ಅಮೆರಿಕದ ಪ್ರತಿನಿಧಿ ಜೇಮಿಸನ್ ಗ್ರೀರ್ ಹೇಳಿಕೆ – “ಭಾರತ ಮುಂದಿದ್ದು, ಹೆಚ್ಚು ಲಾಭ ಪಡೆಯಲಿದೆ” :
ಭಾರತ ಮತ್ತು ಯುರೋಪಿಯನ್ ಒಕ್ಕೂಟ ನಡುವಿನ ಮಹತ್ವದ ವ್ಯಾಪಾರ ಒಪ್ಪಂದದ ಕುರಿತು ಅಮೆರಿಕಾದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಒಪ್ಪಂದವು ವಾಣಿಜ್ಯ ಕ್ಷೇತ್ರದಲ್ಲಿ ಬಾರಿ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ. ಮಧ್ಯವರ್ತಿ ಮಾಧ್ಯಮಗಳ “ಮದರ್ ಆಫ್ ಆಲ್ ಟ್ರೇಡ್”ಎಂದು ಕರೆಯಲಾಗುತ್ತಿರುವ ಈ ಭಾರತ ಯುರೋಪ ವ್ಯಾಪಾರ ಒಪ್ಪಂದದ ಕುರಿತು ಮಂಗಳವಾರ ಉತ್ತರ ನೀಡಿರುವ ವಿವರಗಳನ್ನು ನೋಡಿದ್ದೇನೆ. ನನ್ನ ಭಾವನೆ ಪ್ರಕಾರ ಭಾರತವು ಇದರಲ್ಲಿ ಮುಂಚೂಜಿನಿಯಲ್ಲಿದ್ದು,
ಯುರೋಪ್ ಮಾರುಕಟ್ಟೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರವೇಶಿಸಲು ಸಾಧ್ಯವಾಗಲಿದೆ ಎಂದು ಹೇಳಿದರು. ವಿಶ್ವ ವ್ಯಾಪಾರದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವ ಮೂಲಕ ಆರ್ಥಿಕ ಲಾಭವನ್ನು ಹೆಚ್ಚಿಸಿಕೊಳ್ಳಲಿದೆ ಎಂದು ವ್ಯಾಪಾರ ತಜ್ಞರು ವಿಶ್ಲೇಷಿಸಿದ್ದಾರೆ. ಇದರಿಂದ ಭಾರತ ಸಂಬಂಧಗಳು ಹಾಗೂ ವಾಣಿಜ್ಯ ಉತ್ಪಾದನೆ ಮತ್ತು ರಫ್ತು ವಲಯಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಯಾಗುವುದೇ ಪ್ರಮುಖ ನಿರೀಕ್ಷೆಯೆಂದು ಹೇಳಿದ್ದಾರೆ.
ಭಾರತಕ್ಕೆ ಹೆಚ್ಚುವರಿ ವಲಸೆ ಹಕ್ಕುಗಳು : ಅಮೇರಿಕಾದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಅವರು ಭಾರತಕ್ಕೆ ಸಂಬಂಧಿಸಿದಂತೆ ಹಲವು ಹೆಚ್ಚುವರಿ ವಲಸೆ ಹಕ್ಕುಗಳು ದೊರಕುತ್ತಿರುವ ಸೂಚನೆ ನೀಡಿದ್ದಾರೆ.ಗ್ರೀರ್ ಹೇಳಿಕೆಯಲ್ಲಿ, ಭಾರತವು ಕೆಲವು ಹೆಚ್ಚುವರಿ ವಲಸೆ ಹಕ್ಕುಗಳನ್ನು ಹೊಂದಿರುವಂತೆ ತೋರುತ್ತಿದೆ. ಅಮೆರಿಕದಲ್ಲಿ ಜಾಗತೀಕರಣದ ಕೆಲವು ಸಮಸ್ಯೆಗಳನ್ನು ಪರಿಹರಿಸಲು ಟ್ರಂಪ್ ಸರ್ಕಾರ ಪ್ರಯತ್ನಿಸುತ್ತಿರುವಾಗ ಯುರೋಪಿಯನ್ ಒಕ್ಕೂಟವು ಜಾಗತೀಕರಣವನ್ನು ವಿಸ್ತರಿಸುತ್ತಿದೆ ಎಂದು ತಿಳಿಸಿದ್ದಾರೆ.
