ಮತ್ತೆ ‘ಮಾಜಿ ಪ್ರೇಮಿ’ ಬಗ್ಗೆ ದೂರು ಹೇಳಿದ ರಶ್ಮಿಕಾ ಮಂದಣ್ಣ
Rashmika Mandanna: ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಶೀಘ್ರ ವಿವಾಹ ಆಗಲಿದ್ದಾರೆ. ಆದರೆ ಈ ಖುಷಿಯ ಸಂದರ್ಭದಲ್ಲಿ ಸುಖಾ-ಸುಮ್ಮನೆ ತಮ್ಮ ಮಾಜಿ ಪ್ರೇಮಿಯ ಬಗ್ಗೆ ದೂರುಗಳನ್ನು ಹೇಳಿಕೊಂಡು ಓಡಾಡುತ್ತಿರುವ ರಶ್ಮಿಕಾ, ಮಾಜಿ ಪ್ರೇಮಿ ಒಬ್ಬ ದುಷ್ಟ ವ್ಯಕ್ತಿ ಎಂಬ ನರೇಟಿವ್ ಸೆಟ್ ಮಾಡುವ ಪ್ರಯತ್ನದಲ್ಲಿ ಇದ್ದಂತಿದೆ. ಆದರೆ ಇದು ಅವರಿಗೇ ಉಲ್ಟಾ ಹೊಡೆದಿದ್ದು, ಇದೀಗ ಮತ್ತೆ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿ ಆಗುತ್ತಿದ್ದಾರೆ. ಆದರೂ ಸಹ ಮಾಜಿ ಪ್ರೇಮಿಯ ಬಗ್ಗೆ ದೂರು ಹೇಳುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ.
ರಶ್ಮಿಕಾ ಮಂದಣ್ಣ (Rashmika Mandanna), ತಾವು ವಿಜಯ್ ದೇವರಕೊಂಡ ಜೊತೆ ಪ್ರೀತಿಯಲ್ಲಿರುವ ವಿಷಯವನ್ನು ಬಹಿರಂಗಪಡಿಸಿದ್ದು, ಶೀಘ್ರವೇ ವಿಜಯ್ ದೇವರಕೊಂಡ ಜೊತೆಗೆ ವಿವಾಹ ಸಹ ಆಗುತ್ತಿದ್ದಾರೆ. ಆದರೆ ಈ ಖುಷಿಯ ಸಂದರ್ಭದಲ್ಲಿ ಸುಖಾ-ಸುಮ್ಮನೆ ತಮ್ಮ ಮಾಜಿ ಪ್ರೇಮಿಯ ಬಗ್ಗೆ ದೂರುಗಳನ್ನು ಹೇಳಿಕೊಂಡು ಓಡಾಡುತ್ತಿದ್ದು, ಮಾಜಿ ಪ್ರೇಮಿ ಒಬ್ಬ ದುಷ್ಟ ವ್ಯಕ್ತಿ ಎಂಬ ನರೇಟಿವ್ ಸೆಟ್ ಮಾಡುವ ಪ್ರಯತ್ನದಲ್ಲಿ ರಶ್ಮಿಕಾ ಮಂದಣ್ಣ ಇದ್ದಂತಿದೆ. ಆದರೆ ಇದು ಅವರಿಗೇ ಉಲ್ಟಾ ಹೊಡೆದಿದ್ದು, ಇದೀಗ ಮತ್ತೆ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿ ಆಗುತ್ತಿದ್ದಾರೆ. ಆದರೂ ಸಹ ಮಾಜಿ ಪ್ರೇಮಿಯ ಬಗ್ಗೆ ದೂರು ಹೇಳುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ.
ಹಿಂದೆ ತಾವಿದ್ದ ರಿಲೇಷನ್ನಲ್ಲಿ ಹೇರಿಕೆ ಇತ್ತು, ನನ್ನ ತನಕ್ಕೆ ಅವಕಾಶ ಇರಲಿಲ್ಲ. ನನಗೆ ಆಯ್ಕೆಗಳೇ ಇರಲಿಲ್ಲ ಎಂದು ಪರೋಕ್ಷವಾಗಿ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಸಹ ತಮ್ಮ ಈ ಹಿಂದಿನ ರಿಲೇಶನ್ಷಿಪ್ ಕೆಟ್ಟದಾಗಿ ಇತ್ತು, ಏಕಮುಖವಾಗಿತ್ತು ಎಂದು ರಶ್ಮಿಕಾ ಮಂದಣ್ಣ ಹೇಳಿದ್ದರು. ಆದರೆ ಅದು ಯಾರೊಂದಿಗಿನ ರಿಲೇಶನ್ಷಿಪ್ ಎಂದು ರಶ್ಮಿಕಾ ಮಂದಣ್ಣ ಹೇಳಿರಲಿಲ್ಲ.
