<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಖರ್ಗೆ ವಿರುದ್ಧ ಈಶ್ವರಪ್ಪ ಗುಡುಗು : ಆರ್ ಎಸ್ ಎಸ್ ಲೆಕ್ಕ ಕೇಳಲು ನೀವ್ಯಾರು?"

ಖರ್ಗೆ ವಿರುದ್ಧ ಈಶ್ವರಪ್ಪ ಗುಡುಗು : ಆರ್ ಎಸ್ ಎಸ್ ಲೆಕ್ಕ ಕೇಳಲು ನೀವ್ಯಾರು?"
Summary: Who is Priyanka Kharge to ask the RSS to account?" KS Eshwarappa, who asked in a single sentence, has attacked Kharge for making an unwise statement in the heat of campaigning. This statement has led to a new debate in state politics, and the war between BJP and Congress leaders has intensified further.

BELAGAVI NEWS :

ಶಿವಮೊಗ್ಗ: ಆರ್.ಎಸ್.ಎಸ್ ವಿಚಾರವಾಗಿ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದವರು,"ಆರ್.ಎಸ್.ಎಸ್ ಲೆಕ್ಕ ಹೇಳಲು ಪ್ರಿಯಾಂಕ್ ಖರ್ಗೆ ಯಾರು?" ಎಂದು ಪ್ರಶ್ನಿಸಿದರು.

ಪ್ರಿಯಾಂಕ್ ಖರ್ಗೆ ಕೇವಲ ಪ್ರಚಾರಕ್ಕಾಗಿ ಆರ್.ಎಸ್.ಎಸ್ ಹೆಸರನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದ ಈಶ್ವರಪ್ಪ, ತಾಕತ್ತು ಇದ್ದರೆ ಕಾನೂನು ಕ್ರಮ ಕೈಗೊಳ್ಳಿ ಎಂದು ಸವಾಲು ಹಾಕಿದರು. "ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂಬುದು ಅವರಿಗೆ ಗೊತ್ತಿದೆ. ಆದ್ದರಿಂದಲೇ ಆರ್.ಎಸ್.ಎಸ್ ಬಗ್ಗೆ ಮಾತನಾಡಿ ಪ್ರಚಾರ ಪಡೆಯಲು ಪ್ರಯತ್ನಿಸುತ್ತಿದ್ದಾರೆ" ಎಂದು ಹೇಳಿದರು.

ಇದೇ ವೇಳೆ, ಪ್ರಿಯಾಂಕರ್ ಗೆ ವಿರುದ್ಧ ಕಿಡಿಕಾರಿದ ಈಶ್ವರಪ್ಪ, ಅವರ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿದ್ದು, ಜನರ ಗಮನ ಸೆಳೆಯುವ ಉದ್ದೇಶದಿಂದ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿವೆ.

ಆರ್.ಎಸ್.ಎಸ್ ಅಂದವರು ಎಲ್ಲಾ ನೆಲಕಚ್ಚಿ ಹೋಗಿದ್ದಾರೆ. ಪ್ರಿಯಾಂಕ್ ಖರ್ಗೆ ಸಹ ನೆಲಕಚ್ಚಿ ಹೋಗುತ್ತಾರೆ. ನೀವು ಯಾರು ಲೆಕ್ಕ ಕೇಳೋಕೆ? ನೀವು ಎಷ್ಟು ಕೊಟ್ಟಿದ್ದೀರಿ? ಇವರೊಬ್ಬ ಮಂತ್ರಿಯಾಗಿ ಹೇಳೋಕೆ ಅಧಿಕಾರ ಕೊಟ್ಟವರು ಯಾರು ? ಎಂದು ಏಕವಚನದಲ್ಲೇ ಪ್ರಶ್ನಿಸಿದರು.

ಆರ್.ಎಸ್.ಎಸ್ ನ ಹಿರಿಯ ನಾಯಕ ಮೋಹನ್ ಭಾಗವತ್ ಈಗಾಗಲೇ ಈ ವಿಚಾರಕ್ಕೆ ಉತ್ತರ ನೀಡಿದ್ದಾರೆ. ರಾಜ್ಯದ ಸಾವಿರಾರು ಕಡೆಗಳಲ್ಲಿ ಆರ್ ಎಸ್ ಎಸ್ ಪತ್ತೆ ಸಂಚಲನ ನಡೆದರೂ ಎಲ್ಲಿಯೂ ಸಣ್ಣ ಗಲಾಟೆಯು ಆಗಿಲ್ಲ. ಆದರೆ ನಿಮ್ಮ ಕಣ್ಣೆದುರೇ ರಾಜ್ಯಸಭಾ ಸದಸ್ಯರೊಬ್ಬರು 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗಿದ ಪ್ರಕಾರದಲ್ಲಿ ಏನು ಕ್ರಮ ಕೈಗೊಂಡಿದ್ದೀರಿ?" ಎಂದು ಪ್ರಶಿಸಿದರು.

