Belagavi news:
ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾ ತಂಡ ಆನ್ಲೈನ್ ನೆಗೆಟಿವ್ ವಿಮರ್ಶೆಗಳು ಮತ್ತು ಟ್ರೋಲ್ ಗಳಿಗೆ ಕಡಿವಾಣ ಹಾಕಲು ಹೊಸ ತಂತ್ರವನ್ನು ಅನುಸರಿಸಿದೆ. ಡೆವಿಲ್ ಸಿನಿಮಾದ ಮಾದರಿಯನ್ನು ಅನುಸರಿಸಿರುವ ತಂಡ, ಬುಕ್ ಮೈ ಶೋ ನಲ್ಲಿ ಸಿನಿಮಾಗಳ ರೇಟಿಂಗ್ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದೆ.
ಈ ಕ್ರಮದಿಂದ ವಾರ್, ಸುಳ್ಳು ವಿಮರ್ಶೆಗಳು ಮತ್ತು ಉದ್ದೇಶಪೂರ್ವಕ ನೆಗೆಟಿವ್ ಕ್ಯಾಂಪೇನ್ ಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ. ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚುತ್ತಿರುವ ಟ್ರೋಲ್ ಸಂಸ್ಕೃತಿಗೆ ಇದು ಪರಿಣಾಮಕಾರಿ ಉತ್ತರವೆಂದು ಹೇಳಲಾಗುತ್ತದೆ.
ಈ ತಂತ್ರ ಈಗ ಚಿತ್ರರಂಗದಲ್ಲಿ ಟ್ರೆಂಡ್ ಆಗುತ್ತಿದ್ದು, ಹಲೋ ಕನ್ನಡ ಹಾಗೂ ತೆಲುಗು ಸಿನಿಮಾಗಳು ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿವೆ. ಸಿನಿಮಾ ಬಿಡುಗಡೆಯ ಮುನ್ನವೇ ನೆಗೆಟಿವ್ ಪ್ರಚಾರವನ್ನು ತಡೆಯಲು ಇದು ಸಹಾಯಕವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಚಿತ್ರದ ಬಗ್ಗೆ ಅಭಿಮಾನಿಗಳ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೆಡಿ ತಂಡದ ಈ ನಡೆ ತಿನಿವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇಂದಿನ ಸೋಶಿಯಲ್ ಮೀಡಿಯಾ ಯುಗದಲ್ಲಿ ಯಾವುದೇ ಬಿಗ್ ಬಜೆಟ್ ಸಿನಿಮಾ ಬಿಡುಗಡೆಯಾದಾಗ ಅದರ ವಿರುದ್ಧ ನೆಗೆಟಿವ್ ಕಾಮೆಂಟ್ ಮತ್ತು ಟ್ರೋಲ್ ಗಳು ಹೆಚ್ಚಾಗುವುದು ಸಾಮಾನ್ಯವಾಗಿದೆ. ಅನೇಕ ಬಾರಿ ಉದ್ದೇಶಪೂರ್ವಕ ಟೀಕೆಗಳು, ಜೊತೆಗೆ ಫ್ಯಾನ್ ವಾರ್ಸ್ ಮತ್ತು ಸುಳ್ಳು ವಿಮರ್ಶೆಗಳು ಸಿನಿಮಾದ ಮೇಲೆ ಪ್ರಭಾವ ಬೀರುತ್ತವೆ. ಇಂತಹ ಪರಿಸ್ಥಿತಿಯನ್ನು ನಿಯಂತ್ರಿಸಲು ಹಲವು ಚಿತ್ರ ತಂಡಗಳು ಪ್ರಯತ್ನಿಸಿದರು, ಸಂಪೂರ್ಣ ಯಶಸ್ಸು ಸಿಕ್ಕಿರುವ ಉದಾಹರಣೆಗಳು ಕಡಿಮೆ.
ಆದರೆ ಡೆವಿಲ್ ಸಿನಿಮಾ ಈ ವಿಚಾರದಲ್ಲಿ ವಿಭಿನ್ನವಾಗಿ ಗಮನ ಸೆಳೆದಿದ್ದು, ಆನ್ಲೈನ್ ನೆಗೆಟಿವಿಟಿಯನ್ನು ನಿಯಂತ್ರಿಸುವಲ್ಲಿ ಯಶಸ್ಸು ಕಂಡಿತ್ತು. ಇದೇ ಮಾದರಿಯನ್ನು ಈಗ ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾ ತಂಡವು ಅನುಸರಿಸಿದೆ.