ಸುಮಾ ಕನಕಾಲ ಅವರೊಟ್ಟಿಗಿನ ಸಂದರ್ಶನದಲ್ಲಿ ಮಾತನಾಡಿರುವ ರಶ್ಮಿಕಾ ಮಂದಣ್ಣ, ‘ನೀವು ಯಾರೊಂದಿಗೆ ಇರಬೇಕು ಎಂಬುದನ್ನು ಅಳೆದು ತೂಗಿ ನಿರ್ಧಾರ ತೆಗೆದುಕೊಳ್ಳಿ. ಒಮ್ಮೊಮ್ಮೆ ಎಂಥಹಾ ಸನ್ನಿವೇಶದಲ್ಲಿ ಸಿಲುಕಿಕೊಳ್ಳುತ್ತೀರಿ ಎಂದರೆ ಅಲ್ಲಿ ನಿಮಗೆ ಬೇರೆ ಆಯ್ಕೆ, ಅವಕಾಶಗಳಿಗೆ ಜಾಗವೇ ಇರದಂತೆ ಆಗಿಬಿಡುತ್ತದೆ. ನಾನು ಹಿಂದೊಮ್ಮೆ ಇಂಥಹಾ ರಿಲೇಷನ್ನಲ್ಲಿ ಇದ್ದೆ. ಆದರೆ ಈಗ ನಾನು ಒಬ್ಬ ಪಾರ್ಟನರ್ ಜೊತೆಗೆ ಇದ್ದೇನೆ, ಇಲ್ಲಿ ನನಗೆ ಆಯ್ಕೆಗಳಿವೆ, ನನ್ನತನಕ್ಕೆ ಅವಕಾಶ ಇದೆ, ಇಲ್ಲಿ ನಾನು ಖುಷಿಯಾಗಿದ್ದೇನೆ, ಆತ ಖುಷಿಯಾಗಿದ್ದೇನೆ. ನಮ್ಮ ಸುತ್ತ ಇರುವವರೂ ಸಹ ಖುಷಿಯಾಗಿದ್ದಾರೆ’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.
ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ 2017 ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ನಿಶ್ವಿತಾರ್ಥ ನಡೆದು ಕೆಲವೇ ತಿಂಗಳಲ್ಲಿ ಇಬ್ಬರ ಸಂಬಂಧ ಮುರಿದು ಬಿತ್ತು. ಆ ನಂತರ ರಶ್ಮಿಕಾ ಮಂದಣ್ಣ ತೆಲುಗು ಚಿತ್ರರಂಗದಲ್ಲಿಯೇ ನೆಲೆ ನಿಂತರು. ಈಗಂತೂ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಬದಲಾಗಿದ್ದಾರೆ. ಕೆಲವೇ ದಿನಗಳಲ್ಲಿ ವಿಜಯ್ ದೇವರಕೊಂಡ ಅವರೊಟ್ಟಿಗೆ ಮದುವೆ ಸಹ ಆಗಲಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ನಟಿ ರಶ್ಮಿಕಾ ಮಂದಣ್ಣ, ರಕ್ಷಿತ್ ಶೆಟ್ಟಿ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಅಚಾನಕ್ಕಾಗಿ ನಿಶ್ವಿತಾರ್ಥ ಮುರಿದುಕೊಂಡರು. ಅದಕ್ಕೆ ಕಾರಣಗಳನ್ನು ರಶ್ಮಿಕಾ ಮಂದಣ್ಣ ಆಗ ನೀಡಿರಲಿಲ್ಲ. ಈ ಬಗ್ಗೆ ರಕ್ಷಿತ್ ಶೆಟ್ಟಿ ಸಹ ಎಲ್ಲಿಯೂ ಬಹಿರಂಗವಾಗಿ ಮಾತನಾಡಿರಲಿಲ್ಲ. ಆದರೆ ಇತ್ತೀಚೆಗೆ, ಅದರಲ್ಲೂ ‘ದಿ ಗರ್ಲ್ಫ್ರೆಂಡ್’ ಸಿನಿಮಾ ಬಿಡುಗಡೆ ಬಳಿಕ ರಶ್ಮಿಕಾ, ತಮ್ಮ ಹಿಂದಿನ ಸಂಬಂಧ ಕೆಟ್ಟದಾಗಿತ್ತು, ಸ್ವಾತಂತ್ರ್ಯ ಇರಲಿಲ್ಲ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆ ಮೂಲಕ ಪರೋಕ್ಷವಾಗಿ ರಕ್ಷಿತ್ ಶೆಟ್ಟಿ ವಿರುದ್ಧ, ಅವರ ವ್ಯಕ್ತಿತ್ವದ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ.
ಇನ್ನಷ್ಟು ಓದಿರಿ:
ಸಿಡ್ನಿಯಲ್ಲಿ ಭೀಕರ ರಸ್ತೆಯಲ್ಲೇ ಉಸಿರು ಚೆಲ್ಲಿದ ಭಾರತ ಮೂಲದ ತುಂಬು ಗರ್ಭಿಣಿ