<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Technology

ಇಸ್ರೋ ಆವರಣದಲ್ಲಿ ಡ್ರೋನ್ ಹಾರಾಟ ಪ್ರಕರಣ: ಎಫ್ ಐಆರ್ ದಾಖಲು

ಇಸ್ರೋ ಆವರಣದಲ್ಲಿ ಡ್ರೋನ್ ಹಾರಾಟ ಪ್ರಕರಣ: ಎಫ್ ಐಆರ್ ದಾಖಲು
Summary: An FIR has been registered in connection with the case of unauthorized drone flying on ISRO campus.

belagavi news:

ಬೆಂಗಳೂರು: ಇಸ್ರೋ ಕ್ಯಾಂಪಸ್ ಮೇಲೆ ಡ್ರೋನ್ ಹಾರಾಟ ನಡೆಸಿದ ಆರೋಪದ ಮೇಲೆ ಅಪರಿಚಿತರ ವಿರುದ್ಧ ಪ್ರಕರಣ ದಾಖಲಾಗಿದೆ. ಮೇ 2ರಂದು ಬೆಳಗ್ಗೆ ಸುಮಾರು 8: 16ರ ವೇಳೆಗೆ ಕಾರ್ತಿಕ ನಗರದ ಇಸ್ರೋ ಉಪಗ್ರಹ ಏಕೀಕರಣ ಮತ್ತು ಪರೀಕ್ಷಾ ಕೇಂದ್ರದ ಮೇಲ್ಭಾಗದಲ್ಲಿ 80 ರಿಂದ 100 ಅಡಿ ಎತ್ತರದಲ್ಲಿ 10 ರಿಂದ 12 ಸೆಕೆಂಡ್ ಗಳ ಕಾಲ ಡ್ರೋನ್ ಹಾರತ ನಡೆದಿರುವುದು ವರದಿಯಾಗಿದೆ. ಈ ಕುರಿತು ಸಿಐಎಸ್ಎಫ್ ಸಬ್ ಇನ್ಸ್ಪೆಕ್ಟರ್ ನೀಡಿದ ದೂರಿನ ಆಧಾರದ ಮೇಲೆ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಅಧಿಕಾರಿಗಳು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇಸ್ರೋ ಕ್ಯಾಂಪಸ್ ಸೂಕ್ಷ್ಮ ಪ್ರದೇಶವಾಗಿದ್ದು 'ನೋ-ಡ್ರೋನ್' ವಲಯವಾಗಿ ಗುರುತಿಸಲಾಗಿದೆ. ಅನುಮತಿ ಇಲ್ಲದೆ ಯಾವುದೇ ವಾಯು ಚಟುವಟಿಕೆಗಳು ಭದ್ರತೆ ಮತ್ತು ಸುರಕ್ಷತೆಗೆ ಗಂಭೀರ ಅಪಾಯ ಉಂಟುಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನೋ-ಟ್ರೋನ್ ವಲಯದಲ್ಲಿ ಡ್ರೋನ್ ಹಾರಟ ನಡೆಸಿರುವ ಅಪರಿಚಿತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯ ಸೆಕ್ಷನ್ 329(3) (ಅಪರಾಧಿಕ ಅತಿಕ್ರಮಣ) ಹಾಗೂ ಏರ್ ಕ್ರಾಫ್ಟ್ ಕಾಯ್ದೆಯ ಸೆಕ್ಷನ್ 11A (ಅಧಿಕೃತ ಸುರಕ್ಷತಾ ನಿರ್ದೇಶನಗಳ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Sponsored

Also Read:

ಚೀನಾದ ಪಟಾಕಿ ಫ್ಯಾಕ್ಟರಿಯಲ್ಲಿ ದುರಂತ ಸ್ಫೋಟ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online