<?= $pageTitle ?>
Logo
ಮುಖಪುಟ ಓದುವುದು ಕೇಳು
Technology

ಇಸ್ರೋ ತೊರೆದ ನೂರಾರು ವಿಜ್ಞಾನಿಗಳು; ರಾಜಿನಾಮೆಗೆ ಹೊಸ ನಿಯಮ ತಂಡ ಕೇಂದ್ರ ಸರ್ಕಾರ

ಇಸ್ರೋ ತೊರೆದ ನೂರಾರು ವಿಜ್ಞಾನಿಗಳು; ರಾಜಿನಾಮೆಗೆ ಹೊಸ ನಿಯಮ ತಂಡ ಕೇಂದ್ರ ಸರ್ಕಾರ
Summary: ISRO Scientists Resign: The resignation of more than a hundred scientists from ISRO has been a topic of discussion for a long time. Here is complete information on the reasons behind the departure of senior scientists, developments within the organization and the steps taken by the central government regarding the resignation.

belagavi news :

SRO Scientists Resign : ಇಸ್ರೋ ವಿಜ್ಞಾನಿಗಳ ರಾಜೀನಾಮೆ ವಿಚಾರ; ಕೇಂದ್ರದ ಹೊಸ ಕಠಿಣ ನಿಲುವುಗಳೇನು?

ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಸಾಧನೆಗಳನ್ನು ಮಾಡಿರುವ ಇಸ್ರೋ ಸಂಸ್ಥೆಯಲ್ಲಿ ವಿಜ್ಞಾನಿಗಳ ರಾಜೀನಾಮೆ ವಿಚಾರ ಇದೀಗ ಚರ್ಚೆಗೆ ಕಾರಣವಾಗಿದೆ. ಇತ್ತೀಚಿಗೆ ನೂರಕ್ಕೂ ಹೆಚ್ಚು ವಿಜ್ಞಾನಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿರುವುದು ಗಮನ ಸೆಳೆದಿದ್ದು, ಅವರಲ್ಲಿ ಬಹುತೇಕರು ನಿರ್ದಿಷ್ಟ ವರ್ಗಕ್ಕೆ ಸೇರಿದವರು ಎನ್ನಲಾಗಿದೆ. ಮಂಗಳೂರು ಗಗನಯಾನ ಸೇರಿದಂತೆ ಹಲವು ಮಹತ್ವದ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದ ಅನುಭವಿ ವಿಜ್ಞಾನಿಗಳ ನಿರ್ಗಮನದ ಸಂಸ್ಥೆಗೆ ಸವಾಲಾಗಿ ಪರಿಣಮಿಸಿದೆ.

ವಿಜ್ಞಾನಿಯ ನಿರ್ಗಮನದದಿಂದ ಉಂಟಾಗಬಹುದಾದ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಬಾಹ್ಯಾಕಾಶ ಇಲಾಖೆಯು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ನಿರ್ವಹಣೆಯ ಯೋಜನೆಗಳನ್ನು ಕಾರ್ಯನಿರ್ವಹಿಸುತ್ತಿರುವ ಇಸ್ರೋ ಸಿಬ್ಬಂದಿ ರಾಜೀನಾಮೆ ನೀಡುವ ಪ್ರಕ್ರಿಯೆಗೆ ಹೆಚ್ಚಿನ ನಿಯಂತ್ರಣ ವಿಧಿಸಲಾಗಿದೆ.

ಕೇಂದ್ರ ಸರ್ಕಾರದ ಹೊಸ ನಿಯಮಗಳು ಯಾವುವು?

ಕೇಂದ್ರ ಸರ್ಕಾರದ ಹೊಸ ಅಧಿಸೂಚನೆಯ ಪ್ರಕಾರ, ಪ್ರಮುಖ ಮತ್ತು ಸೂಕ್ಷ್ಮ ಬಾಹ್ಯಾಕಾಶ ಯೋಜನೆಗಳಲ್ಲಿ ಭಾಗಿಯಾಗಿರುವ ಸಿಬ್ಬಂದಿಯ ರಾಜೀನಾಮೆಗಳನ್ನು ಸಾಮಾನ್ಯ ಪ್ರಕ್ರಿಯೆಯಂತೆ ಪರಿಗಣಿಸಲಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ರಾಜಿನಾಮೆ ಸ್ವೀಕಾರ ಮತ್ತು ಅನುಮೋದನೆಗೆ ಹೆಚ್ಚುವರಿ ಪರಿಶೀಲನೆ ಅಗತ್ಯವಿದೆ ಎಂದು ತಿಳಿಸಲಾಗಿದೆ.

ಈ ಹಿಂದೆ ಇಸ್ರೋದ ವಿಜ್ಞಾನಿ ವಿಭಾಗದ ನಿರ್ದೇಶಕರಿಗೆ ತಮ್ಮ ಅಧೀನದಲ್ಲಿರುವ ವಿಜ್ಞಾನಿಗಳು ಮತ್ತು ಸಿಬ್ಬಂದಿಯ ರಾಜಿನಾಮೆಗಳನ್ನು ಅನುಮೋದಿಸುವ ಅಧಿಕಾರ ಇತ್ತು. ಆದರೆ 2020ರ ನಂತರ ಜಾರಿಗೆ ಬಂದ ನಿಯಮಗಳ ಪ್ರಕಾರ ಈ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಇದೀಗ ಪ್ರಮುಖ ಯೋಜನೆಗಳಲ್ಲಿ ತೊಡಗಿರುವ ವಿಜ್ಞಾನಿಗಳ ನಿರ್ಗಮನದ ಬಗ್ಗೆ ಕೇಂದ್ರ ಮಟ್ಟದಲ್ಲಿ ಹೆಚ್ಚಿನ ಮೇಲ್ವಿಚಾರಣೆ ಇರಲಿದೆ.

ಇಸ್ರೋದಲ್ಲಿ ಅನುಭವಿ ವಿಜ್ಞಾನಿಗಳ ನಿರ್ಗಮನ, ರಾಜಿನಾಮೆ ನಿಯಮಗಳ ಬದಲಾವಣೆ ಮತ್ತು ಕೇಂದ್ರದ ಹೊಸ ನಿಯಮಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಇಸ್ರೋ ವಿಜ್ಞಾನಿಗಳ ರಾಜೀನಾಮೆಗಳನ್ನು ಅಂಗೀಕರಿಸುವವರು ಯಾರು?

ಇಸ್ರೋದಲ್ಲಿ ನಿರ್ಣಾಯಕ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳು ಮತ್ತು ತಾಂತ್ರಿಕ ಸಿಬ್ಬಂದಿ ಗೆ ಕೇಂದ್ರ ಸರ್ಕಾರದ ಹೊಸ ನಿಯಮಗಳು ಅನ್ವಯವಾಗಲಿವೆ. ಈ ವರ್ಗಕ್ಕೆ

ಸೇರಿದ ಸಿಬ್ಬಂದಿ ರಾಜೀನಾಮೆ ನೀಡಬೇಕಾದರೆ, ತಮ್ಮ ರಾಜಿನಾಮೆ ಪತ್ರವನ್ನು ನೇರವಾಗಿ ಕೇಂದ್ರದ ಪರಿಶೀಲನೆಗೆ ಸಲ್ಲಿಸಬೇಕಾಗಿರುತ್ತದೆ.

ಕೇಂದ್ರ ಸರ್ಕಾರದ ಪರಿಶೀಲನೆ ಮತ್ತು ಅನುಮೋದನೆ ಬಳಿಕವೇ ಅಂತಹ ರಾಜಿನಾಮೆಗಳನ್ನು ಅಂತಿಮವಾಗಿ ಅಂಗೀಕರಿಸಲಾಗುತ್ತದೆ. ಈ ಮೂಲಕ ಪ್ರಮುಖ ಬಾಹ್ಯಾಕಾಶ ಯೋಜನೆಗಳಲ್ಲಿ ಅನುಭವಿ ವಿಜ್ಞಾನಿಗಳ ನಿರ್ಗಮನವನ್ನು ನಿಯಂತ್ರಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ವರದಿಗಳ ಪ್ರಕಾರ, ಬೆಂಗಳೂರಿನಲ್ಲಿರುವ ಯು.ಆರ್. ರಾವ್ ಉಪಗ್ರಹ ಕೇಂದ್ರ ಹಾಗೂ ತಿರುವನಂತಂಪುರಂ ನ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರಗಳಿಂದ ಗಮನಾರ್ಹ ಸಂಖ್ಯೆಯ ವಿಜ್ಞಾನಿಗಳು ರಾಜೀನಾಮೆ ನೀಡಿರುವ ವಿಚಾರ ಚರ್ಚೆಗೆ ಬಂದಿದೆ.