ಕೆಡಿ ಟೀಮ್ ಹೊಸ ತಂಡದ ಮೂಲಕ ಅನಗತ್ಯ ಟ್ರೋಲ್ ಗಳು, ಫೇಕ್ ರಿವ್ಯೂಗಳು ಮತ್ತು ನೆಗೆಟಿವ್ ಕ್ಯಾಂಪೇನ್ ಗಳನ್ನು ತಡೆಯಲು ಮುಂದಾಗಿದೆ. ಈ ನಡೆ ಸಿನಿ ವಲಯದಲ್ಲಿ ಚರ್ಚೆಗೆ ಗ್ರಾಸ ವಾಗಿದ್ದು, ಇತರ ಸಿನಿಮಾಗಳು ಇದೇ ವಿಧಾನವನ್ನು ಅನುಸರಿಸುವ ಸಾಧ್ಯತೆ ಇದೆ.
ಸೋಶಿಯಲ್ ಮೀಡಿಯಾ ಪ್ರಭಾವ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಸಿನಿಮಾ ಪ್ರಚಾರ ಮತ್ತು ರಕ್ಷಣೆ ಎರಡನ್ನು ಸಮತೋಲನದಲ್ಲಿಟ್ಟು ಕೊಳ್ಳಲು ಕೆಡಿ ತಂಡದ ಈ ಪ್ರಯತ್ನ ಗಮನಾರ್ಹವಾಗಿದೆ.
ಧ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾ ಏಪ್ರಿಲ್ 30 ರಂದು ಬಿಡುಗಡೆಯಾಗಿ, ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಪ್ರೇಕ್ಷಕರಿಂದ ಪಾಸಿಟಿವ್ ವಿಮರ್ಶೆಗಳು ಹರಿದು ಬರುತ್ತಿರುವ ನಡುವೆಯೇ ಬುಕ್ ಮೈ ಶೋ ನಲ್ಲಿ ಚಿತ್ರದ ರೇಟಿಂಗ್ ನೀಡುವ ಆಯ್ಕೆಯನ್ನು ತೆಗೆದು ಹಾಕಿರುವುದು ಗಮನ ಸೆಳೆದಿದೆ.
ಚಿತ್ರದ ಬಗ್ಗೆ ಉದ್ದೇಶಪೂರ್ವಕವಾಗಿ ಕೆಟ್ಟ ವಿಮರ್ಶ ನೀಡಲು ಯೋಜಿಸಿದ್ದವರಿಗೆ ಈ ಕ್ರಮ ದೊಡ್ಡ ಹೊಡೆತ ನೀಡಿದಂತಾಗಿದೆ. ಆನ್ಲೈನ್ ರೋಲ್ಗಳು ಮತ್ತು ಫೇಕ್ ರಿವ್ಯೂಗಳನ್ನು ತಡೆಯಲು ಕೆಡಿ ತಂಡ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.
ಇದಕ್ಕೂ ಮುನ್ನ ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಬಿಡುಗಡೆ ಸಮಯದಲ್ಲೂ ಇದೇ ರೀತಿ ಕ್ರಮ ಅನುಸರಿಸಲಾಗಿತ್ತು. ಆ ಸಮಯದಲ್ಲಿ ಕೆಲವು ನೆಗೆಟಿವ್ ಪ್ರಚಾರ ಆತಂಕ ಹಿನ್ನೆಲೆ, ತಂಡವು ಕಾನೂನು ಮಾರ್ಗವನ್ನು ಅನುಸರಿಸಿ ಬುಕ್ ಮೈ ಶೋನಲ್ಲಿ ನಿಷ್ಕ್ರಿಯಗೊಳಿಸಲು ಆದೇಶ ಪಡೆದಿತ್ತು. ಈ ಪ್ರಯೋಗ ಯಶಸ್ವಿಯಾಗಿದ್ದರಿಂದ ಈಗ ಕೆಡಿ ಸೇರಿದಂತೆ ಹಲವು ಸಿನಿಮಾಗಳು ಇದೇ ತಂತ್ರವನ್ನು ಅನುಸರಿಸುತ್ತೇವೆ.