ಈ ಹೇಳಿಕೆಗಳು ಭಾರತ-ಅಮೆರಿಕ ಮತ್ತು ಭಾರತ-ಯುರೋಪ್ ವ್ಯಾಪಾರ ಸಂಬಂಧಗಳಲ್ಲಿ ಮಹತ್ವದ ಬೆಳವಣಿಗೆ ಸಂಭವಿಸುತ್ತಿರುವುದನ್ನು ಸೂಚಿಸುತ್ತದೆ. ತಜ್ಞರ ಅಭಿಪ್ರಾಯದಲ್ಲಿ ಭಾರತಕ್ಕೆ ದೊರಕುತ್ತಿರುವ ಹೆಚ್ಚುವರಿ ವಲಸೆ ಹಕ್ಕುಗಳು ವಾಣಿಜ್ಯ ಉದ್ಯೋಗ ಮತ್ತು ಜಾಗತಿಕ ಪ್ರಕ್ರಿಯೆಗಳು ತರಲಿದೆ ಎಂದು ವಿಶ್ಲೇಷಿಸಿದ್ದಾರೆ. ಇದರ ಪರಿಣಾಮವಾಗಿ ಭಾರತವು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವ ಮೂಲಕ ಭವಿಷ್ಯದಲ್ಲಿ ಹೆಚ್ಚು ಲಾಭ ಪಡೆಯುವ ಸಾಧ್ಯತೆ ಹೆಚ್ಚಾಗಿದೆ.
ಭಾರತ-ಯುರೋಪಿಯನ್ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದ : ಕಳೆದ ದಶಕಗಳಿಂದ ನೆನ್ನೆ ನನೆಗುದಿಗೆ ಬಿದ್ದಿದ್ದ ಭಾರತ ಯುರೋಪಿನ ಒಕ್ಕೂಟ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಅಂತಿಮವಾಗಿ ಸಮ್ಮತಿಯ ಮುದ್ರೆ ಒತ್ತಲಾಗಿದೆ. ಇದು ಭಾರತ ಮತ್ತು ಯುರೋಪಿಯನ್ ಒಕ್ಕೂಟದ ಸುಮಾರು ಎರಡು ಬಿಲಿಯನ್ ಜನರಿಗೆ ನೇರ ಪ್ರಯೋಜನ ನೀಡಲಿದೆ.
ಒಪ್ಪಂದ ಜಾಗತಿಕ ಜಿಡಿಪಿಯ ಶೇಕಡ 25 ರಷ್ಟು ಸಮಾನವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಯುರೋಪಿಯನ್ ಒಕ್ಕೂಟದ ಅಧ್ಯಕ್ಷರು ಆಂಟೋನಿಯಾ ಕೋಸ್ಟಾ ಮತ್ತು ವಾನ್ ಡೆರ್ ಲೇಯೆನ್ ಅವರ ಜೊತೆಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. "ಮುಕ್ತ ವ್ಯಾಪಾರ ಒಪ್ಪಂದ ಮುಂದಿನ ಐದು ವರ್ಷಗಳ ಕಾಲ ಮುಂಬರುವ ವ್ಯಾಪಾರ ಬಡಂಬಡಿಕೆಗಳು ಬಲಪಡಿಸುತ್ತದೆ. ಇದು ಭಾರತ-ಯುರೋಪ್ ವ್ಯಾಪಾರ ಸಂಬಂಧಗಳಿಗೆ ಹೊಸ ಅವಕಾಶಗಳನ್ನು ತರುತ್ತದೆ".
