BELAGAVI NEWS :
Rishab Shetty Birthday : 43ನೇ ವಸಂತಕ್ಕೆ ಕಾಲಿಟ್ಟ 'ಕಾಂತಾರ' ಸ್ಟಾರ್ ರಿಷಬ್ ಶೆಟ್ಟಿ : ವಿಶೇಷ ವಿಡಿಯೋ ಮೂಲಕ ಸಾಮಾಜಿಕ ಸೇವೆಯ ಝಲಕ್
Rishab Shetty Birthday: ಕನ್ನಡ ಚಿತ್ರರಂಗದ ಹೆಮ್ಮೆಯ ನಟ, ನಿರ್ದೇಶಕ ಹಾಗೂ ಬರಹಗಾರ ರಿಷಬ್ ಶೆಟ್ಟಿ ಇಂದು ತಮ್ಮ 43ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.'ಕಾಂತರ' ಚಿತ್ರದ ಮೂಲಕ ಕನ್ನಡ ಸಿನಿ ರಂಗವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಂತೆ ಮಾಡಿದ ರಿಷಬ್ ಶೆಟ್ಟಿ, ತಮ್ಮ ಅದ್ಭುತ ಅಭಿನಯ, ನಿರ್ದೇಶನ ಮತ್ತು ಕಥಾ ನಿರೂಪಣೆಯಿಂದ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿದ್ದಾರೆ.
ಸ್ಯಾಂಡಲ್ ವುಡ್ ನ 'ಡಿವೈನ್ ಸ್ಟಾರ್' ಎಂದೆ ಖ್ಯಾತಿ ಪಡೆದಿರುವ ರಿಷಬ್ ಶೆಟ್ಟಿ, ನಟನೆಯಷ್ಟೇ ಅಲ್ಲದೆ ನಿರ್ಮಾಣ ಮತ್ತು ಬರವಣಿಗೆಯಲ್ಲೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಸರಳ ವ್ಯಕ್ತಿತ್ವ ಮತ್ತು ಸಮಾಜಮುಖಿ ಚಟುವಟಿಕೆಗಳ ಮೂಲಕವೂ ಅವರು ಜನಮನದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.
ಇಂದು ಅವರ ಜನ್ಮದಿನದ ಅಂಗವಾಗಿ ಕುಟುಂಬ ಸದಸ್ಯರು, ಆತ್ಮೀಯರು, ಸಿನಿ ತಾರೆಯರು ಹಾಗೂ ದೇಶ-ವಿದೇಶದ ಸಾವಿರಾರು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ.
ಈ ವಿಶೇಷ ದಿನವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಲು ರಿಷಬ್ ಶೆಟ್ಟಿ ತಂಡ ವಿಶೇಷ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ. ಆ ವಿಡಿಯೋದಲ್ಲಿ ಅವರ ಸಾಮಾಜಿಕ ಸೇವೆ, ಜನಪರ ಕಾರ್ಯಗಳು ಹಾಗೂ ಸಮಾಜದ ಮೇಲಿನ ಬದ್ಧತೆಯ ಹಲವು ಕ್ಷಣಗಳನ್ನು ಹಂಚಿಕೊಳ್ಳಲಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
'ಕಾಂತರ' ಚಿತ್ರದ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದ ರಿಷಬ್ ಶೆಟ್ಟಿ, ಇದೀಗ ತಮ್ಮ ಮುಂದಿನ ಮಹತ್ವಾಕಾಂಕ್ಷೆಯ ಸಿನಿಮಾಗಳ ಮೇಲು ಗಮನ ಹರಿಸಿದ್ದಾರೆ. ಅವರ ಹೊಸ ಯೋಜನೆಗಳ ಬಗ್ಗೆ ಅಭಿಮಾನಿಗಳಲ್ಲಿ ಈಗಾಗಲೇ ಸಾಕಷ್ಟು ನಿರೀಕ್ಷೆಮೂಡಿದೆ.