ಮೋಹನ್ ಭಾಗವತ್ ಅವರಿಗೆ ದೇಶದ ಭದ್ರತಾ ಕಾರಣಗಳಿಂದ ಝೆಡ್ ಪ್ಲಸ್ ಭದ್ರತೆ ನೀಡಲಾಗಿದೆ ಎಂದು ಹೇಳಿದ ಈಶ್ವರಪ್ಪ,"ಇಂತಹ ವಿಷಯಗಳಿಗೆ ಪದೇಪದೇ ಉತ್ತರ ನೀಡಬೇಡಿ ಎಂದು ಮೋಹನ್ ಭಾಗವತ್ ಅವರಿಗೆ ಮನವಿ ಮಾಡಿದ್ದೇನೆ. ದೇಶದಲ್ಲಿ ಭಯೋತ್ಪಾದಕ ಶಕ್ತಿಗಳ ಬೆದರಿಕೆ ಹೆಚ್ಚಿರುವುದರಿಂದ ಅವರಿಗೆ ವಿಶೇಷ ಭದ್ರತೆ ನೀಡಲಾಗಿದೆ"ಎಂದು ಹೇಳಿದರು.

ಮುಂದುವರೆದು ಪ್ರಿಯಾಂಕ ಖರ್ಗೆ ವಿರುದ್ಧ ಕಿಡಿಕಾರಿದ ಅವರು, "ಪ್ರಚಾರಕ್ಕಾಗಿ ಹುಚ್ಚು ಹುಚ್ಚು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮೋಹನ್ ಭಾಗವತ್ ಅವರ ವಿದೇಶ ಪ್ರವಾಸದ ಬಗ್ಗೆ ಪ್ರಶ್ನಿಸುವ ಅಧಿಕಾರ ಇವರಿಗೆ ಎಲ್ಲಿಂದ ಬಂದಿದೆ?" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಶ್ವರಪ್ಪ ರ ಈ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಕಾಂಗ್ರೆಸ್ ನಾಯಕರ ನಡುವಿನ ವಾಕ್ ಸಮರ ಮತ್ತು ತೀವ್ರಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.

ಆರ್ ಎಸ್ ಎಸ್ ಬಗ್ಗೆ ಮಾತನಾಡಿದ್ದು ದೊಡ್ಡ ನಾಯಕನಾಗಲು ಹೊರಟಿದ್ದಾರೆ. ಇಂಥ ಹೇಳಿಕೆಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ. ಆರ್ ಎಸ್ ಎಸ್ ನಂತಹ ರಾಷ್ಟ್ರ ಭಕ್ತ ಸಂಘಟನೆಯ ಬಗ್ಗೆ ಚಿಲ್ಲರೆ ಮಟ್ಟದ ಟೀಕೆಗಳು ಮಾಡುತ್ತಿರುವುದು ಬೇಸರದ ಸಂಗತಿ" ಎಂದು ಈಶ್ವರಪ್ಪ ಹೇಳಿದ್ದಾರೆ.

ಮುಂದುವರೆದು, "ಇಂತಹ ಆರೋಪಗಳಿಗೆ ಪ್ರತಿಕ್ರಿಯೆ ನೀಡುವುದಕ್ಕಿಂತ ಜನರು ಅವನ್ನು ತಿರಸ್ಕರಿಸಬೇಕು. ಆರ್ ಎಸ್ ಎಸ್ ಬಗ್ಗೆ ನಿರಾಧಾರವಾಗಿ ಮಾತನಾಡಿರುವವರ ಹೇಳಿಕೆಗಳಿಗೆ ಬೆಲೆ ನೀಡಬಾರದು" ಎಂದು ಅಭಿಪ್ರಾಯಪಟ್ಟರು.

ಪ್ರಿಯಾಂಕ್ ಖರ್ಗೆ ವಿರುದ್ಧ ಈಶ್ವರಪ್ಪ ಮಾತನಾಡಿ ಈ ತೀಕ್ಷ್ಣ ಟೀಕಿಗಳು ರಾಜ್ಯ ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದ್ದು, ಬಿಜೆಪಿ ಕಾಂಗ್ರೆಸ್ ನಾಯಕರ ನಡುವಿನ ವಾಕ್ ಸಮರ ಮುಂದುವರೆದಿದೆ.

Also Read:

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಬಗ್ಗೆ ಮಹತ್ವದ ಮಾಹಿತಿ; ಮೈಸೂರಿನಲ್ಲಿ 13,677 ಫಲಾನುಭವಿಗಳು ನಿಧನ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online