ಮಾಸ್ಕ್ ಧರಿಸಿ ಬಸವನಗುಡಿ ಕಡಲೆ ಕಾಯಿ ಪರಿಷೆ ಸುತ್ತಾಡಿದ ಕನ್ನಡದ ಖ್ಯಾತ ನಟಿ
ನಟಿ ರಚಿತಾ ರಾಮ್ ಬಸವನಗುಡಿ ಕಡಲೆಕಾಯಿ ಪರಿಷೆಗೆ ಮಾಸ್ಕ್ ಧರಿಸಿ ಭೇಟಿ ನೀಡಿದರು. ಅಭಿಮಾನಿಗಳಿಂದ ಗುರುತಿಸಲ್ಪಡದೆ ಸಾರ್ವಜನಿಕರಂತೆ ಸುತ್ತಾಡಿ ಖುಷಿ ಪಟ್ಟರು. 18 ವರ್ಷಗಳ ನಂತರ ಪರಿಷೆಗೆ ಬಂದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಅವರ ಹೊಸ ಸಿನಿಮಾ 'ಕ್ರಿಮಿನಲ್' ಟೈಟಲ್ ಲಾಂಚ್ ಕೂಡ ಇಲ್ಲೇ ನಡೆದಿತ್ತು. ಅವರನ್ನು ಗುರುತಿಸಲಾಗದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಎಲ್ಲ ಕಡೆ ಜನ ಸಾಮಾನ್ಯರಂತೆ ಸುತ್ತಾಡಬೇಕು ಎಂಬ ಆಸೆ ಅನೇಕ ಸೆಲೆಬ್ರಿಟಿಗಳಿಗೆ ಇರುತ್ತದೆ. ಆದರೆ, ಅದು ಸಾಧ್ಯವಾಗುವುದೇ ಇಲ್ಲ. ಇದಕ್ಕೆ ಕಾರಣ ಅಭಿಮಾನಿಗಳು. ಸೆಲೆಬ್ರಿಟಿಗಳು ಹೋದಲ್ಲಿ ಬಂದಲ್ಲಿ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಈಗ ರಚಿತಾ ರಾಮ್ (Rachita Ram) ಅವರು ತಮ್ಮ ಆಸೆ ಈಡೇರಿಸಿಕೊಳ್ಳಲು ಹೊಸ ಪ್ಲ್ಯಾನ್ ಮಾಡಿದ್ದರು. ನವೆಂಬರ್ 18ರಂದು ಬೆಂಗಳೂರಿನ ಬಸವನಗುಡಿಯ ಕಡಲೆಕಾಯಿ ಪರಿಷೆ ಸುತ್ತಾಡಿದ್ದಾರೆ. ಈ ವೇಳೆ ಅವರು ಮುಖಕ್ಕೆ ಮಾಸ್ಕ್ ಧರಿಸಿದ್ದರು. ಹೀಗಾಗಿ, ಯಾರೊಬ್ಬರೂ ಅವರನ್ನು ಗುರುತಿಸಲು ಸಾಧ್ಯವಾಗಲೇ ಇಲ್ಲ.
ರಚಿತಾ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ರಚಿತಾ ಅವರು ಮುಖಕ್ಕೆ ಮಾಸ್ಕ್ ಧರಿಸಿದ್ದರು. ಹೀಗಾಗಿ ಯಾರಿಗೂ ಅವರ ಗುರುತು ಸಿಕ್ಕಿಲ್ಲ. ಅವರು ಹಾಯಾಗಿ ಅಂಗಡಿಗಳನ್ನು ಸುತ್ತಾಡಿ ಕಡಲೆಕಾಯಿ ಖರೀದಿ ಮಾಡಿದ್ದಾರೆ.
‘18 ವರ್ಷಗಳ ಬಳಿಕ ನಾನು ಪರಿಷೆಗೆ ಬಂದಿದ್ದೇನೆ. ಎಂತಹ ಅದ್ಭುತ ಅನುಭವ’ ಎಂದು ಅವರು ವಿಡಿಯೋಗೆ ಕ್ಯಾಪ್ಶನ್ ನಿಡಿದ್ದಾರೆ. ಈ ಪೋಸ್ಟ್ ನೋಡಿದ ಬಳಿಕ ಅನೇಕ ಫ್ಯಾನ್ಸ್ ಬೇಸರ ಮಾಡಿಕೊಂಡಿದ್ದಾರೆ. ‘ನಾವು ಪರಿಷೆಯಲ್ಲೇ ಇದ್ದೆವು. ಮೊದಲೇ ಪೋಸ್ಟ್ ಮಾಡಿದ್ದರೆ ನಿಮ್ಮನ್ನು ಗುರುತು ಹಿಡಿದು ಮಾತನಾಡಿಸುತ್ತಿದ್ದೆವು’ ಎಂದು ಹೇಳಿದ್ದಾರೆ. ಈ ಮೊದಲು ಅನೇಕ ಸೆಲೆಬ್ರಿಟಿಗಳು ಸಾರ್ವಜನಿಕ ಸ್ಥಳಗಳಿಗೆ ತೆರಳುವಾಗ ಮಾಸ್ಕ್ ಧರಿಸಿ ಹೋದ ಉದಾಹರಣೆ ಇದೆ. ಈಗ ರಚಿತಾ ಅವರು ಹೊಸ ಐಡಿಯಾ ಮಾಡಿದ್ದಾರೆ.
ರಚಿತಾ ರಾಮ್ ಅವರು ‘ಕ್ರಿಮಿನಲ್’ ಹೆಸರಿನ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ಧ್ರುವ ಸರ್ಜಾ ನಾಯಕ. 8 ವರ್ಷಗಳ ಬಳಿಕ ಧ್ರುವ ಜೊತೆ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ಗೆ ನಿರೀಕ್ಷೆ ಮೂಡಿದೆ. ಈ ಚಿತ್ರದ ಟೈಟಲ್ ಲಾಂಚ್ ಕಾರ್ಯಕ್ರಮ ಬಸವನಗುಡಿಯಲ್ಲೇ ನಡೆದಿದೆ. ಇದಾದ ಬಳಿಕ ರಚಿತಾ ಅವರು ಕಡಲೆಕಾಯಿ ಪರಿಷೆ ಸುತ್ತಾಡಿದ್ದಾರೆ.
ಇನ್ನಷ್ಟು ಓದಿರಿ:
ಕಂಬಳಿ ಕೊಡಲು ಜಡ್ಜ್ ಎದುರು ದರ್ಶನ್ ಅಳಲು