ಅಧಿಕಾರಿಗಳ ಪ್ರಕಾರ, ಜಾಗತಿಕ ಜಿಡಿಪಿಯ ಬಹುತೇಕ ಭಾಗದಷ್ಟು ಮಹತ್ವದ ಈ ಒಪ್ಪಂದವು, ಯುರೋಪ್ ರಾಷ್ಟ್ರಗಳಿಗೆ ಭಾರತ ರಫ್ತು ಮಾಡುವ ಉತ್ಪನ್ನಗಳ ಮೇಲೆ 99% ಸುಂಕವನ್ನು ಕಡಿತಗೊಳಿಸಲಗೊಳಿಸುತ್ತದೆ. ಭಾರತಕ್ಕೆ ಯುರೋಪ್ ರಾಜ್ಯಗಳಿಂದ ರಫ್ತಾಗುವ ಉತ್ಪನ್ನಗಳ ಮೇಲೆ 97% ಇಳಿಕೆಯಾಗುತ್ತದೆ.ಈ ಒಪ್ಪಂದದಿಂದ ಭಾರತದ ರಫ್ತು ವಲಯಗಳು, ಉದ್ಯೋಗ ಅವಕಾಶಗಳು, ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಪ್ರಭಾವ ಹೆಚ್ಚಳ ಪಡೆಯಲಿದೆ ಎಂದು ವಾಣಿಜ್ಯ ತಜ್ಞರು ವಿಶ್ಲೇಷಿಸಿದ್ದಾರೆ.
ಭಾರತ-ಇಯು ವ್ಯಾಪಾರ ಒಪ್ಪಂದ : ಭಾರತ ಈ ವ್ಯಾಪಾರ ಒಪ್ಪಂದದ ಕುರಿತು ಮಾಧ್ಯಮ ಪ್ರಶ್ನೆಗಳಿಗೆ ಅಮೇರಿಕಾದ ಪ್ರತಿನಿಧಿ ಜೇಮಿಸನ್ ಗ್ರೀರ್ ಸ್ಪಷ್ಟನೆ ನೀಡಿದ್ದಾರೆ.ಪ್ರಸ್ತುತ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಸಿಯ ಉತ್ಪಾದನೆಗೆ ಆದ್ಯತೆ ನೀಡುತ್ತಿರುವ ಕಾರಣ, ಅಮೆರಿಕ ಮಾರುಕಟ್ಟೆಗೆ ಪ್ರವೇಶಿಸಲು ಇತರ ದೇಶಗಳ ಮೇಲೆ ಹೆಚ್ಚಿನ ಶುಲ್ಕವನ್ನು ವಿಧಿಸುತ್ತಿದ್ದಾರೆ. ಗ್ರೀರ್ ಹೇಳಿಕೆಯ ಪ್ರಕಾರ, ಇದರ ಪರಿಣಾಮವಾಗಿ "ಕೆಲ ದೇಶಗಳು ತಮ್ಮ ಉತ್ಪನ್ನಗಳ ಮಾರುಕಟ್ಟೆ ಮಾರಾಟಕ್ಕಾಗಿ ಇತರ ದೇಶಗಳ ಮಾರುಕಟ್ಟೆಯನ್ನು ಹುಡುಕುತ್ತಿರುವುದು ಸಹಜ". ಅವರು ಮುಂದುವರೆಸಿ ಹೇಳಿದರು, "ಯುರೋಪಿಯನ್ ಒಕ್ಕೂಟ ವ್ಯಾಪಾರ ಅವಲಂಬಿತವಾಗಿದೆ, ಹೀಗಾಗಿ ಅದು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಉತ್ಪನ್ನಗಳನ್ನು ಅಮೆರಿಕಕ್ಕೆ ಕಳಿಸಲು ಸಾಧ್ಯವಾಗದ ಕಾರಣ ಇತರ ದೇಶಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ".
