕರು ಎಸಿ ಹಾಗೂ ಏರ್ ಕೂಲರ್ ಗಳನ್ನು ಬಳಸುತ್ತಾರೆ. ಎಸಿ ಬಳಕೆದಾರರಿಗೆ ಸಾಮಾನ್ಯವಾಗಿ ಹೆಚ್ಚು ತೊಂದರೆಗಳು ಕಾಣಿಸಿಕೊಳ್ಳುವುದಿಲ್ಲ. ಆದರೆ ಏರ್ ಕೂಲರ್ ಗಳನ್ನು ಬಳಸುವವರು ಕೆಲಸಗಳನ್ನು ಎದುರಿಸುವ ಸಾಧ್ಯತೆ ಹೆಚ್ಚಿದೆ ಎಂದು ತಜ್ಞರು ಹೇಳುತ್ತಾರೆ.

ಬಿಸಿಲು ತೀವ್ರ ವಾಗಿರುವ ಸಮಯದಲ್ಲಿ ಕೂಲರ್ ಬಳಸಿದರು ಕೋಣೆಯ ಉಷ್ಣತೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವುದು ಸಾಧ್ಯವಾಗುವುದಿಲ್ಲ.

Sponsored

ಜೊತೆಗೆ ಕೂಲರ್ ಚಾಲನೆಯಲ್ಲಿರುವಾಗ ಕೋಣೆ ಒಳಗೆ ತೇವಾಂಶ ಹೆಚ್ಚಾಗಿ ಜಮೆ ಯಾಗುತ್ತದೆ. ಇದರಿಂದ ಜಿಗುಟಾದ ಅನುಭವ ಉಂಟಾಗಿ, ಅತಿಯಾಗಿ ಬೆವರುವುದು ಹಾಗೂ ಚರ್ಮ ಎಣ್ಣೆ ಯುಕ್ತವಾಗುವುದು ಸಾಮಾನ್ಯ. ಕೋಣೆಯೊಳಗಿನ ತೇವಾಂಶ ಸರಿಯಾಗಿ ಹೊರಹೋಗತಿರುವುದೇ ಈ ಸಮಸ್ಯೆಗಳ ಪ್ರಮುಖ ಕಾರಣವಾಗಿದೆ. ಆದರಿಂದ ಕೂಲರ್ ಬಳಸುವಾಗ ಸರಿಯಾದ ಗಾಳಿ ಹರಿವು (ವೆಂಟಿಲೇಶನ್) ಇರಲು ಕಿಟಕಿಗಳನ್ನು ತೆರೆದಿಡುವುದು, ಕೋಣೆಯ ತೇವಾಂಶವನ್ನು ನಿಯಂತ್ರಿಸುವುದು ಅಗತ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಜೊತೆಗೆ, ಏರ್ ಕೂಲರ್ ಬಳಸುವಾಗ ಹಲವಾರು ಇತರ ತಪ್ಪುಗಳನ್ನು ಮಾಡದಂತೆ ತಜ್ಞರು ಸಲಹೆ ನೀಡುತ್ತಾರೆ ಏಕೆಂದರೆ ಕೂಲರ್ ಬಳಕೆಯಲ್ಲಿನ ಕೆಳ ದೋಷಗಳಿಂದಾಗಿ ಸಂಭಾವ್ಯ ಸ್ಪೋಟದ ಅಪಾಯ ಹೆಚ್ಚಿರುತ್ತದೆ. ಎಸಿ ಮತ್ತು ಕೂಲರ್ ಬಳಸುವಾಗ ನೀವು ಮಾಡಬಾರದ ತಪ್ಪುಗಳು ಯಾವುವು ಎಂಬುದನ್ನು ತಿಳಿಯೋಣ.

ಬೆಂಕಿ ಹೊತ್ತಿಕೊಳ್ಳುವ ಅಪಾಯ: ಬೇಸಿಗೆ ದಿನಗಳಲ್ಲಿ ಏರ್ ಕೂಲರ್ ಬಳಸುವಾಗ ಕೆಲ ಮುನ್ನೆಚ್ಚರಿಕೆಗಳನ್ನು ಪಾಲಿಸದಿದ್ದರೆ ಬೆಂಕಿ ಹತ್ತಿಕೊಳ್ಳುವ ಅಪಾಯ ಹೆಚ್ಚಾಗುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ. ವಿಶೇಷವಾಗಿ ತಾಪಮಾನವು 40°C ಗಿಂತ ಹೆಚ್ಚಾದ ಸಂದರ್ಭಗಳಲ್ಲಿ ಮತ್ತು ಸ್ಕೂಲರನ್ನು ನಿರಂತರವಾಗಿ ಹತ್ತರಿಂದ ಹನ್ನೆರಡು ಗಂಟೆಗಳಿಗಿಂತ ಹೆಚ್ಚು ಕಾಲ ಚಾಲನೆಯಲ್ಲಿಟ್ಟರೆ ಅದರ ಮೋಟರ್ ಹೆಚ್ಚು ಬಿಸಿ ಆಗುವ ಸಾಧ್ಯತೆ ಇರುತ್ತದೆ.

ಇಂತಹ ಅತಿಯಾದ ತಾಪಮಾನದಿಂದ ಕೂಲರ್ ನೇರವಾಗಿ ಸ್ಫೋಟ ಗೊಳ್ಳುವ ಸಂಭವ ಕಡಿಮೆ ಇದ್ದರೂ ಮೋಟರ್ ಬರ್ನ್ ಆಗುವುದು ಅಥವಾ ಒಳಗಿನ ಭಾಗಗಳು ಹೆಚ್ಚು ಬಿಸಿಯಾಗಿ ಬೆಂಕಿ ಕಾಣಿಸಿಕೊಳ್ಳುವ ಅಪಾಯ ಹೆಚ್ಚಾಗುತ್ತದೆ. ಆದರಿಂದ ಕೂಲರ್ ಅನ್ನು ಮಧ್ಯೆ ಮಧ್ಯೆ ಆಫ್ ಮಾಡಿ ವಿರಾಮ ನೀಡುವುದು ಸರಿಯಾದ ನಿರ್ವಹಣೆ ಮಾಡುವುದು ಹಾಗೂ ಅತಿಯಾದ ಬಳಿಕೆಯನ್ನು ತಪ್ಪಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ತಜ್ಞರು ಸಲಹೆ ನೀಡಿದ್ದಾರೆ.

Sponsored

ಮೋಟರ್ ಮೇಲಿನ ಅತಿಯಾದ ಒತ್ತಡ: ಏರ್ ಕೂಲರ್ ನಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗಿರುವಾಗ ಅದನ್ನು ಚಾಲನೆಯಲ್ಲಿಡುವುದು ಅತ್ಯಂತ ಅಪಾಯಕಾರಿಯಂದು ತಜ್ಞರು ಎಚ್ಚರಿಸುತ್ತಾರೆ. ಕೂಲರ್ ಒಣಗಿದ ಸ್ಥಿತಿಯಲ್ಲಿ ಕಾರ್ಯನಿರ್ವಹಿಸಿದರೆ ಮೋಟರ್ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ನೀರಿನ ಅಭಾವದಿಂದ ಕೂಲರ್ ಸ್ಥಿತಿಕರಣ ವ್ಯವಸ್ಥೆ ಸರಿಯಾಗಿ ಕೆಲಸ ಮಾಡದೆ ಮೋಟರನ್ನ ಆಂತರಿಕ ವಿಂಡಿಂಗ್ ಗಳು ಹೆಚ್ಚು ಬಿಸಿ ಆಗುವ ಸಾಧ್ಯತೆ ಇರುತ್ತದೆ.

ಈ ಹೆಚ್ಚಿನ ತಾಪಮಾನದಿಂದ ಮೋಟರ್ ಸುಟ್ಟು ಹೋಗುವ ಸಂಭವವಿದ್ದು ಇದರಿಂದ ಬೆಂಕಿ ಅನಾಹುತಕ್ಕೂ ಕಾರಣವಾಗಬಹುದು. ಆದರಿಂದ ಕೂಲರ್ ಬಳಸುವ ಮುನ್ನ ನೀರಿನ ಮಟ್ಟವನ್ನು ಪರಿಶೀಲಿಸುವುದು ನಿಯಮಿತವಾಗಿ ಟ್ಯಾಂಕನ್ನು ತುಂಬಿಸುವುದು ಮತ್ತು ಒಣ ಸ್ಥಿತಿಯಲ್ಲಿ ಸಾಧನವನ್ನು ಚಾಲನೆ ಮಾಡುವುದನ್ನು ತಪ್ಪಿಸಿಕೊಳ್ಳುವುದು ಸುರಕ್ಷತೆಗಾಗಿ ಅಗತ್ಯವಾಗಿದೆ.

ನಿರ್ವಹಣೆಯ ಕೊರತೆ: ದೀರ್ಘ ಕಾಲದವರೆಗೆ ನಿರ್ವಹಣೆ ಮಾಡಿಲ್ಲವೆಂದರೆ ಮೋಟರ್ ಒಳಗೆ ಧೂಳು ತುಂಬಿಕೊಳ್ಳಬಹುದು. ಇದರಿಂದ ಮೋಟರ್ ಜಾಮ್ ಆಗುವ ಮೂಲಕ ಬೆಂಕಿ ಕಾಣಿಸಿಕೊಳ್ಳಬಹುದು ಇದಲ್ಲದೆ ದೋಷಪೂರಿತ ವಿದ್ಯುತ್ ಸರಬರಾಜು ಇಲ್ಲವೇ ದೋಷಪೂರಿತ ವೈರಿಂಗ್ ನಿಂದ ಶಾರ್ಟ್ ಸರ್ಕ್ಯೂಟ್ ಆಗಬಹುದು. ಇದರಿಂದಲೂ ಕೂಲರ್ ಬೆಂಕಿಗೆ ತುತ್ತಾಗುವ ಅಥವಾ ಸ್ಪೋಟಗೊಳ್ಳುವ ಅಪಾಯ ಹೆಚ್ಚಿರುತ್ತದೆ.

ಶಾರ್ಟ್ ಸರ್ಕ್ಯೂಟ್ ಅಪಾಯ: ಗಾಳಿ ಸರಿಯಾಗಿ ಹೊರಹೋಗದ ಸಣ್ಣ ಹಾಗೂ ಮುಚ್ಚಿದ ಕೋಣೆಯಲ್ಲಿ ಏರ್ ಕೂಲರ್ ಬಳಸಿದರೆ, ಒಳಗಿನ ಆದ್ರತೆಯ ಮಟ್ಟ ಹೆಚ್ಚಾಗುತ್ತದೆ. ಈ ಹೆಚ್ಚಿದ ತೇವಾಂಶದಿಂದ ವಿದ್ಯುತ್ ಭಾಗಗಳಲ್ಲಿ ತೊಂದರೆ ಉಂಟಾಗಿ ಶಾರ್ಟ್ ಸರ್ಕ್ಯೂಟ್ ಅಪಾಯ ಹೆಚ್ಚಾಗಬಹುದು ಜೊತೆಗೆ ಮೋಟರ್ ಹೆಚ್ಚು ಬಿಸಿಯಾದರೆ ಅಪಾಯ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದರಿಂದ ಸ್ವಯಂ ಆಪ್ (ಆಟೋ ಕಟ್) ಸೌಲಭ್ಯ ಹೊಂದಿರುವ ಕೂಲರ್ಗಳನ್ನು ಬಳಸುವುದು ಹೆಚ್ಚು ಸುರಕ್ಷಿತ ಎಂದು ತಜ್ಞರು ಸಲಹೆ ನೀಡುತ್ತಾರೆ.

Sponsored

ಅತಿಯಾದ ವಿದ್ಯುತ್ ಬಳಕೆ: ಏರ್ ಕೂಲರ್ ಗಳ ಸರಾಸರಿ ಆಯುಷ್ಯ ಬಳಕೆ ಮತ್ತು ನಿರ್ವಹಣೆಯನ್ನು ಅವಲಂಬಿಸಿ ಸುಮಾರು 6 ರಿಂದ 10 ವರ್ಷಗಳವರೆಗೆ ಇರುತ್ತದೆ. ಹಳೆಯ ಕೂಲರ್ ಗಳಲ್ಲಿ ಸಾಮಾನ್ಯವಾಗಿ ವಿದ್ಯುತ್ ಬಳಕೆ ಹೆಚ್ಚು ಇರುವ ಸಮಸ್ಯೆ ಕಂಡು ಬರುತ್ತದೆ. ಇಂದಿನ ಆಧುನಿಕ ಮತ್ತು ಶಕ್ತಿ ಸಮರ್ಥ ಕೂಲರ್ ಗಳು ಹಳೆಯ ಮಾದರಿಗಳಿಗಿಂತ 20ರಿಂದ 30 ಶೇಕಡಾ ವಿದ್ಯುತ್ ಉಳಿತಾಯ ಮಾಡುತ್ತವೆ. ಇದಲ್ಲದೆ ಹಳೆಯ ಕೂಲರ್ಗಳನ್ನು ಮರುಮರು ರಿಪೇರಿ ಮಾಡುವ ವೆಚ್ಚವು ಹೊಸ ಕೂಲರ್ ಕರಗಿಸುವ ಬೆಲೆಯ 40 ರಿಂದ 50 ಶೇಕಡ ವರೆಗೆ ತಲುಪಬಹುದು. ಆದ್ದರಿಂದ ಹೆಚ್ಚು ವೆಚ್ಚವಾಗುವ ಸ್ಥಿತಿಯಲ್ಲಿ ಹೊಸ ಸುರಕ್ಷಿತ ಮತ್ತು ಶಕ್ತಿ ಉಳಿತಾಯ ಕೂಲರ್ ಗೆ ಬದಲಾವಣೆ ಮಾಡುವುದು ಉತ್ತಮ ಆಯ್ಕೆಯಾಗಿದೆ.

ಅನುಸರಿಸಬೇಕಾದ ಸುರಕ್ಷತಾ ಸಲಹೆಗಳೇನು?

ಕೋಣೆಯಲ್ಲಿ ತಾಜಾ ಗಾಳಿಯು ಒಳಬರಲೂ ಹಾಗೂ ಹೊರಹೋಗಲು ಸಾಕಷ್ಟು ಅವಕಾಶವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ ಇದಕ್ಕಾಗಿ ಈ ಸಲಹೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಾಗುತ್ತದೆ.

ಫ್ರೆಶ್ ಗಾಳಿ ಬರಬೇಕಾದರೆ ಹಗಲಿನಲ್ಲಿ ಕಿಟಕಿಗಳನ್ನು ತೆರೆದಿಡಬೇಕಾಗುತ್ತದೆ. ಎಕ್ಸಾಸ್ಟ್ ಫ್ಯಾನಗಳನ್ನು ಬಳಸಿ ಹಾಗೂ ದಪ್ಪನೆಯ ಪರದೆಗಳ ತೆಳುವಾದ ಪರದೆಗಳನ್ನು ಆರಿಸಿಕೊಳ್ಳಿ.

Sponsored

ಬೇಸಿಗೆಯ ಆರಂಭದಲ್ಲಿ ಅದರ ಮಧ್ಯದಲ್ಲಿ ಕೂಲರ್ ಮೋಟರ್ ಮತ್ತು ಪಂಪ್ ಅನ್ನು ಒಮ್ಮೆ ಸ್ವಚ್ಛಗೊಳಿಸಲು ಮರೆಯಬೇಡಿ. ಹೀಗೆ ಮಾಡುವುದರಿಂದ ಕೂಲರ್ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲಿದೆ. ಜೊತೆಗೆ ಹೆಚ್ಚು ತಾಳ ಬಾಳಿಕೆ ಬರಲಿದೆ.

ಕೂಲರ್ ಸಾಕಷ್ಟು ಪ್ರಮಾಣದ ನೀರನ್ನು ಹೊಂದಿದೆ ಎಂದು ಯಾವಾಗಲೂ ಖಚಿತ ಪಡಿಸಿಕೊಳ್ಳಿ.

ಹಳೆಯ ಶೈಲಿಯ ಹುಲ್ಲಿನ ಪ್ಯಾಡ್ ಗಳ ಬದಲಿಗೆ ಹನಿಕೊಂಬ ಪ್ಯಾಡ್ ಗಳನ್ನು ಆಯ್ಕೆ ಮಾಡಿಕೊಂಡರೆ ಉತ್ತಮ.

Also Read:

Sponsored

"ಡೆವಿಲ್" ಹಾದಿಯಲ್ಲಿ ಸಾಗುತ್ತಿರುವ "ಕೆಡಿ"

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online