ಇದರ ಜೊತೆಗೆ ಹೊಸ ನಿಯಮಗಳು ಸತೀಶ್ ಧಮನ್ ಬಾಹ್ಯಕಾಶ ಕೇಂದ್ರ, ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ ಸೇರಿದಂತೆ ಇಸ್ರೋದ ಇತರ ಪ್ರಮುಖ ಕೇಂದ್ರಗಳಿಗೂ ಅನ್ವಯವಾಗಲಿವೆ. ಗಗನಯಾನ ಸೇರಿದಂತೆ ಮಹತ್ವದ ಯೋಜನೆಗಳ ನಿರಂತರತೆ ಮತ್ತು ತಾಂತ್ರಿಕ ಪರಿಣಿತಿಯನ್ನು ಕಾಪಾಡುವ ನೀಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಗಗನಯಾನ ಯೋಜನೆ ನಡುವೆ ಇಸ್ರೋ ವಿಜ್ಞಾನಿಗಳ ರಾಜೀನಾಮೆ; ಹೊರ ಹೋಗಲು ಕಾರಣವೇನು?

ಭಾರತವು ತನ್ನ ಮೊದಲ ಮಾನವ ಸಹಿತ ಬಾಹ್ಯಾಕಾಶ ಹಾರಾಟ ಯೋಜನೆಯಾದ ಗಗನಯನ ಕಾರ್ಯಾಚರಣೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಇಸ್ರೋದಲ್ಲಿ ವಿಜ್ಞಾನಿಗಳ ರಾಜೀನಾಮೆ ವಿಚಾರ ಚರ್ಚೆಗೆ ಕಾರಣವಾಗಿದೆ. ಮಹತ್ವದ ಹಂತದಲ್ಲಿರುವ ಈ ಯೋಜನೆಯ ನಡುವೆ ಅನುಭವಿ ವಿಜ್ಞಾನಿಗಳನ್ನು ನಿರ್ಗಮನವು ಕೇಂದ್ರ ಸರ್ಕಾರದ ಗಮನ ಸೆಳೆದಿದೆ.

ನಿರ್ಣಾಯಕ LVM3 ಉಡಾವಣಾ ವಾಹನ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯೋಜನಾ ನಿರ್ದೇಶಕ ವಿಕ್ಟರ್ ಜೋಸೆಫ್ ಟಿ ಸೇರಿದಂತೆ ಕೆಲವು ಹಿರಿಯ ವಿಜ್ಞಾನಿಗಳು ಇಸ್ರೋ ತೊರೆದಿರುವುದು ಸಂಸ್ಥೆಗೆ ಸವಾಲಾಗಿ ಪರಿಣಮಿಸಿದೆ. ದೀರ್ಘ ಅನುಭವ ಹೊಂದಿರುವ ತಜ್ಞರ ನಿರ್ಗಮನವು ಪ್ರಮುಖ ಯೋಜನೆಗಳ ನಿರ್ವಹಣೆ ಮತ್ತು ತಾಂತ್ರಿಕ ಪರಿಮಿತಿಯ ದೃಷ್ಟಿಯಿಂದ ಮಹತ್ವ ಪಡೆದಿದೆ.

ಇಸ್ರೋ ವಿಜ್ಞಾನಿಗಳು ಏಕೆ ರಾಜೀನಾಮೆ ನೀಡುತ್ತಿದ್ದಾರೆ ?

ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಖಾಸಗಿ ವಲಯದ ಬೆಳವಣಿಗೆ ವಿಜ್ಞಾನಿಗಳ ನಿರ್ಗಮನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎನ್ನಲಾಗಿದೆ. 2020ರಲ್ಲಿ ಖಾಸಗಿ ಕಂಪನಿಗಳಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಅವಕಾಶ ನೀಡಿದ ಬಳಿಕ ಹಾಗೂ 2023 ರಲ್ಲಿ ಹೊಸ ಬಾಹ್ಯಾಕಾಶ ನೀತಿ ಜಾರಿಯಾದ ನಂತರ ಈ ವಲಯದಲ್ಲಿ ಸ್ಪರ್ಧೆ ಹೆಚ್ಚಾಗಿದೆ.

ಇದರ ಪರಿಣಾಮವಾಗಿ ಅನುಭವಿ ಮಾಜಿ ಇಸ್ರೋ ವಿಜ್ಞಾನಿಗಳಿಗೆ ಖಾಸಗಿ ಬಾಹ್ಯಾಕಾಶ ಕಂಪನಿಗಳು ಮತ್ತುಸ್ಟಾರ್ಟ್‌ಅಪ್‌ಗಳಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಉತ್ತಮ ಅವಕಾಶಗಳು, ಹೊಸ

ಸವಾಲುಗಳು ಮತ್ತು ಖಾಸಗಿ ವಲಯದಲ್ಲಿನ ವೇಗದ ಬೆಳವಣಿಗೆಗಳಿಂದಾಗಿ ಕೆಲವು ವಿಜ್ಞಾನಿಗಳು ಸಂಸ್ಥೆಯಿಂದ ಹೊರ ಬರುತ್ತಿದ್ದಾರೆ ಎನ್ನಲಾಗಿದೆ.

ಇಸ್ರೋದಿಂದ ಅನುಭವಿ ವಿಜ್ಞಾನಿಗಳ ನಿರ್ಗಮನ, ಗಗನಯಾನ ಯೋಜನೆಯ ಮೇಲಿನ ಪರಿಣಾಮ ಮತ್ತು ಕೇಂದ್ರ ಸರ್ಕಾರದ ಹೊಸ ನಿಯಮಗಳ ಕುರಿತು ಹೆಚ್ಚಿನ ಗಮನ ಹರಿಸಲಾಗಿದೆ.

ಖಾಸಗಿ ಬಾಹ್ಯಾಕಾಶ ಕಂಪನಿಗಳ ಬೆಳವಣಿಗೆ; ಇಸ್ರೋ ವಿಜ್ಞಾನಿಗಳಿಗೆ ಹೆಚ್ಚಿನ ಬೇಡಿಕೆ

ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯದ ಬೆಳವಣಿಗೆ ವೇಗ ಪಡೆದುಕೊಂಡಿದ್ದು, ಇದರಿಂದ ಅನುಭವಿ ಇಸ್ರೋ ವಿಜ್ಞಾನಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ರಸ್ತುತ ದೇಶದಲ್ಲಿ ನೂರಾರು ಖಾಸಗಿ ಬಾಹ್ಯಾಕಾಶ ಸ್ಮಾರ್ಟ್ ಆಪ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಈ ಕಂಪನಿಗಳು ಹೊಸ ತಂತ್ರಜ್ಞಾನ ಅಭಿವೃದ್ಧಿ ಮತ್ತು ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸುತ್ತಿವೆ.

Skyroot Aerospace,Pixxel,Dhruva Space ಹಾಗೂ Agnikul Cosmos ಸೇರಿದಂತೆ ಹಲವು ಖಾಸಗಿ ಬಾಹ್ಯಾಕಾಶ ಕಂಪನಿಗಳು ಅನುಭವಿ ವಿಜ್ಞಾನಿಗಳು ಮತ್ತು ತಾಂತ್ರಿಕ ತಜ್ಞರನ್ನು ಹುಡುಕುತ್ತಿವೆ. ಹೆಚ್ಚಿನ ಅವಕಾಶಗಳು ಮತ್ತು ಆಕರ್ಷಕ ವೇತನ ಪ್ಯಾಕೇಜ್ ಗಳಿಗಾಗಿ ಹಲವು ಇಸ್ರೋ ವಿಜ್ಞಾನಿಗಳು ಖಾಸಗಿ ವಲಯದತ್ತ ಒಲವು ತೋರುತ್ತಿದ್ದಾರೆ ಎನ್ನಲಾಗಿದೆ.

ಇಸ್ರೋಗೆ ಎದುರಾಗುತ್ತಿರುವ ಹೊಸ ಸವಾಲು

ಖಾಸಗಿ ಬಾಹ್ಯಾಕಾಶ ಸ್ಮಾರ್ಟ್ ಆಪ್ ಗಳ ವೇಗದ ಬೆಳವಣಿಗೆ isroಗೆ ಹೊಸ ಸವಾಲಾಗಿ ಪರಿಣಮಿಸಿದೆ. ಪ್ರಮುಖ ಜವಾಬ್ದಾರಿ ಹೊಂದಿರುವ ಅನುಭವಿ ವೃತ್ತಿಪರರು ಖಾಸಗಿ ಕಂಪನಿಗಳತ್ತ ತೆರಳುವ ಆಸಕ್ತಿ ತೋರಿಸುವುದು ಸಂಸ್ಥೆಯ ಮಾನವ ಸಂಪನ್ಮೂಲ ನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತಿದೆ.

ಇಸ್ರೋ ಪ್ರಸ್ತುತ ಗಗನಯನ, ಚಂದ್ರಯಾನ-4 ಮತ್ತು ಮಂಗಳಯಾನ-2 ಸೇರಿದಂತೆ ಮಹತ್ವದ ಯೋಜನೆಗಳ ಮೇಲೆ ಗಮನಹರಿಸಿರುವ ಸಂದರ್ಭದಲ್ಲಿ, ಅನುಭವಿ ವಿಜ್ಞಾನಿಗಳ ನಿರ್ಗಮನವು ಹೆಚ್ಚಿನ ಮಹತ್ವ ಪಡೆದಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯವನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಇಸ್ರೋ ಹಾಗೂ ಕೇಂದ್ರ ಸರ್ಕಾರಕ್ಕೆ ತರಬೇತಿಯನ್ನು ಉಳಿಸಿಕೊಳ್ಳುವುದು ಪ್ರಮುಖ ಸವಾಲಾಗಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online