ಜನ್ಮದಿನದ ಸಂಭ್ರಮದ ನಡುವೆ ಬಿಡುಗಡೆಯಾದ ಈ ವಿಶೇಷ ವಿಡಿಯೋ, ರಿಷಬ್ ಶೆಟ್ಟಿಯ ಕಲಾವಿದನ ಮುಖದ ಜೊತೆಗೆ ಅವರ ಮನವಿಯ ವ್ಯಕ್ತಿತ್ವವನ್ನು ಮತ್ತೊಮ್ಮೆ ಅನಾವರಣಗೊಳಿಸಿದೆ.
Rishab Shetty Birthday: 'ನಮ್ಮ ಮಕ್ಕಳ ಕನಸು ನನಸಾಯಿತು'... ರಿಷಬ್ ಶೆಟ್ಟಿ ವಿದ್ಯಾರ್ಥಿ ವೇತನಕ್ಕೆ ಗ್ರಾಮಸ್ಥರ ಭಾವುಕ ಧನ್ಯವಾದ
ರಿಷಬ್ ಶೆಟ್ಟಿ ಕೇವಲ ಯಶಸ್ವಿ ನಟ ನಿರ್ದೇಶಕರಷ್ಟೇ ಅಲ್ಲ, ಸಮಾಜಮುಖಿ ಕಾರ್ಯಗಳ ಮೂಲಕವೂ ಸಾವಿರಾರು ಜನರ ಬದುಕಿನಲ್ಲಿ ಆಶಾಕಿರಣವಾಗಿದ್ದಾರೆ. ರಿಷಬ್ ಶೆಟ್ಟಿ ಫೌಂಡೇಶನ್ ಮೂಲಕ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುತ್ತಿರುವ ಅವರು, ಅನೇಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಬೆನ್ನೆಲುಬಾಗಿದ್ದಾರೆ.
ನಟನ 43ನೇ ಜನ್ಮದಿನದ ಅಂಗವಾಗಿ ಬಿಡುಗಡೆಯಾದ ವಿಶೇಷ ವಿಡಿಯೋದಲ್ಲಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತಮ್ಮ ಬದುಕಿನಲ್ಲಿ ರಿಷಬ್ ಶೆಟ್ಟಿ ನೀಡಿದ ನೆರವಿನ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಮೆಚ್ಚುಗೆ ಪಾತ್ರವಾಗಿದೆ.
'ವಿದ್ಯಾರ್ಥಿ ವೇತನದಿಂದ ನನ್ನ ಓದು ಮುಂದುವರೆಯಿತು':
ವಿಡಿಯೋದಲ್ಲಿ ಮಾತನಾಡಿದ ವಿದ್ಯಾರ್ಥಿನಿ ಒಬ್ಬರು, "ಒಂದೂವರೆ ವರ್ಷದ ಹಿಂದೆ ನನ್ನ ತಂದೆ ನಿಧನರಾದರು. ನಂತರ ನಮ್ಮ ಕುಟುಂಬದಲ್ಲಿ ದುಡಿಯುವವರು ಯಾರು ಇರಲಿಲ್ಲ. ಅಮ್ಮ ಒಬ್ಬರೇ ತುಂಬಾ ಕಷ್ಟ ಪಡುತ್ತಿದ್ದರು. ಅಂತ ಸಮಯದಲ್ಲಿ ರಿಶಬ್ ಶೆಟ್ಟಿ ಸರ್ ನೀಡಿದ ವಿದ್ಯಾರ್ಥಿ ವೇತನ ನನ್ನ ವಿದ್ಯಾಭ್ಯಾಸ ಮುಂದುವರಿಸಲು ಬಹಳ ದೊಡ್ಡ ಸಹಾಯವಾಯಿತು", ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
'ಶಾಲಾ ಶುಲ್ಕ ಕಟ್ಟುವುದೇ ದೊಡ್ಡ ಸವಾಲ್ ಆಗಿತ್ತು':
ಮತ್ತೊಬ್ಬ ಪೋಷಕರು, "ನಾವು ತುಂಬಾ ಕಷ್ಟಪಟ್ಟು ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದೆವು. ಶಾಲಾ ಶುಲ್ಕ ಪಾವತಿಸುವುದೇ ನಮಗೆ ದೊಡ್ಡ ಸವಾಲಾಗಿತ್ತು. ನಮ್ಮ ಮಗು ಆಸೆಪಟ್ಟ ರೀತಿಯಲ್ಲಿ ಓದಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ರಿಷಬ್ ಶೆಟ್ಟಿ ಫೌಂಡೇಶನ್ ನ ನೆರವಿನಿಂದ ಆ ಹೊರೆ ಕಡಿಮೆಯಾಯಿತು", ಎಂದು ಭಾವುಕರಾಗಿ ಹೇಳಿದ್ದಾರೆ.
ಸಮಾಜ ಸೇವೆಯ ಮೂಲಕ ಮಾದರಿಯಾದ ರಿಷಬ್ ಶೆಟ್ಟಿ:
ಸಿನಿಮಾ ಕ್ಷೇತ್ರದಲ್ಲಿ ಸಾಧನೆಯ ಜೊತೆಗೆ ಸಮಾಜದತ್ತವೂ ಜವಾಬ್ದಾರಿಯುತ ಹೆಜ್ಜೆ ಇಟ್ಟಿರುವ ರಿಷಬ್ ಶೆಟ್ಟಿ, ವಿದ್ಯಾರ್ಥಿವೇತನ ಸೇರಿದಂತೆ ಹಲವು ಸಮಾಜಮುಖಿ ಯೋಜನೆಗಳ ಮೂಲಕ ಅನೇಕ ಕುಟುಂಬಗಳಿಗೆ ನೆರವಾಗುತ್ತಿದ್ದಾರೆ. ಜನ್ಮದಿನದಂದು ಗ್ರಾಮಸ್ಥರು ಸಲ್ಲಿಸಿದ ಈ ಹೃದಯ ಸ್ಪರ್ಶಿ ಧನ್ಯವಾದಗಳು ಅವರ ಸೇವಾ ಮನೋಭಾವಕ್ಕೆ ದೊರೆತ ನಿಜವಾದ ಗೌರವವೆಂದೆ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಿಷಬ್ ಶೆಟ್ಟಿ ಅವರ ಸೇವ ಕಾರ್ಯಗಳು, ಅವರು ಕೇವಲ ಪರದೆಯ ನಾಯಕನಲ್ಲ, ಸಮಾಜದಲ್ಲೂ ನಿಜವಾದ ಹೀರೋ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿವೆ
'ಒಂದು ಸಣ್ಣ ಒಳ್ಳೆಯ ಕಾರ್ಯ, ನಾಳೆಯ ಉಜ್ವಲ ಸಮಾಜ' - ರಿಷಬ್ ಶೆಟ್ಟಿ ಫೌಂಡೇಶನ್ ಸೇವೆಗೆ ಭಾರಿ ಮೆಚ್ಚುಗೆ
ರಿಷಬ್ ಶೆಟ್ಟಿ ಫೌಂಡೇಶನ್ ಮೂಲಕ ನಡೆಯುತ್ತಿರುವ ವಿದ್ಯಾರ್ಥಿವೇತನ ಯೋಜನೆ ಅನೇಕ ವಿದ್ಯಾರ್ಥಿಗಳ ಜೀವನದಲ್ಲಿ ಆಶಾಕಿರಣವಾಗಿದೆ. ನಟನ ಜನ್ಮದಿನದ ಅಂಗವಾಗಿ ಬಿಡುಗಡೆಯಾದ ವಿಶೇಷ ವಿಡಿಯೋದಲ್ಲಿ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಪೋಷಕರು ರಿಷಬ್ ಶೆಟ್ಟಿಗೆ ಅವರ ಸೇವಾ ಮನೋಭಾವವನ್ನು ಮನದುಂಬಿ ಕೊಂಡಾಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿದ ಗ್ರಾಮಸ್ಥರು ಒಬ್ಬರು, "ತಾವು ಬೆಳೆದು ತಮ್ಮ ಊರಿನ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಅವರ ಸಹಾಯ ಅಗಾಧ. ನಮ್ಮಂತಹ ಕುಟುಂಬಗಳಿಗೆ ಅವರು ನೀಡಿದ ಬೆಂಬಲವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ," ಎಂದು ಹೃದಯಪೂರ್ವಕವಾಗಿ ಧನ್ಯವಾದ ಸಲ್ಲಿಸಿದ್ದಾರೆ. ಕೆಲವರು ಭಾವುಕರಾಗಿರುವ ದೃಶ್ಯಗಳು ಕೂಡ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆ ಗಳಿಸುತ್ತಿವೆ.
'ಒಂದು ಸಣ್ಣ ಒಳ್ಳೆಯ ಕಾರ್ಯ, ನಾಳೆಯ ಉಜ್ವಲ ಸಮಾಜ':
ವಿಶೇಷ ವಿಡಿಯೋವನ್ನು ಹಂಚಿಕೊಂಡಿರುವ ರಿಷಬ್ ಶೆಟ್ಟಿ ತಂಡ, ಶಿಕ್ಷಣದ ಮಹತ್ವವನ್ನು ಎತ್ತಿ ಹೇಳುವ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದೆ.
ತಂಡದ ಹೇಳಿಕೆಯಲ್ಲಿ, "ಶಿಕ್ಷಣವು ಕೇವಲ ಜೀವನವನ್ನು ಬದಲಾಯಿಸುವುದಿಲ್ಲ, ಅದು ಜೀವನವನ್ನೇ ರೂಪಿಸುತ್ತದೆ. ರಿಷಬ್ ಶೆಟ್ಟಿ ಫೌಂಡೇಶನ್ ನಲ್ಲಿ ಪ್ರತಿಯೊಬ್ಬ ಮಗುವಿಗೂ ಕನಸು ಕಾಣಲು, ಕಲಿಯಲು ಮತ್ತು ಯಶಸ್ವಿಯಾಗಲು ಅವಕಾಶ ದೊರೆಯಬೇಕು ಎಂಬ ನಂಬಿಕೆ ನಮ್ಮದು. ನಮ್ಮ ಶೈಕ್ಷಣಿಕ ವಿದ್ಯಾರ್ಥಿ ವೇತನ ಯೋಜನೆಯ ಮೂಲಕ ಹಿಂದುಳಿದ ಹಿನ್ನೆಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದೇವೆ. ಪ್ರತಿಯೊಂದು ವಿದ್ಯಾರ್ಥಿವೇತನವು ಕೇವಲ ಹಣಕಾಸಿನ ಸಹಾಯವಲ್ಲ; ಅದು ಉಜ್ವಲ ಭವಿಷ್ಯ, ಬಲಿಷ್ಠ ಸಮಾಜ ಮತ್ತು ಉತ್ತಮ ನಾಳೆಯ ಹೂಡಿಕೆಯಾಗಿದೆ. ಒಂದು ಸಣ್ಣ ಒಳ್ಳೆಯ ಕಾರ್ಯ, ನಾಳೆಯ ಉಜ್ವಲ ಸಮಾಜ," ಎಂದು ತಿಳಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ವಿಡಿಯೋ:
ರಿಷಬ್ ಶೆಟ್ಟಿ ಜನ್ಮದಿನದಂದು ಬಿಡುಗಡೆಯಾದ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
"ಮಾನವೀಯತೆ ಇನ್ನೂ ಜೀವಂತವಾಗಿದೆ", "ರಿಯಲ್ ಹೀರೋ", "ಪ್ರಮುಖ ಸಿನಿಮಾದಲ್ಲಷ್ಟೇ ಅಲ್ಲ,ನಿಜವಾದ ಜೀವನದಲ್ಲೂ ಹೀರೋ" ಎಂಬಂತಹ ಕಾಮೆಂಟ್ಗಳು ಹರಿದು ಬರುತ್ತಿವೆ. ಮತ್ತೊಬ್ಬ ಅಭಿಮಾನಿ, "ಹುಟ್ಟು ಹಬ್ಬದ ಶುಭಾಶಯಗಳು, ರಿಷಬ್ ಶೆಟ್ಟಿ ಸರ್.ನಿಮ್ಮ ಮುಂದಿನ ಸಿನಿಮಾಗಳಿಗೆ ಕಾತರದಿಂದ ಕಾಯುತ್ತಿದ್ದೇನೆ", ಎಂದು ಬರೆದುಕೊಂಡಿದ್ದಾರೆ.
