belagavi news:
ಮುಂಬೈ (ಮಹಾರಾಷ್ಟ್ರ) : ದಕ್ಷಿಣ ಮುಂಬೈನಲ್ಲಿ ಒಂದೇ ಕುಟುಂಬದ ನಾಲ್ವರು ಸದಸ್ಯರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಪೊಲೀಸರ ಪ್ರಾಥಮಿಕ ಶಂಕೆ, ಬಿರಿಯಾನಿ ಸೇವಿಸಿದ ನಂತರ ಕಲ್ಲಂಗಡಿ ಹಣ್ಣು ತಿಂದಿದ್ದರಿಂದ ಫುಡ್ ಪಾಯಿಸನ್ ಸಂಭವಿಸಿರುವ ಸಾದ್ಯತೆ ಇದೆ ಎಂದು ಹೇಳಲಾಗಿದೆ. ಮೃತರಲ್ಲಿ ದಂಪತಿ ಹಾಗೂ ಅವರ ಇಬ್ಬರು ಅಪ್ರಾಪ್ತ ವಯಸ್ಸಿನ ಪುತ್ರಿಯರು ಸೇರಿ ದಾರಿ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ: ಪೊಲೀಸರು ನೀಡಿದ ಅಧಿಕೃತ ಮಾಹಿತಿಯ ಪ್ರಕಾರ, ಅಬ್ದುಲ್ಲಾ (40), ಅವರ ಪತ್ನಿ ನಸ್ರೀನ್ (35), ಮತ್ತು ಪುತ್ರಿಯರಾದ ಝೈನಾಬ್ (13) ಹಾಗೂ ಆಯೆಷಾ (16) ಮೃತರು. ಇತ್ತೀಚಿಗೆ ಈ ಕುಟುಂಬ ಉತ್ತಮ ಮನೆಯಲ್ಲಿ ಸಣ್ಣ ಸಮಾರಂಭವೊಂದನ್ನು ಏರ್ಪಡಿಸಿತ್ತು . ಈ ವೇಳೆ ಐವರು ಅತಿಥಿಗಳೊಂದಿಗೆ ಸೇರಿ ಎಲ್ಲರೂ ಬಿರಿಯಾನಿ ಸೇವಿಸಿದ್ದರು. ಅತಿಥಿಗಳು ತೆರಳಿದ ನಂತರ ಕುಟುಂಬದ ನಾಲ್ವರು ಸದಸ್ಯರು ಕಲ್ಲಂಗಡಿ ಹಣ್ಣನ್ನು ತಿಂದಿದ್ದರು. ಅವರ ಬೆನ್ನಲ್ಲೇ ಅವರಿಗೆ ವಾಂತಿ ಮತ್ತು ತಲೆಸುತ್ತು ಕಾಣಿಸಿಕೊಂಡಿತು ಎಂದು ಪೊಲೀಸರ ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್ 25ರಂದು ರಾತ್ರಿ ಕುಟುಂಬವು ಸಂಬಂಧಿಕರೊಂದಿಗೆ ಔತಣಕೂಟದಲ್ಲಿ ಭಾಗವಹಿಸಿ ಊಟ ಮುಗಿಸಿತ್ತು. ನಂತರ ಸಂಬಂಧಿಕರು ತಮ್ಮ ಮನೆಗಳಿಗೆ ತೆರೆಳಿದ್ದರು. ಆದರೆ ಅಂದು ಮಧ್ಯರಾತ್ರಿ ಸುಮಾರು 1 ರಿಂದ 1:30 ರ ನಡುವೆ ಕುಟುಂಬದ ಸದಸ್ಯರು ಕಲ್ಲಂಗಡಿ ಹಣ್ಣು ಸೇವಿಸಿದ್ದಾರೆ. ಮರುದಿನ ಬೆಳಗ್ಗೆ ನಾಲ್ವರಿಗೂ ವಾಂತಿ ಹಾಗೂ ಭೇದಿ ಕಾಣಿಸಿಕೊಂಡಿದ್ದು ತಕ್ಷಣ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೆಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು
ದೂರದೃಷ್ಟವಶಾತ್ ಆದರೆ ಚಿಕಿತ್ಸೆ ಫಲಕಾರಿಯಾಗದೆ ನಾಲ್ವರು ಮೃತ ಪಟ್ಟಿದ್ದಾರೆ ಮೃತ ದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು , ಸಾವಿನ ನಿಖರ ಕಾರಣ ಹಿಸ್ಟೋಪಾತಾಲಜಿ ವರದಿ ಬಂದ ನಂತರವೇ ತಿಳಿಯಲಿದೇ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಈ ಸಂಬಂಧ ಜೆ ಜೆ ಮಾರ್ಗ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ )ಪ್ರವೀಣ್ ಮುಂದೆ ತಿಳಿಸಿದ್ದಾರೆ.
ಕಲ್ಲಂಗಡಿ ಹಣ್ಣು ಸೇವನೆ: ಕಲ್ಲಂಗಡಿಯಲ್ಲಿರುವ ಪ್ರೋಟೀನ್ಗಳು ಕೆಲವು ವ್ಯಕ್ತಿಗಳಿಗೆ ಅಲರ್ಜಿಯ ಪ್ರತಿಕ್ರಿಯೆಗಳನ್ನು ಉಂಟು ಮಾಡಬಹುದು. ಈ ಸ್ಥಿತಿಯನ್ನು 'ಲ್ಯಾಟೆಕ್ಸ್ ಪ್ರೋಟ್ ಸಿಂಡ್ರೋಮ್ 'ಎಂದು ಕರೆಯಲಾಗುತ್ತದೆ. ಇದು ಕಲ್ಲಂಗಡಿಯಲ್ಲಿ ಕಂಡುಬರುವ ಪ್ರೊಫಿಲಿನ್ ಗಳು ಹಾಗೂ ಇತರ ಪ್ರೋಟೀನ್ ಗಳಿಂದ ಉಂಟಾಗುತ್ತದೆ.
ಆರೋಗ್ಯವಂತ ವ್ಯಕ್ತಿಗಳಿಗೆ ಬೇಸಿಗೆಯಲ್ಲಿ ಕಲ್ಲಂಗಡಿ ಉತ್ತಮ ಆಯ್ಕೆಯಾಗಿದೆ ಇದು ದೇಹದ ನಿರ್ಜಲೀಕರಣವನ್ನು ತಡೆಯಲು ಸಹಾಯಮಾಡುತ್ತದೆ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ ಮೂತ್ರಪಿಂಡ ಸಂಬಂಧಿ ಸಮಸ್ಯೆಗಳು ಅಥವಾ ತೀವ್ರ ಜೀರ್ಣಕ್ರಿಯೆ ಅಸ್ವಸ್ಥತೆಗಳಿರುವವರು ಕಲ್ಲಂಗಡಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ ಎಂದು ತಜ್ಞರು ತಿಳಿಸಿದ್ದಾರೆ.
Also Read:
ಬಿಸಿ ಗಾಳಿ ಎಚ್ಚರಿಕೆ: ಆಸ್ಪತ್ರೆಗಳಲ್ಲಿ ಹೀಟ್ ಸ್ಟ್ರೋಕ್ ನಿರ್ವಹಣಾ ಘಟಕ ಆರಂಭಿಸಲು ಕೇಂದ್ರ ಸೂಚನೆ