ಈ ಹೇಳಿಕೆಗಳಿಂದ ಸ್ಪಷ್ಟವಾಗುತ್ತದೆ. ಭಾರತ-ಇಯು ಮುಕ್ತ ವ್ಯಾಪಾರ ಒಪ್ಪಂದವು ಜಾಗತಿಕ ವ್ಯಾಪಾರ ನಿಯಮಗಳು ಮತ್ತು ಅಮೆರಿಕಾದ ರಕ್ಷಣಾತ್ಮಕ ನೀತಿಗಳ ನಡುವೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುವುದು, ತಜ್ಞರು ವಿಶ್ಲೇಷಿಸುವಂತೆ, ಭಾರತಕ್ಕೆ ಯುರೋಪ್ ಮಾರುಕಟ್ಟೆ ಪ್ರವೇಶದ ಹೆಚ್ಚುವರಿ ಅವಕಾಶವನ್ನು ಸೂಚಿಸುತ್ತದೆ. ಅಮೆರಿಕ ಮಾರುಕಟ್ಟೆ ನಿಯಮಗಳು ಇತರ ದೇಶಗಳಿಗೆ ಮಾರ್ಗದರ್ಶನವಾಗಿದೆ.
ಭಾರತಕ್ಕೆ ಶೇ.25 ರಷ್ಟು ಸುಂಕದ ಪರಿಣಾಮ – ಅಮೆರಿಕದ ಪ್ರತಿನಿಧಿ ಜೇಮಿಸನ್ ಗ್ರೀರ್ ಹೇಳಿಕೆ : ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮಿಸನ್ ಗ್ರೀರ್ ಅವರು ರಷ್ಯಾದಿಂದ ತೈಲ ಖರೀದಿಗೆ ಸಂಬಂಧಿಸಿದಂತೆ ಭಾರತಕ್ಕೆ ವಿಧಿಸಲಾದ 25% ವಿವರಿಸಿದರು.ಗ್ರೀರ್ ಹೇಳಿಕೆಯ ಪ್ರಕಾರ,ಟ್ರಂಪ್ ಸರ್ಕಾರವು ಭಾರತದ ರಫ್ತಿನ ಮೇಲೆ ಶೇಕಡಾ 25 ರಷ್ಟು ಸುಂಕ ವಿಧಿಸಿದೆ. ಇದರ ಜೊತೆಗೆ ರಷ್ಯಾ ತೈಲ ಮೇಲಿನ ಸುಂಕವನ್ನು ಪಾವತಿಸುತ್ತಿದೆ. ರಷ್ಯಾ ಭಾರತಕ್ಕೆ ಹತ್ತಿರ ಇರುವುದರಿಂದ ಇದು ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿ ಮಾಡುತ್ತಿದೆ.
ಈ ಬೆಳವಣಿಗೆಗಳು ಭಾರತ-ಅಮೆರಿಕ ವ್ಯಾಪಾರ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತಿರುವುದನ್ನು ತೋರಿಸುತ್ತದೆ. ತಜ್ಞರ ಅಭಿಪ್ರಾಯದಲ್ಲಿ ರಷ್ಯಾದಿಂದ ಹೆಚ್ಚಿನ ತೈಲ ಖರೀದಿಯು ಭಾರತಕ್ಕೆ ಆರ್ಥಿಕ ಲಾಭ ಮತ್ತು ಸುಂಕ ಪರಿಹಾರ ನೀಡಬಹುದು ಆದರೆ ಅಮೆರಿಕಾದ ನಿರ್ಬಂಧಗಳು ಮತ್ತು ಸುಂಕಗಳು ರಫ್ತು ವೆಚ್ಚದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು.
ಇನ್ನಷ್ಟು ಓದಿರಿ:
ಇಂದಿನ ರಾಶಿ ಭವಿಷ್ಯ (ಗುರುವಾರ): ಯಾವ ರಾಶಿಗೆ ಹಣ ಲಾಭ? ಯಾರಿಗೆ ಅದೃಷ್ಟ? ಇಲ್ಲಿದೆ ಸಂಪೂರ್ಣ ವಿವರ.