<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ತಾನೇ ವೆನೆಜುವೆಲಾ ಹಂಗಾಮಿ ಅಧ್ಯಕ್ಷ : ಡೊನಾಲ್ಡ್​ ಟ್ರಂಪ್ ಘೋಷಣೆ `

ತಾನೇ  ವೆನೆಜುವೆಲಾ ಹಂಗಾಮಿ ಅಧ್ಯಕ್ಷ  : ಡೊನಾಲ್ಡ್​ ಟ್ರಂಪ್ ಘೋಷಣೆ `
Summary: ನ್ಯೂಯಾರ್ಕ್ : ವೆನಿಜುವೆಲಾ ಹಂಗಾಮಿ ಅಧ್ಯಕ್ಷ ತಾನೇ ಎಂದು ಡೊನಾಲ್ಡ್​ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಟ್ರೂಥ್​ನಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.
BELAGAVI NEWS:

ನ್ಯೂಯಾರ್ಕ್, ಅಮೆರಿಕ​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತಮ್ಮ ಸಾಮಾಜಿಕ ಜಾಲತಾಣ ಟ್ರೂಥ್​ನಲ್ಲಿ ಫೋಟೋವೊಂದನ್ನು ಹಾಕಿದ್ದು, ಅದರಲ್ಲಿ ಅವರನ್ನು ವೆನಿಜುವೆಲಾದ ಹಂಗಾಮಿ ಅಧ್ಯಕ್ಷ ಎಂದು ಕರೆದುಕೊಂಡಿದ್ದಾರೆ.ಆ ದೇಶದ ಆಡಳಿತದ ಚುಕ್ಕಾಣಿಯನ್ನು ಯಾರೇ ವಹಿಸಿಕೊಂಡರೂ ಅಮೆರಿಕದ ಉಸ್ತುವಾರಿ ಇರಲಿದೆ ಎಂದು ತಿಳಿಸಿದ್ದ ಟ್ರಂಪ್​ ಇದೀಗ ಸ್ವಯಂ ಆಗಿ ಅದರ ಹಂಗಾಮಿ ಅಧ್ಯಕ್ಷ ತಾವೇ ಎಂದು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ.ಟ್ರೂಥ್​ ಜಾಲತಾಣದಲ್ಲಿ ಭಾನುವಾರ ತಮ್ಮ ಪೋಟೋದೊಂದಿಗೆ ಹುದ್ದೆಯನ್ನು ಪೋಸ್ಟ್ ಮಾಡಿರುವ ಟ್ರಂಪ್​, ತಮ್ಮನ್ನು ವೆನೆಜುವೆಲಾದ ಹಂಗಾಮಿ ಅಧ್ಯಕ್ಷರು. 2026ರ ಜನವರಿಯಿಂದ ಅಧಿಕಾರವಹಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಹಾಗೇ 45 ಮತ್ತು 47ನೇ ಅಮೆರಿಕ ಅಧ್ಯಕ್ಷ ಎಂದು ಕೂಡ ಬರೆದುಕೊಂಡಿದ್ದಾರೆ.ಈ ಘಟನೆ ಬೆನ್ನೆಲ್ಲೇ, ವೆನೆಜುವೆಲಾದ ಉಪಾಧ್ಯಕ್ಷ ಮತ್ತು ತೈಲ ಸಚಿವ ಡೆಲ್ಸಿ ರೊಡ್ರಿಗಸ್ ಕಳೆದ ವಾರ ದೇಶದ ಮಧ್ಯಂತರ ಅಧ್ಯಕ್ಷರಾಗಿ ಕಳೆದ ವಾರ ಪ್ರಮಾಣವಚನ ಸ್ವೀಕರಿಸಿದ್ದರು. ರಾಷ್ಟ್ರದ ಸಮಗ್ರತೆ ಕಾಪಾಡುವ ಮತ್ತು ಆಡಳಿತವು ಸಾಂಗವಾಗಿ ನಡೆಯಲು ಡೆಲ್ಸಿ ಅವರು ಹಂಗಾಮಿ ಅಧ್ಯಕ್ಷರಾಗಲಿದ್ದಾರೆ ಎಂದು ಅವರನ್ನು ನೇಮಿಸಿದ ಸುಪ್ರೀಂ ಕೋರ್ಟ್​ ತಿಳಿಸಿತ್ತು.