ಅಥಣಿ: ಹಿಪ್ಪರಗಿ ಬ್ಯಾರೇಜ್‌ನ ಗೇಟ್ ಸಂಖ್ಯೆ 22 ರಲ್ಲಿ ತಾಂತ್ರಿಕ ದೋಷ ಉಂಟಾಗಿ ಬೃಹತ್ ಪ್ರಮಾಣದ ನೀರು ವ್ಯರ್ಥವಾಗಿ ಕೃಷ್ಣಾ ನದಿಗೆ ಹರಿದು ಹೋಗುತ್ತಿರುವುದು ಅತ್ಯಂತ ಖೇದನೀಯ ಸಂಗತಿಯಾಗಿದೆ ಎಂದು ಹೇಳಿದ್ದಾರೆ. ಅಧಿಕಾರಿಗಳ ಈ ಘೋರ ನಿರ್ಲಕ್ಷ್ಯದಿಂದಾಗಿ ಇಂದು ಲಕ್ಷಾಂತರ ರೈತರು ಕಂಗಾಲಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಅಥಣಿ ಮಂಡಲ ಬಿಜೆಪಿ ವತಿಯಿಂದ ಇಂದು ಬ್ಯಾರೇಜ್ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ವೀಕ್ಷಿಸಲಾಯಿತು. ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರೈತರ ಹಿತಕ್ಕಾಗಿ ನಿರಂತರ ಹೋರಾಟ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರಾದ ಗಿರೀಶ್ ಬುಟಾಳೆ, ಪ್ರಮುಖ ಮುಖಂಡರಾದ ಅಪ್ಪಾಸಾಬ್ ಅವತಾಡೆ, ಮುದುಕಣ್ಣವರ, ಮಹೇಶ ಪಾಟೀಲ, ಮಲ್ಲಪ್ಪ ಹಂಚಿನಾಳ, ಸಂಪತ್ ಕುಮಾರ್ ಶೆಟ್ಟಿ ಹಾಗೂ ಶಿವಾನಂದ ಇಂಗಳೇ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಇನ್ನಷ್ಟು ಓದಿರಿ:
ಕರ್ನಾಟಕದ ಮೊದಲ ವೆಲೋಡ್ರೋಮ್ ವಿಜಯಪುರದಲ್ಲಿ ಉದ್ಘಾಟನೆ : ವಿಶ್ವಮಟ್ಟದ ಸೈಕ್ಲಿಂಗ್ ಸೌಲಭ್ಯ