belagavi news :
ಪರಪ್ಪನ ಅಗ್ರಹಾರ ಜೈಲ್ ದೇಶದ ಮೊದಲ ವಿಶೇಷ ಶಿಶು ಪಾಲನಾ ಕೇಂದ್ರವನ್ನು ಆರಂಭಿಸಿದೆ. ಈ ಕೇಂದ್ರವು ತಾಯಂದಿರೊಂದಿಗೆ ಜೈಲಿನಲ್ಲಿ ಇದ್ದ ಆರು ವರ್ಷದೊಳಗಿನ ಮುಗ್ಧ ಮಕ್ಕಳ ಶಿಕ್ಷಣ ಮತ್ತು ಸರ್ವಾಂಗಿನ ಬೆಳವಣಿಗೆಯ ಅಗತ್ಯವನ್ನು ಪೂರೈಸಲು ಸ್ಥಾಪಿಸಲಾಗಿದೆ. ಹೈಟೆಕ್ ಸೌಲಭ್ಯಗಳು, ಪರಿಣತ ಶಿಕ್ಷಕರ ನೇಮಕ ಮತ್ತು ಸುರಕ್ಷತೆಯ ಸಂಪೂರ್ಣ ವ್ಯವಸ್ಥೆಯೊಂದಿಗೆ ಈ ಕೇಂದ್ರವು ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಒಂಬತ್ತು ಮಕ್ಕಳು ಈ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ, ಅದರಲ್ಲಿ ಮೂವರು ವಿದೇಶಿ ಮಕ್ಕಳು ಸೇರಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕೇಂದ್ರದ ಉದ್ಘಾಟನೆಯು ಜೈಲಿನೊಳಗಿನ ಮಕ್ಕಳ ಅಭಿವೃದ್ಧಿಗೆ ಹೊಸ ಮಾದರಿಯನ್ನು ರೂಪಿಸಲಿದೆ .
ಪರಪ್ಪನ ಅಗ್ರಹಾರ ಜೈಲಿನಲ್ಲಿ ಸ್ಥಾಪಿಸಲದ ಶಿಶುಪಾಲನ ಘಟಕವು ಮಕ್ಕಳ ಶೈಕ್ಷಣಿಕ ಮತ್ತು ಭಾವನಾತ್ಮಕ ಬೆಳವಣಿಗೆ ಮೇಲೆ ವಿಶೇಷ ಒತ್ತು ನೀಡುತ್ತದೆ. ಜೈಲಿನ ವಾತಾವರಣವು ಮಕ್ಕಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಇಲ್ಲಿ ಸುರಕ್ಷಿತ ಮತ್ತು ಬೆಂಬಲಾತ್ಮಕ ಪರಿಸರ ನಿರ್ಮಿಸಲಾಗಿದೆ.
ಅಕ್ಷರಭ್ಯಾಸ ಮತ್ತು ವಿದ್ಯಾಭ್ಯಾಸ: ಮಕ್ಕಳಿಗೆ ವರ್ಣಮಾಲೆ, ಅಂಕಿ ಅಂಶಗಳು ಮತ್ತು ಪ್ರಾ ಪ್ರಾಸ್ ಬದ್ದ ಹಾಡುಗಳನ್ನು ಕಲಿಸಲಾಗುತ್ತಿದೆ.
ಭಾವನಾತ್ಮಕ ಬೆಳವಣಿಗೆ: ವಾತಾವರಣವು ಮಕ್ಕಳ ಭಾವನಾತ್ಮಕ ಅಭಿವೃದ್ಧಿಗೆ ಪೂರಕವಾಗಿದ್ದು, ಆತ್ಮವಿಶ್ವಾಸ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಬೆಳೆಸುತ್ತದೆ.
ಸುರಕ್ಷತತೆ ಕುರಿತು ಅರಿವು : ಈ ಜಗತ್ತಿನಲ್ಲಿ ಸುರಕ್ಷಿತವಾಗಿರಲು"ಗುಡ್ ಟಚ್, ಬ್ಯಾಡಿ ಟಚ್" ಎಂಬ ಸಂದೇಶವನ್ನು ಮಕ್ಕಳಿಗೆ ಪರಿಚಯಿಸಲಾಗಿದೆ.