ಅದಲ್ಲದೆ, "ಹ್ಯಾಪಿ ಬರ್ತಡೆ ರಿಷಬ್ ಶೆಟ್ಟಿ", "ಹ್ಯಾಪಿ ಬರ್ತಡೆ ಡಿವೈನ್ ಸ್ಟಾರ್" ಎಂದು ಸಾವಿರಾರು ಅಭಿಮಾನಿಗಳು ಕಾಮೆಂಟ್ ಮೂಲಕ ತಮ್ಮ ಪ್ರೀತಿ ಮತ್ತು ಶುಭಾಶಯಗಳು ವ್ಯಕ್ತಪಡಿಸುತ್ತಿದ್ದಾರೆ.
ಸಿನಿಮಾ ಕ್ಷೇತ್ರದಲ್ಲಿನ ಅದ್ಭುತ ಸಾಧನೆಗಳ ಜೊತೆಗೆ ಸಮಾಜಮುಖಿ ಕಾರ್ಯಗಳ ಮೂಲಕವೂ ಜನಮನ ಗೆದ್ದಿರುವ ರಿಷಬ್ ಶೆಟ್ಟಿ, ತಮ್ಮ ಜನ್ಮ ದಿನದಲ್ಲೂ ಮತ್ತೊಮ್ಮೆ ನಿಜವಾದ ರಿಯಲ್ ಹೀರೋ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮುಂದಿನ ಸಿನಿಮಾಗಳತ್ತ ಅಭಿಮಾನಿಗಳ ಚಿತ್ತ:
ಸಿನಿಮಾ ವಿಚಾರಕ್ಕೆ ಬಂದರೆ, ಡಿವೈನ್ ಸ್ಟಾರ್ ನಿಷಬ್ ಶೆಟ್ಟಿ ಅವರ ಮುಂದಿನ ಚಿತ್ರಗಳ ಬಗ್ಗೆ ಅಭಿಮಾನಿಗಳಲ್ಲಿ ಬಾರಿ ನಿರೀಕ್ಷೆ ಇದೆ. ಅವರ ನಟನೆಯ ಹೊಸ ಸಿನಿಮಾಗಳ ಅಪ್ಡೇಟ್ಗಾಗಿ ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ರಿಷಬ್ ಶೆಟ್ಟಿ, ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ 'ಜೈ ಹನುಮಾನ್' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ವರ್ಷದ ಫೆಬ್ರುವರಿ 22ರಂದು ಅಂಜನಾದ್ರಿ ಬೆಟ್ಟದಲ್ಲಿ ಚಿತ್ರದ ಮುಹೂರ್ತ ಸಮಾರಂಭ ಅದ್ದೂರಿಯಾಗಿ ನೆರವೇರಿದ್ದು, ಈ ಚಿತ್ರ ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿದೆ.
ರಿಷಬ್ ಶೆಟ್ಟಿಯ ವಿಶಿಷ್ಟ ಕಥೆಗಳ ಆಯ್ಕೆ, ಅದ್ಭುತ ಅಭಿನಯ ಹಾಗೂ ನಿರ್ದೇಶನ ಶೈಲಿಯಿಂದಾಗಿ ಅವರ ಪ್ರತಿಯೊಂದು ಹೊಸ ಸಿನಿಮಾ ಅಭಿಮಾನಿಗಳ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಜನ್ಮದಿನದ ಸಂಭ್ರಮದ ನಡುವೆ ಅವರ ಮುಂದಿನ ಸಿನಿಮಾಗಳ ಕುರಿತು ಮತ್ತಷ್ಟು ಅಪ್ಡೇಟ್ಗಳು ಸಿಗಬಹುದೇ ಎಂಬ ಕುತೂಹಲವು ಸಿಮಿಪ್ರಿಯರಲ್ಲಿ ಮನೆ ಮಾಡಿದೆ.