ಸೋಶಿಯಲ್ ಮೀಡಿಯಾ ಪ್ರಭಾವ ಹೆಚ್ಚುತ್ತಿರುವ ಸಂದರ್ಭದಲ್ಲಿ ಸಿನಿಮಾ ಮೇಲಿನ ಅಭಿಮಾನಿಗಳನ್ನು ನಿಯಂತ್ರಿಸುವ ಹೊಸ ಟ್ರೆಂಡ್ ಆಗಿ ಇದು ಹೊರಹೊಮ್ಮುತ್ತಿದೆ. ಕೆಡಿ ಚಿತ್ರದ ಈ ನಡೆ ಸಿನಿ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸೋಶಿಯಲ್ ಮೀಡಿಯಾ ಯುಗದಲ್ಲಿ ಸಿನಿಮಾಗಳ ವಿರುದ್ಧ ಉದ್ದೇಶಪೂರ್ವಕ ನೆಗೆಟಿವ್ ವಿಮರ್ಶೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಚಿತ್ರ ತಂಡಗಳು ಹೊಸ ತಂತ್ರಗಳಿಗೆ ಮೊರೆ ಹೋಗುತ್ತಿವೆ. ಇದೀಗ ಕೆಡಿ ಸಿನಿಮಾ ಸೇರಿದಂತೆ ಹಲವು ಕನ್ನಡ ಮತ್ತು ತೆಲುಗು ಸಿನಿಮಾಗಳು ಬುಕ್ ಮೈ ಶೋನ್ನದಲ್ಲಿ ರೇಟಿಂಗ್ ಆಫ್ ಮಾಡುವ ಕ್ರಮಗಳನ್ನು ಅನುಸರಿಸುತ್ತಿರುವುದು ಗಮನ ಸೆಳೆಯುತ್ತಿದೆ.
ಸುದೀಪ್ ಅಭಿನಯದ ಮಾರ್ಕ್, ಅರ್ಜುನ್ ಜನ್ಯ ನಿರ್ದೇಶನದ ಧನ್ವಿತ್ ನಟನೆಯ ಹಯಗ್ರೀವ ಸಿನಿಮಾಗಳು ಈ ತಂತ್ರಗಳನ್ನು ಈಗಾಗಲೇ ಅನುಸರಿಸಿವೆ. ಈ ಪ್ರಯೋಗ ಯಶಸ್ಸು ಕಂಡ ಹಿನ್ನಲೆ, ತೆಲುಗಿನ ಮನ ಶಂಕರ ವರಪ್ರಸಾದ ಗಾರು, ಅನಗನಗ ಒಕರಾಜು, ನಾರಿ ನಾರಿ ನದುನ್ ಮುರಾರಿ, ಫಂಕಿ, ಕಪಲ್ ಫ್ರೆಂಡ್ಲಿ, ಸಿನಿಮಾಗಳು ಕೂಡ ಇದೇ ಮಾರ್ಗವನ್ನು ಹಿಡಿದಿವೆ.
ಇದೀಗ ದ್ರುವ ಸರ್ಜಾ ಅಭಿನಯದ ಕೆಡಿ ಸಿನಿಮಾಗೂ ಬುಕ್ ಮೈ ಶೋ ರೇಟಿಂಗ್ ಐಕೆಯನ್ನು ನಿಷ್ಕ್ರಿಯಗೊಳಿಸಲಾಗಿದೆ. ಈ ನಿರ್ಧಾರದ ಹಿಂದೆ ಐಫ್ಲೆಕ್ಸ್ ತಂತ್ರಜ್ಞಾನ ಮತ್ತು ಕಾನೂನು ಬೆಂಬಲವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ತಂತ್ರವನ್ನು ಫ್ಯಾನ್ ವಾರ್ ಕಡಿಮೆಯಾಗುವ ಸಾಧ್ಯತೆಯಿದ್ದು, ಉದ್ದೇಶಪೂರ್ವಕವಾಗಿ ಸಿನಿಮಾ ಬಗ್ಗೆ ನೆಗೆಟಿವ್ ವಿಮರ್ಶೆ ಹರಡುವುದಕ್ಕೂ ತಡೆ ಬೀಳಲಿದೆ ಎಂದು ಸಿನಿ ವಲಯದವರು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಬಹುತೇಕ ಎಲ್ಲಾ ದೊಡ್ಡ ಸಿನಿಮಾಗಳು ಇದೇ ವಿಧಾನವನ್ನು ಅನುಸರಿಸುವ ಸಾಧ್ಯತೆ ಹೆಚ್ಚಿದೆ.
ಸಿನಿಮಾ ಬಿಡುಗಡೆಗೆ ಮುನ್ನ ಮತ್ತು ನಂತರ ಆನ್ಲೈನ್ ಇಮೇಜ್ ರಕ್ಷಿಸಲು ಇದು ಹೊಸ ಟ್ರೆಂಡ್ ಆಗಿ ಹೊರಹೊಮ್ಮಿದ್ದು ಚಿತ್ರರಂಗದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
Also Read:
LPG Gas Price Update: ವಾಣಿಜ್ಯ ಸಿಲಿಂಡರ್ ದುಬಾರಿ - ₹993 ಹೆಚ್ಚಳ