ಸೃಜನಶೀಲಾ ಕಲಾ ಚಟುವಟಿಕೆಗಳು: ಕಲಾ ಚಟುವಟಿಕೆಗಳ ಮೂಲಕ ಮಕ್ಕಳ ಸೃಜನಶೀಲತೆಗೆ ಉತ್ತೇಜಿನ ನೀಡಲಾಗುತ್ತಿದೆ.
ಪರಿಮಿತ ಶಿಕ್ಷಕರು: ಇಬ್ಬರು ವಿಶೇಷ ಶಿಕ್ಷಕರು ಮಕ್ಕಳಿಗಾಗಿ ಈ ಎಲ್ಲಾ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ.
ಈ ಘಟಕವು ಜೈಲಿನೊಳಗಿನ ಮಕ್ಕಳಿಗೆ ಸಂಪೂರ್ಣ ಶೈಕ್ಷಣಿಕ ಮತ್ತು ಮಾನಸಿಕ ಬೆಂಬಲ ಒದಗಿಸುವ ನೂತನ ಮಾದರಿಯಾಗಿದೆ.
ಪರಪ್ಪನ ಅಗ್ರಹಾರ ಕಾರ್ಯಕ್ರಮ ಸಾಮಾನ್ಯವಾಗಿ ಅಕ್ರಮ ಮತ್ತು ದೋಷಗಳ ಸುದ್ದಿಗೆ ಪ್ರಸಿದ್ಧವಾಗಿದ್ದರು, ಈಗ ಇದು ಸಕಾರಾತ್ಮಕ ಬೆಳವಣಿಗೆ ಕೇಂದ್ರವಾಗಿದೆ. ದೇಶದ ಮೊದಲ ವಿಶೇಷ ಶಿಶು ಪಾಲನಾ ಕೇಂದ್ರ ಇಲ್ಲಿ ಆರಂಭವಾಗಿದೆ. ತಾಯಂದಿರು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವ ಸಂದರ್ಭದಲ್ಲಿ, ಅವರ ಹಸು ಭೂಸುಗಳು ಮತ್ತು ಆರು ವರ್ಷದೊಳಗಿನ ಮಕ್ಕಳು ಯಾವುದೇ ಅಪರಾಧಕ್ಕೆ ಸಂಬಂಧಪಟ್ಟಿಲ್ಲದಿದ್ದರೂ, ಜೈಲಿನ ನಾಲ್ಕು ಗೋಡೆಗಳ ಮಧ್ಯೆ ಬೆಳೆದಿದ್ದು, ಅವರ ಭವಿಷ್ಯದಲ್ಲಿ ಅನಿವಾರ್ಯ ಪರಿಣಾಮ ಉಂಟುಮಾಡುತ್ತದೆ.
ಈ ಸಂದರ್ಭ ಮಕ್ಕಳ ಸುರಕ್ಷತೆ ಮತ್ತು ಸರ್ವಾಂಗಿನ ಬೆಳವಣಿಗೆ ಭದ್ರಬುನಾದಿ ಒದಗಿಸಲು,Directorate of child protection, Karnataka ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಶು ಪಾಲನಾ ಕೇಂದ್ರವನ್ನು ಆರಂಭಿಸಿದೆ. ಕೇಂದ್ರವು ಮಕ್ಕಳ ಶೈಕ್ಷಣಿಕ ಬೆಳವಣಿಗೆ, ಭಾವನಾತ್ಮಕ ಬೆಂಬಲ, ಮತ್ತು ಸುರಕ್ಷಿತ ಪರಿಸರ ಒದಗಿಸುವ ಮೂಲಕ, ಜೈಲಿನ್ ಒಳಗಿನ ಮಕ್ಕಳ ಭವಿಷ್ಯವನ್ನು ಪ್ರೋತ್ಸಾಹಿಸುತ್ತಿದೆ.
ಮಕ್ಕಳ ವ್ಯಕ್ತಿತ್ವ ಮತ್ತು ಶಿಸ್ತು: ಕೇಂದ್ರದಲ್ಲಿ ಮಕ್ಕಳಲ್ಲಿ ಶಿಸ್ತು, ವ್ಯಕ್ತಿತ್ವ ವಿಕಸನ ಮತ್ತು ಸಾಮಾಜಿಕ ಕೌಶಲ್ಯಗಳನ್ನು ಬೆಳೆಸಲು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಉದಾಹರಣೆಗೆ:
ಹಿರಿಯರಿಗೆ ಗೌರವ ನೀಡುವ ಅಭ್ಯಾಸಗಳು.