ಮಾದಕ ವಸ್ತು - ಭಯೋತ್ಪಾದನೆ ಆರೋಪದ ಮೇಲೆ ಅಮೆರಲ ಈ ತಿಂಗಳ ಆರಂಭದಲ್ಲಿ ವೆನೆಜುವೆಲಾ ದೊಡ್ಡ ಪ್ರಮಾಣದ ಸೇನಾ ದಾಳಿ ನಡೆಸಿ, ಅಧ್ಯಕ್ಷ ನಿಕೋಲಸ್​ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್​ರನ್ನು ವಶಕ್ಕೆ ಪಡೆದಿದೆ. ವೆನಿಜುವೆಲಾ ಸುರಕ್ಷಿತ, ಸರಿಯಾದ ಮತ್ತು ವಿವೇಚನಾಯುಕ್ತ ಪರಿವರ್ತನೆಯನ್ನು ಮಾಡುವವರೆಗೆ ಅಮೆರಿಕವು ಆ ದೇಶದ ಆಡಳಿತ ನಡೆಸಲಿದೆ. ವೆನೆಜುವೆಲಾದ ಹಿತಾಸಕ್ತಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದ ಬೇರೊಬ್ಬರು ವೆನೆಜುವೆಲಾವನ್ನು ವಹಿಸಿಕೊಳ್ಳುವ ಅವಕಾಶವನ್ನು ನಾವು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಟ್ರಂಪ್​ ಈ ಮುಂಚೆ ತಿಳಿಸಿದ್ದರು.ಇದರಿಂದ ಬಂದ ಹಣವನ್ನು ವೆನೆಜುವೆಲಾ ಮತ್ತು ಯುನೈಟೆಡ್ ಸ್ಟೇಟ್ಸ್‌ನ ಜನರಿಗೆ ಪ್ರಯೋಜನವಾಗುವಂತೆ ಬಳಸಲಾಗುವುದು. ವೆನಿಜುವೆಲಾದಲ್ಲಿ ಈಗ ಯಾರು ಅಧಿಕಾರದಲ್ಲಿದ್ದಾರೆ ಎಂದು ಕೇಳಬೇಡಿ. ನನ್ನ ಉತ್ತರ ವಿವಾದವಾಗುತ್ತದೆ. ಆ ದೇಶದ ಆಡಳಿತದ ಚುಕ್ಕಾಣಿಯನ್ನು ಯಾರೇ ವಹಿಸಿಕೊಂಡರೂ ಅಮೆರಿಕದ ಉಸ್ತುವಾರಿ ಇರಲಿದೆ ಎಂದು ತಿಳಿಸಿದ್ದ ಟ್ರಂಪ್​ ಅಲ್ಲಿನ ತೈಲಗಳ ಯೋಜನೆಯನ್ನು ತಕ್ಷಣವೇ ಕಾರ್ಯಗತಗೊಳಿಸಲು ನಾನು ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್ ಅವರನ್ನು ಕೇಳಿದ್ದೇನೆ. ಇದನ್ನು ಸಂಗ್ರಹಣಾ ಹಡಗುಗಳ ಮೂಲಕ ತೆಗೆದುಕೊಂಡು ನೇರವಾಗಿ ಅಮೆರಿಕಕ್ಕೆ ತರಲಾಗುವುದು ಎಂದು ಟ್ರಂಪ್​ ತಿಳಿಸಿದ್ದರು.

ಇನ್ನಷ್ಟು ಓದಿರಿ:
೨೪/೭ ಹಾಲು ಲಭ್ಯವಾಗುವಂತೆ ಮಾಡಲು ATM ಸ್ಥಾಪಿಸಿದ ಯುವಕ !
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online