ಊಟದ ಕ್ರಮಗಳು.
ಸಾಮಾಜಿಕ ನೈತಿಕತೆ ಮತ್ತು ಆತ್ಮವಿಶ್ವಾಸ ಅಭಿವೃದ್ಧಿ.
ಜೈಲಿನ ನಿಯಮಗಳು ಮತ್ತು ಮಕ್ಕಳ ರಕ್ಷಣೆ:
ಸುಪ್ರೀಂ ಕೋರ್ಟ್ ಆಫ್ ಇಂಡಿಯಾ ಮತ್ತು ಕೈಪಿಡಿ ನಿಯಮದಂತೆ ಆರು ವರ್ಷದೊಳಗಿನ ಮಕ್ಕಳು ತಾಯಿಯೊಂದಿಗೆ ಇರಲು ಅವಕಾಶವಿದೆ. ಈ ಕೇಂದ್ರ ಮಕ್ಕಳ ಸುರಕ್ಷತೆ ಮತ್ತು ಶಾಲಾ ಸಿದ್ಧತೆ ಮತ್ತು ಸರ್ವಾಂಗಿನ ಬೆಳವಣಿಗೆಗಾಗಿ ಸಂಪೂರ್ಣ ಜವಾಬ್ದಾರಿ ಹೊತ್ತಿದೆ. ಮಗುವಿನ ಆರು ವರ್ಷ ತುಂಬಿದ ನಂತರ ಕುಟುಂಬದವರು ಜವಾಬ್ದಾರಿ ವಹಿಸದಿದ್ದರೆ, ಎನ್ ಜಿಒ ಗಳ ಸಹಾಯದಿಂದ ಶಿಕ್ಷಣ ನೀಡಲಾಗುತ್ತದೆ.
ವಿಶೇಷ ಸೌಲಭ್ಯಗಳು ಮತ್ತು ಮೂಲ ಸೌಕರ್ಯಗಳು:
ಪ್ರಸ್ತುತ 9 ಮಕ್ಕಳು ಆಶ್ರಯ ಪಡೆದಿದ್ದು, ಮೂರು ವಿದೇಶಿ ಪ್ರಜೆಗಳ ಮಕ್ಕಳು ಸೇರಿದ್ದಾರೆ.
ಜೈಲಿನ ಕಠಿಣ ವಾತಾವರಣವನ್ನು ಕಲಿಕೆಯ ಸ್ಥಾನವನ್ನಾಗಿ ಮಾಡಲು ಗೋಡೆಯ ಮೇಲೆ ಸುಂದರ ಚಿತ್ರಗಳನ್ನು ನಿರ್ಮಿಸಲಾಗಿದೆ.
ಆಧುನಿಕ ಶೌಚಾಲಯ, ಕೈ ತೊಳೆಯುವ ವ್ಯವಸ್ಥೆ, ಮತ್ತು ಆಟವಾಡುವ ಸ್ಥಳಗಳು ಅಭಿವೃದ್ಧಿಪಡಿಸಲಾಗಿದೆ.
ಈ ಸೌಲಭ್ಯಗಳು ಕೇಂದ್ರ ಸರ್ಕಾರದ 'ಮಿಷನ್ ವಾತ್ಸುಲ್ಯ'ಮತ್ತು ಬಾಲನ್ಯಾಯ ಕಾಯ್ದೆ ನಡೆಯಲಿ ಒದಗಿಸಲಾಗಿದೆ. ಈ ಕೇಂದ್ರವು ಜೈಲಿನೊಳಗಿನ ಮಕ್ಕಳಿಗೆ ಶೈಕ್ಷಣಿಕ, ಭಾವನಾತ್ಮಕ ಮತ್ತು ಸಾಮಾಜಿಕ ಬೆಂಬಲ ಒದಗಿಸುವ ಮೂಲಕ ಸುರಕ್ಷಿತ ಮತ್ತು ಸಮಗ್ರ ಬೆಳವಣಿಗೆಗೆ ಹೊಸ ಮಾದರಿಯನ್ನು ರೂಪಿಸಿದೆ.
Also Read: